Asianet Suvarna News Asianet Suvarna News

ಪೆಟ್ರೋಲ್‌-ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ಯಾಕೆ ಬರಲ್ಲ? ಆರ್ಥಿಕ ತಜ್ಞರಿಂದ ವಿವರಣೆ

ಹಣದುಬ್ಬರದಿಂದ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆಮ್ಮದಿ ನೀಡಲು ಕೇಂದ್ರ ಸರ್ಕಾರ, ಪಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಮಹತ್ವದ ಘೋಷಣೆ ಮಾಡಿದೆ.

ಬೆಂಗಳೂರು (ಮೇ.22):  ಹಣದುಬ್ಬರದಿಂದ (Inflation) ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆಮ್ಮದಿ ನೀಡಲು ಕೇಂದ್ರ ಸರ್ಕಾರ, ಪಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಮಹತ್ವದ ಘೋಷಣೆ ಮಾಡಿದೆ.

ಪೆಟ್ರೋಲ್‌ ಮೇಲೆ 8 ರು. ಮತ್ತು ಡೀಸೆಲ್‌ ಮೇಲೆ 6 ರು. ಅಬಕಾರಿ ಸುಂಕ ಕಡಿತ ಮಾಡಲಾಗಿದೆ. ಇದರಿಂದಾಗಿ, ಇತರ ತೆರಿಗೆ ದರಗಳು ಸೇರಿದಂತೆ ಪೆಟ್ರೋಲ್‌ ದರವು ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲೀಟರ್‌ಗೆ 9.5 ರು. ಮತ್ತು ಡೀಸೆಲ್‌ ದರ 7 ರು.ಗಳಷ್ಟುಕಡಿಮೆಯಾಗಲಿದೆ. ಭಾನುವಾರವೇ ಪರಿಷ್ಕೃತ ದರಗಳು ಜಾರಿಗೆ ಬಂದಿವೆ. 

ಸರ್ಕಾರದ ಈ ಕ್ರಮದ ಬಗ್ಗೆ ಬಹಳ ಚರ್ಚೆ ಶುರುವಾಗಿದೆ. ಈ ಬಗ್ಗೆ ಚರ್ಚಿಸುವಾಗ, ಪೆಟ್ರೋಲ್, ಡಿಸೇಲ್ ಜಿಎಸ್‌ಟಿ ವ್ಯಾಪ್ತಿಗೆ ಯಾಕೆ ಬರುವುದಿಲ್ಲ ಎಂಬ ಪ್ರಶ್ನೆಗೆ ಆರ್ಥಿಕ ತಜ್ಞರಾದ ವಿಶ್ವನಾಥ್ ಭಟ್ ವಿವರಣೆ ನೀಡಿದ್ದಾರೆ.