ಅಮ್ಮಮ್ಮನ ಸೀರೆಯಲ್ಲಿ ಮಿಂಚಿದ ಸಾನ್ವಿ ಸುದೀಪ್… ಸರೋಜಮ್ಮನ ಹಾಗೆ ಕಾಣಿಸ್ತೀರಿ ಎಂದ ಫ್ಯಾನ್ಸ್

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಅಜ್ಜಿಯ ಸೀರೆಯುಟ್ಟು ಪೋಸ್ ಕೊಟ್ಟಿದ್ದು ಈ ಫೋಟೊವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. 
 

Sanvi Sudeep poses with her grandmothers saree pav

ಕಿಚ್ಚ ಸುದೀಪ್ (Kiccha Sudeep) ಪುತ್ರಿ ಸಾನ್ವಿ ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆಕ್ಟೀವ್ ಆಗಿದ್ದು, ಹೆಚ್ಚಾಗಿ ಒಂದೊಂದು ವಿಶೇಷ ಫೋಟೊಗಳ ಮೂಲಕ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಹೊಸದೊಂದು ಫೋಟೊ ಮೂಲಕ ಸಾನ್ವಿ (Sanvee Sudeep) ಕಾಣಿಸಿಕೊಂಡಿದ್ದಾರೆ. ಹೌದು, ಸಾನ್ವಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಸೀರೆಯುಟ್ಟಿರುವ ಫೋಟೊ ಶೇರ್ ಮಾಡಿದ್ದು, ಅದರ ಜೊತೆಗೆ ಒಂದಷ್ಟು ನೆನಪುಗಳನ್ನು ಕೂಡ ಬರೆದುಕೊಂಡಿದ್ದಾರೆ. 

ಅಮ್ಮನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ ಕಿಚ್ಚ ಸುದೀಪ್ ಪುತ್ರಿ ಸಾನ್ವಿ

ಸಾನ್ವಿ ಕೆಂಪು ಬಣ್ಣದ ಜರಿ ಸೀರೆ ಉಟ್ಟಿದ್ದು ಅದರ ಜೊತೆಗೆ ನನ್ನ ಅಮ್ಮಮ್ಮ ಯಾವಾಗಲೂ ನನ್ನನ್ನು ಸೀರೆಯಲ್ಲಿ ನೋಡಲು ಇಷ್ಟಪಟ್ಟಿದ್ದರು. ಇವತ್ತು ನಾನು ಅವರ ಸೀರೆಯನ್ನು ಉಡುವ ಸೌಭಾಗ್ಯ ಸಿಕ್ಕಿದೆ ಎಂದು ಹೇಳಿ ಕ್ಯಾಪ್ಶನ್ ಬರೆದಿದ್ದಾರೆ. (My Ammama always wanted to see me in a sari, and today I’m honoured to have worn hers) ಇದರ ಜೊತೆಗೆ ಎರಡು ಫೋಟೊಗಳನ್ನು ಅಪ್ ಲೋಡ್ ಮಾಡಿದ್ದಾರೆ. ಒಂದು ಫೋಟೊ ಬ್ಲ್ಯಾಕ್ ಆಂಡ್ ವೈಟ್ ಆಗಿದ್ದು, ಇನ್ನೊಂದು ಕಲರ್ ಫೋಟೊ ಶೇರ್ ಮಾಡಿದ್ದಾರೆ. ಅಮ್ಮಮ್ಮ ಅಂದ್ರೆ ಅಮ್ಮನ ಅಮ್ಮ ಅಂತ ಅರ್ಥ, ಆದರೆ ಇಲ್ಲಿ ಸಾನ್ವಿ ತಮ್ಮ ಅಮ್ಮನ ಅಮ್ಮ ಅಥವಾ ಅಪ್ಪನ ಅಮ್ಮನ ಬಗ್ಗೆ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಒಟ್ಟಲ್ಲಿ ಅಭಿಮಾನಿಗಳು ಮಾತ್ರ ಈ ಫೋಟೊ ನೋಡಿ ಥ್ರಿಲ್ ಆಗಿದ್ದಾರೆ. ನೀವು ಥೇಟ್ ಸರೋಜಮ್ಮನ ಹಾಗೇ ಕಾಣಿಸ್ತೀರಿ, ಸೀರೆಯಲ್ಲಿ ನೀವು ನಿಮ್ಮ ಅಜ್ಜಿಯ ಹಾಗೆ ಕಾಣಿಸುತ್ತೀರಿ. ತುಂಬಾನೆ ಮುದ್ದಾಗಿ ಕಾಣಿಸುತ್ತೀರಿ ಎಂದು ಅಭಿಮಾನಿಗಳು ಕಾಮೆಂಟ್ ಮೂಲಕ ತಿಳಿಸಿದ್ದಾರೆ. 

ನನ್ನ ಮಗಳಿಗೆ ನೇಚರ್ ಪ್ಲಾನ್ ಮಾಡಿರುತ್ತೆ, ನಾನು ಜಸ್ಟ್ ಸಪೋರ್ಟ್ ಮಾಡ್ತೀನಿ: ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಮತ್ತು ಪ್ರಿಯಾ ರಾಧಾಕೃಷ್ಣನ್ ಪುತ್ರಿಯಾಗಿರುವ ಸಾನ್ವಿ ಸುದೀಪ್ ಈಗಾಗಲೇ ಹೈದಬಾರದಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು, ಸದ್ಯ ಸಂಗೀತದಲ್ಲಿ ಒಲವು ಬೆಳಸಿಕೊಂಡಿದ್ದು, ಹಲವು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಜೊತೆಗೆ ಪೈಂಟಿಂಗ್ ಕೂಡ ಮಾಡುತ್ತಾರೆ. ಸುದೀಪ್ ಅಕ್ಕನ ಮಗ ಸಂಜೀತ್ ಅವರು ನಾಯಕನಾಗಿ ಅಭಿನಯಿಸಿರುವ ಜಿಮ್ಮಿ (Jimmi) ಸಿನಿಮಾಕ್ಕಾಗಿ ಹಾಡು ಬರೆದು, ಹಾಡುವ ಮೂಲಕ ಹಿನ್ನೆಲೆ ಗಾಯಕಿಯೂ (Playback singer) ಆಗಿದ್ದಾರೆ ಸಾನ್ವಿ.  ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಸಾನ್ವಿಗೆ ಈಗಾಗಲೇ 437ಸಾವಿರ ಫಾಲೋವರ್ಸ್ ಇದ್ದಾರೆ. ಕೆಲದಿನಗಳ ಹಿಂದೆ ಝೀ ಕನ್ನಡ ವೇದಿಕೆ ಮೇಲೆಯೂ ಸಾನ್ವಿ ತಮ್ಮ ಅಪ್ಪನಿಗಾಗಿ ಹಾಡು ಹೇಳಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. 
 

Latest Videos
Follow Us:
Download App:
  • android
  • ios