Yellamma Temple  

(Search results - 5)
 • Savadatti Yellamma

  Karnataka Districts18, Mar 2020, 1:02 PM IST

  ಬೆಳಗಾವಿ: ಸವದತ್ತಿ ಯಲ್ಲಮ್ಮನಿಗೂ ಕೊರೋನಾ ಕಾಟ!

  ಕೋರೊನಾ ವೈರಸ್ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೋಮವಾರ ಸವದತ್ತಿ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಸಿಬ್ಬಂದಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. 
   

 • saundatti yellamma temple

  Karnataka Districts10, Feb 2020, 12:05 PM IST

  ಯಲ್ಲಮ್ಮ ಸನ್ನಿಧಿಯಲ್ಲಿ ನಿನ್ನಾಲ್ಕು ಉಧೋ..ಉಧೋ: ಮುಗಿಲು ಮುಟ್ಟಿದ ಭಕ್ತರ ಸಂಭ್ರಮ

  ಏಳು ಕೊಳ್ಳದ ಸಂಗಮ ಸವದತ್ತಿಯ ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಭಾನುವಾರ ಭಾರತ ಹುಣ್ಣಿಮೆ ನಿಮಿತ್ತ ಸೇರಿದ್ದ ಲಕ್ಷೋಪ ಲಕ್ಷ ಭಕ್ತರು ಶ್ರೀದೇವಿ ದರ್ಶನ ಪಡೆದು ಕೃತಾರ್ಥರಾದರು. ಭಕ್ತಿಯ ಪರಾಕಾಷ್ಠೆಯ ಮಡಿಲಲ್ಲಿ ಉಧೋ...! ಉಧೋ...! ಉದ್ಘಾರ ಮೊಳಗಿ, ಶ್ರೀ ಕ್ಷೇತ್ರದಲ್ಲಿ ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
   

 • Savadatti Yellamma

  Karnataka Districts9, Feb 2020, 10:28 AM IST

  ಭಾರತ ಹುಣ್ಣಿಮೆ: ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಕಿಕ್ಕಿರಿದು ತುಂಬಿದ ಭಕ್ತ ಸಮೂಹ

  ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ವರ್ಷವಿಡೀ ಬರುವಂತ ಎಲ್ಲಾ ಹುಣ್ಣಿಮೆಗಳಿಗಿಂತಲೂ ತರಳಬಾಳು ಹುಣ್ಣಿಮೆ ದಿನದಂದು ವಿಶೇಷ ಜನಜಂಗುಳಿ ನೆರೆದಿರುತ್ತದೆ. ಉತ್ತರ ಕರ್ನಾಟಕದ ಹಲವಾರು ಪುಣ್ಯ ಕ್ಷೇತ್ರಗಳಲ್ಲಿ ನಡೆಯುವ ಜಾತ್ರೆಗಳಿಗಿಂತ ನಿರೀಕ್ಷೆಗೂ ಮೀರಿ ಭಕ್ತ ಸಮೂಹ ಇಲ್ಲಿ ಸೇರುವುದು ಒಂದು ವಿಶೇಷ. 
   

 • Yellamma Temple
  Video Icon

  Belagavi7, Nov 2019, 3:20 PM IST

  ಮತ್ತೆ ಅಬ್ಬರಿಸಿದ ವರುಣ: ಯಲ್ಲಮ್ಮ ದೇವಸ್ಥಾನ ಜಲಾವೃತ

  ಬೆಳಗಾವಿ[ನ.7]: ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೊಕಟನೂರು ಯಲ್ಲಮ್ಮ ದೇವಸ್ಥಾನ ಜಲಾವೃತವಾಗಿದೆ. ಪಕ್ಕದ ಕೆರೆ ಕೋಡಿ ಬಿದ್ದು ಸುತ್ತಮುತ್ತಲ ಹೊಲಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಮೇವಿನ ಬೆಳೆ ಸಂಪೂರ್ಣ ನಾಶವಾಗಿದೆ. ಇನ್ನು ದೇವಸ್ಥಾನದ ರಸ್ತೆಯಲ್ಲಿ ರಭಸವಾಗಿ ನೀರು ಹರಿಯುತ್ತಿದೆ. ರಸ್ತೆ ಅಕ್ಷರಶಹಃ ಕಾಲುವೆಯಂತಾಗಿದೆ. ಇತ್ತೀಚೆಗಷ್ಟೇ ಭೀಕರ ಪ್ರವಾಹದಿಂದ ನಲುಗಿದ್ದ ಜನತೆಗೆ ಇದೀಗ ಮತ್ತೆ ಮಳೆಯಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾತ್ರಿಯಿಡಿ ಸುರಿದ ಮಳೆಯಿಂದ ಯಾವೆಲ್ಲ ಸಮಸ್ಯೆಗಳು ಉದ್ಭವಾಗಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ. 

 • undefined
  Video Icon

  NEWS20, Jun 2019, 11:13 AM IST

  ಕೈ-ಜೆಡಿಎಸ್ ಮೈತ್ರಿ ಸರಕಾರದ ಕೊರಳಿಗೆ ಮತ್ತೊಂದು ಸಂಕಷ್ಟ

  ಸವದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ಸೇರಿರುವ ಜಾಗವನ್ನು ರಾಜ್ಯ ಸರಕಾರ ಖಾಸಗೀ ಕಂಪನಿಗೆ ಪರಭಾರೆ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಜಿಂದಾಲ್ ಭೂ ಹಗರಣದ ಬೆನ್ನಲ್ಲೇ ಮತ್ತೊಂದು ವಿವಾದದ ಆರೋಪ ಕೇಳಿ ಬರುತ್ತಿದೆ ರಾಜ್ಯ ಸರಕಾರದ ವಿರುದ್ಧ.