ಬೊಮ್ಮಾಯಿ ಬಜೆಟ್‌ನಲ್ಲಿ ಕರಾವಳಿ ಕರ್ನಾಟಕಕ್ಕೆ ಸಿಕ್ಕಿದ್ದೇನು?

ಕರಾವಳಿ ಕರ್ನಾಟಕದ ಭಾಗದ ಜನರ ಬೇಡಿಕೆಗಳ ಪೈಕಿ ಮೀನುಗಾರಿ ಹಾಗೂ ಅದಕ್ಕೆ ಸಂಬಂಧಿಸಿ ಸಮಸ್ಯೆಗಳಿಗೆ ಈ ಬಾರಿಯ ಬಜೆಟ್ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಬಿಲ್ಲವ ಹಾಗೂ ಬಂಟರ ಬೇಡಿಕೆ ಈಡೇರಿಲ್ಲ. ಕರಾವಳಿ ಕರ್ನಾಟಕಕ್ಕೆ ಬಜೆಟ್‌ನಲ್ಲಿ ನೀಡಿರುವ ಅನುದಾನವೇನು?

First Published Feb 17, 2023, 8:49 PM IST | Last Updated Feb 17, 2023, 8:49 PM IST

ಬಸವರಾಜ್ ಮಂಡಿಸಿದ ಬಜೆಟ್‌ನಲ್ಲಿ ಕರಾವಳಿ ಕರ್ನಾಟಕಕ್ಕೆ ಸಿಕ್ಕಿದ್ದೇನು? ಮೀನುಗಾರರ ಡೀಸೆಲ್ ಸಬ್ಸಿಡಿ 2 ಲಕ್ಷ ಲೀಟರ್‌ಗೆ ಏರಿಕೆ ಮಾಡಲಾಗಿದೆ. 12ಸಾವಿರಕ್ಕೂ ಹೆಚ್ಚು ಮೀನುಗಾರರಿಗೆ ಕಿಸಾನ ಕ್ರೆಡಿಟ್, ಮನೆ ನಿರ್ಮಾಣ, ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮತ್ಸಸಿರಿ ಆಳಸಮುದ್ರ ಮೀನುಗಾರಿಕೆ ಸೇರಿದಂತೆ ಕರಾವಳಿ ಕರ್ನಾಟಕದಕ್ಕೆ ಬಜೆಟ್‌ನಲ್ಲಿ ಬೊಮ್ಮಾಯಿ ನೀಡಿರುವ ಕೊಡುಗೆ ಹಾಗೂ ಅನುದಾನದ ಸಂಪೂರ್ಣ ವಿವರ ಇಲ್ಲಿದೆ.