ನಿರ್ಣಾಯಕ ಮತದಾರರ ಗಮನದಲ್ಲಿಟ್ಟು ಜನಪ್ರಿಯ ಬಜೆಟ್ ಘೋಷಣೆ, ಯಾವ ವರ್ಗಕ್ಕೆ ಏನೇನು?
ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿದ ಬಜೆಟ್‌ನಲ್ಲಿ ಪ್ರತಿ ಜಿಲ್ಲೆ ಹಾಗೂ ಕ್ಷೇತ್ರಗಳ ಕೇಂದ್ರಿಕರಿಸಿ ಘೋಷಣೆಗಳನ್ನು ಮಾಡಲಾಗಿದೆ. ಪ್ರಮುಖವಾಗಿ ಈ ಬಾರಿಯ ಬಜೆಟ್‌ನಲ್ಲಿ ಯಾವ ವರ್ಗಕ್ಕೆ ಏನೇನು ಕೊಡುಗೆ ನೀಡಲಾಗಿದೆ. ಇಲ್ಲಿದೆ ವಿವರ.
ಚುನಾವಣೆ ಸಮೀಪದಲ್ಲಿ ಮಂಡಿಸಿರುವ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಹಲವು ಜನಪ್ರಿಯ ಘೋಷಣೆ ನೀಡಿದ್ದಾರೆ. ರೈತರಿಗೆ 5 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲು, ಗೃಹಿಣಿ ಶಕ್ತಿ ಯೋಜನೆ, ಭೂರಹಿತ ರೈತ ಮಹಿಳಾ ಕಾರ್ಮಿಕರಿಗೆ 500 ರೂಪಾಯಿ ಗೌರವ ಧನ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೇರಿದಂತೆ ಹಲವು ಕೊಡುಗೆ ನೀಡಿದ್ದಾರೆ. 3 ಲಕ್ಷ ಕೋಟಿ ರೂಪಾಯಿ ಮೀರಿದ ಈ ಬಜೆಟ್‌ನಲ್ಲಿ ಯಾವ ವಲಯಕ್ಕೆ ಏನೇನು ಕೊಡುಗೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಬಜೆಟ್ ನೀಡಿದ ಅನುದಾನ ಹಾಗೂ ಕೊಡುಗೆ ಏನು? ಇಲ್ಲಿದೆ ಸಂಪೂರ್ಣ ವಿವರ.