ತುಮಕೂರು[ನ.05]: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮೂಗರ್ಜಿ ಗಿರಾಕಿಗಳು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. 

ತುಮಕೂರಿನಲ್ಲಿ ಮಾತನಾಡಿದ ಕೆ.ಎನ್.ರಾಜಣ್ಣ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ದೇವೇಗೌಡರು ಇಡಿಗೆ ಮೂಗರ್ಜಿ ಹಾಕಿದ್ದರು. ಮೊದಲಿಂದಲೂ ಇವರು ಬರೆದಿದ್ದು ಇರುತ್ತದೆ. ಅದೆಲ್ಲವೂ ಸೇರಿ ಈಗ ಈಗ ಇಡಿ ರೈಡ್ ಆಗಿದೆ ಎಂದು ಹೇಳಿದರು. 

ಮಾಜಿ ಪ್ರಧಾನಿ ದೇವೇಗೌಡರು ಎಷ್ಟು ದೂರುಗಳನ್ನು ಬರೆದಿದ್ದಾರೆ. ಇಲ್ಲ ಎಂದು ಅವರು ಯಾವುದಾದರೂ ದೇವಾಲಯಕ್ಕೆ ಬಂದು ಪ್ರಮಾಣ ಮಾಡಲಿ ಎಂದು ರಾಜಣ್ಣ ಹೇಳಿದರು. 

ಇನ್ನು ಈ ವಿಚಾರ ಡಿಕೆಶಿ ಅವರಿಗೂ ಈ ವಿಚಾರ ಗೊತ್ತು. ಮೈತ್ರಿ ಸರ್ಕಾರ ರಚನೆ ಮಾಡುವ ಮುನ್ನ ಡಿಕೆಶಿ ವಿರುದ್ಧ ಎಲ್ಲಾ ರೀತಿಯ ಕೆಲಸ ಮಾಡಿದ್ದಾರೆ. ಈ ಹಿಂದೆ ಅವರು ಪ್ರಧಾನಿ ಅಲ್ಲ, ಪಂಚಾಯ್ತಿ ಮೆಂಬರ್ ಎಂದು ಡಿ.ಕೆ ಶಿವಕುಮಾರ್ ಹಲವು ಬಾರಿ ಹೇಳಿದ್ದರು.  ಆದರೆ ಇತ್ತೀಚೆಗೆ ದೇವೇಗೌಡರು ಡಿಕೆಶಿ ಪರ ಇದ್ದಾರೆ. ಅದಕ್ಕೂ ಮುಂಚೆ ಬದ್ಧ ವೈರಿಗಳಾಗಿದ್ದರು ಎಂದು ರಾಜಣ್ಣ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥಗೆ ನೀಡದ ಅನುಕಂಪವನ್ನು ದೇವೇಗೌಡರ ಕುಟುಂಬ ಡಿಕೆಶಿ ಮೇಲೆ ತೋರುತ್ತಿದೆ ಎಂದು ಹರಿಹಾಯ್ದರು. 

ಇನ್ನು  ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುವ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ರಾಜಣ್ಣ, ಹೆಚ್ಡಿಕೆ ವಚನ ಭ್ರಷ್ಟರು ಎನ್ನವುದು ತಿಳಿದಿರುವ ವಿಚಾರ. ಅದು ರುಜುವಾತಾಗಿದೆ. ಅವರು ಯಾವುದೇ ಭರವಸೆ ಕೊಟ್ಟರೂ ಅದು ನಂಬಿಕೆಗೆ ಅರ್ಹವಲ್ಲ ಎಂದು ರಾಜಣ್ಣ ಹೇಳಿದರು. 

ನವೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: