Asianet Suvarna News Asianet Suvarna News

ಕಾಡುಪ್ರಾಣಿಗಳ ಹಾವಳಿಯಿಂದ ಹೈರಾಣಾದ ಕುಂದಾನಗರಿ ಜನ; ಕ್ಯಾರೆ ಎನ್ನದ ಅಧಿಕಾರಿಗಳು!

ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕುಂದಾನಗರಿ ಜನ ಕಾಡು ಪ್ರಾಣಿ ಹಾವಳಿಯಿಂದ ಹೈರಾಣಾಗಿ ಹೋಗಿದ್ದಾರೆ. ಕಳೆದ ಮೂರು ತಿಂಗಳಿಂದ ಕಾಡಾನೆ, ಕಾಡು ಹಂದಿ, ಕಾಡುಕೋಣಗಳ ಹಾವಳಿಯಿಂದ ಖಾನಾಪುರ ತಾಲೂಕಿನ ಮಾಸ್ಕೇನಹಟ್ಟಿ ರೈತರು ಕಬ್ಬು, ಭತ್ತದ ಬೆಳೆಯನ್ನು ಕಳೆದುಕೊಂಡಿದ್ದಾರೆ. ಇದರಿಂದ ಬೇಸತ್ತ ರೈತರು ನಮಗೆ ಬೆಳೆ ಪರಿಹಾರ ಕೊಡುವುದೇನೂ ಬೇಡ. ವನ್ಯ ಜೀವಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕೊಟ್ಟರೆ ಸಾಕು ಎನ್ನುತ್ತಿದ್ದಾರೆ. 

ಬೆಂಗಳೂರು (ಜ. 27): ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕುಂದಾನಗರಿ ಜನ ಕಾಡು ಪ್ರಾಣಿ ಹಾವಳಿಯಿಂದ ಹೈರಾಣಾಗಿ ಹೋಗಿದ್ದಾರೆ. ಕಳೆದ ಮೂರು ತಿಂಗಳಿಂದ ಕಾಡಾನೆ, ಕಾಡು ಹಂದಿ, ಕಾಡುಕೋಣಗಳ ಹಾವಳಿಯಿಂದ ಖಾನಾಪುರ ತಾಲೂಕಿನ ಮಾಸ್ಕೇನಹಟ್ಟಿ ರೈತರು ಕಬ್ಬು, ಭತ್ತದ ಬೆಳೆಯನ್ನು ಕಳೆದುಕೊಂಡಿದ್ದಾರೆ.

ಗಣರಾಜ್ಯೋತ್ಸವ ದಿನದಂದೇ ರಾಷ್ಟ್ರಧ್ವಜಕ್ಕೆ ಅಪಮಾನ: ಕಾಲಿನಿಂದ ತಿರಂಗಾ ಎತ್ತಿದ ಭೂಪ

ಇದರಿಂದ ಬೇಸತ್ತ ರೈತರು ನಮಗೆ ಬೆಳೆ ಪರಿಹಾರ ಕೊಡುವುದೇನೂ ಬೇಡ. ವನ್ಯ ಜೀವಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕೊಟ್ಟರೆ ಸಾಕು ಎನ್ನುತ್ತಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿದರೆ ಅವರು ಗ್ರಾಮಸ್ಥರಿಗೆ ಅವಾಜ್ ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಇದೀಗ ಮೋದಿ App ನಲ್ಲಿ ದೂರು ದಾಖಲಿಸಿದ್ದಾರೆ. 

Video Top Stories