Asianet Suvarna News Asianet Suvarna News

ಶನಿವಾರ ಶನಿ ದೇವರೇ ಮಾಯ, ದರ್ಶನಕ್ಕೆ ಬಂದವರಿಗೆ ಶಾಕ್!

ರಾತ್ರೋ ರಾತ್ರಿ ದೇವರೇ ಮಾಯ| ಶನಿವಾರ ಶನಿ ದೇವರೇ ಮಾಯ| ದರ್ಶನಕ್ಕೆ ಬಂದವರಿಗೆ ಶಾಕ್!| ಬೆಂಗಳೂರಿನ ಓಕಳೀಪುರಂನಲ್ಲಿ ಘಟನೆ

ಬೆಂಗಳೂರು[ಅ.19]: ಬೆಂಗಳೂರಿನ ಓಕಳೀಪುರಂನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ರಾತ್ರೋ ರಾತ್ರಿ ಇಲ್ಲಿ ದೇವರೇ ಮಾಯವಾಗಿದ್ದು, ದರ್ಶನಕ್ಕೆ ಬಂದ ಭಕ್ತರಿಗೆ ಶಾಕ್ ಆಗಿದೆ.

ಓಕಳೀಪುರಂ ಮುಖ್ಯ ರಸ್ತೆಯಲ್ಲಿದ್ದ ಶನಿ ಮಹಾತ್ಮ ವಿಗ್ರಹವೇ ಮಾಯವಾಗಿದೆ. ಇದಕ್ಕೆ 40 ವರ್ಷಗಳ ಇತಿಹಾಸವಿದ್ದ ದೇವಸ್ಥಾನವನ್ನು ರಾತ್ರೀ ರಾತ್ರಿ ಕೆಡವಲಾಗಿದೆ.

ರಸ್ತೆ ಅಗಲೀಕರಣಕ್ಕಾಗಿ ಮೂಲಸ್ಥಾನದಿಂದ ದೇವಸ್ಥಾನವನ್ನು ಸ್ಥಳಾಂತರಿಸಲಾಗಿದ್ದು, ಭಕ್ತರು ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Video Top Stories