ಮನೆಯ ಸ್ಪರ್ಧಿಗಳಿಗೆ ಬಿಗ್ ಬಾಸ್ ಆಗಾಗ ಸರ್ಪ್ರೆಸ್ ಕೊಡ್ತಾ ಇರ್ತಾರೆ. ಯಾರೋ ಅನಿರೀಕ್ಷಿತವಾಗಿ ಬರ್ತಾರೆ, ಒಂದಷ್ಟು ಹೊತ್ತು ಮನೋರಂಜನೆ ನೀಡ್ತಾರೆ. ಇನ್ಯಾರದ್ದೋ ಬರ್ತಡೇಗೆ ವಿಶ್ ಮಾಡ್ತಾರೆ, ಕೇಕ್ ಕಟ್ ಮಾಡ್ತಾರೆ ಹೀಗೆ. ಈ ವಾರ ಭೂಮಿ ಶೆಟ್ಟಿ ಮಾವ ಸರ್ಪ್ರೈಸ್ ಆಗಿ ಬಂದಿದ್ದರು.  ಭೂಮಿಗೆ ಇಷ್ಟವಾದ ಮೀನನ್ನು ತಂದಿದ್ದರು. ಆ ಸಮಯದಲ್ಲಿ ಭೂಮಿ ಭಾವುಕರಾಗಿದ್ದರು ಇತರ ಸ್ಪರ್ಧಿಗಳ ಕಣ್ಣಲ್ಲೂ ನೀರು ತರಿಸಿತು. 

BB7: 9 ನೇ ವಾರ ಮನೆಯಿಂದ ಹೊರಬಿದ್ದ ಸ್ಪರ್ಧಿ ಇವರೇ!

ತನ್ನ ಮಾವ ಮಾತಾಡ್ತಿಲ್ಲ ಅನ್ನೋ ನೋವು ಕಾಡ್ತಾನೇ ಇತ್ತು. ಅದನ್ನು ಕ್ಷಮೆ ಕೇಳುವ ಟಾಸ್ಕ್‌ನಲ್ಲಿ ಭೂಮಿ ಮಾವನಲ್ಲಿ ಕ್ಷಮೆ ಕೇಳಿ ದಯವಿಟ್ಟು ನನ್ನ ಮಾತನಾಡಿಸು ಎಂದು ರಿಕ್ವೆಸ್ಟ್ ಮಾಡಿಕೊಂಡರು. ಅದನ್ನು ಗಮನಿಸಿದ ಬಿಗ್‌ಬಾಸ್ ಅವರ ಮಾವನನ್ನಿ ಕರೆಸಿ ದೊಡ್ಮನೆಗೆ ಕಳುಹಿಸಿ ಕೊಟ್ಟರು. ಆಗ ಮಾವ ಭೂಮಿಗೆ ಊಟ ತಿನ್ನಿಸಿದ್ದು ಎಲ್ಲರನ್ನು ಭಾವುಕರನ್ನಾಗಿ ಮಾಡಿತು. ಇಬ್ಬರ ನಡುವಿನ ಕೋಪ ಕಡಿಮೆಯಾಯಿತು. ಮನೆಯಿಂದ ಆಚೆ ಹೋಗುವಾಗ ಮದುವೆ ವಿಚಾರವನ್ನು ಮಾತನಾಡಿ ಹೋಗಿದ್ದಾರೆ. 

ನನ್ನ ಮಗಳ ವಿಚಾರದಲ್ಲಿ ಯಾವತ್ತೂ ಈ ತಪ್ಪು ಮಾಡಬೇಡಿ ಎಂದು ಯಶ್! ಏನದು?

ಮನೆಯಿಂದ ಹೊರ ಬಂದಮೇಲೆ ಒಂದು ವರ್ಷ ಕೆಲಸ ಮಾಡ್ಕೋ.  ನಂತರ ನಾನೇ ನೋಡುವ ಹುಡುಗನನ್ನೇ ನೀನು ಮದುವೆಯಾಗಬೇಕು ಎಂದು ಹೇಳಿ ಹೋಗಿದ್ದಾರೆ. ಅದಕ್ಕೆ ಭೂಮಿಯೂ ಒಪ್ಪಿದ್ದಾರೆ!