Asianet Suvarna News Asianet Suvarna News

ಬೆಂಬಿಟ್ಟಿಲ್ಲ ನೋಟ್ ಬ್ಯಾನ್ ಭೂತ! ಚೆಕ್ ಮಾಡ್ಕೊಳ್ಳಿ ನಿಮ್ಮ ಬ್ಯಾಂಕ್ ಖಾತೆ

ಮೋದಿ ಸರ್ಕಾರ ನೋಟ್ ಬ್ಯಾನ್ ಮಾಡಿ ಮುಂದಿನ ತಿಂಗಳು ಮೂರು ವರ್ಷಗಳಾಗುತ್ತವೆ. ಆದರೆ ಅದರ ಭೂತ ಈಗ ಬೆಂಗಳೂರಿನ ಅಕ್ಕಿ ವ್ಯಾಪಾರಿಯೊಬ್ಬರ ಬೆನ್ನು ಹತ್ತಿದೆ. ಹೌದು, ನೋಟ್ ಬ್ಯಾನ್ ಆದ ಬೆನ್ನಲ್ಲೇ ಅಕ್ಕಿ ವ್ಯಾಪಾರಿಯೊಬ್ಬರ ಖಾತೆಯಲ್ಲಿ ‘ಅಪರಿಚಿತ’ರಿಂದ 1.28 ಕೋಟಿ ಹಣದ ವ್ಯವಹಾರ ನಡೆದಿದೆ. ಆದರೆ ಆ ವ್ಯವಹಾರ ಈ ವ್ಯಾಪಾರಿಯ ಗಮನಕ್ಕೆ ಬಂದಿರುವುದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ಕೊಟ್ಟಾಗ!

ಬೆಂಗಳೂರು (ಅ.30): ಮೋದಿ ಸರ್ಕಾರ ನೋಟ್ ಬ್ಯಾನ್ ಮಾಡಿ ಮುಂದಿನ ತಿಂಗಳು ಮೂರು ವರ್ಷಗಳಾಗುತ್ತವೆ. ಆದರೆ ಅದರ ಭೂತ ಈಗ ಬೆಂಗಳೂರಿನ ಅಕ್ಕಿ ವ್ಯಾಪಾರಿಯೊಬ್ಬರ ಬೆನ್ನು ಹತ್ತಿದೆ. 

ಹೌದು, ನೋಟ್ ಬ್ಯಾನ್ ಆದ ಬೆನ್ನಲ್ಲೇ ಬೆಂಗಳೂರಿನ ಅಕ್ಕಿ ವ್ಯಾಪಾರಿಯೊಬ್ಬರ ಖಾತೆಯಲ್ಲಿ ‘ಅಪರಿಚಿತ’ರಿಂದ 1.28 ಕೋಟಿ ಹಣದ ವ್ಯವಹಾರ ನಡೆದಿದೆ. ಆದರೆ ಆ ವ್ಯವಹಾರ ಈ ವ್ಯಾಪಾರಿಯ ಗಮನಕ್ಕೆ ಬಂದಿರುವುದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ಕೊಟ್ಟಾಗ!

ಮುಂದೇನು? ಪೊಲೀಸ್ ಠಾಣೆ ಮೆಟ್ಟಲೇರಿರುವ ಆ ವ್ಯಾಪಾರಿ, ನ್ಯಾಯ ಒದಗಿಸಿ ಕೊಡಿ, ಎಂದು ದೂರು ಕೊಟ್ಟಿದ್ದಾರೆ. ಅದ್ಹೇಗೆ ಇವರ ಗಮನಕ್ಕೆ ಬಾರದೆ ವ್ಯವಹಾರ ನಡೆಯಿತು? ಇಲ್ಲಿದೆ ವಿವರ....

ಕಪ್ಪುಹಣದ ವಿರುದ್ಧ ಸಮರ ಎಂದು ಕೇಂದ್ರ ಸರ್ಕಾರವು 2016 ನವಂಬರ್ 8ರಂದು ₹500 ಮತ್ತು ₹1000 ನೋಟುಗಳನ್ನು ನಿಷೇಧಿಸಿತ್ತು.

Video Top Stories