ವಿಶ್ವದಲ್ಲಿದೆ ಡಿವೋರ್ಸ್‌ ಟೆಂಪಲ್‌! ಗಂಡ-ಹೆಂಡ್ತಿ ಬೇರೆ ಮಾಡೋದೇ ಇದರ ಕೆಲ್ಸನಾ?

ವಿಚ್ಛೇದನ ನಡೆಯೋದು ಕೋರ್ಟ್‌ ನಲ್ಲಿ ಎಂಬ ವಿಷ್ಯ ಎಲ್ಲರಿಗೂ ಗೊತ್ತು. ದೇವಸ್ಥಾನದಲ್ಲೂ ಡಿವೋರ್ಸ್‌ ನಡೆಯುತ್ತಾ? ಇಲ್ಲ ಅನ್ನೋದಾದ್ರೆ ಈ ದೇವಸ್ಥಾನಕ್ಕೆ ಡಿವೋರ್ಸ್‌ ಟೆಂಪಲ್‌ ಅಂತ ಹೆಸರು ಬಂದಿದ್ದು ಹೇಗೆ? ವಿವರ ಇಲ್ಲಿದೆ.

Divorce Temple Have You Ever Heard Of  Divorce Mandir roo

ಸನಾತನ ಧರ್ಮದಲ್ಲಿ ದೇವಾಲಯಗಳು ಸಾಕಷ್ಟು ವಿಶೇಷತೆ ಹೊಂದಿದೆ. ವಿಶ್ವದಾದ್ಯಂತ ಕೋಟ್ಯಾಂತರ ದೇವಾಲಯಗಳಿವೆ. ಪ್ರತಿ ದೇವಾಲಯವೂ ತನ್ನದೇ ಆದ ನಿಯಮ, ನಿಬಂಧನೆಗಳನ್ನು ಹೊಂದಿದೆ. ಭಾರತ ಸೇರಿದಂತೆ ವಿಶ್ವದ ಅನೇಕ ದೇವಸ್ಥಾನಗಳು ಸಾವಿರಾರು ವರ್ಷಗಳ ಇತಿಹಾಸ ಹೊಂದಿವೆ. ಕೆಲ ದೇವಾಲಯಗಳ ವಾಸ್ತುಶಿಲ್ಪ, ಅಲ್ಲಿನ ನಿಯಮ, ದೇವರು, ಅಭಿಷೇಕ ಸೇರಿದಂತೆ ಕೆಲ ದೇವಸ್ಥಾನಗಳ ಹೆಸರೇ ಪ್ರಸಿದ್ಧಿ ಪಡೆದಿದೆ. ದೇವಾಲಯಗಳ ಮೂಲಕ ಪ್ರತಿಯೊಂದು ಧರ್ಮವು ತನ್ನ ಸಂಸ್ಕೃತಿಯನ್ನು ಉಳಿಸುತ್ತದೆ. ನಾವಿಂದು ಹೇಳ್ತಿರುವ ದೇವಾಲಯ ಸಾಕಷ್ಟು ವಿಶೇಷತೆ ಹೊಂದಿದೆ. ಅದ್ರ ಹೆಸರೇ ಎಲ್ಲರ ಗಮನ ಸೆಳೆಯುತ್ತದೆ.

ಡಿವೋರ್ಸ್‌ ಟೆಂಪಲ್‌ (Divorce Temple) : ಡಿವೋರ್ಸ್‌ ಟೆಂಪಲ್.‌ ಹೆಸರು ಕೇಳ್ತಿದ್ದಂತೆ ಅಚ್ಚರಿಯಾಗೋದು ಸಹಜ. ಡಿವೋರ್ಸ್‌ ದೇವಸ್ಥಾನದಲ್ಲಿ ವಿಚ್ಛೇದನ ನಡೆಯುತ್ತಾ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಆದ್ರೆ ಈ ಡಿವೋರ್ಸ್‌ ಟೆಂಪಲ್‌ ನಲ್ಲಿ ಯಾವುದೇ ವಿಚ್ಛೇದನ ನಡೆಯೋದಿಲ್ಲ. ಇಲ್ಲಿ ಯಾವ ದೇವರ (God) ಪೂಜೆ ಕೂಡ ನಡೆಯೋದಿಲ್ಲ. ಈ ಡಿವೋರ್ಸ್‌ ಟೆಂಪಲ್‌ ಇರೋದು ಜಪಾನ್‌ ನಲ್ಲಿ. 

12 ವರ್ಷಗಳ ನಂತರ ಪ್ರಮುಖ ಬೆಳವಣಿಗೆ, ಈ ರಾಶಿಗೆ ಧನಲಕ್ಷ್ಮಿ ಯಿಂದ ಕೈ ತುಂಬಾ ದುಡ್ಡು

ಈ ಡಿವೋರ್ಸ್‌ ಟೆಂಪಲನ್ನು ಮಾಟ್ಸುಗೋಕಾ ಟೋಕಿ-ಜಿ ಎಂದು ಕರೆಯಲಾಗುತ್ತದೆ. ಜಪಾನ್‌ (Japan) ನಲ್ಲಿ 12 ನೇ ಮತ್ತು 13 ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ. ಟೋಕಿ-ಜಿಯ ಇತಿಹಾಸವು ಸುಮಾರು 600 ವರ್ಷಗಳಷ್ಟು ಹಳೆಯದು. ಈ ದೇವಾಲಯವು ಜಪಾನ್‌ನ ಕಾಮಕುರಾ ನಗರದಲ್ಲಿದೆ. 1285 ರಲ್ಲಿ ಬೌದ್ಧ ಸನ್ಯಾಸಿನಿ ಕಾಕುಸನ್ ಶಿಡೋ-ನಿ ವಿಚ್ಛೇದನ ದೇವಾಲಯವನ್ನು ನಿರ್ಮಾಣ ಮಾಡಿದರು. ಈ ದೇವಸ್ಥಾನದ ಇತಿಹಾಸ ಬಹಳ ವಿಶೇಷವಾಗಿದೆ. 

ಈ ದೇವಾಲಯವನ್ನು ಕಕುಸನ್-ನಿ ಹೆಸರಿನ ಸನ್ಯಾಸಿನಿ ತನ್ನ ಪತಿ ಹೋಜೋ ಟೋಕಿಮುನ್ ನೆನಪಿಗಾಗಿ ನಿರ್ಮಿಸಿದ್ದರು. ಅವರು ಗಂಡನಿಂದ ಸಂತೋಷ ವಂಚಿತರಾಗಿದ್ದರು. ಆದರೆ ವಿಚ್ಛೇದನ ಪಡೆಯುವ ಅವಕಾಶ ಅವರಿಗೆ ಇರಲಿಲ್ಲ. ಇದೇ ಕಾರಣಕ್ಕೆ ಅವರು ಈ ದೇವಸ್ಥಾನ ನಿರ್ಮಿಸಿದರು ಎನ್ನಲಾಗುತ್ತದೆ. ಮಹಿಳೆಯರನ್ನು ಸಬಲೀಕರಣಗೊಳಿಸಲು ನಿರ್ಮಿಸಲಾದ ದೇವಾಲಯ ಇದು.

ಆ ಸಮಯದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿರಲಿಲ್ಲ. ಮಹಿಳೆಗೆ ಸಾಮಾಜಿಕ ಸ್ಥಾನಮಾನ ಸಿಕ್ಕಿರಲಿಲ್ಲ. ಆಕೆಗೆ ಯಾವುದೇ ಹಕ್ಕನ್ನು ನೀಡಿರಲಿಲ್ಲ. ವಿಚ್ಛೇದನ ನೀಡುವ ಹಕ್ಕು ಕೂಡ ಮಹಿಳೆಗೆ ಸಿಕ್ಕಿರಲಿಲ್ಲ. 12 ಮತ್ತು 13 ನೇ ಶತಮಾನದಲ್ಲಿ ಜಪಾನೀಸ್ ಸಮಾಜದಲ್ಲಿ, ಪುರುಷರಿಗೆ ಮಾತ್ರ ವಿಚ್ಛೇದನದ ವ್ಯವಸ್ಥೆ ಇತ್ತು. ಅದರ ಪ್ರಕಾರ ಪುರುಷರು ತಮ್ಮ ಹೆಂಡತಿಯನ್ನು ಸುಲಭವಾಗಿ ವಿಚ್ಛೇದನ ಮಾಡಬಹುದಿತ್ತು. ಯಾವುದೇ ಕಾರಣ ಇಲ್ಲದೆ ಅವರು ವಿಚ್ಛೇದನ ನೀಡುತ್ತಿದ್ದರು. ಆದ್ರೆ  ಮದುವೆಯಲ್ಲಿ ಅತೃಪ್ತಿ ಹೊಂದಿರುವ ಅಥವಾ ಕೌಟುಂಬಿಕ ಹಿಂಸೆಯನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ಯಾವುದೇ ಬೆಂಬಲ ಇರಲಿಲ್ಲ. ವಿಚ್ಛೇದನ ನೀಡುವ ಅವಕಾಶ ಇರಲಿಲ್ಲ.  ಮಹಿಳೆಗೆ ಈ ಹಕ್ಕನ್ನು ನೀಡುವ ಉದ್ದೇಶದಿಂದಲೇ ಡಿವೋರ್ಸ್‌ ಟೆಂಪಲ್‌ ನಿರ್ಮಿಸಲಾಗಿತ್ತು. ವಿಚ್ಛೇದನ ಪಡೆಯಲು ಸಮಸ್ಯೆ ಎದುರಿಸುವ ಮಹಿಳೆಯರಿಗೆ ಈ ದೇವಸ್ಥಾನದಲ್ಲಿ ಆಶ್ರಯ ಮತ್ತು ಬೆಂಬಲ ನೀಡಲಾಗುತ್ತಿತ್ತು. ಅವರು ತಮ್ಮ ಆಧ್ಯಾತ್ಮಿಕತೆಗೆ ಜೀವನವನ್ನು ಮೀಸಲಿಡಬೇಕಾಗಿತ್ತು. 

ಈ ದೇವಸ್ಥಾನಕ್ಕೆ ಬರುವ ಮಹಿಳೆಯರು ಮೂರುವರೆ ಸಾಲಿನಿ ಸೂಚನೆಯನ್ನು ಬರೆಯಬೇಕಾಗಿತ್ತು. ನಂತ್ರ ದೇವಸ್ಥಾನಕ್ಕೆ ಬಂದು ಉಳಿಯಬೇಕಾಗಿತ್ತು. ದೇವಸ್ಥಾನಕ್ಕೆ ಬಂದ ಮೂರು ವರ್ಷಗಳ ನಂತ್ರ ಅವರು ಗಂಡನೊಂದಿಗೆ ಸಂಬಂಧ ಮುರಿದುಕೊಳ್ಳುವ ಅವಕಾಶವಿತ್ತು. ಆದ್ರೆ ಆ ನಂತ್ರ ಅದನ್ನು ಎರಡು ವರ್ಷಕ್ಕೆ ಇಳಿಸಲಾಗಿತ್ತು.

ಈ ಅಕ್ಷರದ ಹೆಸರಿನ ಹುಡುಗರು ತುಂಬಾ ರೊಮ್ಯಾಂಟಿಕ್, ಅವರನ್ನು ಮದುವೆಯಾದರೆ ಸ್ವರ್ಗ

ಪುರುಷರಿಗೆ ಪ್ರವೇಶವಿರಲಿಲ್ಲ : 1902 ರವರೆಗೆ ಡಿವೋರ್ಸ್‌ ಟೆಂಪಲ್‌ ಗೆ  ಪುರುಷರನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. 1902 ರಲ್ಲಿ ಎಂಗಾಕು-ಜಿ ಈ ದೇವಾಲಯದ ಉಸ್ತುವಾರಿ ವಹಿಸಿಕೊಂಡಾಗ ನಿಯಮ ಬದಲಾಯಿತು. ಆ ನಂತ್ರ ಮಠಕ್ಕೆ ಪುರುಷ ಮಠಾಧೀಶರನ್ನು ನೇಮಿಸಲಾಯಿತು.

Latest Videos
Follow Us:
Download App:
  • android
  • ios