ಮಹಾಭಾರತದಲ್ಲಿ ಶಲ್ಯನ ಸಾವಾಗಿದ್ದು ಹೇಗೆ ?

ದುರ್ಯೋಧನನು ಶಲ್ಯನನ್ನು ಸೇನಾಧಿಪತಿಯೆಂದು ನೇಮಿಸುತ್ತಾನೆ. ಸೇನಾಧಿಪತಿಯಾದ ನಂತರ ಶಲ್ಯ ಈಗ ಕೌರವರಿಗಾಗಿ ಹೋರಾಡಲು ಉತ್ಸುಕನಾಗುತ್ತಾನೆ. ಈಟಿ-ಯುದ್ಧದಲ್ಲಿ ಶಲ್ಯನನ್ನು ಯುಧಿಷ್ಠಿರನು ಕೊಲ್ಲುತ್ತಾನೆ.

First Published Aug 1, 2021, 12:58 PM IST | Last Updated Aug 1, 2021, 12:58 PM IST

ಮಹಾಭಾರತದಲ್ಲಿ ಯುದ್ಧದ 17 ನೇ ದಿನ ಕರ್ಣನು ನಕುಲ ಮತ್ತು ಸಹದೇವನನ್ನು ಸೋಲಿಸುತ್ತಾನೆ. ಆದರೆ ಅವರು ಚಿಕ್ಕವರು, ತನ್ನ ಸಮಾನರಲ್ಲ ಎಂದು ಹೇಳಿ ಅವರು ತನ್ನ ಕೈಯಿಂದ ಸಾಯಲು ಅರ್ಹರಲ್ಲ ಎನ್ನುತ್ತಾನೆ. ಹಾಗಾಗಿ ಅರ್ಜುನನೊಂದಿಗೆ ಯುದ್ಧಕ್ಕೆ ಮುಂದಾಗುತ್ತಾನೆ. ಕರ್ಣ-ಅರ್ಜುನ ದ್ವಂದ್ವ ಆರಂಭವಾಗುತ್ತದೆ. ಅರ್ಜುನನನ್ನು ತನ್ನ ಸ್ವಂತ ಶಕ್ತಿಯಿಂದ ಸೋಲಿಸಲು ಸಾಧ್ಯವಾಗದ ಕರ್ಣನು ತನ್ನ ಬಾಣದ ಮೇಲೆ ಅಶ್ವಸೇನ ಹಾವನ್ನು ಆಹ್ವಾನಿಸಿ ಅರ್ಜುನನತ್ತ ಗುರಿಯಿಡುತ್ತಾನೆ. ಶಲ್ಯನು ಇದಕ್ಕೆ ಅಡ್ಡಿಪಡಿಸುತ್ತಾನೆ. ಕರ್ಣನಿಗೆ ಅರ್ಜುನನ ಎದೆಯ ಕಡೆಗೆ ಗುರಿಯಿಡುವಂತೆ ಹೇಳಿತ್ತಾನೆ. ಶಲ್ಯ ಅರ್ಜುನನ್ನು ನಿರಂತರ ಹೊಗಳಿದ್ದಕ್ಕೆ ಅಸಹ್ಯಗೊಂಡ ಕರ್ಣನು ಸಲಹೆಯು ತಪ್ಪಾಗಿರಬೇಕು ಎಂದು ಭಾವಿಸುತ್ತಾನೆ. ಅರ್ಜುನನ ತಲೆಯನ್ನು ಗುರಿಯಾಗಿಸಿಕೊಳ್ಳುತ್ತಾನೆ.

ಕೃಷ್ಣ ಅರ್ಜುನನ ರಥವನ್ನು ನೆಲಕ್ಕೆ ತಳ್ಳುತ್ತಾನೆ. ಬಾಣವು ಅವನ ತಲೆಯ ಬದಲು ಅರ್ಜುನನ ಕಿರೀಟವನ್ನು ತೆಗೆಯುತ್ತದೆ. ಕೊನೆಗೆ ಅರ್ಜುನನು ಕರ್ಣನನ್ನು ಅಂಜಲಿಕಾಸ್ತ್ರದಿಂದ ಕೊಲ್ಲುತ್ತಾನೆ. ದುರ್ಯೋಧನನು ಶಲ್ಯನನ್ನು ಸೇನಾಧಿಪತಿಯೆಂದು ನೇಮಿಸುತ್ತಾನೆ. ಸೇನಾಧಿಪತಿಯಾದ ನಂತರ ಶಲ್ಯ ಈಗ ಕೌರವರಿಗಾಗಿ ಹೋರಾಡಲು ಉತ್ಸುಕನಾಗುತ್ತಾನೆ. ಈಟಿ-ಯುದ್ಧದಲ್ಲಿ ಶಲ್ಯನನ್ನು ಯುಧಿಷ್ಠಿರನು ಕೊಲ್ಲುತ್ತಾನೆ.