Women's Cricket Team  

(Search results - 67)
 • India Womens Cricket Team beats Australia by two wickets to end 26 match ODI unbeaten streak kvn

  CricketSep 26, 2021, 4:25 PM IST

  ಆಸೀಸ್‌ ಸತತ 26 ಪಂದ್ಯಗಳ ಗೆಲುವಿನ ನಾಗಾಲೋಟಕ್ಕೆ ಭಾರತೀಯ ಮಹಿಳಾ ತಂಡ ಬ್ರೇಕ್‌..!

  ಆಸ್ಟ್ರೇಲಿಯಾ ನೀಡಿದ್ದ 265 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಶೆಫಾಲಿ ವರ್ಮಾ ಹಾಗೂ ಯಶ್ತಿಕಾ ಭಾಟಿಯಾ ಬಾರಿಸಿದ ಚೊಚ್ಚಲ ಅರ್ಧಶತಕ ಹಾಗೂ ಕೊನೆಯಲ್ಲಿ ಸ್ನೆಹ್ ರಾಣಾ ಹಾಗೂ ಜೂಲನ್‌ ಗೋಸ್ವಾಮಿ ಬಾರಿಸಿದ ಸಮಯೋಚಿತ ಬ್ಯಾಟಿಂಗ್‌ ನೆರವಿನಿಂದ ಭಾರತ ರೋಚಕ ಗೆಲುವು ದಾಖಲಿಸಿತು. 
   

 • New Zealand womens cricket team receives bomb threat in England kvn

  CricketSep 22, 2021, 12:35 PM IST

  Women's Cricket ನ್ಯೂಜಿಲೆಂಡ್‌ ಮಹಿಳಾ ಕ್ರಿಕೆಟ್‌ ತಂಡಕ್ಕೆ ಬಾಂಬ್‌ ಬೆದರಿಕೆ..!

  ‘ಭದ್ರತೆಯ ಕಾರಣ ನೀಡಿ ನ್ಯೂಜಿಲೆಂಡ್‌ ತಂಡ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿತು. ಈಗ ನ್ಯೂಜಿಲೆಂಡ್‌ ಮಹಿಳಾ ತಂಡಕ್ಕೆ ಬಾಂಬ್‌ ಬೆದರಿಕೆ ಬಂದರೂ ಸರಣಿ ಮುಂದುವರಿಯುತ್ತಿದೆ. ಇದು ದ್ವಿಮುಖ ನೀತಿ ಅಲ್ಲದೆ ಬೇರೇನೂ ಅಲ್ಲ’ ಎಂದು ಪಿಸಿಬಿ ಟೀಕಿಸಿದೆ.
   

 • Indian Womens Cricket Team pips England by eight runs to level T20 series kvn

  CricketJul 12, 2021, 9:23 AM IST

  2ನೇ ಮಹಿಳಾ ಟಿ20: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ರೋಚಕ ಜಯ

  ಶಫಾಲಿ ವರ್ಮಾ ಸ್ಫೋಟಕ ಆಟ (38 ಎಸೆತದಲ್ಲಿ 48 ರನ್‌) ನೆರವಿನಿಂದ ಭಾರತ 20 ಓವರಲ್ಲಿ 4 ವಿಕೆಟ್‌ಗೆ 148 ರನ್‌ ಗಳಿಸಿತು. ಇಂಗ್ಲೆಂಡ್‌, ಟ್ಯಾಮಿ ಬ್ಯುಯೊಮೊಂಟ್‌ರ ಅರ್ಧಶತಕದ ಹೊರತಾಗಿಯೂ ಕುಸಿತ ಕಂಡಿತು. ಕೊನೆ 36 ಎಸೆತಗಳಲ್ಲಿ ಕೇವಲ 43 ರನ್‌ ಬೇಕಿತ್ತು. ಆದರೂ ಇಂಗ್ಲೆಂಡ್‌ 8 ವಿಕೆಟ್‌ಗೆ ಕೇವಲ 140 ರನ್‌ ಗಳಿಸಿತು.

 • England Womens Cricket Team Beat India and Clinch the ODI Series kvn

  CricketJul 1, 2021, 11:43 AM IST

  ಭಾರತ ಮಹಿಳಾ ತಂಡಕ್ಕೆ ಮತ್ತೊಂದು ಸೋಲು; ಸರಣಿ ಇಂಗ್ಲೆಂಡ್ ಪಾಲು

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡ 221 ರನ್‌ ಬಾರಿಸಿ ಸರ್ವಪತನ ಕಂಡಿತು. ಶಫಾಲಿ ವರ್ಮಾ 44 ರನ್‌ ಬಾರಿಸಿದರೆ, ನಾಯಕಿ ಮಿಥಾಲಿ ರಾಜ್ ಸತತ ಎರಡನೇ ಅರ್ಧಶತಕ ಬಾರಿಸಿದರು. ಒಟ್ಟು 92 ಎಸೆತಗಳನ್ನು ಎದುರಿಸಿದ ಮಿಥಾಲಿ ರಾಜ್ 6 ಬೌಂಡರಿ ಸಹಿತ 59 ರನ್‌ ಬಾರಿಸಿ ರನೌಟ್‌ ಆದರು. 

 • Indian Womens Cricket Team Look to Avoid ODI Series Defeat against England at Taunton kvn

  CricketJun 30, 2021, 9:03 AM IST

  ಇಂಗ್ಲೆಂಡ್‌ಗೆ ತಿರುಗೇಟು ನೀಡಲು ಸಜ್ಜಾದ ಮಿಥಾಲಿ ರಾಜ್ ಪಡೆ

  ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಆತಿಥೇಯ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಇನ್ನೊಂದು ಕಡೆ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡವು ಆತಿಥೇಯರಿಗೆ ತಿರುಗೇಟು ನೀಡುವ ಕನವರಿಕೆಯಲ್ಲಿದೆ. 

 • Indian womens Cricket Team in sight of most consecutive wins in Test against England kvn

  CricketJun 16, 2021, 9:46 AM IST

  ಇಂದಿನಿಂದ ಭಾರತ, ಇಂಗ್ಲೆಂಡ್‌ ಮಹಿಳಾ ಟೆಸ್ಟ್‌ ಆರಂಭ

  ಆಸ್ಪ್ರೇಲಿಯಾ ತಂಡ 3 ಬಾರಿ ಸತತ 3 ಪಂದ್ಯಗಳನ್ನು ಗೆದ್ದಿದೆ. ಭಾರತ ಸಹ ಸತತ 3 ಪಂದ್ಯಗಳಲ್ಲಿ ಜಯಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿಗೂ ಮೊದಲು ಇಂಗ್ಲೆಂಡ್‌ ವಿರುದ್ಧ 2 ಟೆಸ್ಟ್‌ಗಳನ್ನು ಭಾರತ ಗೆದ್ದಿತ್ತು.

 • Indian womens Cricket team gets first dose of COVID 19 vaccine kvn

  CricketMay 28, 2021, 4:19 PM IST

  ಮೊದಲ ಡೋಸ್‌ ಕೋವಿಡ್ ಲಸಿಕೆ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡ

  ಸದ್ಯ ಭಾರತ ಮಹಿಳಾ ಕ್ರಿಕೆಟ್ ತಂಡವು ಮುಂಬೈನಲ್ಲಿ ಕ್ವಾರಂಟೈನ್‌ನಲ್ಲಿದ್ದು, ಇಂಗ್ಲೆಂಡ್ ಪ್ರವಾಸದಲ್ಲಿ ಏಕೈಕ ಟೆಸ್ಟ್‌ ಹಾಗೂ 2 ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇಂಗ್ಲೆಂಡ್ ವಿರುದ್ದ ಜೂನ್ 16ರಿಂದ ಏಕೈಕ ಟೆಸ್ಟ್‌ ಪಂದ್ಯವನ್ನಾಡಿದರೆ, ಜೂನ್ 27ರಿಂದ ಏಕದಿನ ಸರಣಿಯನ್ನಾಡಲಿದೆ. ಇನ್ನು ಜುಲೈ 09 ಹಾಗೂ 11ರಂದು 2 ಟಿ20 ಪಂದ್ಯಗಳ ಸರಣಿಯನ್ನಾಡಲಿದೆ. 
   

 • India womens Cricket Team to play maiden pink ball test against Australia in Perth kvn

  CricketMay 21, 2021, 10:07 AM IST

  ಸೆಪ್ಟೆಂಬರ್‌ನಲ್ಲಿ ಇಂಡೋ-ಆಸೀಸ್ ಮಹಿಳಾ ತಂಡಗಳ ನಡುವೆ ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್‌

  ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿ ನಡೆಯಲಿರುವ 2ನೇ ಪಿಂಕ್‌ ಬಾಲ್‌ ಪಂದ್ಯ ಇದಾಗಲಿದೆ. ಈ ಮೊದಲು 2017ರಲ್ಲಿ ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ತಂಡಗಳು ಸಿಡ್ನಿಯಲ್ಲಿ ಹಗಲು-ರಾತ್ರಿ ಟೆಸ್ಟ್‌ ಆಡಿದ್ದವು.

 • India Womens Cricket Team to Play One Test on Australian Tour kvn

  CricketMay 19, 2021, 9:04 AM IST

  ಆಸೀಸ್‌ ಪ್ರವಾಸದಲ್ಲಿ ಏಕೈಕ ಟೆಸ್ಟ್ ಪಂದ್ಯವಾಡಲಿದೆ ಭಾರತ ತಂಡ

  ಭಾರತ ಮಹಿಳಾ ಕ್ರಿಕೆಟ್‌ ತಂಡ ಈ ವರ್ಷ 2 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಇಂಗ್ಲೆಂಡ್‌ ಪ್ರವಾಸದಿಂದ ವಾಪಸಾದ ಬಳಿಕ ಆಸ್ಪ್ರೇಲಿಯಾಗೆ ತೆರಳಲಿರುವ ಭಾರತ, ಒಂದು ಪಂದ್ಯದ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ಕುರಿತಾಗಿ ಬಿಸಿಸಿಐ ಅಥವಾ ಕ್ರಿಕೆಟ್ ಆಸ್ಟ್ರೇಲಿಯಾ ಇನ್ನು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. 

 • Indian womens cricket team likely to tour Australia in September Says Megan Schutt kvn

  CricketMay 17, 2021, 12:07 PM IST

  ಸೆಪ್ಟೆಂಬರ್‌ನಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಪ್ರೇಲಿಯಾ ಪ್ರವಾಸಕ್ಕೆ?

  ಇಂಗ್ಲೆಂಡ್‌ ಆಟಗಾರ್ತಿಯರಾದ ಕೇಟ್‌ ಕ್ರಾಸ್‌ ಹಾಗೂ ಅಲೆಕ್ಸ್‌ ಹಾಟ್ರ್ಲೆ ಜೊತೆ ಆನ್‌ಲೈನ್‌ ಸಂವಾದ ವೇಳೆ ಶ್ಯುಟ್‌, ಸೆಪ್ಟೆಂಬರ್‌ನಲ್ಲಿ ಭಾರತ ವಿರುದ್ಧ ಸರಣಿ ಇರುವುದಾಗಿ ತಿಳಿಸಿದ್ದಾರೆ.

 • BCCI Top officials Disappointed over WV Raman Sacking from Head Coach Post Says Report kvn

  CricketMay 15, 2021, 9:36 AM IST

  ಕೋಚ್‌ ಸ್ಥಾನಕ್ಕೆ ರಾಮನ್‌ ಹೆಸರು ಕೈಬಿಟ್ಟದ್ದಕ್ಕೆ ಸಿಟ್ಟು!

  ಕೋಚ್‌ ಆಗಿ ಬಹಳಷ್ಟು ಯಶಸ್ಸು ಕಂಡಿದ್ದ ರಾಮನ್‌ ಬದಲಿಗೆ ಮದನ್‌ ಲಾಲ್‌ ನೇತೃತ್ವದ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಹಾಗೂ ಪ್ರಧಾನ ಆಯ್ಕೆಗಾರ್ತಿ ನೀತು ಡೇವಿಡ್‌ ವಿರುದ್ಧ ಕೆಲ ಹಿರಿಯ ಹಾಗೂ ಪ್ರಬಲ ಅಧಿಕಾರಿಗಳು ಹರಿಹಾಯ್ದಿದ್ದಾರೆ. 

 • Former Cricketer Ramesh Powar back as Indian womens cricket team head coach kvn

  CricketMay 14, 2021, 8:51 AM IST

  ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ರಮೇಶ್ ಪೊವಾರ್‌ ಕೋಚ್‌

  ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಫೈನಲ್‌ ಪ್ರವೇಶಿಸಿದ್ದರೂ, ಇತ್ತೀಚೆಗೆ ನಡೆದಿದ್ದ ದ.ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತಂಡ ಸೋತಿದ್ದರಿಂದ ಡಬ್ಲ್ಯುವಿ ರಾಮನ್‌ ಕೋಚ್‌ ಹುದ್ದೆ ಕಳೆದುಕೊಂಡರು ಎನ್ನಲಾಗಿದೆ.
   

 • Indian Womens Cricket Team look to avoid T20 series whitewash against South Africa kvn

  CricketMar 23, 2021, 8:23 AM IST

  ವೈಟ್‌ವಾಶ್‌ ತಪ್ಪಿಸಿಕೊಳ್ಳಲು ಭಾರತ ಮಹಿಳಾ ಕ್ರಿಕೆಟ್‌ ತಂಡ ಹೋರಾಟ

  ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಭಾರತ ತಂಡ ಭಾರೀ ಒತ್ತಡದೊಂದಿಗೆ ಅಂತಿಮ ಪಂದ್ಯಕ್ಕೆ ಕಣಕ್ಕಿಳಿಯಲಿದೆ. ಭಾರತ ವಿರುದ್ಧ ಚೊಚ್ಚಲ ಟಿ20 ಸರಣಿ ಗೆದ್ದಿರುವ ದಕ್ಷಿಣ ಆಫ್ರಿಕಾ, ಕ್ಲೀನ್‌ ಸ್ವೀಪ್‌ ನಿರೀಕ್ಷೆಯಲ್ಲಿದೆ.
   

 • Womens T20 Cricket Indian Team eyes on Bounce back against South Africa in Lucknow kvn

  CricketMar 20, 2021, 8:24 AM IST

  ಮಹಿಳಾ ಟಿ20 ಕ್ರಿಕೆಟ್‌: ಹರಿಣಗಳಿಗೆ ತಿರುಗೇಟು ನೀಡುತ್ತಾ ಭಾರತ?

  ಇಲ್ಲಿನ ಭಾರತ್ ರತ್ನ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್‌ ಮೈದಾನದಲ್ಲಿ ಶನಿವಾರ(ಮಾ.20)ದಂದು ಮೊದಲ ಪಂದ್ಯ ನಡೆಯಲಿದ್ದು, ಭಾರತದ ಮೇಲೆ ಹೆಚ್ಚಿನ ಒತ್ತಡವಿದೆ. ಏಕದಿನ ತಂಡದಲ್ಲಿ ಸ್ಥಾನ ಪಡೆಯುವ 17 ವರ್ಷದ ಶಫಾಲಿ ವರ್ಮಾ ಟಿ20 ಸರಣಿಗೆ ಆಯ್ಕೆಯಾಗಿದ್ದು, ಅವರ ಮೇಲೆ ನಿರೀಕ್ಷೆ ಇದೆ. 

 • South Africa Womens Cricket Team Beat Indian Womens by Five Wickets clinch the Series kvn

  CricketMar 17, 2021, 5:50 PM IST

  ಕೊನೆಯ ಪಂದ್ಯದಲ್ಲೂ ಸೋಲಿನ ಕಹಿಯುಂಡ ಮಿಥಾಲಿ ಪಡೆ

  ಭಾರತ ನೀಡಿದ್ದ 189 ರನ್‌ ಗಳ ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ರಾಜೇಶ್ವರಿ ಗಾಯಕ್ವಾಡ್‌ ಆರಂಭದಲ್ಲೇ ಶಾಕ್‌ ನೀಡಿದರು. ಹರಿಣಗಳ ಪಡೆ 3 ರನ್‌ ಗಳಿಸುವಷ್ಟರಲ್ಲೇ ಅಗ್ರಕ್ರಮಾಂಕದ ಬ್ಯಾಟ್ಸ್‌ವುಮೆನ್‌ಗಳು ಪೆವಿಲಿಯನ್‌ ಸೇರಿದರು. ಇನ್ನು ಸುನೆ ಲಸ್‌ ಆಟ ಕೇವಲ 10 ರನ್‌ಗಳಿಗೆ ಸೀಮಿತವಾಯಿತು.