5 ವರ್ಷದ ಹಿಂದೆ ಬತ್ತಿದ ಬೋರ್‌ವೆಲ್‌ನಲ್ಲಿ 30 ಅಡಿ ಚಿಮ್ಮಿದ ನೀರು
5 ವರ್ಷಗಳ ಹಿಂದೆ ಬತ್ತಿದ್ದ ಬೋರ್‌ವೆಲ್‌ನಲ್ಲಿ ಏಕಾ ಏಕಾ 30 ಅಡಿ ಎತ್ತರಕ್ಕೆ ನೀರು ಚಿಮ್ಮಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬೋರವೆಲ್ ನಲ್ಲಿ ಚಿಮ್ಮುತ್ತಿರುವ ನೀರು ಕಂಡು ಜನರು ಅಚ್ಚರಿಗೊಂಡಿದ್ದಾರೆ.
ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ ರೈತ ದ್ಯಾವಪ್ಪ ಕಾಟನಾಯ್ಕರ್ ಎಂಬುವರಿಗೆ ಸೇರಿದ ಬೋರವೆಲ್ ನಲ್ಲಿ ನೀರುಕ್ಕುತ್ತಿದೆ.
ಬಾಗಲಕೋಟೆ [ನ.11] : 5 ವರ್ಷಗಳ ಹಿಂದೆ ಬತ್ತಿದ್ದ ಬೋರ್‌ವೆಲ್‌ನಲ್ಲಿ ಏಕಾ ಏಕಾ 30 ಅಡಿ ಎತ್ತರಕ್ಕೆ ನೀರು ಚಿಮ್ಮಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬೋರವೆಲ್ ನಲ್ಲಿ ಚಿಮ್ಮುತ್ತಿರುವ ನೀರು ಕಂಡು ಜನರು ಅಚ್ಚರಿಗೊಂಡಿದ್ದಾರೆ.
ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ ರೈತ ದ್ಯಾವಪ್ಪ ಕಾಟನಾಯ್ಕರ್ ಎಂಬುವರಿಗೆ ಸೇರಿದ ಬೋರವೆಲ್ ನಲ್ಲಿ ನೀರುಕ್ಕುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿದ್ದು, ಇದರಿಂದ ಬತ್ತಿದ ಬೋರುಗಳಲ್ಲಿ ಎಲ್ಲೆಡೆ ನೀರುಕ್ಕುತ್ತಿದೆ.