Asianet Suvarna News Asianet Suvarna News

Union Budget 2022: ಡಿಜಿಟಲ್ ಕ್ರಾಂತಿ, ದೇಶದ ಮಾನಸಿಕ ಸ್ವಾಸ್ಥ್ಯ ವೃದ್ಧಿಗೆ ಬೆಂಗಳೂರು ನೆರವು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman)ಅವರು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ಬಜೆಟ್‌ನ ಒಟ್ಟಾರೆ ಗಾತ್ರ 39.45 ಲಕ್ಷ ಕೋಟಿ ರು. 

 

ಬೆಂಗಳೂರು (ಫೆ. 02): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman)ಅವರು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ಬಜೆಟ್‌ನ ಒಟ್ಟಾರೆ ಗಾತ್ರ 39.45 ಲಕ್ಷ ಕೋಟಿ ರು. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಈ ಸಲವೂ ತೆರಿಗೆ ಭಾರ ಹೇರದ ಬಜೆಟ್‌ ರೂಪಿಸಲಾಗಿದೆ’ಎಂದು ವಿತ್ತ ಸಚಿವೆ ನಿರ್ಮಲಾ ಸೀತಾ​ರಾಮನ್‌ ಅವ​ರು ಹೇಳಿ​ದ್ದಾರೆ.

Union Budget 2022: ವಾಜಪೇಯಿ ಸಂಕಲ್ಪ, ಮೋದಿ ಸಿದ್ಧಿ, ಕಾವೇರಿ, ಕೃಷ್ಣಾ ಸೇರಿ 6 ನದಿಗಳ ಜೋಡಣೆ

ಈ ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಕ್ಕಿದ್ದೇನು ಎಂದು ನೋಡುವುದಾದರೆ,  ಬೆಂಗಳೂರಿನ ನಿಮ್ಹಾನ್ಸ್‌ ಮೇಲುಸ್ತುವಾರಿಯಲ್ಲಿ 23 ಟೆಲಿ ಮೆಂಟಲ್‌ ಹೆಲ್ತ್‌ ಸೆಂಟರ್‌ ನಿರ್ಮಾಣ ಮತ್ತು ಕಾವೇರಿ-ಪೆನ್ನಾರ್‌ ನದಿ ಜೋಡಣೆ ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆದರೆ ಇವೆರಡು ಯೋಜನೆಗಳೂ ರಾಜ್ಯದ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿವೆ.

ಪಾಕಿಸ್ತಾನ ಹಾಗೂ ಚೀನಾಗಳಿಂದ ಬೆದರಿಕೆ ಎದುರಿಸುತ್ತಿರುವ ಭಾರತದ ರಕ್ಷಣಾ ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ, ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 2022-23ನೇ ಸಾಲಿನಲ್ಲಿ ದಾಖಲೆಯ 5.25 ಲಕ್ಷ ಕೋಟಿ ರು. ಹಣ ಘೋಷಿಸಲಾಗಿದೆ.

 

Video Top Stories