ನ್ಯಾಷನಲ್ ಅವಾರ್ಡ್ ವಿಜೇತೆ ನಟಿ ಶ್ವೇತಾ ಬಸು- ರೋಹಿತ್ ಮಿತ್ತಲ್ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಮದುವೆಯಾಗಿ ಒಂದು ವರ್ಷದೊಳಗೆ ಇಬ್ಬರೂ ಬೇರೆ ಬೇರೆಯಾಗಿರುವುದರ ಬಗ್ಗೆ ಶ್ವೇತಾ ಬಸು ಅಧಿಕೃತಗೊಳಿಸಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Shweta Basu Prasad (@shwetabasuprasad11) on Dec 9, 2019 at 6:19am PST

'ನಾನು, ರೋಹಿತ್ ಪರಸ್ಪರ ಒಪ್ಪಿಗೆ ಮೇರೆಗೆ ಬೇರೆ ಬೇರೆಯಾಗಲು ನಿರ್ಧರಿಸಿದ್ದೇವೆ. ಕೆಲವು ಸಮಯ ನಮ್ಮಿಬ್ಬರ ನಡುವೆ ಎಲ್ಲವೂ ಚೆನ್ನಾಗಿತ್ತು. ಆದರೆ ಯಾಕೋ ಇಬ್ಬರಿಗೂ ಆಗಿ ಬರುತ್ತಿಲ್ಲ ಎನಿಸಿತು. ಪುಸ್ತಕದ ಪ್ರತಿಯೊಂದು ಪುಟವನ್ನೂ ಓದಬೇಕು ಎನಿಸುವುದಿಲ್ಲ.  ಹಾಗಂತ ಆ ಪುಸ್ತಕ ಬೋರ್ ಹೊಡೆಸುತ್ತಿದೆ ಎಂದರ್ಥವಲ್ಲ. ಕೆಲವೊಂದನ್ನು ಬಿಟ್ಟು ಬಿಡಬೇಕಷ್ಟೇ ಎಂದು ಮಾರ್ಮಿಕವಾಗಿ ಬರೆದಿದ್ದಾರೆ. 

'ಚಪಕ್' ಟ್ರೇಲರ್ ನೋಡಿ ವೇದಿಕೆ ಮೇಲೆ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ

ಇಷ್ಟು ದಿನ ಒಳ್ಳೆಯ ನೆನಪುಗಳನ್ನು ಕೊಟ್ಟಿದ್ದಕ್ಕೆ  ಥ್ಯಾಂಕ್ಸ್. ಮುಂದಿನ ಜೀವನ ಚೆನ್ನಾಗಿರಲಿ ಎಂದು ಹೇಳುವುದನ್ನು ಮರೆತಿಲ್ಲ! 

ಶ್ವೇತಾ ಬಸು ಬಾಲ ಕಲಾವಿದೆಯಾಗಿ ಸಿನಿಮಾ ಇಂಡಸ್ಟ್ರಿಗೆ ಬಂದವರು. 'ಇಕ್ಬಾಲ್', ಮಕ್ದೇ ಸಿನಿಮಾ ನಟನೆಗಾಗಿ ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಇತ್ತೀಚಿಗೆ ವರುಣ್ ಧವನ್, ಅಲಿಯಾ ಭಟ್ ಜೊತೆ 'ಬದ್ರಿನಾಥ್‌ ಕಿ ದುಲ್ಹನಿಯಾ' ಸಿನಿಮಾದಲ್ಲಿ ನಟಿಸಿದ್ದಾರೆ.