Asianet Suvarna News Asianet Suvarna News

Union Budget 2022: ಅದ್ಭುತವಾದ, ದೂರದೃಷ್ಟಿಯುಳ್ಳ ಬಜೆಟ್: ನಳಿನ್ ಕುಮಾರ್ ಕಟೀಲ್!

ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದ್ದ 2022ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದೆ. ಆದಾಯ ತೆರಿಗೆ ಪಾವತಿಯಲ್ಲಿ ಯಾವುದೇ ಬದಲಾವಣೆಯಾಗದಿರುವುದು ತೆರಿಗೆದಾರರನ್ನು ಅಸಮಾಧಾನಗೊಳಿಸಿದೆಯಾದರೂ ಹಲವು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಜನರನ್ನು ತೃಪ್ತಿಪಡಿಸಿದೆ. ವಿಪಕ್ಷಗಳು ಬಜೆಟ್ ವಿರೋಧಿಸುತ್ತಿದ್ದರೂ, ಬಿಜೆಪಿ ನಾಯಕರು ಇದೊಂದು ಉತ್ತರಮ ಬಜೆಟ್ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಜೆಟ್ ಸಂಬಂಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನವದೆಹಲಿ(ಫೆ.01): ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದ್ದ 2022ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದೆ. ಆದಾಯ ತೆರಿಗೆ ಪಾವತಿಯಲ್ಲಿ ಯಾವುದೇ ಬದಲಾವಣೆಯಾಗದಿರುವುದು ತೆರಿಗೆದಾರರನ್ನು ಅಸಮಾಧಾನಗೊಳಿಸಿದೆಯಾದರೂ ಹಲವು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಜನರನ್ನು ತೃಪ್ತಿಪಡಿಸಿದೆ. ವಿಪಕ್ಷಗಳು ಬಜೆಟ್ ವಿರೋಧಿಸುತ್ತಿದ್ದರೂ, ಬಿಜೆಪಿ ನಾಯಕರು ಇದೊಂದು ಉತ್ತರಮ ಬಜೆಟ್ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಜೆಟ್ ಸಂಬಂಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೌದು ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ಕೊಟ್ಟಿರುವ ನಳಿನ್ ಕುಮಾರ್ ಕಟೀಲ್ ಇದೊಂದು ಅದ್ಭುತವಾದ ಹಾಗೂ ದೂರದೃಷ್ಟಿಯುಳ್ಳ ಬಜೆಟ್ ಎಂದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಕಾರಣದಿಂದ ಆರ್ಥಿಕ ಸಂಕಷ್ಟ ಮಧ್ಯೆಯೂ ಜಗತ್ತೇ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅತ್ಯುತ್ತಮವಾದ ಬಜೆಟ್ ಮಂಡಿಸಲಾಗಿದೆ. ಇಂದು ಮೋದಿ ಆಡಳಿತದಲ್ಲಿ ಈ ಸಂಕಷ್ಟದ ಸಮಯದಲ್ಲೂ ಆರ್ಥಿಕ ವ್ಯವಸ್ಥೆ 9.2 ಜಿಡಿಪಿ ದರದಲ್ಲಿ ಅಭಿವೃದ್ಧಿ ಹೊಂದಿದೆ. ಅಮೆರಿಕಾ, ಚೈನಾದಂತಹ ಅಭಿವೃದ್ಧಿಗೊಂಡ ರಾಷ್ಟ್ರಗಳಿಗೆ ಹೋಲಲಿಸಿದಾಗ ಭಾರತದ ಪರಿಸ್ಥಿತಿ ಇಂದು ಉತ್ತಮವಾಗಿದೆ ಎಂದಿದ್ದಾರೆ.