Asianet Suvarna News Asianet Suvarna News

ಅತ್ಯಾಚಾರ ಆರೋಪಿ ಬಿಗ್ ಬಾಸ್‌ನಲ್ಲಿ ಇರಬಾರದು; ನೆಟ್ಟಿಗರಿಂದ ತೀವ್ರ ಆಕ್ರೋಶ!

ಫನ್ ಬಕೆಟ್ ಭಾರ್ಗವ್ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುತ್ತಾರಾ? ನೆಟ್ಟಿಗರ ಆಕ್ರೋಶಕ್ಕೆ ಉತ್ತರಿಸಿದ ವಾಹಿನಿ ತಂಡ. 
 

Fun bucket Bhargav to enter telugu bigg boss season 5 vcs
Author
Bangalore, First Published Aug 15, 2021, 10:50 AM IST
  • Facebook
  • Twitter
  • Whatsapp

ಟಿಕ್‌ಟಾಕ್‌ ಹಾಗೂ ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಂಡ ಫನ್ ಬಕೆಟ್ ಭಾರ್ಗವ್‌ರನ್ನು ಕೆಲವು ವರ್ಷಗಳ ಹಿಂದೆ ಅತ್ಯಾಚಾರ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಜಾಮೀನು ಪಡೆದುಕೊಂಡು ಹೊರ ಬಂದಿರುವ ಭಾರ್ಗವ್‌ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಅತ್ಯಾಚಾರ ಆರೋಪಿಯನ್ನು ಶೋಗೆ ಕರೆತಂದರೆ ನಾವು ಚಾನೆಲ್‌ಗೆ ಮುತ್ತಿಗೆ ಹಾಕುತ್ತೇವೆ',' ತಪ್ಪು ಮಾಡಿರುವ ವ್ಯಕ್ತಿ ಶಿಕ್ಷೆ ಅನುಭವಿಸಬೇಕು, ಬದಲಿಗೆ ಶೋನಲ್ಲಿ ಭಾಗವಹಿಸಿ ಖ್ಯಾತಿ ಪಡೆಯಬಾರದು', 'ಜನಪ್ರಿಯ ಶೋನಲ್ಲಿ ಆರೋಪಿಯನ್ನು ಕರೆತಂದು ಇಲ್ಲಿ ರಲ್ಲರಿಗೂ ಅದೇ ಹಾದಿ ಹಿಡಿಯುವಂತೆ ಹೇಳುತ್ತಿದ್ದೀರಾ?' ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೆಚ್ಚಾದ ಕಾರಣ ಬಿಗ್ ಬಾಸ್ ತಂಡದವರು ಸ್ಪಷ್ಟನೆ ನೀಡಿದ್ದಾರೆ. 

Fun bucket Bhargav to enter telugu bigg boss season 5 vcs

'ಫನ್ ಬಕೆಟ್ ಭಾರ್ಗವ್‌ರನ್ನು  ಬಿಗ್ ಬಾಸ್‌ ಸ್ಪರ್ಧಿಯಾಗಿ ಕರೆಯಲಾಗಿದೆ ಎಂಬುವುದು ಸುಳ್ಳು ಸುದ್ದಿ. ನಾವು ಯಾವುದೇ ಕಾರಣಕ್ಕೂ ಅತ್ಯಾಚಾರ ಆರೋಪಿಯನ್ನು ಕಾರ್ಯಕ್ರಮಕ್ಕೆ ಕರೆತರುವುದಿಲ್ಲ. ನಾವು ಆತನನ್ನು ಸಂಪರ್ಕ ಸಹ ಮಾಡಿಲ್ಲ' ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಫನ್ ಬಕೆಟ್ ಭಾರ್ಗವ್ ಒಬ್ಬ ಕಾಮುಕ, 14 ವರ್ಷದ ಹುಡುಗಿ ದಾರಿ ತಪ್ಪಿದೆ: ಗಾಯಕಿ ಚಿನ್ಮಯಿ ಶ್ರೀಪಾದ್!

ಭಾರ್ಗವ್‌ ವಿಡಿಯೋದಲ್ಲಿ 'ಓ ಮೈ ಗಾಡ್ ಓ ಮೈ ಗಾಡ್' ಎಂದು ಹೇಳಿಕೊಂಡು ಜನಪ್ರಿಯತೆ ಪಡೆದ ಹುಡುಗಿ ನಿತ್ಯಾ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಜನಪ್ರಿಯತೆ ಪಡೆದ ನಂತರ ನಿತ್ಯಾ ಅವರು ಭಾರ್ಗವ್ ತಂಡವನ್ನು ತೊರೆದಿದ್ದಾರೆ. 

ಬಿಗ್ ಬಾಸ್ ಸೀಸನ್ 5 ಶೀಘ್ರವೇ ಆರಂಭವಾಗಲಿದ್ದು, ಪ್ರೋಮೋ ಕೂಡ ಬಿಡುಗಡೆ ಮಾಡಲಾಗಿದೆ. ಈ ಬಾರಿ ನಾಗಾರ್ಜುನ ಅವರೇ ಶೋ ನಿರೂಪಣೆ ಮಾಡಲಿದ್ದಾರೆ.

Follow Us:
Download App:
  • android
  • ios