Asianet Suvarna News Asianet Suvarna News

ಲಾಕ್‌ಡೌನ್‌ ಸಹಿಸಲು 'ಮರಳಿ ಬಂದಳು ಸೀತೆ'!

ಎಪಿಸೋಡ್‌ಗಳ ಲೆಕ್ಕದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಶೂಟಿಂಗ್‌ ಶೂಟಿಂಗ್‌ ಎಂದು ಬ್ಯುಸಿಯಾಗಿರುವ, ಪ್ರತಿ ದಿನ ಮನೆ ಮನೆಯ ಪುಟ್ಟಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಿರುತೆರೆ ತಾರೆಗಳನ್ನು ಕೊರೋನಾ ಮನೆಯಲ್ಲೇ ಬಂಧಿಸಿದೆ. ಮನೆಯೇ ಮಂತ್ರಾಲಯ ಮಾಡಿಕೊಂಡರುವ ಮನೆ ಮನೆಯ ತಾರೆಗಳು ಇಲ್ಲಿ ತಮ್ಮ ಲಾಕ್‌ ಡೌನ್‌ ಅನುಭವ ಹೇಳಿಕೊಂಡಿದ್ದಾರೆ.

Marali bandalu seethe fame madubala coronavirus lockdown experience
Author
Bangalore, First Published Apr 4, 2020, 4:37 PM IST

ನಾನು ಕನ್ನಡದಲ್ಲಿ ‘ಮರಳಿ ಬಂದಳು ಸೀತೆ’ ಹಾಗೂ ತೆಲುಗಿನಲ್ಲಿ ‘ನಿನ್ನೇ ಪೆಳ್ಳಾಡುತ’ ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. ತಿಂಗಳಲ್ಲಿ 15 ದಿನ ಬೆಂಗಳೂರು, ಉಳಿದ 15 ದಿನ ಹೈದರಾಬಾದ್‌ನಲ್ಲಿ ಇರುತ್ತಿದ್ದೆ. ಹೀಗೆ ಎರಡು ರಾಜ್ಯಗಳಿಗೆ ಓಡಾಡಿಕೊಂಡು ಶೂಟಿಂಗ್‌ನಲ್ಲಿ ಜೀವನ ಕಳೆಯುತ್ತಿತ್ತು. ನಿಜಕ್ಕೂ ಇದು ಬ್ರೇಕ್‌ ಅನ್ನಬಹುದು. ಆದರೆ, ಒಂದೆರಡು ದಿನ ಬ್ರೇಕ್‌ ಅಗತ್ಯವಿದ್ದಾಗ ಒಂದು ತಿಂಗಳೇ ಸಿಕ್ಕಿದೆ. ಶೂಟಿಂಗ್‌ ಮಾಡಿರುವ ಎಪಿಸೋಡ್‌ಗಳ ಪ್ರಸಾರ ಮುಗಿದಿದೆ. ಈಗ ಮರು ಪ್ರಸಾರ. ಪ್ರತಿ ದಿನ ಹೊಸ ಹೊಸ ಎಪಿಸೋಡ್‌ ಗಳ ಮೂಲಕ ಟೀವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದವರು ಈಗ ಹಳೆಯ ಕಂತುಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಈ ರೀತಿಯಲ್ಲಿ ಲಾಕ್‌ ಡೌನ್‌ ಕಷ್ಟಮತ್ತು ಸಂತೋಷ ಎರಡೂ ಕೊಟ್ಟಿದೆ.

'ನಂದಿನಿ' ಧಾರಾವಾಹಿಯ ಕಾವ್ಯಾ ಮಾಡ್ತಿರೋ 'ಚಿನ್ನದ ಬೇಟೆ' ನೋಡಿ

ಇಷ್ಟಿದ್ದೂ ನಾವು ಗಂಭೀರತೆಯನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಇಡೀ ನಗರ ನಿರ್ಜನವಾಗಿದ್ದರೂ ಗುಂಪಾಗಿ ಓಡಾಡುವ ಅಗತ್ಯ ಏನಿದೆ ಗೊತ್ತಾಗುತ್ತಿಲ್ಲ. ನಾನಂತೂ ಮನೆ ಬಿಟ್ಟು ಹೋಗುತ್ತಿಲ್ಲ. ಅಮ್ಮ-ಅಮ್ಮನ ಜತೆ ಖುಷಿ ಆಗಿದ್ದೇನೆ. ಹೆಚ್ಚಿನ ದುಡಿಮೆ ಇಲ್ಲ ಅಷ್ಟೆ. ಹಳೆಯ ಎಪಿಸೋಡ್‌ಗಳೇ ಟೀವಿಯಲ್ಲಿ ಬರುತ್ತಿವೆ. ಇದೆಲ್ಲ ನಾವು ಕೆಲ ದಿನಗಳ ಮಟ್ಟಿಗಾದರೂ ಸಹಿಸಿಕೊಳ್ಳಬೇಕು.

Lockdown ಆದ ಆರ್ಯವರ್ಧನ್‌ ಮನೆಯಲ್ಲಿ ಏನ್‌ ಮಾಡುತ್ತಿದ್ದಾರೆ ನೋಡಿ

ಧಾರಾವಾಹಿ ಸೆಟ್‌ ಗಳಲ್ಲಿ ದಿನಾ ಪೂರ್ತಿ ಕಳೆಯುತ್ತಿದ್ದವರು ಈಗ ಮನೆಯಲ್ಲಿದ್ದೇವೆ. ಇದೊಂದು ಅನಿವಾರ್ಯ ಬೇಸರದ ಸಂಗತಿ. ಒಂದು ಗಮನಿಸಿ, ಯಾವುದೇ ರೀತಿಯ ವಿಕೋಪಗಳು ಬಂದರೂ ಮಾಧ್ಯಮ (ಸಿನಿಮಾ, ಪತ್ರಿಕೆ, ರಂಗಭೂಮಿ) ಅದರ ಬಿಸಿಯಿಂದ ಆಚೆ ಇರುತ್ತಿತ್ತು. ತುರ್ತು ಪರಸ್ಥಿತಿ ಹೊತ್ತಿನಲ್ಲೇ ಪತ್ರಿಕೆಗಳು ಬರುತ್ತಿದ್ದವು. ಈಗ ನೋಡಿ, ಕಣ್ಣಿಗೆ ಕಾಣದ ಒಂದು ಜೀವಿಯಿಂದ ಇಂಥ ಮಾಧ್ಯಮಗಳೇ ಬಂದ್‌ ಅಥವಾ ತಾತ್ಕಾಲಿಕವಾಗಿ ಕೆಲಸಗಳನ್ನು ನಿಲ್ಲಿಸುವಂತಾಗಿದೆ. ಈಗಾಗಲೇ ಪ್ರಸಾರ ಆಗಿರುವ ಧಾರಾವಾಹಿಗಳನ್ನು ಮತ್ತೆ ನೋಡುವುದು ಎಂದರೆ ಅದೊಂದು ಧರ್ಮ ಸಂಕಟ. -ಗೋವಿಂದ್‌, ನಿರ್ದೇಶಕ

Follow Us:
Download App:
  • android
  • ios