Asianet Suvarna News Asianet Suvarna News

ಸಿಂಹಳೀಯರ ನಾಡಲ್ಲಿ ಭಾರತೀಯ ಪತ್ರಕರ್ತರು!

ಭಾರತ ಶ್ರೀಲಂಕಾ ನಡುವೆ ಸೋದರ ಸಂಬಂಧಗಳ ಒಂದು ಚೇತೋಹಾರಿ ಭಾಗವಾಗಿ ಶ್ರೀಲಂಕಾ ಭಾರತ ನಡುವೆ ಪತ್ರಕರ್ತರ ವಿನಿಮಯ ಕಾರ್ಯಕ್ರಮ ನಡೆಯುತ್ತಿದೆ. ಇಂಡಿಯನ್ ಫೆಡರೇಷನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಮತ್ತು ಶ್ರೀಲಂಕಾ ಪ್ರೆಸ್ ಅಸೋಶಿಯೇಷನ್ ಈ ಕಾರ್ಯಕ್ರಮದ ರೂವಾರಿ ಸಂಸ್ಥೆಗಳಾಗಿವೆ. ಭಾರತದ ಪತ್ರಕರ್ತರಿಗೆ ಶ್ರೀಲಂಕಾ ದೇಶದಲ್ಲಿ ಪತ್ರಿಕೆ, ಸಾಂಸ್ಕೃತಿಕ, ರಾಜಕೀಯ, ವಾಣಿಜ್ಯ, ಶೈಕ್ಷಣಿಕ ಕೇಂದ್ರಗಳನ್ನು ಸಂದರ್ಶಿಸಿ ಪ್ರಾತಿನಿಧಿಕ ಸಂಸ್ಥೆಗಳೊಂದಿಗೆ ವಿಚಾರ ವಿನಿಮಯ, ಪತ್ರಕರ್ತರ ಹಾಗೂ ಬೌದ್ಧಿಕ ರಾಜಕೀಯ ಮುಖಂಡರ ಜತೆ ಸಂವಾದ ನಡೆಸಿ ಅರಿವು ಹೆಚ್ಚಿಸಿಕೊಳ್ಳುವ ಅವಕಾಶ

Kannada journalist B V mallikarjunaiah write about India Sri Lanka Relationship
Author
Bangalore, First Published Dec 15, 2019, 2:41 PM IST

ಬಿ ವಿ ಮಲ್ಲಿಕಾರ್ಜುನಯ್ಯ

ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಬಂಗಾಳ ಕೊಲ್ಲಿ, ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ, ಉತ್ತರದಲ್ಲಿ ಪಾಕ್ ಜಲಸಂಧಿಯಿಂದ ಸುತ್ತುವರಿದಿರುವ ದ್ವೀಪ ರಾಷ್ಟ್ರ ಶ್ರೀಲಂಕಾ. ಸಹಸ್ರ ಸಹಸ್ರ ವರ್ಷಗಳ ಹಿಂದೆ ಶ್ರೀಲಂಕಾ ಭಾರತ ಉಪಖಂಡದ ಭಾಗವಾಗಿತ್ತು. ಸಮುದ್ರ ಕೊರೆತದಿಂದ ತಮಿಳುನಾಡಿನ ಧನುಷ್ಕೋಟಿ ಮತ್ತು ಶ್ರೀಲಂಕಾ ಉತ್ತರ ಪ್ರಾಂತ್ಯದ ಮನ್ನಾರ್ ಜಿಲ್ಲೆಯ ನಡುವೆ ಶ್ರೀಲಂಕಾ ಭಾರತ ಭೂ ಭಾಗದಿಂದ ಪ್ರತ್ಯೇಕವಾಗಿದೆ. ಇಲ್ಲಿ ಸಮುದ್ರ ಕಿರಿದಾಗಿದ್ದು ಕೇವಲ 37 ಕಿ.ಮೀ ಉದ್ದವಿದ್ದು, ದೋಣಿಗಳು ಸಂಚರಿಸುವಷ್ಟು ಮಾತ್ರ ಆಳವಾಗಿದೆ. ಹಡಗುಗಳು ಸಂಚರಿಸಲು ಸಾಧ್ಯವಿಲ್ಲ. ಇದೇ ಪಾಕ್ ಜಲಸಂಧಿ. ಆದರೆ ಪುರಾಣೇತಿಹಾಸ ರಾಮಾಯಣದಲ್ಲಿ ಬರುವ ಉಲ್ಲೇಖಗಳ ಪ್ರಕಾರ ಇದೇ ಭಾಗ ರಾಮಸೇತುವೆಂದು ಪ್ರಸಿದ್ಧವಾಗಿದೆ.

50 ವರ್ಷಗಳ ಹಿಂದೆ ಮರದಲ್ಲಿ ಸಿಲುಕಿದ ನಾಯಿ ಕೊಳೆತಿಲ್ಲ ಹೇಗೆ?

ಶ್ರೀರಾಮ ಸೇನೆಯ ದಳ-ನೀಲರೆಂಬ ಅಂದಿನ ಕಾಲದ ಎಂಜಿನಿಯರುಗಳು ಶ್ರೀರಾಮ ಸೇನೆ ಸಮುದ್ರವನ್ನು ದಾಟಿ ಲಂಕೆಗೆ ದಾಳಿಯಿಡುವ ಸಲುವಾಗಿ ಇಲ್ಲಿ ಸೇತುವೆಯನ್ನು ನಿರ್ಮಿಸಿದರು. ಹೀಗೆ ರಾಮಸೇತು ಎಂದು ಜನಜನಿತವಾಗಿದ್ದ ಈ ಸಣ್ಣ ಸಮುದ್ರ ಆಧುನಿಕ ಯುಗದಲ್ಲಿ ಪಾಕ್ ಜಲಸಂಧಿ ಎಂದು ಹೆಸರು ಪಡೆಯಿತು. 18ನೇ ಶತಮಾನದಲ್ಲಿ ತಮಿಳುನಾಡಿನ (ಮದ್ರಾಸ್ ಪ್ರೆಸಿಡೆನ್ಸಿ) ಗವರ್ನರ್ ಆಗಿದ್ದ ಬ್ರಿಟಿಷ್ ಅಧಿಕಾರಿ ರಾಬರ್ಟ್ ಪಾಕ್ ಎಂಬುವವನ ಹೆಸರು ರಾಮ ಸೇತುವಿಗೆ ಅಂಟಿಕೊಂಡು ಪಾಕ್ ಜಲಸಂಧಿಯಾಗಿಬಿಡುತ್ತೆ!

ಉತ್ತರ ಮತ್ತು ಪೂರ್ವ ಶ್ರೀಲಂಕಾದಲ್ಲಿ ತಮಿಳರು ಅಧಿಕ ಸಂಖ್ಯೆಯಲ್ಲಿದ್ದಾರೆ. ಮಧ್ಯೆ, ದಕ್ಷಿಣ ಹಾಗೂ ಪಶ್ಚಿಮ ಶ್ರೀಲಂಕಾದಲ್ಲಿ ಸಿಂಹಳೀಯರು ಅಧಿಕ ಸಂಖ್ಯೆಯಲ್ಲಿದ್ದು, ಶ್ರೀಲಂಕಾದ ಬಹು ಸಂಖ್ಯಾತ ಜನಾಂಗವಾಗಿದ್ದಾರೆ. ಸಿಂಹಳ, ತಮಿಳು ಮತ್ತು ಇಂಗ್ಲಿಷ್ ಶ್ರೀಲಂಕಾದ ಅಧಿಕೃತ ಭಾಷೆಗಳಾಗಿವೆ.

ಮಡಗಾಸ್ಕರ ದ್ವೀಪಕ್ಕೂ ಉಡುಪಿಯ ಸೈಂಟ್‌ ಮೇರಿಸ್‌ಗೂ ಏನು ಸಂಬಂಧ!

ಭಾರತದ ಪ್ರಭಾವ: ಶ್ರೀಲಂಕಾ ಮತ್ತು ಭಾರತದ ನಡುವೆ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ, ಕಾನೂನು ವ್ಯವಸ್ಥೆ ಸಾಮ್ಯಗಳು ಸಾಕಷ್ಟಿವೆ. ಶ್ರೀಲಂಕಾ ಜನರ ವರ್ತನೆ ಮತ್ತು ನಡೆದುಕೊಳ್ಳುವ ಕ್ರಮ ಹಾಗೂ ಜೀವನ ಶೈಲಿಯಲ್ಲಿ ಭಾರತೀಯ ಪ್ರಭಾವವನ್ನು ಕಾಣಬಹುದು. ಆದ್ದರಿಂದ ಭಾರತ-ಶ್ರೀಲಂಕಾ ಸಂಬಂಧಗಳು ಪ್ರಾಚೀನವಾದುದ್ದು ಎಂದು ಹೇಳುವುದು ಸರ್ವೇ ಸಾಮಾನ್ಯ ಹೇಳಿಕೆಯಾಗಿ ಬಿಡುತ್ತದೆ. ವಾಸ್ತವದಲ್ಲಿ ಐತಿಹಾಸಿಕ ಹಾಗೂ ಭೌಗೋಳಿಕ ಸಂಶೋಧನೆಗಳು ಒಂದು ಕಾಲಘಟ್ಟದಲ್ಲಿ ಶ್ರೀಲಂಕಾ ಭಾರತದ ಭಾಗವಾಗಿತ್ತು ಎಂದು ತೋರಿಸಿವೆ. ಶ್ರೀಲಂಕಾದ ವಿವಿಧ ಕ್ಷೇತ್ರಗಳಲ್ಲಿ ಭಾರತದ ಪ್ರಭಾವವಿರುವುದನ್ನು ನಾವು ಕಣ್ಣಾರೆ ನೋಡಬಹುದು. ಮೌರ್ಯ, ಗುಪ್ತ ಸಾಮ್ರಾಜ್ಯಗಳಿಗಿಂತ ಮೊದಲು ಪ್ರಾಚೀನ ಕಾಲದಿಂದಲೇ ಶ್ರೀಲಂಕಾ ಜೊತೆಗೆ ಭಾರತೀಯರು ವ್ಯಾಪಾರ, ವ್ಯವಹಾರ ನಡೆಸುತ್ತಿದ್ದರು. ಈ ಸಂಬಂಧಗಳು ಕಾಲ ಕಾಲಕ್ಕೆ ಬೆಳೆಯುತ್ತಾ ಬಂದು ದಕ್ಷಿಣ ಭಾರತದ ಪಾಂಡ್ಯ, ಚೋಳ ಸಾಮ್ರಾಜ್ಯಗಳ ಅವಧಿಯಲ್ಲಿ ವಿಸ್ತಾರವಾಯಿತು.

ಶ್ರೀಲಂಕಾದ ವಿಸ್ತಾರ ಸುಮಾರು 65 ಸಾವಿರ ಚದರ ಕಿಮೀಗಳು. ಅಂದರೆ ಭಾರತದ ಉತ್ತರ ಪ್ರದೇಶ ರಾಜ್ಯದ ನಾಲ್ಕನೇ ಒಂದು ಭಾಗದಷ್ಟಾಯಿತು. ದಕ್ಷಿಣ ಭಾರತದ ಪ್ರಾಚೀನ ಸಾಮ್ರಾಜ್ಯಗಳ ಹಲವಾರು ಸತ್ ಪರಂಪರೆ/ಪದ್ದತಿಗಳನ್ನು ಶ್ರೀಲಂಕಾ ಹೊಂದಿರುವುದು ಮಾತ್ರವಲ್ಲ ಅವುಗಳ ಗುಣಮಟ್ಟವನ್ನು ಉತ್ತಮ ಪಡಿಸಿ ಬದಲಾವಣೆ ಮಾಡಿಕೊಂಡಿರುವುದು ವಿಶೇಷ ಸಂಗತಿ ಎಂದು ಹೇಳಬೇಕು. ಬೌದ್ಧ ಧರ್ಮ/ನಾಗರಿಕತೆ ಭಾರತದ ಕೊಡುಗೆ. ಕಾಲ ಕ್ರಮೇಣ ಭಾರತದಲ್ಲಿ ಬೌದ್ಧ ಧರ್ಮ ತನ್ನ ಪ್ರಭಾವ ಕಳೆದುಕೊಂಡರೂ ಶ್ರೀಲಂಕಾ ಬೌದ್ಧ ನಾಗರಿಕತೆ ಯನ್ನು ಸ್ವೀಕರಿಸಿ, ಅಳವಡಿಸಿಕೊಂಡು ಬೆಳೆಸಿ, ರಕ್ಷಿಸಿಕೊಂಡು ಬಂದಿದೆ.

ಇಷ್ಟು ಮೊತ್ತ ನಿಮ್ಮ ಕೈಯ್ಯಲ್ಲಿದ್ರೆ ನಿತ್ಯಾನಂದನಂತೆ ನೀವೂ ಖರೀದಿಸ್ಬಹುದು ದ್ವೀಪ!

ಭಾರತದ ಮಹತ್ವದ ಕಾಣಿಕೆ: ಪ್ರವಾಸೋದ್ಯಮ ಶ್ರೀಲಂಕಾದ ಆರ್ಥಿಕತೆಯ ಆಧಾರ ಸ್ತಂಭವೆಂದರೆ ತಪ್ಪಾಗುವುದಿಲ್ಲ. ಅಂತರ್‌ಯುದ್ಧ ಮುಕ್ತಾಯವಾದ ನಂತರ ಶ್ರೀಲಂಕಾಕ್ಕೆ ಪ್ರವಾಸಿಗರ ಸಂಖ್ಯೆ 300 ಪಟ್ಟು ಅಧಿಕವಾಗಿದೆ. ಪ್ರತಿ ದಿನ ವಿಶೇಷ ವಿಮಾನಗಳಲ್ಲಿ ಭಾರತದಿಂದ ಪ್ರವಾಸಿಗರು ಬರುತ್ತಿದ್ದಾರೆ. ಹಿಂದೂ ಮತ್ತು ಬೌದ್ಧರಿಗೆ ಶ್ರೀಲಂಕಾ ಪ್ರವಾಸ ಒಂದು ತೀರ್ಥಯಾತ್ರೆ ಕೂಡ ಆಗಿರುತ್ತದೆ. ಏಕೆಂದರೆ ಶ್ರೀರಾಮ ಹಾಗೂ ರಾಮಾಯಣಕ್ಕೆ ಶ್ರೀಲಂಕಾ ಜೊತೆಗೆ ವಿಶೇಷ ಬಾಂಧವ್ಯವಿದೆ. ಶ್ರೀಲಂಕಾದಲ್ಲಿ ಭಾರತದ ರಾಯಭಾರಿಯಾಗಿರುವ ಪರಮ್ ಜಿತ್ ಸಿಂಗ್ ಸಿದ್ದು ಸದ್ಗುಣಶೀಲ ಸ್ನೇಹಮಯಿ ಅಧಿಕಾರಿ. ಶ್ರೀಲಂಕಾದ ಅಭಿವೃದ್ಧಿ ಮತ್ತು ಆಧುನೀಕರಣದಲ್ಲಿ ಭಾರತದ ಕೊಡುಗೆ ಅಪಾರ. ಇಷ್ಟೆಲ್ಲಾ ವಾಸ್ತವತೆಗಳು ಇದ್ದರೂ ಪ್ರವಾಸಿಗರ ಬಗ್ಗೆ ಶ್ರೀಲಂಕಾ ಜನರಿಗೆ ತಪ್ಪು ಕಲ್ಪನೆ ಇದೆ. ಚೀಲದ ತುಂಬಾ ದುಡ್ಡು ತುಂಬಿಕೊಂಡು ವಿಲಾಸಕ್ಕೆ ಚೆಲ್ಲುವ ಪಾಶ್ಚಿಮಾತ್ಯರು ಮಾತ್ರ ನಿಜವಾದ ಪ್ರವಾಸಿಗರು ಎಂದು ಭಾವಿಸುತ್ತಾರೆ. ಭಾರತದ ಪ್ರವಾಸಿಗರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪ್ರತಿದಿನ ಶ್ರೀಲಂಕಾಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ ಕೆಸಿನೋ, ನಾಟ್ಯ, ಜೂಜು ಮುಂತಾದ ವಿಲಾಸಿ ಕೇಂದ್ರಗಳು ಹೆಚ್ಚು ಹೆಚ್ಚಾಗುತ್ತಿವೆ. ಅದರ ಜೊತೆಯಲ್ಲಿಯೇ ಯುರೋಪ್ ಹಾಗೂ ಅಮೆರಿಕಾ ದೇಶಗಳಿಂದ ಬರುತ್ತಿರುವ ಪ್ರವಾಸಿಗರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಕೊಲಂಬೋ ಶ್ರೀಲಂಕಾದ ಪ್ರಧಾನ ನಗರವಾಗಿದ್ದು ಅದು ಅರಬ್ಬಿ ಸಮುದ್ರದ ದಂಡೆಯಲ್ಲಿ ರಮಣೀಯವಾಗಿ ನಿರ್ಮಾಣಗೊಂಡಿದೆ. ಒಂದು ಉತ್ತಮ ಸಮುದ್ರ ತೀರ ಪಯಣ ಆಕಾಶದೆತ್ತರಕ್ಕೆ ನಿಲ್ಲುತ್ತಿರುವ ಕಟ್ಟಡಗಳು, ವಾಣಿಜ್ಯ ಕೇಂದ್ರಗಳು, ಸ್ಟಾರ್ ಹೋಟೆಲ್‌ಗಳು, ಅಚ್ಚುಕಟ್ಟಾದ ವಿಮಾನ ನಿಲ್ದಾಣ-ಉತ್ತಮವಾದ ಎಲ್ಲವೂ ಕೊಲಂಬೋದಲ್ಲಿದೆ  ಭಾರತದಂತೆಯೇ ಶ್ರೀಲಂಕಾ ಅನೇಕ ಮತ ಧರ್ಮಗಳ ಹಾಗೂ ಸಂಸ್ಕೃತಿಗಳ ಬೀಡು. ಈ ಪುಟ್ಟ ದ್ವೀಪ ರಾಷ್ಟ್ರದ ಜನಸಂಖ್ಯೆ ಸುಮಾರು ೨೫ ಮಿಲಿಯನ್. ಇಲ್ಲಿ ಹದಿನೈದು ವಿಶ್ವವಿದ್ಯಾನಿಲಯಗಳು ಶಿಕ್ಷಣ ನೀಡುತ್ತಿವೆ. ಮೂರನೇ ವಿಶ್ವದ ದೇಶಗಳ ಪೈಕಿ ಅತಿ ಹೆಚ್ಚು ಸಾಕ್ಷರತೆ ಇರುವ ದೇಶ ಅಂದರೆ ಶ್ರೀಲಂಕಾ- ಶೇ. ೯೫.

ಭಾರತ ಶ್ರೀಲಂಕಾ ಸಂಬಂಧ: ಶ್ರೀಲಂಕಾದ ಅಭಿವೃದ್ಧಿಯಲ್ಲಿ ಭಾರತ ವಹಿಸುತ್ತಿರುವ ಮಹತ್ವದ ಪಾತ್ರವನ್ನು ಕಣ್ತುಂಬ ನೋಡಿ ನಂಬಬಹುದು. ಹಲವಾರು ರೈಲು ಮಾರ್ಗಗಳನ್ನು ಭಾರತ ನಿರ್ಮಿಸಿದೆ. ಈ ಮಾರ್ಗಗಳಲ್ಲಿ ಭಾರತದಲ್ಲಿ ತಯಾರಾದ ರೈಲು ಬಂಡಿಗಳೇ ಸಂಚರಿಸುತ್ತಿವೆ. ಶ್ರೀಲಂಕಾದ ಅಭಿವೃದ್ಧಿಯಲ್ಲಿ ಭಾರತ ಮತ್ತು ಚೀನಾ ದೇಶಗಳು ಅನುಸರಿಸುತ್ತಿರುವ ನೀತಿಯಲ್ಲಿ ಒಂದು ಮುಖ್ಯವಾದ ವ್ಯತ್ಯಾಸವಿದೆ. ಭಾರತ ಶ್ರೀಲಂಕಾದ ಜನರು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದನ್ನು ಬಯಸುತ್ತದೆ. ಹಾಗಾಗಿ ಭಾರತ ಕೆಲಸಗಾರರನ್ನು ಭಾರತದಿಂದ ತರುವುದಿಲ್ಲ.ಬದಲಾಗಿ ಶ್ರೀಲಂಕಾ ಜನರನ್ನೇ ಬಳಸುತ್ತಿದೆ. ಆದರೆ ಚೀನಾ ಎಲ್ಲಾ ಕೆಲಸಗಾರರನ್ನು ತನ್ನ ದೇಶದಿಂದಲೇ ತರುತ್ತಿದೆ. ಚೀನಾಸ್ಥಳೀಯರಿಗೆ ಕೆಲಸ ಕೊಡುತ್ತಿಲ್ಲ. ಅವರ ಸಹಕಾರ ಬಯಸುವುದಿಲ್ಲ. ಇದಕ್ಕೆ ಭಿನ್ನವಾಗಿ ಭಾರತ ಶ್ರೀಲಂಕಾದ ಜನರ ಭಾವನೆಗಳಿಗೆ, ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಭಾರತ ಎಲ್ಲಾ ಸಂದರ್ಭಗಳಲ್ಲಿ, ನೈಸರ್ಗಿಕ ವಿಕೋಪ, ಹಾನಿಗಳಲ್ಲಿ, ಅಂತರ್‌ಯುದ್ಧದ ಕಠಿಣ ವರ್ಷಗಳಲ್ಲಿ ಭಯೋತ್ಪಾದಕರು ದಾಳಿ ನಡೆಸಿದ ಸಮಯದಲ್ಲಿ ಶ್ರೀಲಂಕಾದ ಜೊತೆ ನಿಂತಿದೆ.

ಅಪಾಯಕಾರಿ ಅಂಟಾರ್ಟಿಕ ಸಾಗರದಲ್ಲಿ ಈಜಬಹುದೇ? ಈ ಸಾಧಕನನ್ನೇ ಕೇಳಿ!

ಮಾಧ್ಯಮಗಳ ಸ್ಥಿತಿಗತಿ

ಬಹುತೇಕ ವಾರ್ತಾ ಪತ್ರಿಕೆಗಳು ಮತ್ತು ಇನ್ನಿತರ ಮಾಧ್ಯಮ ಸಂಸ್ಥೆಗಳು ಓದುಗರ ಸಂಖ್ಯೆ ಮತ್ತು ಸಂಪನ್ಮೂಲಗಳು ಕಿರಿದಾಗಿವೆ. ಅವುಗಳ ವ್ಯಾಪ್ತಿ ಸೀಮಿತವಾಗಿದೆ. ಭಾರತದ ಪತ್ರಿಕೆಗಳಿಗೆ ಹೋಲಿಸಿದರೆ ಶ್ರೀಲಂಕಾದ ಪತ್ರಿಕೆಗಳು ದುಬಾರಿ. ಪತ್ರಿಕೆಗಳ ಪ್ರಸಾರವೂ ಕಡಿಮೆ. ಜಾಹೀರಾತು ಬೆಂಬಲ ಕೂಡ ಕಡಿಮೆ. ಬಹುಸಂಖ್ಯೆಯ ಪತ್ರಿಕೆಗಳು ಜಾಹೀರಾತು ನೆರವಿಗಾಗಿ ಸರಕಾರವನ್ನು ಆಶ್ರಯಿಸಬೇಕಾಗಿದೆ. ಇಂತಹ ಪರಿಸ್ಥಿತಿ ಭಾರತದಲ್ಲಿ ಇಲ್ಲವೇ ಇಲ್ಲ. ಶ್ರೀಲಂಕಾದಲ್ಲಿ ಹಲವಾರು ಸ್ವತಂತ್ರ ಟಿವಿ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ವೈಶಿಷ್ಟ್ಯಮಯ ಕಾರ್ಯಕ್ರಮಗಳು, ವಿವಿಧ ಕ್ಷೇತ್ರಗಳ ಕುರಿತ ವರದಿಗಳು ಮೂಡಿ ಬರುತ್ತಿಲ್ಲ. ಪ್ರತಿಯೊಂದು ವಾಹಿನಿ ಸ್ವಲ್ಪ ಮನೆವಾರ್ತೆ, ಮನರಂಜನೆ ಮತ್ತು ವಾಣಿಜ್ಯ ಮಿಶ್ರಣ ಕಾರ್ಯಕ್ರಮಗಳನ್ನು ಕೊಡುತ್ತಿವೆ. ಭಾರತದಲ್ಲಿ ವಿವಿಧ ಭಾಷೆಗಳಲ್ಲಿ ೨್ಡ೭೭ ಸುದ್ದಿ ಕೊಡುವ, ಮನರಂಜನೆ, ಕ್ರೀಡೆ, ವಾಣಿಜ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳ ಮಳೆ ಹರಿಸುವ ವಾಹಿನಿ ಗಳು ವಿಫುಲವಾಗಿವೆ. ವೀಕ್ಷಕರು ಅವರಿಗೆ ಆಸಕ್ತಿ ಇರುವ ವಿಷಯ/ಜ್ಞಾನಗಳನ್ನು ಆರಿಸಿಕೊಳ್ಳಲು ಅವಕಾಶ ಪಡೆದಿದ್ದಾರೆ. ಭಾರತದಲ್ಲಿ ಇಂತಹ ಸದೃಢ ಮಾಧ್ಯಮಗಳು ವಿಜೃಂಭಿಸುತ್ತಿರುವುದಕ್ಕೆ ಮುಖ್ಯ ಕಾರಣ ಖಾಸಗಿ ಉದ್ಯಮಿಗಳಿಂದ ಮತ್ತು ಜನರಿಂದ ಅವು ಪಡೆದಿರುವ ಜಾಹೀರಾತು ಬೆಂಬಲ.

Follow Us:
Download App:
  • android
  • ios