ಬಾಕಿ ಪಾವತಿಗೆ ಏರ್‌ಟೆಲ್ ಮಾಡಿದ ಪ್ಲ್ಯಾನ್ ಇದು!

ದೂರಸಂಪರ್ಕ ಇಲಾಖೆಗೆ (ಡಿಒಟಿ) ಜನವರಿ ಅಂತ್ಯದಲ್ಲಿ 35,500 ಕೋಟಿ ರೂ.ಗಳ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಬಾಕಿ ಪಾವತಿಸಲು ಖಾಸಗಿ ಟೆಲಿಕಾಂ ಸಂಸ್ಥೆ ಭಾರ್ತಿ ಏರ್‌ಟೆಲ್‌ಗೆ ನಿರ್ದೇಶನ ನೀಡಿದೆ.

First Published Dec 7, 2019, 9:08 PM IST | Last Updated Dec 7, 2019, 9:08 PM IST

ನವದೆಹಲಿ(ಡಿ.07): ದೂರಸಂಪರ್ಕ ಇಲಾಖೆಗೆ (ಡಿಒಟಿ) ಜನವರಿ ಅಂತ್ಯದಲ್ಲಿ 35,500 ಕೋಟಿ ರೂ.ಗಳ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಬಾಕಿ ಪಾವತಿಸಲು ಖಾಸಗಿ ಟೆಲಿಕಾಂ ಸಂಸ್ಥೆ ಭಾರ್ತಿ ಏರ್‌ಟೆಲ್‌ಗೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರ್ತಿ ಏರ್‌ಟೆಲ್‌ ನಿರ್ದೇಶಕರ ಮಂಡಳಿ, ಮೂರು ಬಿಲಿಯನ್ ಡಾಲರ್‌ (ಸುಮಾರು 21,516 ಕೋಟಿ ರೂ.) ಹಣವನ್ನು ಸಂಗ್ರಹಿಸಲು ಅನುಮೋದನೆ ನೀಡಿದೆ. ಈಕ್ವಿಟಿ ಷೇರುಗಳು, ಅರ್ಹ ಸಂಸ್ಥೆಯ ನಿಯೋಜನೆಗಳು, ಕನ್ವರ್ಟಿಬಲ್ ಡಿಬೆಂಚರ್‌ಗಳು, ಕನ್ವರ್ಟಿಬಲ್ ಸೆಕ್ಯುರಿಟೀಸ್, ವಾರಂಟ್‌ಗಳು, ಅಮೇರಿಕನ್ ಡಿಪಾಸಿಟರಿ ಮತ್ತು ಜಾಗತಿಕ ಠೇವಣಿ ಸೇರಿದಂತೆ ಸಾರ್ವಜನಿಕ ಅಥವಾ ಖಾಸಗಿ ಕೊಡುಗೆಗಳನ್ನು ಸೇರಿಸಿ ಕಂಪನಿಯು ಎರಡು ಬಿಲಿಯನ್ ಡಾಲರ್‌ ಹಣ ಸಂಗ್ರಹಿಸಲಿದೆ ಎನ್ನಲಾಗಿದೆ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ...