ಸಾವಿನ ನಾಲ್ಕು ತಿಂಗಳ ಬಳಿಕ ಮತ್ತೊಂದು ಶಾಕ್! ಸಿದ್ದಾರ್ಥ ಕಂಪನಿಗೆ ಏಕಾಏಕಿ ಲಾಕ್
ಕಾಫಿ ದೊರೆ ವಿ.ಜಿ. ಸಿದ್ದಾರ್ಥ ನಿಗೂಢ ಸಾವಿಗೆ ಸುಮಾರು ನಾಲ್ಕು ತಿಂಗಳುಗಳಾಗಿವೆ. ಅದರ ಬೆನ್ನಲ್ಲೇ ಎಬಿಸಿ ಒಡೆತನದ ಕಂಪೆನಿಯೊಂದಕ್ಕೆ ಬೀಗ ಹಾಕಲಾಗಿದೆ. ಕಳೆದ ಜು.29ರಂದು ಮಂಗಳೂರಿನ ನೇತ್ರಾವತಿ ಸೇತುವೆಯಿಂದ ನಾಪತ್ತೆಯಾಗಿದ್ದರು. ಜು.31ಕ್ಕೆ ಅವರ ಮೃತದೇಹ ಪತ್ತೆಯಾಗಿತ್ತು.
ಚಿಕ್ಕಮಗಳೂರು (ನ.25) ಕಾಫಿ ದೊರೆ ವಿ.ಜಿ.ಸಿದ್ದಾರ್ಥ ನಿಗೂಢ ಸಾವಿಗೆ ಸುಮಾರು ನಾಲ್ಕು ತಿಂಗಳುಗಳಾಗಿವೆ. ಅದರ ಬೆನ್ನಲ್ಲೇ ಎಬಿಸಿ ಒಡೆತನದ ಡ್ಯಾಪ್ಕೋ ಕಂಪೆನಿಗೆ ಬೀಗ ಹಾಕಲಾಗಿದೆ.
ತೀವ್ರ ಆರ್ಥಿಕ ನಷ್ಟ ಹಿನ್ನೆಲೆಯಲ್ಲಿ ಡ್ಯಾಪ್ಕೊ ಫರ್ನಿಚರ್ ಕಂಪನಿ ಹೊರಗೆ, ಏಕಾಏಕಿ ಲಾಕೌಟ್ ಎಂದು ಬೋರ್ಡ್ ಹಾಕಲಾಗಿದ್ದು, ನೂರಾರು ಸಿಬ್ಬಂದಿಗಳು ಬೀದಿಗೆ ಬಿದ್ದಿದ್ದಾರೆ.
ದಿವಂಗತ ಸಿದ್ದಾರ್ಥ ಮಾಜಿ ಸಿಎಂ ಎಸ್ ಎಂ ಕೃಷ್ಣನವರ ಅಳಿಯ, ಕಾಫಿ ಉದ್ಯಮಿ ಸಿದ್ಧಾರ್ಥ ಕಳೆದ ಜು.29ರಂದು ಮಂಗಳೂರಿನ ನೇತ್ರಾವತಿ ಸೇತುವೆಯಿಂದ ನಾಪತ್ತೆಯಾಗಿದ್ದರು. ಜು.31ಕ್ಕೆ ಅವರ ಮೃತದೇಹ ಪತ್ತೆಯಾಗಿದ್ದು, ಐಟಿ ಇಲಾಖೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.