ಬಿಗ್ ಬಾಸ್ ಮನೆಗೆ ರವಿ ಬೆಳಗೆರೆ ಎಂಟ್ರಿ ಕೊಟ್ಟಿದ್ದಾರೆ. ಮನೆ ಒಳಗೆ ಹೋಗುವುದಕ್ಕೆ ಮುನ್ನ ಸುದೀಪ್ ಜತೆ ಮಾತನಾಡುತ್ತ ಖಡಕ್ ಆಗಿಯೇ ಬೆಂಕಿಉಂಡೆ ಉದುರಿಸಿದ್ದಾರೆ. ಬಿಗ್ ಬಾಸ್ ಮನೆಗೆ ಬೆಳಗೆರೆ ಹೋಗುತ್ತಾರೆ ಎಂಬುದು ಈಗಾಗಲೇ ಗೊತ್ತಾಗಿತ್ತು.

ಬೆಳಗ್ಗೆ 5 ಪತ್ರಿಕೆ ಓದಿ, ಸಿಗರೇಟ್ ಸೇದದೆ ಇದ್ದರೆ ಬಾತ್ ರೂಂ ನಲ್ಲಿ ಕೆಲಸ ಆಗಲ್ಲ.. ಮೊದಲು 40 ಸಿಗರೇಟ್ ಸೇದುತ್ತಿದ್ದೆ.. ಈಗ ಪ್ರಯತ್ನ ಮಾಡಿ ಅದನ್ನು 38ಕ್ಕೆ ಇಳಿಸಿದ್ದೇನೆ ಎಂದು ಬೆಳಗೆರೆ ಹೇಳಿದರು.

ಕಾಫಿ, ಟೀ ಮನೆ ಒಳಗೆ ಸಿಗಲ್ಲ ಎಂದಾಗ ಬೆಳಗೆರೆ ಲೈಟ್ ಆಗಿ ಶಾಕ್ ಆದರು. ಸುದೀಪ್ ಬಳಿಯೇ ನಿಮಗೆ ಸಿಗರೇಟ್ ಸೇದುವ ಅಭ್ಯಾಸ ಇದೇಯಾ ಎಂದು ಪ್ರಶ್ನೆ ಮಾಡಿದರು. 

ಕುರಿ ಪ್ರತಾಪ್‌ಗೆ ಮೊದಲ ದಿನವೇ ಇಂಗ್ಲಿಷ್ ಟಾಸ್ಕ್!

ಮಲ್ಯ ಆಸ್ಪತ್ರೆಯಲ್ಲಿ ನಾನು ಮತ್ತು ಅಂಬರೀಶ್ ಅಕ್ಕ ಪಕ್ಕದ ಕೋಣೆಯಲ್ಲಿ ಅಡ್ಮಿಟ್ ಆಗಿದ್ದೇವು. ಅವರಿಗೂ ರೋಗ ಿಇರಲಿಲ್ಲ, ನನಗೂ ಇರಲಿಲ್ಲ.. ಅಲ್ಲಿಗೆ ಬಂದ ನರ್ಸ್ ಒಬ್ಬರು ಇಲ್ಲಿ ಸಿಗರೇಟ್ ಸೇದುವ ಹಾಗಿಲ್ಲ ಎಂದರು. ಆಸ್ಪತ್ರೆ ಕಟ್ಟಿಸಿ ಕುಡಿಯೋದನ್ನು ಕಲಿಸಿ ಬೇಡ ಅಂದ್ರೆ ಹೇಗೆ ಎಂದು ಅಂಬರೀಶ್ ಪ್ರಶ್ನೆ ಮಾಡಿದ್ದರು ಎಂದು ಬೆಳಗೆರೆ ಹಳೆ ಕತೆ ಹಂಚಿಕೊಂಡರು. 

ವಿಜಯ್ ಮಲ್ಯ ದೇಶ ಬಿಟ್ಟ ಮೇಲೆ ಕುಡಿಯುವುದನ್ನು ಬಿಟ್ಟುಬಿಟ್ಟೆ ಎಂದು ಹೇಳುತ್ತ ಹೊರಟ ಬೆಳಗೆರೆ ಅವರಿಗೆ ಅವರ ಕಚೇರಿಯ ಬೆಲ್ ಸಹ ಕೊಟ್ಟು ಕಳಿಸಲಾಯಿತು. ಇದೆಲ್ಲ ಆದ ಮೇಲೆ ಬೆಳಗೆರೆ ಇಲ್ಲಿಯವರೆಗೂ ಯಾರಿಗೂ ಗೊತ್ತಿಲ್ಲ ರಹಸ್ಯವನ್ನು ಅವರೇ ಹೇಳಿದರು. ನನಗೆ ಭವಿಷ್ಯ ಹೇಳಲು ಬರುತ್ತದೆ ಎಂದರು.

ಮನೆ ಒಳಗೆ ಹಿರಿಯ ಪತ್ರಕರ್ತ ಬೆಳಗೆರೆ, ಹಾಸ್ಯ ನಟ ಕುರಿ ಪ್ರತಾಪ್, ಅಗ್ನಿಸಾಕ್ಷಿ ಧಾರಾವಾಹಿ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕಾ  ಎಂಟ್ರಿ ಕೊಟ್ಟಿದ್ದಾರೆ.