Yadagiri  

(Search results - 63)
 • Hello Minister Impact: Hight tension wire removed from Yadagiri Chamanala village snrHello Minister Impact: Hight tension wire removed from Yadagiri Chamanala village snr
  Video Icon

  Karnataka DistrictsOct 6, 2021, 9:27 AM IST

  ಏಷಿಯಾನೆಟ್ ಸುವರ್ಣ ನ್ಯೂಸ್ ಇಂಪ್ಯಾಕ್ಟ್ : 30 ವರ್ಷದ ಸಮಸ್ಯೆಗೆ ಪರಿಹಾರ

   ಇದು ಹಲೋ ಮಿನಿಸ್ಟರ್ ಕಾರ್ಯಕ್ರಮದ ಇಂಪ್ಯಾಕ್ಟ್. ಮೂರೇದಿನದಲ್ಲಿ ಏಷಿಯಾನೆಟ್ ಸುವರ್ಣನ್ಯೂಸ್ ಸಮಸ್ಯೆಗೆ ಪರಿಹಾರ ನೀಡಿದೆ. ಯಾದಗಿರಿ ಚಾಮನಾಳದ ಹತ್ತಾರು ಮನೆಗಳ ಹೈಟೆನ್ಶನ್ ವೈರಸ್ ಟೆನ್ಶನ್ ಕ್ರಿಯೇಟ್ ಮಾಡಿತ್ತು. ಆದರೀಗ 30 ವರ್ಷಗಳ ಬಳಿಕ ಇದಕ್ಕೆ ಪರಿಹಾರ ಒದಗಿಸಲಾಗಿದೆ. 

  ಇಂದನ ಸಚಿವರ ಗಮನಕ್ಕೆ ತಂದು ಇದೀಗ ಪರಿಹಾರ ಒದಗಿಸಲಾಗಿದೆ. ಕಾರ್ಯಕ್ರಮದಲ್ಲಿದ್ದ ಇಂಧನ ಸಚಿವರು ಅಲ್ಲಿಂದಲೇ ಸಮಸ್ಯೆ ಪರಿಹಾರ ನೀಡುವಂತೆ ಸೂಚಿಸಿದ್ದು ಪರಿಹಾರ ಒದಗಿಸಲಾಗಿದೆ. 

 • People refuse get Covid vaccination in Yadagiri district hlsPeople refuse get Covid vaccination in Yadagiri district hls
  Video Icon

  stateOct 5, 2021, 6:00 PM IST

  ಎಣ್ಣೆ ಹೊಡ್ಯೋಕೆ ಹೋಗ್ಬೇಕು, ನಾಳೆ ಬಂದು ವ್ಯಾಕ್ಸಿನ್ ತಗೋತೀನಿ, ಯುವಕನ ವರಸೆಗೆ ಅಧಿಕಾರಿಗಳು ಸುಸ್ತು!

  ಯಾದಗಿರಿ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಕಡಿಮೆ ಇರುವ ಹಿನ್ನಲೆಯಲ್ಲಿ ಅಧಿಕಾರಿಗಳು ಹಳ್ಳಿ ಹಳ್ಳಿಗೆ, ಮನೆ ಮನೆಗೆ ತೆರಳಿ ವ್ಯಾಕ್ಸಿನ್ ಹಾಕುತ್ತಿದ್ದಾರೆ. ಹೆಡಗಿಮುದ್ರಾ ಗ್ರಾಮಕ್ಕೆ ವ್ಯಾಕ್ಸಿನ್ ಹಾಕಲು ಬಂದ ಅಧಿಕಾರಿಯನ್ನು ನೋಡಿ ಯುವಕನೊಬ್ಬ ಓಟ ಕಿತ್ತಿದ್ದಾನೆ. 

 • woman drowns in waterfall Yadagiri Karnataka mahwoman drowns in waterfall Yadagiri Karnataka mah

  CRIMEOct 3, 2021, 10:28 PM IST

  ಯಾದಗಿರಿ ಧಬೆ ಧಬೆ ಫಾಲ್ಸ್ ನಲ್ಲಿ ನೀರು ಪಾಲಾದ ಕಲಬುರಗಿ ಯುವತಿ

  ಫಾಲ್ಸ್ ನೋಡಲು ಬಂದ ಯುವತಿ ಐಶ್ವರ್ಯ ನೀರು ಪಾಲಾಗಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಐಶ್ವರ್ಯ ದಾರುಣ ಸಾವು ಕಂಡಿದ್ದಾರೆ. ಭಾನುವಾರ ರಜಾ  ಹಿನ್ನೆಲೆ ಸಂಬಂಧಿಕರ ಜೊತೆ ಪ್ರವಾಸಿ ತಾಣ ವೀಕ್ಷಣೆಗೆ ಬಂದಿದ್ದಳು.

 • Conversion continuous in Yadagiri even after discussed the issue in session hlsConversion continuous in Yadagiri even after discussed the issue in session hls
  Video Icon

  stateSep 28, 2021, 10:32 AM IST

  ಯಾದಗಿರಿಯಲ್ಲಿ ಇನ್ನೂ ನಿಂತಿಲ್ಲ ಮತಾಂತರ, ಸಹಾಯದ ನೆಪದಲ್ಲಿ ಜನರಿಗೆ ಬ್ರೇನ್‌ವಾಶ್

  ಮತಾಂತರದ ವಿಚಾರ ಕಲಾಪದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾದರೂ, ಇನ್ನೂ ಬ್ರೇಕ್ ಬಿದ್ದಿಲ್ಲ. ಯಾದಗಿರಿಯಲ್ಲಿ ಜೇಮ್ಸ್ ಎಂಬ ಕ್ರೈಸ್ತ ಪಾದ್ರಿ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ. 

 • Yadgir Rural Students Turn Archers Sets Eye On Olympics mahYadgir Rural Students Turn Archers Sets Eye On Olympics mah
  Video Icon

  sportsSep 22, 2021, 9:01 PM IST

  ಯಾದಗಿರಿ ಆಧುನಿಕ ಏಕಲ್ಯವರ ಒಲಿಂಪಿಕ್ ಗುರಿಗೆ ಬೇಕಿದೆ ನೆರವು

   ಈ  ಯಾದಗಿರಿ ಜಿಲ್ಲೆಯ ಆಧುನಿಕ ಏಕಲವ್ಯರ ಬಗ್ಗೆ ಹೇಳಲೇಬೇಕು. 10 ಜನ ವಿದ್ಯಾರ್ಥಿಗಳ ತಂಡದಿಂದ ದಿನನಿತ್ಯ ಅರ್ಚರಿ ಅಭ್ಯಾಸ ಮಾಡುತ್ತಿದೆ. ಬಡತನದ ನಡುವೆಯೂ ಅರಳಿದ ಪ್ರತಿಭೆಗಳು ಬಿಲ್ಲುಗಾರಿಕೆಯಲ್ಲಿ ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ. ರಕ್ತಗತವಾಗಿ ಬಂದ ಬಿಲ್ವಿದ್ಯೆಯಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಗ್ರಾಮದ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ.

 • Satellite call going from Yadagiri Hedagimudra hills snrSatellite call going from Yadagiri Hedagimudra hills snr
  Video Icon

  Karnataka DistrictsSep 21, 2021, 1:40 PM IST

  ಯಾದಗಿರಿಯಿಂದಲೂ ಪಾಕಿಸ್ತಾನಕ್ಕೆ ನಿಷೇಧಿತ ಸ್ಯಾಟಲೈಟ್ ಕರೆ

  ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ದಟ್ಟ ಅರಣ್ಯ ಪ್ರದೇಶಗಳಿಂದ ಸ್ಯಾಟಲೈಟ್ ಕರೆಗಳು ಪಾಕಿಸ್ತಾನಕ್ಕೆ ಹೊಗಿರುವ ಬೆನ್ನಲ್ಲೇ ರಾಜ್ಯದ ಯಾದಗಿರಿ ಜಿಲ್ಲೆಯಿಂದಲೂ ಪಾಕಿಸ್ತಾನಕ್ಕೆ ನಿಷೇಧಿತ ಸ್ಯಾಟಲೈಟ್ ಕರೆ ಹೋಗಿದೆ. 

  2014ರಲ್ಲಿ ಸಿಮಿ ಉಗ್ರರ ಸ್ಲೀಪಿಂಗ್ ಸೆಲ್‌ ಎಂದು ಗುರುತಿಸಲಾಗಿದ್ದ ಯಾದಗಿರಿಯಲ್ಲೂ  ಈಗ ಮತ್ತೆ ಇಂಥ ಚಟುವಟಿಕೆಗಳು ಗರಿಗೆದರಿವೆ.   

  2014ರಲ್ಲಿ ಸಿಮಿ ಉಗ್ರರ ಸ್ಲೀಪಿಂಗ್ ಸೆಲ್‌ ಎಂದು ಗುರುತಿಸಲಾಗಿದ್ದ ಯಾದಗಿರಿಯಲ್ಲೂ  ಈಗ ಮತ್ತೆ ಇಂಥ ಚಟುವಟಿಕೆಗಳು ಗರಿಗೆದರಿವೆ.   

 • Mother poisons kids attempts suicide Yadagiri mahMother poisons kids attempts suicide Yadagiri mah

  CRIMESep 14, 2021, 7:51 PM IST

  ಯಾದಗಿರಿ; ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ವಿಷ ಕೊಟ್ಟು ತಾನು ಸೇವಿಸಿದ ತಾಯಿ!

  ಇಬ್ರಾಹಿಂ ಪುರ ಗ್ರಾಮದ ತಾಯಿ ರಾಧಿಕಾ (40) ರೂಪಾ (18) ಪ್ರಿಯಾ (16) ವಿಷ ಸೇರಿಸಿ ಊಟ ಮಾಡಿದವರು. ವಿಷ ಸೇವಿಸಲು ನಿಖರ ಕಾರಣ ತಿಳಿದುಬಂದಿಲ್ಲ. ಅಸ್ವಸ್ಥರನ್ನ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

 • Asianet Suvarna FIR Woman kidnapped while waiting for bus in Yadagiri mahAsianet Suvarna FIR Woman kidnapped while waiting for bus in Yadagiri mah
  Video Icon

  CRIMESep 14, 2021, 5:11 PM IST

  8 ತಿಂಗಳ ಹಿಂದೆ ನಡೆದ ಘೋರ ಘಟನೆ.. ಮಹಿಳೆಗೆ ಕೊಡಬಾರದ ಹಿಂಸೆ ಕೊಟ್ಟರು!

  ಅಪರಾಧ ಜಗತ್ತಿನನಿಲ್ಲಿ ವಿಚಿತ್ರ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಎಂಟು ತಿಂಗಳ ಹಿಂದೆ ನಡೆದಿದ್ದ ಗ್ಯಾಂಗ್ ರೇಪ್ ಈಗ ಬಯಲಾಗಿದೆ. ಯಾದಗಿರಿಯ ಈ ಭಯಾನಕ ಸ್ಟೋರಿ ಇವತ್ತಿನ ಎಫ್‌ಐಆರ್ ನಲ್ಲಿ. ಮಹಿಳೆಯೊಬ್ಬಳನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿದ್ದರು. ಮಹಿಳೆಯನ್ನು ಬೆತ್ತಲೆ ಮಾಡಿ ವಿಡಿಯೋ ಮಾಡಿಕೊಂಡಿದ್ದರು. ಬಸ್ ಸ್ಟಾಂಡ್ ನಲ್ಲಿ ನಿಂತವಳನ್ನು ಸಿನಿಮಾ ಮಾದರಿಯಲ್ಲಿ ಕಿಡ್ನಾಪ್ ಮಾಡಿ ಹಿಂಸಿಸಿದ್ದರು.  ಈ ದೌರ್ಜನ್ಯದ ಪ್ರಕರಣ ಬಯಲಿಗೆ ಎಳೆದಿದ್ದು ಕನ್ನಡಪ್ರಭ. 

 • Woman removed cloths and attacked brutally in Yadagiri podWoman removed cloths and attacked brutally in Yadagiri pod
  Video Icon

  CRIMESep 13, 2021, 11:49 AM IST

  ರಾತ್ರಿ ವೇಳೆ ಸ್ತ್ರೀಯೊಬ್ಬಳ ಮೇಲೆ ಅಮಾನುಷ ದೌರ್ಜನ್ಯ, ಯಾದಗಿರಿಯ ವಿಡಿಯೋ ವೈರಲ್‌

  ಮಹಿಳೆಯೊಬ್ಬಳನ್ನು ಸಂಪೂರ್ಣ ಬೆತ್ತಲಾಗಿಸಿದ ಗುಂಪೊಂದು ಆಕೆಯ ಮೇಲೆ ಕಬ್ಬಿನ ಜಲ್ಲೆಗಳಿಂದ ತೀವ್ರವಾಗಿ ಹಲ್ಲೆ ನಡೆಸುವುದರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಂಗಾಂಗಗಳನ್ನು ಮುಟ್ಟಿಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಯಾದಗಿರಿ ಸಮೀಪದಲ್ಲಿ ನಡೆದಿದೆ ಎನ್ನಲಾದ ಈ ಪೈಶಾಚಿಕ ಕೃತ್ಯ ನಿರ್ದಿಷ್ಟವಾಗಿ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ.

 • Yadgir Financier Accused of Confining Wife of Debtor mahYadgir Financier Accused of Confining Wife of Debtor mah
  Video Icon

  CRIMEAug 31, 2021, 11:43 PM IST

  ಯಾದಗಿರಿ; ಸಾಲಗಾರನ ಪತ್ನಿ ಒತ್ತೆಯಾಳು, ಮೂತ್ರ ವಿಸರ್ಜನೆಗೂ ಬಿಡಲಿಲ್ಲ!

  ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನು ಫೈನಾನ್ಸ್ ಒಂದು ಒತ್ತೆಯಾಳಾಗಿರಿಸಿಕೊಂಡಿದ್ದ ಅಮಾನವೀಯ ಘಟನೆ ವರದಿಯಾಗಿದೆ. ಯಾದಗಿರಿಯಲ್ಲಿ ಬಡ್ಡಿ ವ್ಯವಹಾರ ಮೀತಿ ಮೀರಿದ  ಫೈನಾನ್ಸ್‌ಗಳಿಗೆ ಅಂಕುಶವಿಲ್ಲವಾಗಿದೆ. ಶಿವಶಂಕರ್ ಫೈನಾನ್ಸ್‌ನಿಂದ ಸಾಲಗಾರರ ಕುಟುಂಬಕ್ಕೆ ಹಿಂಸೆ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ ಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಶಿವಶಂಕರ್ ಫೈನಾನ್ಸ್‌ನಲ್ಲಿ   ಮೂರು ಲಕ್ಷ ರೂ. ಸಾಲವನ್ನು ಮಹ್ಮದ್ ಎಂಬುವರು ಪಡೆದುಕೊಂಡಿದ್ದರು ಸಮಯಕ್ಕೆ ಸರಿಯಾಗಿ ಅಸಲು ಮತ್ತು ಬಡ್ಡಿ ಕಟ್ಟಿದರೂ, ಹೆಚ್ಚಿನ ಬಡ್ಡಿ ನೀಡಲು ಒತ್ತಡ ಹಾಕಿದ್ದಾರೆ.

 • Home Minister Araga Jnanendra Justifies Celebratory Gunfire At Janashirvada Yatra mahHome Minister Araga Jnanendra Justifies Celebratory Gunfire At Janashirvada Yatra mah
  Video Icon

  Karnataka DistrictsAug 20, 2021, 5:48 PM IST

  ಕೇಂದ್ರ ಸಚಿವರಿಗೆ 'ಗುಂಡಿ'ನ ಸ್ವಾಗತ, ಆ ಭಾಗದ ವಾಡಿಕೆ ಎಂದ ಗೃಹ ಸಚಿವ!

   ಕೇಂದ್ರ ಸಚಿವರಿಗೆ ಸ್ವಾಗತ ಕೋರಲು ಗಾಳಿಯಲ್ಲಿ ಗುಂಡು  ಹಾರಿಸಿದ್ದ ಪ್ರಕರಣವನ್ನು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಸಮರ್ಥನೆ  ಮಾಡಿಕೊಂಡಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸುವುದು ಆ ಭಾಗದ ವಾಡಿಕೆ. ಮಲೆನಾಡು ಭಾಗದಲ್ಲಿಯೂ ಸಮಾರಂಭದ ವೇಳೆ ಗುಂಡು ಹಾರಿಸುವ ವಾಡಿಕೆ ಇದೆ ಎಂದಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ, ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಆಕಸ್ಮಿಕವಾಗಿ ಘಟನೆ ಸಂಭವಿಸಿರಬಹುದು ಎಂದು ಆರಗ ಹೇಳಿಕೆ ನೀಡಿದ್ದಾರೆ. ಬಿಜೆಪಿ ಜನಾಶೀರ್ವಾದ ಯಾತ್ರೆ ಸಂದರ್ಭ ಯಾದಗಿರಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಸ್ವಾಗತ ಕೋರುವ ವೇಳೆ ಕಾರ್ಯಕರ್ತರು ಪುಂಡಾಟ ಮೆರೆದಿದ್ದರು. 

 • Asianet Suvarna News Impact 3 Policemen Suspended Over Celebratory Gunfire mahAsianet Suvarna News Impact 3 Policemen Suspended Over Celebratory Gunfire mah
  Video Icon

  Karnataka DistrictsAug 19, 2021, 6:08 PM IST

  ಯಾದಗಿರಿ; ನಾಡಬಂದೂಕಿನಿಂದ ಗುಂಡು ಪ್ರಕರಣ, ಮೂವರು ಪೊಲೀಸರು ಸಸ್ಪೆಂಡ್!

  ನಾಡ ಬಂದೂಕಿನಿಂದ ಗಾಳಿಯಲ್ಲಿ  ಗುಂಡು ಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾ ಸ್ವಾಗತ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಪ್ರಕರಣದ ಬಗ್ಗೆ ನಿರಂತರವಾಗಿ ವರದಿ  ಪ್ರಸಾರ ಮಾಡಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿತ್ತು. ಗೃಹ ಸಚಿವ ಆರಗ  ಜ್ಞಾನೇಂದ್ರ ಸಹ ಪ್ರತಿಕ್ರಿಯೆ ನೀಡಿದ್ದರು. ನಾಡಬಂದೂಕಿನಿಂದ ಗುಂಡು ಹಾರಿಸಿದ್ದು ದೊಡ್ಡ ಸುದ್ದಿಯಾಗಿತ್ತು.  ಅಧಿಕಾರ ಸಿಕ್ಕವರು ಈ ರೀತಿ ವರ್ತನೆ ಮಾಡುವುದು ಸರಿಯೇ  ಎಂದು ಜನ ಪ್ರಶ್ನೆ ಮಾಡಿದ್ದರು.

 • Celebratory Gunfire At Janashirvada Yatra Yadagiri Home Minister Araga Jnanendra reaction mahCelebratory Gunfire At Janashirvada Yatra Yadagiri Home Minister Araga Jnanendra reaction mah
  Video Icon

  Karnataka DistrictsAug 18, 2021, 5:41 PM IST

  ಬಿಜೆಪಿ ಯಾತ್ರೆಯಲ್ಲಿ ಗುಂಡಿನ ಸದ್ದು.. ಗೃಹ ಸಚಿವರಿಗೆ ಹೆಚ್ಚಿನ ಮಾಹಿತಿ ಇಲ್ಲ!

  ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವರನ್ನು ಸ್ವಾಗತ ಮಾಡಲು ನಾಡ ಬಂದೂಕಿನಿಂದ ಗುಂಡು  ಹಾರಿಸಿರುವುದು
  ದೊಡ್ಡ ಸುದ್ದಿಯಾಗುತ್ತಿದೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.

 • Grand wedding in Yadagiri by throwing Covid rules away mahGrand wedding in Yadagiri by throwing Covid rules away mah
  Video Icon

  Karnataka DistrictsMay 20, 2021, 9:32 PM IST

  ಯಾದಗಿರಿಯ ಈ ಮದುವೆಗೆ ಕೊರೋನಾ ಭಯವಿಲ್ಲ, ಮಾಸ್ಕ್ ಕೇಳಲೇಬೇಡಿ

  ಕೊರೋನಾ ಲಾಕ್ ಕಾರಣಕ್ಕೆ ಮದುವೆಗೆ ಇಂತಿಷ್ಟೆ ಜನ ಎಂದು ಸರ್ಕಾರ ತಿಳಿಸಿದೆ. ಆದರೆ ಜನ ಮಾತ್ರ ಎಚ್ಚೆತ್ತುಕೊಳ್ಳುವ ಯಾವ ಲಕ್ಷಣಗಳು  ಕಾಣುತ್ತಿಲ್ಲ. ಇದು ಯಾದಗಿರಿಯಲ್ಲಿ ನಡೆದ ಮದುವೆಯೊಂದರ ದೃಶ್ಯ. ಸಾಮಾಜಿಕ ಅಂತರ ಇಲ್ಲ, ಮಾಸ್ಕ್ ಕೇಳಲೇಬೇಡಿ.. ಹಳ್ಳಿಗಳು ಕೊರೋನಾ ಹಾಟ್ ಸ್ಪಾಟ್ ಆಗುತ್ತಿವೆ  ಎಂದು ಎಚ್ಚರಿಕೆ ನೀಡುತ್ತಿದ್ದರೂ ಜನರಲ್ಲಿ ಜಾಗೃತಿ ಮೂಡದಿರುವುದು ದುರ್ದೈವ. 

 • Father brings ill daughter on shoulder to hospital in Yadagiri hlsFather brings ill daughter on shoulder to hospital in Yadagiri hls
  Video Icon

  stateMay 20, 2021, 5:48 PM IST

  ಮಗಳ ಚಿಕಿತ್ಸೆಗೆ ಅಪ್ಪನ ಹೋರಾಟ, ಹೊತ್ತುಕೊಂಡೇ 8 ಕಿಮೀ ನಡೆದಾಟ

  ಜ್ವರದಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ಕೊಡಿಸಲು ತಂದೆ, ಮಗಳನ್ನು ಹೊತ್ತುಕೊಂಡು 8 ಕಿಮೀ ನಡೆದು ಬಂದಿದ್ಧಾರೆ.