ಸಿಎಂ ಬೊಮ್ಮಾಯಿ ಕರ್ನಾಟಕ ಬಜೆಟ್ ಮಂಡನೆ ಬಳಿಕ ರಾಜ್ಯದಲ್ಲಿ ರಾಮಂದಿರ ದಂಗಲ್!
ರಾಮನಗರದಲ್ಲಿ ರಾಮಮಂದಿರ, ಇನ್ನುಳಿದ ಜಿಲ್ಲೆಗೂ ಇದೆ ಧಾರ್ಮಿಕ ಅನುದಾನ, ರಾಮಮಂದಿರ ಘೋಷಣೆ ಮಾತ್ರ, ನಾನೇ ಕಟ್ಟಿಸಬೇಕು ಎಂದ ಹೆಚ್‌ಡಿಕೆ ಟಾಂಗ್, ಬೊಮ್ಮಾಯಿ ಬಜೆಟ್‌ನಲ್ಲಿ ಪ್ರಾಂತ್ಯವಾರು ನ್ಯಾಯ, ಸಮುದಾಯಕ್ಕೂ ನ್ಯಾಯ,ಕಿವಿ ಮೇಲೆ ಹೂವಿಟ್ಟು ಕಾಂಗ್ರೆಸ್ ಪ್ರತಿಭಟನೆ ಸೇರಿದಂತೆ ಕರ್ನಾಟಕ ಬಜೆಟ್ ಇಂಚಿಂಚು ಮಾಹಿತಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿ.
ಕರ್ನಾಟಕದ ಪ್ರತಿ ಪ್ರಾಂತ್ಯ, ಸಮುದಾಯ, ವಿದ್ಯಾರ್ಥಿ, ಮಹಿಳೆಯರು, ರೈತರನ್ನು ಗಮನದಲ್ಲಿಟ್ಟುಕೊಂಡು ಬಸವರಾಜ್ ಬೊಮ್ಮಾಯಿ ಬಜೆಟ್ ಮಂಡಿಸಿದ್ದಾರೆ.3 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ ಬೊಮ್ಮಾಯಿ, ಶಿಕ್ಷಣ ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ನೀಡಿದ್ದಾರೆ.37,960 ಕೋಟಿ ರೂಪಾಯಿಯನ್ನು ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ. ರಾಮನಗರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿಶೇಷ ಅನುದಾನನ್ನು ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಇದು ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ರಾಮನಗರದಲ್ಲಿ ಕನಿಷ್ಠ ಬಿಜೆಪಿ ಕಚೇರಿ ಕಟ್ಟಲಿ ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ. ಇತ್ತ ಕುಮಾರಸ್ವಾಮಿ , ಅವರು ಘೋಷಣೆ ಮಾತ್ರ ಮಾಡಿದ್ದಾರೆ. ನಾನೇ ಕಟ್ಟಬೇಕು ಎಂದಿದ್ದಾರೆ. ಇದೀಗ ರಾಜ್ಯದಲ್ಲಿ ರಾಮಂದಿರ ದಂಗಲ್ ಆರಂಭಗೊಂಡಿದೆ.