Yogaraj Bhat  

(Search results - 47)
 • Actor Sathyanarayan HS talks about Dr VishnuvardhanActor Sathyanarayan HS talks about Dr Vishnuvardhan

  InterviewsSep 5, 2021, 2:48 PM IST

  ವಿಷ್ಣುವರ್ಧನ್ ಭೇಟಿ ಮರೆಯಲಾರೆ: ಸತ್ಯನಾರಾಯಣ ಎಚ್ ಎಸ್

  ವಿಷ್ಣುವರ್ಧನ್ ಅವರ ಸಿನಿಮಾ ನೋಡಿ ಅಭಿಮಾನಿಗಳಾದವರು ತುಂಬ ಮಂದಿ ಇದ್ದಾರೆ. ಆದರೆ ಅವರು ನಾಯಕನಾದ ಮೊದಲ ಚಿತ್ರದ ಸಂದರ್ಭದಲ್ಲೇ ಭೇಟಿಯಾಗಿ ಮೆಚ್ಚುಗೆ ಸೂಚಿಸಿ, ಬಳಿಕ ಅಭಿಮಾನ ಬೆಳೆಸಿ ಇಂದು ನಟರಾಗಿಯೂ ಗುರುತಿಸಿಕೊಂಡಿರುವವರು ಸತ್ಯನಾರಾಯಣ್ ಎಚ್ ಎಸ್.

 • Director Yogaraj Bhat dedicates a special video for actor Kiccha Sudeep birthday vcsDirector Yogaraj Bhat dedicates a special video for actor Kiccha Sudeep birthday vcs
  Video Icon

  SandalwoodSep 3, 2021, 3:57 PM IST

  ಸುದೀಪ್ ಜರ್ನಿ ಮೆಚ್ಚಿ ವಿಶೇಷ ವಿಡಿಯೋ ಬಿಡುಗಡೆ ಮಾಡಿದ ನಿರ್ದೇಶಕ ಯೋಗರಾಜ್ ಭಟ್!

  ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್ ಭಟ್ ಮತ್ತು ಕಿಚ್ಚ ಸುದೀಪ್ 'ಕರಿಯಾ' ಸಿನಿಮಾದಿಂದ ಪರಿಚಯವಿದ್ದಾರೆ ಹಾಗೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸುದೀಪ್ ಸಿನಿ ಜರ್ನಿ ಮೆಚ್ಚಿ ಯೋಗರಾಜ್‌ ಭಟ್ ವಿಶೇಷ ವಿಡಿಯೋ ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸುದೀಪ್ ಪ್ರತಿ ಚಿತ್ರದ ಬಗ್ಗೆಯೂ ಮಾಹಿತಿ ಇದೆ.
   

 • happy birthday Yash kannada directors special wish vcshappy birthday Yash kannada directors special wish vcs

  SandalwoodJan 8, 2021, 4:47 PM IST

  ಹ್ಯಾಪಿ ಬರ್ತಡೇ ಯಶ್‌; ನಿರ್ದೇಶಕರ ಶುಭಾಶಯಗಳು!

  ತಮ್ಮ ತಮ್ಮ ಕೋಟೆಯೊಳಗೆ ಭದ್ರವಾಗಿ ಕುಳಿತಿರುವ ಪಟ್ಟಭದ್ರರು, ನುಗ್ಗುವುದು ಬಿಡಿ ಅಂಥ ಯೋಚನೆಯನ್ನೂ ಮಾಡಲಿಕ್ಕೆ ಅಸಾಧ್ಯವೆನ್ನಿಸುವ ಭದ್ರಕೋಟೆ, ನಮ್ಮ ಮಾರುಕಟ್ಟೆದಿನೇ ದಿನೇ ಕುಗ್ಗುತ್ತಿದೆ ಅಂತ ಭಾಷಣ ಬಿಗಿಯುತ್ತಿದ್ದ ಹಸಿವಿಲ್ಲದವರು, ಹೀರೋ ಒಂದು ಪ್ರಾಡಕ್ಟುಅಂತ ಅಂದುಕೊಂಡಿದ್ದವರು, ಯಾರು ಹೀರೋ ಮೆಟೀರಿಯಲ್‌ ಅಂತ ತಾವೇ ನಿರ್ಧಾರ ಮಾಡುತ್ತಿದ್ದವರು; ಇಂಥವರ ನಡುವೆ ಎದ್ದು ನಿಂತ ಹುಡುಗನ ಹೆಸರು ಯಶ್‌.

  ಮಾಡಿದ ಸಿನಿಮಾಗಳ ಸಂಖ್ಯೆ ಇಪ್ಪತ್ತು ದಾಟಿಲ್ಲ. ಅಷ್ಟರಲ್ಲೇ ಛಪ್ಪನ್ನೈವತ್ತಾರು ದೇಶಗಳಲ್ಲೂ ಹೆಸರುವಾಸಿ. ಪ್ರತಿ ಚಿತ್ರದಲ್ಲೂ ಸೀಮೋಲ್ಲಂಘನೆಗೆ ತುಡಿಯುತ್ತಿದ್ದ ಯಶ್‌, ಯಾರ ಹಂಗಿಗೂ ಬೀಳಲಿಲ್ಲ. ಯಾರ ಮರ್ಜಿಗೂ ಬಾಗಲಿಲ್ಲ. ಸೆಲ್‌್ಫ ಮೇಡ್‌ ಅಂತ ಕರೆಸಿಕೊಂಡರು. ಆ ಮಾತನ್ನು ಉಳಿಸಿಕೊಂಡರು.

  ಕನ್ನಡ ಚಿತ್ರರಂಗದ ಗಡಿಗಳನ್ನು ವಿಸ್ತರಿಸಿದ ನಿರ್ದೇಶಕರಿದ್ದಾರೆ. ಗಿರೀಶ್‌ ಕಾರ್ನಾಡ್‌, ಗಿರೀಶ್‌ ಕಾಸರವಳ್ಳಿ, ಪುಟ್ಟಣ್ಣ ಕಣಗಾಲ್‌, ರಾಜೇಂದ್ರ ಸಿಂಗ್‌ ಬಾಬು, ಕೆವಿ ರಾಜು, ನಾಗಾಭರಣ, ಶಂಕರ್‌ನಾಗ್‌ ಮುಂತಾದ ನಿರ್ದೇಶಕರು ಕನ್ನಡ ಸಿನಿಮಾಗಳ ಖ್ಯಾತಿ ದೇಶಾದ್ಯಂತ ಹಬ್ಬುವಂತೆ ಮಾಡಿದರು. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಕನ್ನಡ ಚಿತ್ರಗಳನ್ನು ಕೊಂಡೊಯ್ದರು. ಆದರೆ ಯಶ್‌ ಕನ್ನಡ ಸಿನಿಮಾದ ಬಾಕ್ಸಾಫೀಸನ್ನು ದೇಶಾದ್ಯಂತ, ವಿಶ್ವಾದ್ಯಂತ ತೆರೆದ ಏಕೈಕ ಸ್ಟಾರ್‌ ನಟ. ತಮ್ಮದೇ ಭಾಷೆಯ ಸಿನಿಮಾ ಎಂಬಂತೆ ಕೆಜಿಎಫ್‌ ಎಲ್ಲರ ಸ್ವೀಕಾರಕ್ಕೆ ಪಾತ್ರವಾಗಿದ್ದರೆ ಅದಕ್ಕೆ ಯಶ್‌ ಕೊಟ್ಟಬೆಂಬಲ ಕಾರಣ.

  ಮದುವೆಯೇ ಇರಲಿ, ನಾಮಕರಣವೇ ಇರಲಿ, ಹುಟ್ಟುಹಬ್ಬವೇ ಇರಲಿ, ಖಾಸಗಿಯೋ ಸಾರ್ವಜನಿಕವೋ ಏನೇ ಆಗಿರಲಿ, ಅದಕ್ಕೊಂದು ಸ್ಟಾಂಡರ್ಡ್‌ ಸೆಟ್‌ ಮಾಡುತ್ತೇನೆಂದು ಹೊರಟ ಯಶ್‌ ಅದನ್ನು ಸಾಧಿಸಿದ್ದಾರೆ. ಕೆಜಿಎಫ್‌ ಕತೆ ಅವರ ಆತ್ಮಚರಿತ್ರೆಯ ತುಣುಕು ಕೂಡ.

  ಯಶ್‌ ಎಂಬ ಗಡಿದಾಟಿದ ಕಲಾವಿದನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾ, ಅವರ ಕುರಿತು ಅವರ ಆತ್ಮೀಯರು ಆಡಿದ ನಾಲ್ಕಾರು ಮಾತುಗಳನ್ನಿಲ್ಲಿ ಕೊಡುತ್ತಿದ್ದೇವೆ.

  ಯಶ್‌, ಕೆಜಿಎಫ್‌ಗೆ ನನ್ನ ಬದುಕಿನಲ್ಲಿ ವಿಶೇಷ ಸ್ಥಾನ

  2016ರಲ್ಲಿ ಕೆಜಿಎಫ್‌ ತಂಡ ಸೇರಿಕೊಂಡವಳು ನಾನು. ಈಗ 2021. ಸುಮಾರು ನಾಲ್ಕೂವರೆ ವರ್ಷ ಈ ತಂಡದ ಜೊತೆ ಕಳೆದಿದ್ದೇನೆ. ಈ ಎಲ್ಲಾ ದಿನಗಳಲ್ಲಿ ಯಶ್‌ ಅವರ ಶ್ರದ್ಧೆಗೆ ನಾನು ಬೆರಗಾಗಿದ್ದೇನೆ. ಕೆಲಸ ಮೇಲೆ ಅವರು ತೋರಿಸುವ ಶ್ರದ್ಧೆ ಬೇರೆಲ್ಲೋ ನೋಡಿದ್ದು ಅಪರೂಪ. ಕೆಜಿಎಫ್‌ 2 ಚಿತ್ರೀಕರಣದಲ್ಲಿ ಬೇರೆ ಬೇರೆ ರೀತಿಯ ಜಾಗಗಳಲ್ಲಿ ಅವರು ಕೆಲಸ ಮಾಡುವುದನ್ನು ನೋಡಿದ್ದೇನೆ. ಮಣ್ಣಿನ ಜಾಗವೇ ಇರಲಿ, ಕಪ್ಪು ಹೊಗೆ ತುಂಬಿರುವ ತಾಣವೇ ಇರಲಿ ಎಲ್ಲೇ ಇದ್ದರು ಅವರು ಅವರ ಕೆಲಸಕ್ಕೆ ಕೊಡುವ ಗೌರವ ಅಪಾರ. ಕೆಲಸ ಬಿಟ್ಟರೆ ಬೇರೆ ಇಲ್ಲ ಎನ್ನುವಂತೆ ಬದುಕುತ್ತಾರೆ. ಅವರ ಆ ಶ್ರದ್ಧೆಯೇ ನನಗೆ ಸ್ಫೂರ್ತಿ. ಕೆಜಿಎಫ್‌ ನನ್ನ ಮೊದಲ ಸಿನಿಮಾ. ಯಶ್‌ ನನ್ನ ಮೊದಲ ಕೋಸ್ಟಾರ್‌. ನಾನು ಆರಂಭದಲ್ಲೆಲ್ಲಾ ನಾಲ್ಕೈದು ಟೇಕ್‌ ತೆಗೆದುಕೊಳ್ಳುತ್ತಿದ್ದೆ. ಆಗೆಲ್ಲಾ ಅವರು ಬೆಂಬಲವಾಗಿ ನಿಂತು ತಾಳ್ಮೆಯಿಂದ ಪ್ರೋತ್ಸಾಹಿಸುತ್ತಿದ್ದರು. ಅದನ್ನು ನಾನು ಮರೆಯಲಾರೆ. ಈ ಸಿನಿಮಾ, ಯಶ್‌ ಅವರಿಗೂ ನನ್ನ ಜೀವನದಲ್ಲಿ ವಿಶೇಷ ಸ್ಥಾನವಿದೆ. ಅವರು ಮುಂದಿನ ದಿನಗಳಲ್ಲಿ ಮತ್ತಷ್ಟುಎತ್ತರಕ್ಕೆ ಹೋಗುತ್ತಾರೆ ಅನ್ನುವುದು ನಿಶ್ಚಿತ. ಅವರ ಮುಂದಿನ ಹಾದಿಯಲ್ಲಿ ಹೂವುಗಳೇ ಚೆಲ್ಲಿರಲಿ ಎಂದು ನಾನು ಆಶಿಸುತ್ತೇನೆ.

  - ಶ್ರೀನಿಧಿ ಶೆಟ್ಟಿ

  ನಾನು ನಿರ್ದೇಶಕನಾಗಲು ಕಾರಣವೇ ಯಶ್‌

  ನಾನು ನಿರ್ದೇಶಕನಾಗಿದ್ದೇನೆ ಎಂದರೆ ಅದಕ್ಕೆ ಮೊದಲ ಕಾರಣ ಯಶ್‌. ಅವರ ಜೊತೆಗೆ ಕೆಲಸ ಮಾಡುವುದು ಅದ್ಭುತ ಅನುಭವ. ಪ್ಯಾಷನ್‌ ಇಟ್ಟುಕೊಂಡ, ಬೇರೆಯವರ ಪ್ರತಿಭೆ ಗುರುತಿಸುವ, ತಾನೂ ಬೆಳೆದು, ಚಿತ್ರರಂಗವನ್ನೂ ಬೆಳೆಸುವ ಕನಸು ಕಾಣುವ ಹೀರೋ. ಅವರು ಮಾಡಿದ್ದು ಎರಡೇ ರಿಮೇಕ್‌. ಇಲ್ಲಿಯ ಬರಹಗಾರರ ಮೇಲೆ ಅಷ್ಟೊಂದು ನಂಬಿಕೆ. ನೇಟಿವಿಟಿ ಅರ್ಥಮಾಡಿಕೊಂಡ ಪ್ರಬುದ್ಧ. ತಂಡ ಕಟ್ಟುವ ಸಿನಿಮಾ ಮಾಡಿಸುವ ಶಕ್ತಿವಂತ. ನಾನಿರೋ ತನಕ ಮರೆಯಲಾರದ ವ್ಯಕ್ತಿ. ನಮ್ಮಿಬ್ಬರಿಗೂ ಯಶಸ್ಸು ಬಂದಿದೆ. ಆದರೆ ಸ್ನೇಹ ಉಳಿದಿದೆ. ಯುವರತ್ನ ಚಿತ್ರದ ಕತೆ, ಹಾಡು ಕೇಳಿ ಮೆಚ್ಚಿದ್ದರು. ನಾವಿಬ್ಬರೂ ಜತೆಯಾಗಿ ಆದಷ್ಟುಬೇಗ ಮತ್ತೊಂದು ಸಿನಿಮಾ ಮಾಡ್ತೀವಿ.

  - ಸಂತೋಷ್‌ ಆನಂದ ರಾಮ…

  ಯಾವುದನ್ನೂ ಅಸಾಧ್ಯ ಎಂದು ಯಾರು ಹೇಳುತ್ತಾರೋ ಅವರು ಯಶ್‌

  ನನ್ನಿಂದ ಈ ಕೆಲಸ ಆಗಲ್ಲ. ಸಾಧ್ಯವಿಲ್ಲ ಎಂದು ಯಾರು ಹೇಳಲ್ಲವೋ ಅವರು ಯಶ್‌ ಆಗ್ತಾರೆ. ಮೊದಲಿನಿಂದಲೂ ಯಶ್‌ ಹಠವಾದಿ. ಯಶ್‌ಗೆ ನೀವು ಏನೇ ಹೇಳಿ ‘ಆಗಲ್ಲ’ ಎನ್ನುವ ಮಾತು ಅವರಿಂದ ಬಂದಿಲ್ಲ. ನಾನು ‘ಡ್ರಾಮಾ’ಗೂಮೊದಲಿನಿಂದಲೂ ನೋಡಿಕೊಂಡು ಬಂದ ಹುಡುಗ. ಆಗಿನಿಂದಲೂ ಏನಾದರೂ ಮಾಡಬೇಕು ಎನ್ನುವ ಗುರಿ, ಕನಸನ್ನು ದೊಡ್ಡ ಮಟ್ಟದಲ್ಲಿ ಕಟ್ಟಿಕೊಂಡಿದ್ದ ನಟ. ಒಬ್ಬ ಗೆಳೆಯನಾಗಿ ಹೇಳುವುದೇನೆಂದರೆ ಅವನ ಈ ಹಠ, ಚಲ, ಖ್ಯಾತಿ ಹಾಗೂ ಯೌವ್ವನ ನೂರು ಪಟ್ಟು ಹೆಚ್ಚಾಗಲಿ.

  -ಯೋಗರಾಜ್‌ ಭಟ್‌

  ಸ್ವಂತ ಶ್ರಮ ನಂಬಿಕೊಂಡು ಬಂದ ವ್ಯಕ್ತಿ

  ಸ್ವಂತ ಶ್ರಮವನ್ನು ನಂಬಿಕೊಂಡು ಚಿತ್ರರಂಗಕ್ಕೆ ಬಂದ ವ್ಯಕ್ತಿ ಯಶ್‌. ಅವರ ಶ್ರಮವೇ ಯಶಸ್ಸಿಗೆ ದೊಡ್ಡ ಪಿಲ್ಲರ್‌ ಎನ್ನಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಂಬಿ ಬಂದವರನ್ನು ಯಾವತ್ತಿಗೂ ಕೈ ಬಿಡದ ನಟ. ನಾನು ಯಶ್‌ ಜತೆ ಐದು ಚಿತ್ರಗಳನ್ನು ನಿರ್ಮಿಸಿದ್ದೇನೆ. ಯಶ್‌ ಅವರಿಂದ ನಿರ್ಮಾಪಕರಿಗೆ ಹೆಸರು, ಹಣ ಬಂದಿದೆ. ತಂತ್ರಜ್ಞರಿಗೂ ಹೆಸರು ಬಂದಿದೆ. ಚಿತ್ರರಂಗದ ಅಭಿವೃದ್ಧಿ ಎಂದರೆ ಹೀರೋ ಜತೆಗೆ ಎಲ್ಲರೂ ಬೆಳೆಯುವುದು. ಇದನ್ನು ನಾನು ಯಶ್‌ ಅವರಲ್ಲಿ ನೋಡುತ್ತಿದ್ದೇನೆ. ಸಿನಿಮಾ ಬಿಟ್ಟು ಬೇರೆ ಯಾವುದೇ ರೀತಿಯ ಶೋಕಿಗಳನ್ನು ಮೈಗೂಡಿಸಿಕೊಂಡಿಲ್ಲ. ಇಪ್ಪತ್ತು ನಾಲ್ಕು ಗಂಟೆಯೂ ಸಿನಿಮಾಗಾಗಿಯೇ ದುಡಿದ, ನಟನೆಯನ್ನೇ ಧ್ಯಾನಿಸುತ್ತಿರುವ ವ್ಯಕ್ತಿ. ನಾನು ಮುಂದೆಯೂ ಯಶ್‌ ಜತೆ ಸಿನಿಮಾ ಮಾಡುತ್ತೇನೆ.

  -ಜಯಣ್ಣ, ನಿರ್ಮಾಪಕ

 • Yogaraj bhat Ganesh gaalipata 2 shooting begins in Europe vcsYogaraj bhat Ganesh gaalipata 2 shooting begins in Europe vcs

  SandalwoodDec 10, 2020, 11:25 AM IST

  ಯುರೋಪ್‌ನಲ್ಲಿ ಶೂಟಿಂಗ್‌ಗೆ ಹೊರಡಲಿರುವ ಮೊದಲ ಕನ್ನಡ ಚಿತ್ರ 'ಗಾಳಿಪಟ-2'!

  ಯೋಗರಾಜ್‌ ಭಟ್‌ ನಿರ್ದೇಶನದ ‘ಗಾಳಿಪಟ 2’ ಚಿತ್ರತಂಡ ವಿದೇಶಕ್ಕೆ ಹಾರಲು ಸಜ್ಜಾಗಿದೆ. ಆ ಮೂಲಕ ಲಾಕ್‌ಡೌನ್‌ ಬಳಿಕ ವಿದೇಶಕ್ಕೆ ಪಯಣಿಸುತ್ತಿರುವ ಮೊದಲ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಯೋಗರಾಜ್‌ ಭಟ್‌ ಹಾಗೂ ಗಣೇಶ್‌ ಕಾಂಬಿನೇಷನ್‌ ಸಿನಿಮಾ ಪಾತ್ರವಾಗುತ್ತಿದೆ.

 • Yogaraj Bhat tributes to Ravi Belagere hlsYogaraj Bhat tributes to Ravi Belagere hls
  Video Icon

  stateNov 13, 2020, 11:01 AM IST

  ಪತ್ರಕರ್ತರಿಗೆ ಮಾದರಿ, ಧೈರ್ಯಕ್ಕೆ ಇನ್ನೊಂದು ಹೆಸರು ರವಿ ಬೆಳಗೆರೆ: ಯೋಗರಾಜ್ ಭಟ್

  'ರವಿ ಬೆಳಗೆರೆ ತುಂಬು ಬಾಳು ಬಾಳಿದ್ದಾರೆ. ಪತ್ರಕರ್ತರಿಗೆ ಮಾದರಿಯಾಗಿದ್ದಾರೆ. ಧೈರ್ಯಕ್ಕೆ ಇನ್ನೊಂದು ಹೆಸರಾಗಿದ್ದರು. ಹೋಗಿ ಬನ್ನಿ ಎಂದು ಹೇಳುವುದು ಬಿಟ್ಟರೆ ಇನ್ನೇನು ಪದಗಳಿಲ್ಲ. ಮತ್ತೊಮ್ಮೆ ಹೇಳುತ್ತೇನೆ. ಇದು ಅವರ ಸಾವಲ್ಲ, ಅವರ ಹುಟ್ಟು' ಎಂದು ಯೋಗರಾಜ್ ಭಟ್ ಹೇಳಿದ್ದಾರೆ. 

 • Model and dancer yasha shivakumar plays female lead in yogaraj bhat s padavi poorva mahModel and dancer yasha shivakumar plays female lead in yogaraj bhat s padavi poorva mah

  SandalwoodOct 17, 2020, 12:35 AM IST

  ಭಟ್ಟರ ಪದವಿಪೂರ್ವ ಸೇರಿದ ಯಶಾ ಶಿವಕುಮಾರ್, ಮಂಗಳೂರು ಬಾಲೆ!

  ಬೆಂಗಳೂರು(ಅ. 16)  ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು  ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ "ಪದವಿಪೂರ್ವ" ಚಿತ್ರದ ಮೂಲಕ  ಮತ್ತೊಬ್ಬ ನಾಯಕಿಯಾಗಿ ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ 'ಆಳ್ವಾಸ್ ಕಾಲೇಜ್'ನ ಇಂಜಿನಿಯರಿಂಗ್ ವಿದ್ಯಾರ್ಥಿನಿ 'ಯಶಾ ಶಿವಕುಮಾರ್' " ಕನ್ನಡ ಚಿತ್ರರಂಗವನ್ನು ಪ್ರವೇಶಿಸಲು ಸಜ್ಜಾಗಿದ್ದಾರೆ. 

 • Law student Anjali Aneesh to act in Yogaraj Bhats next movie dplLaw student Anjali Aneesh to act in Yogaraj Bhats next movie dpl

  SandalwoodOct 7, 2020, 9:47 AM IST

  ಯೋಗರಾಜ್‌ ಭಟ್ ಸಿನಿಮಾದಲ್ಲಿ ಲಾ ಸ್ಟುಡೆಂಟ್‌ ಅಂಜಲಿ ಅನೀಶ್‌: ಸ್ಯಾಂಡಲ್‌ವುಡ್‌ಗೆ ಹೊಸ ಮುಖ

  ನಟನೆಯಾಗಲಿ ಸಿನಿಮಾ ಸಂಬಂಧಿ ಯಾವ ಡಿಪಾರ್ಟ್‌ಮೆಂಟ್‌ನಲ್ಲಿ ಬೇಕಿದ್ದರೂ ತೊಡಗಿಸಿಕೊಳ್ಳುವೆ ಎನ್ನುವ ಆಸೆ ಹೊತ್ತಿದ್ದ ಅಂಜಲಿ ನಟನೆಗೆ ಓಕೆ ಎಂದಿದ್ದಾರೆ. ಅದಾದ ಮೇಲೆ ‘ಪದವಿ ಪೂರ್ವ’ ಮೂಲಕ ಅವಕಾಶದ ಬಾಗಿಲು ತೆರೆದಿದೆ.

 • Yogaraj bhat kannada PADAVI POORVA film actress anjali anish photo gallery vcsYogaraj bhat kannada PADAVI POORVA film actress anjali anish photo gallery vcs

  SandalwoodOct 5, 2020, 4:28 PM IST

  ಯೋಗರಾಜ್‌ ಭಟ್ 'ಪದವಿ ಪೂರ್ವ' ಚಿತ್ರದಲ್ಲಿ ಅಂಜಲಿ ಅನಿಶ್ ಆ್ಯಕ್ಟಿಂಗ್ ಕಲಿತ್ತಿದ್ದೆಲ್ಲಿ?

  ಬೆಂಗಳೂರು ಫ್ರೆಶ್ ಫೇಸ್‌ 2020 ಪ್ರಶಸ್ತಿ ಪಡೆದುಕೊಂಡ ಅಂಜಲಿ ಅನಿಶ್ ಈಗ ಯೋಗರಾಜ್‌ ಭಟ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಪೃಥ್ವಿ ಜೊತೆ ಡ್ಯುಯಟ್ ಹಾಡಲು ರೆಡಿಯಾಗಿದ್ದಾರೆ...

 • Huccha venkat yogaraj bhat Kannada parapancha song viralHuccha venkat yogaraj bhat Kannada parapancha song viral
  Video Icon

  SandalwoodJul 13, 2020, 4:35 PM IST

  'ಪರಪಂಚ' ಚಿತ್ರದ ಹುಟ್ಟಿದ ಊರನ್ನು ಮತ್ತೆ ಮತ್ತೆ ಕೇಳ್ತಿದ್ದಾರೆ ಮಂದಿ...

  ಹುಟ್ಟೂರು ಬಿಟ್ಟು ಬೆಂಗಳೂರಿಗೆ ದುಡಿಯೋಕೆ ಬಂದಿರುವ ಜನರು ಕೊರೋನಾ ಕಾಟದಿಂದ ಮತ್ತೆ ತಮ್ಮ ಹಟ್ಟೂರಿಗೆ ಗಂಡು ಮೂಟೆ ಕಟ್ಟಿಕೊಂಡು ಹೊರಟಿದ್ದಾರೆ. ಈ ಸಮಯದಲ್ಲಿ ಹುಚ್ಚ ವೆಂಕಟ್ ಹಾಡಿದ ಹಾಡು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದುವೇ ಪರಪಂಚ ಚಿತ್ರದ್ದು. ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ಈ ಸಾಲುಗಳನ್ನು ಎಲ್ಲರೂ ಬಳಸುತ್ತಿದ್ದಾರೆ.

 • Kannada yogaraj bhat Panchatantra song by huccha venkat viralKannada yogaraj bhat Panchatantra song by huccha venkat viral

  SandalwoodJul 10, 2020, 10:15 AM IST

  ‘ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ..’; ಭಟ್ರು ಹಾಡು ವೈರಲ್!

  ತುಂಬಾ ಹಿಂದೆ ಬಂದ ‘ಪರಪಂಚ’ ಚಿತ್ರದ ಈ ಹಾಡನ್ನು ಕೇಳಿರುತ್ತೀರಿ.‘ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ..’ ಈ ಹಾಡು ಈಗ ವಿಪರೀತ ಸದ್ದು ಮಾಡುತ್ತಿದೆ

 • Duniya vijay salaga Aryavardhan dance Director Yogaraj bhat song new sensationDuniya vijay salaga Aryavardhan dance Director Yogaraj bhat song new sensation
  Video Icon

  SandalwoodMay 7, 2020, 5:12 PM IST

  'ಸಲಗ' ರೆಡಿ ಟು ರಿಲೀಸ್, ಆರ್ಯವರ್ಧನ್ ಡ್ಯಾನ್ಸ್; ಭಟ್ಟರಿಂದ ಕುಡುಕರಿಗೆ ಗಜಲ್!

  ಕೊರೋನಾ ಲಾಕ್‌ಡೌನ್‌ನಿಂದ ಕೊಂಚ ರಿಲೀಫ್‌ ಪಡೆದಿರುವ ಸಿನಿ ತಾರೆಯರು, ತಮ್ಮ ನಾರ್ಮಲ್ ದಿನಚರಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ 'ಸಲಗ' ಸಿನಿಮಾ ರಿಲೀಸ್‌ ಆಗಲು ತಯಾರಾಗಿದೆ. ಅಷ್ಟೇ ಅಲ್ಲದೆ 'ಜೊತೆ ಜೊತೆಯಲಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅರ್ಯವರ್ಧನ್‌ ಮಕ್ಕಳ ಜೊತೆ ಟಿಕ್‌ಟಾಕ್‌ ಮಾಡಿದ್ದಾರೆ....

 • CM BS Yediyurappa launched Corona warriors song by Yograj BhatCM BS Yediyurappa launched Corona warriors song by Yograj Bhat

  stateMay 2, 2020, 9:30 PM IST

  ಯೋಗರಾಜ್ ಭಟ್ ರಚನೆಯ ಕೊರೋನಾ ವಾರಿಯರ್ಸ್ ಹಾಡನ್ನು ಬಿಡುಗಡೆ ಮಾಡಿದ ಸಿಎಂ!

  ಬೆಂಗಳೂರು(ಮೇ.02):  ಕೋವಿಡ್ 19 ತಡೆಯಲು ಹಗಲಿರುಳು ಶ್ರಮಿಸುತ್ತಿರುವ ಕರೋನ ವಾರಿಯರ್ಸ್ ಗೆ ನಮನ ಸಲ್ಲಿಸೋ ಹಾಡನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ. ವಿಶೇಷ ಅಂದರೆ  ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ರಚಿಸಿ ನಿರ್ದೇಶನ ‌ಮಾಡಿರೋ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ ವಿಜಯ್ ಪ್ರಕಾಶ್ ಹಾಡಿದ್ದಾರೆ. 

 • Sandalwood Director Yogaraj Bhat Making Documentary About Police duty during India LockDownSandalwood Director Yogaraj Bhat Making Documentary About Police duty during India LockDown

  SandalwoodApr 24, 2020, 7:36 AM IST

  ಕೊರೋನಾ ವಾರಿಯರ್ಸ್‌: ಪೊಲೀಸ್‌ ಸಿಬ್ಬಂದಿ ಕುರಿತು ಯೋಗರಾಜ್‌ ಭಟ್‌ ಕಿರುಚಿತ್ರ!

  ಲಾಕ್‌ಡೌನ್‌ ಬಂದೋಬಸ್ತ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪೊಲೀಸರ ಕುರಿತು ಕಿರುಚಿತ್ರ ನಿರ್ಮಿಸಲು ಮುಂದಾಗಿದ್ದಾರೆ ನಿರ್ದೇಶಕ ಯೋಗರಾಜ್‌ ಭಟ್‌.
   

 • Director Producer yogaraj bhat to next production Padavi Poorna stars Model PrithviDirector Producer yogaraj bhat to next production Padavi Poorna stars Model Prithvi

  SandalwoodNov 26, 2019, 1:07 PM IST

  'ಪದವಿ ಪೂರ್ಣ'ನೊಂದಿಗೆ ಕೈ ಜೋಡಿಸಿ ನಿರ್ಮಾಣಕ್ಕಿಳಿದ ಯೋಗರಾಜ್‌ ಭಟ್!

   

  'ಗಾಳಿಪಟ' ಹಾರಿಸುತ್ತಲೇ 'ಪದವಿ ಪೂರ್ಣ'ನೊಂದಿಗೆ ನಿರ್ಮಾಣಕ್ಕೆ ಕೈ ಜೋಡಿಸಿದ ಯೋಗರಾಜ್‌ ಭಟ್‌ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳನ್ನು ತರುವುದರಲ್ಲಿ ಕಿಂಗ್ ಮೇಕರ್.

 • Kannada actress Nishvika sharmila Mandre to act in Yogaraj Bhat galipata 2 filmKannada actress Nishvika sharmila Mandre to act in Yogaraj Bhat galipata 2 film

  SandalwoodOct 22, 2019, 10:34 AM IST

  'ಗಾಳಿಪಟ 2'ಗೆ ನಾಯಕಿಯರು ಬದಲಾದರು!

  ನಿರ್ದೇಶಕ ಯೋಗರಾಜ್ ಭಟ್ ಅವರ ಸಿನಿಮಾ ಸೆಟ್ಟೇರುವ ಮುನ್ನವೇ ದೊಡ್ಡ ಬದಲಾವಣೆ ಆಗಿದೆ. ಚಿತ್ರದ ನಿರ್ಮಾಪಕರು ಹಾಗೂ ನಾಯಕಿಯರು ಬದಲಾಗಿದ್ದಾರೆ.