ದುಡಿಮೆ ದೊಡ್ಡಪ್ಪ ಆಧಾರದಲ್ಲಿ ಬಜೆಟ್ ತಯಾರಿ, ಆಯವ್ಯಯದ ಬಳಿಕ ಸಿಎಂ ಬೊಮ್ಮಾಯಿ ವಿಶೇಷ ಸಂದರ್ಶನ!
ಈ ಬಾರಿಯ ಬಜೆಟ್ ಹಿಂದಿನ ತಯಾರಿ ಹೇಗಿತ್ತು? ಯಾವ ವರ್ಗವನ್ನು ಟಾರ್ಗೆಟ್ ಮಾಡಿ ಈ ಬಾರಿಯ ಬಜೆಟ್ ತಯಾರಿಸಲಾಗಿದೆ. ಕರ್ನಾಟಕ ಬಜೆಟ್ 2023ರ ಸಂಪೂರ್ಣ ಮಾಹಿತಿಯನ್ನು ಖುದ್ದು ಸಿಎಂ ಬಸವರಾಜ್ ಬೊಮ್ಮಾಯಿ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಾಗ ಆದಾಯದಲ್ಲಿ 5,000 ಕೋಟಿ ರೂಪಾಯಿ ಕೊರತೆ ಇತ್ತು. ಕಳೆದ ಬಾರಿ ಸರಿದೂಗಿಸಿ 13 ಸಾವಿರ ಕೋಟಿ ಹೆಚ್ಚು ಮಾಡಿದ್ದೇವೆ. ಇದರಿಂದ ಉತ್ತಮ ಬಜೆಟ್ ಮಂಡಿಸಲು ಸಾಧ್ಯವಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಬೊಮ್ಮಾಯಿ ಬಜೆಟ್ ಕುರಿತು ಹಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಈ ದೇಶವನ್ನು ಕಾರ್ಮಿಕ ವರ್ಗ ಮುನ್ನಡೆಸುತ್ತಿದೆ. ಹೀಗಾಗಿ ಕಾರ್ಮಿಕರ ವರ್ಗವನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ತಯಾರಿಸಿದ್ದೇನೆ. ಎಲ್ಲಾ ವರ್ಗಕ್ಕೆ ಕೊಡುಗೆ ನೀಡಿದ ಬೊಮ್ಮಾಯಿ, ಹಲವು ಸೂಕ್ಷ್ಮತೆಗಳನ್ನು ಹೇಳಿದ್ದಾರೆ.