Asianet Suvarna News Asianet Suvarna News

ಸಿದ್ಧಾರ್ಥ್ ಹೆಗಡೆ ಸಾವಿನಿಂದ ಅಂತಾರಾಷ್ಟ್ರೀಯ ಕಾರು ರ‍್ಯಾಲಿ ಅನಾಥ!

ಕಾಫಿ ಕಿಂಗ್ ಸಿದ್ದಾರ್ಥ್ ಹೆಗಡೆ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಯ ದಾರಿ ಹಿಡಿದ ಬೆನ್ನಲ್ಲೆ ಅವರ ಕನಸಿನ ಕೂಸು ಕಾಫಿ ಡೇ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಅವರ ಮತ್ತೊಂದು ಕನಸಿನ ಕೂಸಾಗಿರುವ ಏಷ್ಯಾ ಫೆಸಿಪಿಕ್ ಅಂತಾರಾಷ್ಟ್ರೀಯ ಕಾರು ರ‍್ಯಾಲಿಗೆ ಬ್ರೇಕ್ ಬಿದ್ದಿದೆ.

First Published Dec 7, 2019, 7:37 PM IST | Last Updated Dec 7, 2019, 7:37 PM IST

ಚಿಕ್ಕಮಗಳೂರು(ಡಿ.07): ಕಾಫಿ ಕಿಂಗ್ ಸಿದ್ದಾರ್ಥ್ ಹೆಗಡೆ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಯ ದಾರಿ ಹಿಡಿದ ಬೆನ್ನಲ್ಲೆ ಅವರ ಕನಸಿನ ಕೂಸು ಕಾಫಿ ಡೇ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಅವರ ಮತ್ತೊಂದು ಕನಸಿನ ಕೂಸಾಗಿರುವ ಏಷ್ಯಾ ಫೆಸಿಪಿಕ್ ಅಂತಾರಾಷ್ಟ್ರೀಯ ಕಾರು ರ‍್ಯಾಲಿಗೆ ಬ್ರೇಕ್ ಬಿದ್ದಿದೆ.

ಇದನ್ನೂ ಓದಿ: ಮನೆ ಬಿಟ್ಟ ಕಾಫಿ ಡೇ ಸಿದ್ಧಾರ್ಥ: ಕೋಟ್ಯಧಿಪತಿಯ ಸಮಗ್ರ ವ್ಯಕ್ತಿ ಪರಿಚಯ

15 ವರ್ಷಗಳ ಹಿಂದೆ ಸಿದ್ದಾರ್ಥ್ ಹೆಗಡೆ‌ ಚಿಕ್ಕಮಗಳೂರಿನ ಕಾಫಿ ಕಣಿವೆಗಳಲ್ಲಿ ಅದ್ದೂರಿಯಾಗಿ ಕಾರ್ ರ‍್ಯಾಲಿಗಳನ್ನು ಆಯೋಜಿಸಿ ಮೆಚ್ಚುಗೆಗಳಿಸುವ ಜೊತೆಗೆ ಮಲೆನಾಡು ಚಿಕ್ಕಮಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದ್ದರು.

ಇದನ್ನೂ ಓದಿ: 6ನೇ ಆವೃತ್ತಿ ಮರ್ಸಿಡೀಸ್ ಬೆಂಜ್ ಕ್ಲಾಸಿಕ್ ಕಾರು ರ‍್ಯಾಲಿ!

ಸಿದ್ದಾರ್ಥ್ ಹೆಗಡೇ ತಮ್ಮದೇ ತೋಟಗಳ ವ್ಯಾಪ್ತಿಯಲ್ಲಿ ರೂಟ್ ಗಳನ್ನು ಸಹ ನಿರ್ಮಾಣ ಮಾಡಿದ್ರು. ಪ್ರತಿ ವರ್ಷ ಸ್ವತಂ ತಾವೇ ರೂಟ್ ಗಳನ್ನು ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದರು. ಇದೀಗ ಸಿದ್ದಾರ್ಥ್ ಸಾವಿನಿಂದ ಈ ವರ್ಷ ನಡೆಯುವ  ರ‍್ಯಾಲಿಯನ್ನು ಮುಂದಿನ ವರ್ಷಕ್ಕೆ ಆಯೋಜಕರು ಮುಂದೂಡಿದ್ದಾರೆ.