ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹೂ ಮಳೆ' ಧಾರಾವಾಹಿ ವೀಕ್ಷಕರ ಮನಸ್ಸಿಗೆ ಹತ್ತಿರವಾಗುತ್ತಿದೆ. ಲಹರಿಯ ರೀತಿ ಮಗಳಿದ್ದರೆ? ಕಾವೇರಿ ರೀತಿಯ ತಾಯಿನೂ ಇರ್ತಾರಾ? ಸಿಕ್ಕರೆ ಶೋಭಾ ತರ ಅತ್ತಿಗೆ ಸಿಗಬೇಕು ....ಫುಲ್ ಪ್ಯಾಕ್ ಫ್ಯಾಮಿಲಿ ಕಥೆ ವಿಭಿನ್ನವಾದ ಪಾತ್ರಧಾರಿಗಳನ್ನು ಕಂಡು ಜನರು ಮೆಚ್ಚಿಕೊಂಡಿದ್ದಾರೆ. ಮಿಡಲ್ ಕ್ಲಾಸ್‌ ಹುಡುಗನನ್ನು ಪ್ರೀತಿಸಿ ರಹಸ್ಯವಾಗಿ ಮದುವೆಯಾದ ಸಿರಿವಂತರ ಮಗಳಿಗೆ ಏನೆಲ್ಲಾ ಸಂಕಷ್ಟ ಎದುರಾಗುತ್ತದೆ ನೋಡಿ....

ಸನ್ನಿಧಿ ಮದುವೆ ಬಗ್ಗೆ ಮೌನ ಮುರಿದ ತಾಯಿ; 'ಇನ್ನೂ 26, ನನಗೂ ಫ್ಯಾಮಿಲಿ ಬೇಕು'! 

ಸಣ್ಣ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ಮುಂಕುಂದ್‌ ತನ್ನ ಮಗಳನ್ನು ಮದುವೆಯಾಗಿದ್ದಾನೆ, ಅಲ್ಲದೆ ಆಕೆಯನ್ನು ಗರ್ಭಿಣಿ ಮಾಡಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಆತನನ್ನು ಮನೆಗೆ ಆಹ್ವಾನಿಸಿ ಅಲ್ಲಿಯೇ ಆತನ ಕಥೆ ಮುಗಿಸುವ ಕಾವೇರಿ. ಸೈಲೆಂಟ್‌ ಆಗಿ ಮಿನಿಸ್ಟರ್ ಯದುವೀರ್ ಜೊತೆ ಮದುವೆ ಮಾತುಕಥೆ ಆರಂಭಿಸುತ್ತಾರೆ.

ಯದುವೀರ್‌ಗೆ ಸತ್ಯ ತಿಳಿಯಲ್ವಾ?

ಯದುವೀರ್‌ಗೆ ಮುಕುಂದ್ ಪರಿಚಯವಿರುತ್ತದೆ ಆದರೆ ಆತ ಪ್ರೀತಿಸುತ್ತಿರುವ ಹುಡುಗಿ ಲಹರಿನೇ ಅಂತ ಗೊತ್ತಿರಲಿಲ್ಲ. ಮುಕುಂದ್ ಸತ್ತಿರುವ ವಿಚಾರದ ಬಗ್ಗೆ ಯದುವೀರ್‌ಗೆ ತಿಳಿದಿಲ್ಲ. ಲಹರಿ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಆಣೆ ಮಾಡಿಸಿಕೊಂಡು ಯದುವೇರ್‌ ಜೊತೆ ಮದುವೆ ಪ್ರಸ್ತಾಪ ಮುಂದುವರೆಸುತ್ತಾಳೆ ಕಾವೇರಿ.  ಇದ್ದಕ್ಕಿದ್ದಂತೆ ರಾತ್ರಿ ಕರೆ ಮಾಡಿ ನಾಳೆನೇ ನಿಶ್ಛಿತಾರ್ಥ ಮಾಡಿಕೊಳ್ಳಲು ಒಪ್ಪಿಕೊಂಡ ಯದುವೀರ್‌ ಮುಖದಲ್ಲಿ ಸಂತಸ ಮನೆ ಮಾಡಿದೆ ಆದರೆ ಲಹರಿ ಕತ್ತಿನಲ್ಲಿರುವ ತಾಳಿ ಕತೆ? ಅಷ್ಟಕ್ಕೆ ಸುಮ್ಮನಾಗದ ಕಾವೇರಿ ಶಾಸ್ತ್ರದ ಪ್ರಕಾರ ಮಗಳ ಕೈ ಬಳೆ ಹೊಡೆದು, ತಾಳಿ ಕಿತ್ತು ಹಾಕುತ್ತಾರೆ. ಈ ಘಟನೆ ನೋಡಿದ ಪ್ರತಿಯೊಬ್ಬ ವೀಕ್ಷಕನ ಕರುಳು ಚುರುಕು ಎನ್ನುತ್ತದೆ.

ಒಂದೂ ನೆಗೆಟಿವ್ ಕಮೆಂಟ್‌ ಇಲ್ವಲ್ಲ; 'ಪಾರು' ಮೋಕ್ಷಿತಾ ಸೋಷಿಯಲ್ ಲೈಫ್! 

ನೆಟ್ಟಿಗರ ಮಾತು:

ಪ್ರತಿಯೊಂದು ಪಾತ್ರಕ್ಕೂ ಈ ಧಾರಾವಾಹಿಯಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಪ್ರಭಾವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾವೇರಿ ನಿಜವಾಗಿಯೂ ತಮ್ಮ ಮಗಳ ಮನಸ್ಸಿನ ಬಗ್ಗೆ ಚಿಂತಿಸದೆ ರಾಜಕೀಯ ಕ್ಷೇತ್ರದಲ್ಲಿ ಸ್ಥಾನ ಹಾಗೂ ಹಣಕ್ಕೆ ಆಸೆ ಪಟ್ಟು  ತೆಗೆದುಕೊಳ್ಳುತ್ತಿರುವ ಈ ನಿರ್ಧಾರ ಎಷ್ಟು ಸರಿ? 'ಕಾರ್ಪೋರೇಟ್‌ ಮಹಿಳೆಯ ಅಸಲಿ ಮುಖ ಬಯಲಾಗೇ ಆಗುತ್ತದೆ' ಎಂದು ನೆಟ್ಟಿಗರು ಲಹರಿ ಪರ ನಿಂತಿದ್ದಾರೆ.