Asianet Suvarna News Asianet Suvarna News

ಕೊರೊನಾ ಸಂಕಷ್ಟದಲ್ಲಿ ಕಾದಿದೆ ಮೋದಿ ಗೋಲ್ಡ್ ಶಾಕ್..!

ದೇಶದ ಜನರು ಅಕ್ರಮ ಚಿನ್ನದ ದಾಸ್ತಾನು ಹೊಂದಿದ್ದರೆ ಅದನ್ನು ಸಕ್ರಮಗೊಳಿಸಿ ಕ್ಷಮಾದಾನ ನೀಡುವ ಯೋಜನೆಯೊಂದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಚಿನ್ನದ ಬೆಲೆ ಗಗನಕ್ಕೇರಿರುವ ಸಮಯದಲ್ಲಿ ಕೇಂದ್ರ ಸರ್ಕಾರದ ಈ ನಡೆ ಕುತೂಹಲ ಮೂಡಿಸಿದೆ.

ನವದೆಹಲಿ (ಆ. 01): 5 ವರ್ಷದ ಹಿಂದೆ ಮನೆ ಮನೆಗಳಲ್ಲಿ ಮತ್ತು ದೇಗುಲಗಳಲ್ಲಿ ಬಳಕೆಯಾಗದೇ ಉಳಿದ ಚಿನ್ನವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಬಡ್ಡಿ ನೀಡುವ ಯೋಜನೆ ರೂಪಿಸಿದ್ದ ಕೇಂದ್ರ ಸರ್ಕಾರ, ಇದೀಗ ಮತ್ತೊಮ್ಮೆ ಜನರ ಚಿನ್ನದ ಮೇಲೆ ಕಣ್ಣು ಇಟ್ಟಿದೆ. ಆದರೆ ಈ ಬಾರಿ ಸರ್ಕಾರದ ಗಮನ ಹರಿದಿರುವುದು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಚಿನ್ನದ ದಾಸ್ತಾನಿನ ಮೇಲೆ.

ಈ ಯೋಜನೆ ಜಾರಿಗೆ ಹಣಕಾಸು ಇಲಾಖೆಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಫಾರಸು ಮಾಡಿದೆ. ಯೋಜನೆ ಜಾರಿಗೊಂಡರೆ ಸರ್ಕಾರವು ಜನರ ಬಳಿ ನಿಮ್ಮಲ್ಲಿರುವ ಅನಧಿಕೃತ ಚಿನ್ನವನ್ನು ತೆರಿಗೆ ಅಧಿಕಾರಿಗಳ ಬಳಿ ಘೋಷಿಸಿಕೊಂಡು, ಅದಕ್ಕೆ ತೆರಿಗೆ ಮತ್ತು ದಂಡ ಕಟ್ಟಿಸಕ್ರಮವಾಗಿಸಿಕೊಳ್ಳಿ ಎಂದು ಕೋರಲಿದೆ. ಇದರಿಂದ ದೇಶದ ಬೊಕ್ಕಸಕ್ಕೆ ಆದಾಯ ಹರಿದುಬರುವುದರ ಜೊತೆಗೆ ಜನರಿಗೆ ತಮ್ಮಲ್ಲಿರುವ ಚಿನ್ನವನ್ನು ಯಾವುದೇ ಆತಂಕವಿಲ್ಲದೆ ಮಾರಾಟ ಮಾಡಲು ಅವಕಾಶ ಸಿಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಹಲೋ ಟಿ ಎ ಶರವಣ : ಈಗ್ಲೇ ಚಿನ್ನ ಖರೀದಿಸೋದು ಒಳ್ಳೆದಾ? ಕಾಯೋದು ಸರಿನಾ?