ಕೆಟ್ಟುಹೋದ ಆಸ್ಪತ್ರೆ ಲಿಫ್ಟ್, ರೋಗಿಗಳಿಗೆ ಉಪವಾಸವೇ ಗತಿ!
ಬೀದರ್‌ನ ಸರ್ಕಾರಿ BRIMS ಆಸ್ಪತ್ರೆಯಲ್ಲಿ ಲಿಫ್ಟ್‌ಗಳು ಕೆಟ್ಟುಹೋದ ಪರಿಣಾಮ ರೋಗಿಗಳು ಪರದಾಡುವಂತಾಯಿತು. ಇರುವ 8 ಲಿಫ್ಟ್‌ಗಳು ಕೈಕೊಟ್ಟ ಪರಿಣಾಮ ರೋಗಿಗಳಿಗೆ ಬೆಳಗ್ಗಿನ ಹಾಲು-ಉಪಹಾರ ಇಲ್ಲದೇ ಇರಬೇಕಾಯಿತು. ಸಣ್ಣ ಮಕ್ಕಳನ್ನು ಎತ್ತಿಕೊಂಡು ಮಹಿಳೆಯರು ಮೆಟ್ಟಿಲು ಹತ್ತಿದರೆ, ವಯೋವೃದ್ಧರು ಕೂಡಾ ಬಹಳ ಕಷ್ಟಪಟ್ಟು ಹತ್ತಿಳಿದರು.ಆದರೆ, ಲಿಫ್ಟ್ ಇಲ್ಲದ ಕಾರಣ ಸಿಬ್ಬಂದಿಗಳು ಮಾತ್ರ ತಿಂಡಿ ನೀಡಲು ಹಿಂದೇಟು ಹಾಕಿದರು.
ಬೀದರ್ (ಅ.16): ಬೀದರ್‌ನ ಸರ್ಕಾರಿ BRIMS ಆಸ್ಪತ್ರೆಯಲ್ಲಿ ಲಿಫ್ಟ್‌ಗಳು ಕೆಟ್ಟುಹೋದ ಪರಿಣಾಮ ರೋಗಿಗಳು ಪರದಾಡಬೇಕಾಯಿತು.
ಇರುವ 8 ಲಿಫ್ಟ್‌ಗಳು ಕೈಕೊಟ್ಟ ಪರಿಣಾಮ ರೋಗಿಗಳಿಗೆ ಬೆಳಗ್ಗಿನ ಹಾಲು-ಉಪಹಾರ ಇಲ್ಲದೇ ಇರಬೇಕಾಯಿತು. ಸಣ್ಣ ಮಕ್ಕಳನ್ನು ಎತ್ತಿಕೊಂಡು ಮಹಿಳೆಯರು ಮೆಟ್ಟಿಲು ಹತ್ತಿದರೆ, ವಯೋವೃದ್ಧರು ಕೂಡಾ ಬಹಳ ಕಷ್ಟಪಟ್ಟು ಹತ್ತಿಳಿದರು.
ಆದರೆ, ಲಿಫ್ಟ್ ಇಲ್ಲದ ಕಾರಣ ಸಿಬ್ಬಂದಿಗಳು ಮಾತ್ರ ತಿಂಡಿ ನೀಡಲು ಹಿಂದೇಟು ಹಾಕಿದರು. ಗಂಟೆಗಟ್ಟಲೆ ಲಿಫ್ಟ್ ಕೆಟ್ಟು ನಿಂತಿದ್ದರೂ ಯಾರು ಕೇಳಿ ನೋಡುವವರೇ ಇರಲಿಲ್ಲ. ಸಿಬ್ಬಂದಿ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯ್ತು.