Asianet Suvarna News Asianet Suvarna News

ಎಲ್ಲವನ್ನೂ ಜ್ಞಾನ ದೃಷ್ಟಿಯಿಂದ ನೋಡುವ ವೇದವ್ಯಾಸರು..! ಮಹಾಭಾರತ ಕಂಡಿದ್ದು ಹೀಗೆ

Jul 31, 2021, 10:52 AM IST

ವ್ಯಾಸ ಮಹರ್ಷಿ ಈ ಸೃಷ್ಟಿ ಎಲ್ಲವನ್ನೂ ತಮ್ಮ ಜ್ಞಾನ ದೃಷ್ಟಿಯಿಂದ ನೋಡುತ್ತಾರೆ. ಪ್ರಾಣಿಗಳ ನಿವಾಸ ಸ್ಥಾನ ನೋಡುತ್ತಾರೆ. ಧರ್ಮ ಅರ್ಥ ಕಾಮಗಳ ಭೇದಗಳು, ರಹಸ್ಯಗಳು ವೇದಗಳು ವಿಜ್ಞಾನದಿಂದ ಕೂಡಿದ ಯೋಗ, ವಿವಿಧ ಕ್ಷೇತ್ರಗಳನ್ನು ನೋಡುತ್ತಾರೆ. ಅದರಲ್ಲೇ ಈ ಮಹಾಭಾರತದ ಗ್ರಂಥವೂ ದರ್ಶನ ನೀಡುತ್ತದೆ. ವ್ಯಾಖ್ಯಾನದಿಂದ ಕೂಡಿದ ಇತರ ಇತಿಹಾಸಗಳೂ ಕಾಣಿಸುತ್ತದೆ. ಮಹಾಭಾರತದಲ್ಲಿ ಸಂಕ್ಷೇಪ ಭಾರತ ಹಾಗೂ ವಿಶಾಲ ಭಾರತ ಎಂಬ ಎರಡು ಭಾಗಗಳಿವೆ. ಜ್ಞಾನಿಗಳು ಇದನ್ನು ಎರಡನ್ನೂ ತಿಳಿದುಕೊಳ್ಳುತ್ತಾರೆ.