Asianet Suvarna News Asianet Suvarna News

ಕೇವಲ ಬಯಕೆಯ ಭಾವನೆಗಳು: ಬ್ಯಾನ್ ಆದ ಜಾಹೀರಾತುಗಳು!

ಕಳೆದೆರಡು ದಶಕಗಳಲ್ಲಿ ಭಾರತದಲ್ಲಿ ಬ್ಯಾಣ್ ಆದ ಕೆಲ ಜಾಹೀರಾತುಗಳು| ಅಕ್ಷೇಪಾರ್ಹ ದೃಶ್ಯ, ಕುಟುಂಬ ಸದಸ್ಯರೊಡಗೂಡಿ ನೋಡಲಾಗದ ದೃಶ್ಯಗಳಿದ್ದ ಜಾಹೀರಾತುಗಳಿಗೆ ಕತ್ತರಿ

5 banned ads that caught the eye of censors in India
Author
Bangalore, First Published Feb 9, 2020, 4:04 PM IST

ನ್ಯೂಯಾರ್ಕ್ ಲೋಟೋ ಜಾಹೀರಾತು- 1999

ಮಾದಕ ಕಂಗಳ ನೋಟ, ಮೋಹಕ ನಗು, ಆಕರ್ಷಕ ಮೈಮಾಟದ ವಿಚಾರದಲ್ಲಿ ಬಿಪಾಷಾ ಬಸು ಯಾವತ್ತೂ ಅಗ್ರ ಸ್ಥಾನದಲ್ಲಿರುತ್ತಾರೆ. ಮೂಲತಃ ಬೆಂಗಾಳಿ ನಟಿಯಾಗಿರುವ ಬಿಪಾಷಾ, ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸುವುದಕ್ಕೂ ಮುನ್ನ ಜಾಹೀರಾತೊಂದರಿಂದ ಬಹುತೇಕರ ನಿದ್ದೆಗೆಡಿಸಿದ್ದರು. ನ್ಯೂಯಾರ್ಕ್ ಲೋಟೋ ಜಾಹೀರಾತಿನಲ್ಲಿ ವಿವೇಕ್ ಒಬೆರಾಯ್ ಜೊತೆ ಕಾಣಿಸಿಕೊಂಡಿದ್ದ ರಾಜ್ 3 ಖ್ಯಾತಿಯ ನಟಿ, ಇದರಲ್ಲಿ ನಗ್ನರಾಗಿ ಕಾಣಿಸಿಕೊಂಡಿದ್ದರು. ಆದರೆ ಅಂತರಾಷ್ಟ್ರೀಯ ಮಟ್ಟದ ಈ ಜಾಹೀರಾತನ್ನು, ಮನಗೆಡಿಸುವ ದೃಶ್ಯಗಳಿಂದಾಗಿ ಭಾರತದಲ್ಲಿ ನಿಷೇಧಿಸಲಾಗಿತ್ತು.

ಅಮೂಲ್ ಮಾಚೋ ಜಾಹೀರಾತು- 2007

ಪರಿಚಯವೇ ಇಲ್ಲದ ಸನಾ ಖಾನ್ ಫೇಮಸ್ ಆಗಿದ್ದೇ ಅಮೂಲ್ ಮಾಚೋ ಜಾಹೀರಾತಿನ 'ಟೋಯಿಂಗ್ ಗರ್ಲ್' ಆಗಿ. ಈ ಜಾಹೀರಾತಿನಲ್ಲಿ ವಿವಾಹಿತ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸನಾ, ತನ್ನ ಗಂಡ ಧರಿಸುವ ಅಮೂಲ್ ಮಾಚೋ ಒಳ ಉಡುಪಿನ ವಿಶೇಷತೆಗಳನ್ನು ವಿವರಿಸುತ್ತಾರೆ. ಈ ಜಾಹೀರಾತನ್ನು ರಾಷ್ಟ್ರೀಯ ವಾಹಿನಿಗಳನ್ನು ಪ್ರಸಾರ ಮಾಡಲಾಗುತ್ತಿತ್ತಾದರೂ, ಬಳಿಕ ಇದರಲ್ಲಿರುವ ನಿರ್ಬಂಧಿತ ದೃಶ್ಯಗಳಿಂದ ಬ್ಯಾನ್ ಮಾಡಲಾಯ್ತು.

ಕಾಮಸೂತ್ರ ಕಾಂಡೋಂ ಜಾಹೀರಾತು-1991

ನಟಿ ಪೂಜಾ ಬೇಡಿ ಹಾಗೂ ಮಾರ್ಕ್ ರಾಬಿನ್ ಸನ್ ನಟನೆಯ ಕಾಮಸೂತ್ರ ಕಾಂಡೋಂ ಜಾಹೀರಾತು 1991ರಲ್ಲಿ ಪ್ರಸಾರವಾಗುತ್ತಿತ್ತು. ಈ ಜಾಹೀರಾತು ಇಬ್ಬರೂ ಸ್ನಾನ ಮಾಡುವ ದೃಶ್ಯಗಳನ್ನೊಳಗೊಂಡಿತ್ತು. ಆದರೆ ದೂರದರ್ಶನ ಕುಟುಂಬ ಆಧಾರಿತ ಪ್ರೇಕ್ಷಕರ ಸೂಕ್ಷ್ಮತೆಯನ್ನು ನೋಯಿಸುವುವ ದೃಶ್ಯಗಳಿವೆ ಎಂಬ ಆಧಾರದಲ್ಲಿ ಬ್ಯಾನ್ ಮಾಡಲಾಯ್ತು.

ವೈಲ್ಡ್ ಸ್ಟೋನ್ ಡಿಯೋ ಜಾಹೀರಾತು 2007

ದುರ್ಗಾಪೂಜೆ ಸಮಯದಲ್ಲಿ ಪೂಜಾವಿಧಿಗೆಂದು ತಯಾರಾದ ಸಂಪ್ರದಾಯಸ್ಥ ಬೆಂಗಾಲಿ ಮಹಿಳೆ, ಪುರುಷನೊಬ್ಬ ಸ್ಪ್ರೇ ಮಾಡಿಕೊಂಡಿದ್ದ ಸುವಾಸನೆಯುಕ್ತ ಡಿಯೋ ಡ್ರೆಂಡ್ ಗೆ ಆಕರ್ಷಿಳಾಗುವ ದೃಶ್ಯಗಳನ್ನು ಈ ಜಾಹೀರಾತಿನಲ್ಲಿ ತೋರಿಸಲಾಗಿತ್ತು. ಈ ಜಾಹೀರಾತನ್ನು ಬ್ಯಾನ್ ಮಾಡಿರದಿದ್ದರೂ ಸೆನ್ಸಾರ್ ಮಾಡಲಾದ ಆವೃತ್ತಿಯನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗಿತ್ತು.

ಮಿಸ್ಟರ್ ಕಾಫೀ ಜಾಹೀರಾತು 

ಮಿಸ್ಟರ್ ಕಾಫೀ ಎಂಬ ಕಾಫೀ ಬ್ರಾಂಡ್ ನ ಜಾಹೀರಾತು ಇದಾಗಿದ್ದು, ರಿಯಲ್ ಲೈಫ್ ಜೋಡಿಯಾಗಿದ್ದ ಅರ್ಬಾಜ್ ಹಾಗೂ ಮಲೈಕಾ ಇದರಲ್ಲಿ ನಟಿಸಿದ್ದರು. 
ನಿಜವಾದ ಆನಂದವು ಕ್ಷಣಾರ್ಧದಲ್ಲಿ ಬರಲು ಸಾಧ್ಯವಿಲ್ಲ(Real pleasure can't come in an instant) ಎಂಬುವುದು ಈ ಜಾಹೀರಾತಿನ ಟ್ಯಾಗ್ ಲೈನ್ ಆಗಿತ್ತು. ಅಶ್ಲೀಲ ದೃಶ್ಯಗಳನ್ನೊಳಗೊಂಡಿದ್ದ ಈ ಜಾಹೀರಾತನ್ನು ಭಾರತದಲ್ಲಿ ನಿರ್ಭಂಧಿಸಲಾಯ್ತು.

Follow Us:
Download App:
  • android
  • ios