‘ಲಕ್ಷ್ಮೀ ಬಾರಮ್ಮ’  ಖ್ಯಾತಿಯ ಚಂದು ಎಲ್ಲಾ ಹುಡುಗಿಯರ ಪಾಲಿನ ಹಾಟ್ ಫೇವರೇಟ್ ನಟ.  ಈಗ ಸರ್ವಮಂಗಳ ಮಾಂಗಲ್ಯೆ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲಿ ಐಶ್ವರ್ಯಾ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡು ಸರ್ಪ್ರೈಸ್ ಕೊಟ್ಟಿದ್ದಾರೆ. 

ಮಧ್ಯರಾತ್ರಿಲಿ, ಒಂಟಿ ರಸ್ತೆಲಿ ದೀಪಿಕಾ ಪಡುಕೋಣೆ ಸೈಕ್ಲಿಂಗ್!

ಇನ್ನೊಂದು ಕಡೆ ಸದ್ದಿಲ್ಲದೇ, ಸುದ್ದಿಯಿಲ್ಲದೇ ಮದುವೆಯನ್ನೂ ಆಗಿದ್ದಾರೆ. ಆಯೇಶಾ ಎನ್ನುವ ನಟಿ ಜೊತೆ ಮದುವೆಯಾಗಿರುವ ರೀತಿ ಪೋಸ್ ಕೊಟ್ಟಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಇದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. 

 

ಚಂದನ್ ಮದುವೆಯಾಗಿದ್ದೇನೋ ನಿಜ. ಆದರೆ ನಿಜ ಜೀವನದಲ್ಲಲ್ಲ. ಬದಲಾಗಿ ತೆಲುಗು ಧಾರಾವಾಹಿಯೊಂದಕ್ಕೆ. ತೆಲುಗು ಧಾರಾವಾಹಿ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್ ನಲ್ಲಿ ಆಯೇಶಾ-ಚಂದನ್ ಗಂಡ-ಹೆಂಡತಿಯಾಗಿ ನಟಿಸಿದ್ದಾರೆ. 

ಚುನಾವಣಾ ಪ್ರಚಾರದ ನಡುವೆಯೂ ಸನ್ನಿ ಈ ಕೆಲಸ ಮಾತ್ರ ಬಿಟ್ಟಿಲ್ಲ!: ವಿಡಿಯೋ ವೈರಲ್

ರಾಧಾ ಕಲ್ಯಾಣ, ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಂದನ್ ಗಮನ ಸೆಳೆದಿದ್ದರು. ಈಗ ತೆಲುಗು ಕಿರುತೆರೆಗೂ ಕಾಲಿಟ್ಟಿದ್ದಾರೆ. ಅಲ್ಲಿ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.