Asianet Suvarna News Asianet Suvarna News

ಬೆಂಗಳೂರು: ರೋಗಿಯನ್ನು ಚಿಕಿತ್ಸೆಗೆ ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್‌ ತಡೆದು ಹಲ್ಲೆ

ರೋಗಿಯನ್ನು ಚಿಕಿತ್ಸೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಹೊರ ವಲಯ ನೆಲಮಂಗಲದಲ್ಲಿ ನಡೆದಿದೆ.

ಬೆಂಗಳೂರು (ಜೂ.10) : ಬೆಂಗಳೂರಿನ ಹೊರ ವಲಯದಲ್ಲಿರುವ ನೆಲಮಂಗಲದಲ್ಲಿ ನಿನ್ನೆ ರಾತ್ರಿ ರೋಗಿಯನ್ನು ಕರೆದುಕೊಂಡು ಚಿಕಿತ್ಸೆಗೆ ತೆರಳುತ್ತಿದ್ದ ಅಂಬ್ಯುಲೆನ್ಸ್‌ ತಡೆದು ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ ಮೂವರು ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿ ರೋಗಿಯನ್ನ ಖಾಸಗಿ ಆಂಬ್ಯೂಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸುವ ವೇಳೆ ಕ್ಷುಲ್ಲಕ ವಿಚಾರದಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರಿಂದ ಮೂವರು ವಶಕ್ಕೆ ಪಡೆದಿದ್ದಾರೆ. ನೆಲಮಂಗಲ ಜಾಸ್ ಟೋಲ್ ಬಳಿ ಚಾಲಕನ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳಾದ ಯಲಚೇನಹಳ್ಳಿ ಮೂಲದ ಯುವರಾಜ್ ಸಿಂಗ್, ಮಂಜುನಾಥ್, ಲತೀಶ್ ಬಂಧಿತರು ಆಗಿದ್ದಾರೆ.