Western Ghat  

(Search results - 31)
 • flood

  NEWS10, Sep 2019, 4:32 PM IST

  ವಿಚಿತ್ರ ಶಬ್ದ ಎಲ್ಲಿಂದ ಬರುತ್ತಿದೆ? ಪಶ್ಚಿಮ ಘಟ್ಟ ವಾಸಕ್ಕೆ ಅಪಾಯಕಾರಿಯೇ?

  ಕಳೆದ ವರ್ಷ ಕೇರಳ, ಕೊಡಗು... ಈ ವರ್ಷ ಉತ್ತರ ಕನ್ನಡ, ಚಿಕ್ಕಮಗಳೂರಲ್ಲಿ ಗುಡ್ಡ ಕುಸಿತ, ಪಶ್ಚಿಮ ಘಟ್ಟವಾಸಕ್ಕೆ ಅಪಾಯಕಾರಿಯೇ?| ಕಾಡು ಬೋಳಾಗಿ, ನೀರು ಹಿಡಿದಿಟ್ಟುಕೊಳ್ಳದ ಕಾರಣ ಗುಡ್ಡ ಕುಸಿತ ಸಂಭವಿಸುತ್ತಿದೆ ಎಂಬ ಹಳೆಯ ವಾದವನ್ನು ಪುನಃ ಪರಿಶೀಲಿಸಬೇಕಿದೆ. ಈ ವರ್ಷ ಗುಡ್ಡ ಕುಸಿತ ಸಂಭವಿಸಿರುವ ಸ್ಥಳಗಳಲ್ಲಿ ಮಾನವನ ಹಸ್ತಕ್ಷೇಪವೇ ಆಗಿಲ್ಲದ ಜಾಗಗಳು ಹೆಚ್ಚಿವೆ. ಹಾಗಿದ್ದರೆ ಪಶ್ಚಿಮ ಘಟ್ಟದ ಭೂತಳದಲ್ಲಿ ನೈಸರ್ಗಿಕವಾಗಿಯೇ ಏನಾದರೂ ವಿದ್ಯಮಾನ ಘಟಿಸುತ್ತಿದೆಯೇ? ಅಧ್ಯಯನ ನಡೆಯಬೇಕಿದೆ.

 • কলকাতায় বৃষ্টি শুরু

  Karnataka Districts4, Sep 2019, 10:24 AM IST

  ಘಟ್ಟದಲ್ಲಿ ಮತ್ತೆ ಬಿರುಸಿನ ಮಳೆ: ಆತಂಕದಲ್ಲಿ ಜನ

  ಘಟ್ಟಪ್ರದೇಶದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಕಳೆದ ಮೂರು ದಿನಗಳಿಂದ ಬಿಡದೇ ಮಳೆ ಸುರಿದಿದೆ. ಇದರಿಂದ ಮಲೆನಾಡಿನಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಆದರೆ ಆರ್ಭಟದ ಮಳೆ ಬದಲಾಗಿ ಆಗಾಗ್ಗೆ ಒಮ್ಮೆ ಜೋರಾಗಿ ಸುರಿಯುವುದು ಮತ್ತು ಬಳಿಕ ಜಿಟಿ ಜಿಟಿ ಮಳೆ ಕಂಡುಬರುತ್ತಿದೆ.

 • Charmadi Ghat

  Karnataka Districts24, Aug 2019, 11:52 AM IST

  ಚಾರ್ಮಾಡಿ ಘಾಟ್‌: ಪ್ರಕೃತಿ ಸೊಬಗಿಗಿಂತ ಕುಸಿತದ ಆತಂಕವೇ ಹೆಚ್ಚು...!

  ಬೆಳ್ತಂಗಡಿಯ ಸುಪ್ರಸಿದ್ಧ ಚಾರ್ಮಾಡಿ ಕಣಿವೆಯ ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಿ ಇಳಿಯುವಾಗ ಅಥವಾ ಹತ್ತುವಾಗ ನೀರಿನ ಜಲಪಾತಗಳು, ಬಳುಕುವ ಝರಿಗಳನ್ನು ನೋಡುವುದೇ ಒಂದು ಸೊಬಗು. ಆದರೆ ಈ ಬಾರಿ ಮಾತ್ರ ಎಲ್ಲಿ ನೋಡಿದರಲ್ಲಿ ಭೂ ಕುಸಿತದ ದೃಶ್ಯಗಳೇ ಕಾಣಸಿಗುತ್ತಿವೆ.

 • WESTERN GHATS

  Karnataka Districts20, Aug 2019, 4:41 PM IST

  ಪಶ್ಚಿಮ ಘಟ್ಟ ಉಳಿಸದಿದ್ದರೆ ನಾಡಿಗೆ ಅಪಾಯ ಕಟ್ಟಿಟ್ಟ ಬುತ್ತಿ

  ಪಶ್ಚಿಮ ಘಟ್ಟ ಅಪಾಯದ ಅಂಚಿನಲ್ಲಿ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವು ವಿಷಯ. ಆದರೆ, ಇದರ ಸಂರಕ್ಷಣೆಗೆ ತೆಗೆದುಕೊಂಡ ಕ್ರಮಗಳು ಮಾತ್ರ ಗೊತ್ತಾಗುತ್ತಿಲ್ಲ. ಹೀಗೇ ನಮ್ಮ ನಿಸರ್ಗವನ್ನು ನಿರ್ಲಕ್ಷಿಸಿದರೇ ಇಡೀ ಕರ್ನಾಟಕಕ್ಕೆ ಅಪಾಯ ಎನ್ನುತ್ತಿದ್ದಾರೆ ಪರಿಸರ ತಜ್ಞರು.

 • Western Ghats, Maharashtra, Goa, Karnataka, Tamil Nadu and Kerala: Older than the Himalayas, the Western Ghats are recognised as one of the world’s eight ‘hottest hotspots’ of biological diversity.

  Karnataka Districts15, Aug 2019, 2:49 PM IST

  ಶಿವಮೊಗ್ಗ: ಘಟ್ಟಪ್ರದೇಶದಲ್ಲಿ ತುಂತುರು ಮಳೆ ಆರಂಭ

  ಮಲೆನಾಡಿನಲ್ಲಿ ಬಿರುಸಿನ ಗಾಳಿ ಮಳೆ ಮಾಯವಾಗಿ ಈಗ ತುಂತುರು ಮಳೆ ಸುರಿಯುತ್ತಿದೆ. ಘಟ್ಟ ಪದೇಶಗಳಲ್ಲಿ ತುಂತುರು ಮಳೆಯಾಗುತ್ತಿದ್ದು, ಶಿವಮೊಗ್ಗ ಸೇರಿದಂತೆ ಬಯಲು ನಾಡಿನ ಪ್ರದೇಶಗಳಲ್ಲಿ ಮಳೆ ಇಲ್ಲ. ಘಟ್ಟ ಪ್ರದೇಶದಲ್ಲಿ ಮತ್ತೊಮ್ಮೆ ಜಿಟಿಜಿಟಿ ಮಳೆ ಆರಂಭವಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.

 • Karnataka floods 2019

  Karnataka Districts12, Aug 2019, 5:57 PM IST

  ಅಷ್ಟಕ್ಕೂ ಮಳೆ ನಕ್ಷೆ ನೋಡೋದು ಹೇಗೆ? ಮುಂದಿನ 3 ದಿನದ ವೆದರ್ ಅಪ್‌ಡೇಟ್ ಇಲ್ಲಿದೆ

  ಭೀಕರ ಮಳೆ, ಪ್ರವಾಹಕ್ಕೆ ಇಡೀ ರಾಜ್ಯವೇ ತಲ್ಲಣಗೊಂಡಿದೆ.  ಮಳೆ ಅಲ್ಲಿ ಇಷ್ಟಾಯಿತು? ಇಲ್ಲಿ ಇಷ್ಟೊಂದು ಹಾನಿ ಮಾಡಿತು .. ಎಂದೆಲ್ಲಾ ಸುದ್ದಿಗಳನ್ನು ಕೇಳುತ್ತ ಅರಗಿಸಿಕೊಳ್ಳುತ್ತಲೇ ಇದ್ದೇವೆ. ಆದರೆ ಪ್ರವಾಹದ ಸ್ಥಿತಿ ಮುಂದೇನು?  ಮಹಾರಾಷ್ಟ್ರದಿಂದ ಮತ್ತಷ್ಟು ನೀರು ಬಿಡುಗಡೆಯಾಗುವುದೋ? ಎಂಬೆಲ್ಲ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಇರುತ್ತೇವೆ ... ನಾಳೆ ಏನಾಗುತ್ತದೆ? ಉತ್ತರ ಬೇಕಲ್ಲ.

 • western ghats rivers mangalore

  Karnataka Districts12, Aug 2019, 5:08 PM IST

  ಪಶ್ಚಿಮ ಘಟ್ಟದಲ್ಲಿ ವ್ಯಾಪಕ ಭೂಕುಸಿತ: ನದಿಯಾಗಿ ಬದಲಾದ ತೊರೆಗಳು!

  ಪಶ್ಚಿಮ ಘಟ್ಟದಲ್ಲಿ ವ್ಯಾಪಕ ಭೂಕುಸಿತ ಬೆಳಕಿಗೆ| ಭಾರಿ ಪ್ರಮಾಣದಲ್ಲಿ ಕುಸಿದ ಗುಡ್ಡಗಳು| ತಪ್ಪಲಿನ ನಿವಾಸಿಗಳ ಸ್ಥಳಾಂತರ| ನದಿಯಾದಿ ಬದಲಾದ ತೊರೆಗಳು!

 • Karnataka Districts7, Aug 2019, 1:41 PM IST

  ಭಾರೀ ಮಳೆ: ಘಾಟಿಯಲ್ಲಿ10ಕ್ಕೂ ಹೆಚ್ಚು ಕಡೆ ಭೂ ಕುಸಿತ

  ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಘಾಟಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆ ಭೂ ಕುಸಿತಗಳಾಗಿವೆ. ಘಾಟಿಯ ಎರಡು ಹಾಗೂ ಮೂರನೇ ತಿರುವಿನ ನಡುವೆ ದೊಡ್ಡ ಪ್ರಮಾಣದ ಭೂಕುಸಿತವಾಗಿದ್ದು, ರಸ್ತೆಯ ಚರಂಡಿ ಸಂಪೂರ್ಣವಾಗಿ ಮುಚ್ಚಿಹೋಗಿದ್ದು ತಡೆಗೋಡೆಯ ಮೇಲೆ ನೀರು ಹರಿಯುತ್ತಿದ್ದು ಇಡೀ ರಸ್ತೆ ಹಾಗೂ ತಡೆಗೋಡೆ ಕುಸಿಯುವ ಅಪಾಯವಿದೆ.

 • Ballalarayanadurgs

  LIFESTYLE2, Aug 2019, 4:15 PM IST

  ಸುರಿವ ಮಳೆಯೂ, ಹಸಿರುಟ್ಟ ಕಾಡಿನ ಒಡಲೂ, ಬಲ್ಲಾಳರಾಯನ ದುರ್ಗವೆಂಬ ಅಚ್ಚರಿಯೂ!

  ಮಳೆಗಾಲದಲ್ಲಿ ಕೆಸರು ಹಾದಿಯಲ್ಲಿ ಕಾಲು ಜಾರುವ ಸಾಧ್ಯತೆ ಹೆಚ್ಚು. ಎಚ್ಚರಿಕೆಯಿಂದ ನಡೆಯಿರಿ/  ಹತ್ತುವ ಇಳಿಯುವ ದಣಿಯುವ ಹೊತ್ತಿಗೆ ರಭಸದ ಮಳೆ ಬಂದು ಆಯಾಸ ಕಳೆಯುತ್ತದೆ/ ಮಳೆಯಿಂದ ತಪ್ಪಿಸಿಕೊಂಡರೆ ನಿಮಗೇ ನಷ್ಟ/  ಕಾಡಿನಲ್ಲಿ ಕತ್ತಲಾಗುವುದು ಬೇಗ. ಹಾಗಾಗಿ ಸಂಜೆ ಐದರ ಹೊತ್ತಿಗೆ ಬೆಟ್ಟವಿಳಿದು ಕೆಳಗಿದ್ದರೆ ಒಳ್ಳೆಯದು/  ಖುಷಿಯಲ್ಲಿ ಚಾರಣ ಮಾಡಿ, ಆದರೆ ಪ್ಲಾಸ್ಟಿಕ್‌ ಪಿಶಾಚಿಯನ್ನು ಕಾಡಿಗೆ ಬಿಡಬೇಡಿ

 • Karnataka Districts1, Aug 2019, 3:04 PM IST

  ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಕುಂಠಿತ

  ಕಳೆದ ವಾರ ಚುರುಕುಗೊಂಡಿದ್ದ ಮಳೆ ಮತ್ತೊಮ್ಮೆ ಕುಂಠಿತವಾಗಿದೆ. ಮಲೆನಾಡಿನ ಯಾವ ತಾಲೂಕಿನಲ್ಲಿಯೂ ಉತ್ತಮ ಮಳೆ ಸುರಿದಿಲ್ಲ. ಬಿಸಿಲಿನ ನಡುವೆಯೇ ಒಂದಿಷ್ಟು ತುಂತುರು ಮಳೆಯಾಗಿದ್ದು, ಜಲಾಶಯದ ಒಳಹರಿವಿನಲ್ಲಿಯೂ ಇಳಿಕೆ ಕಂಡುಬಂದಿದೆ.

 • Netravati

  Karnataka Districts28, Jul 2019, 1:45 PM IST

  ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆ: ನೇತ್ರಾವತಿ ಹರಿವು ಹೆಚ್ಚಳ

  ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿಯು ಮೈದುಂಬಿ ಹರಿಯುತ್ತಿದೆ. ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ 5 ಮೀಟರ್ ಗಿಂತ ಹೆಚ್ಚಿನ ನೀರನ್ನು ಹೊರಬಿಡಲಾಯಿತು.

 • Western Ghats, Maharashtra, Goa, Karnataka, Tamil Nadu and Kerala: Older than the Himalayas, the Western Ghats are recognised as one of the world’s eight ‘hottest hotspots’ of biological diversity.

  Karnataka Districts25, Jul 2019, 8:50 AM IST

  ಘಟ್ಟಪ್ರದೇಶದಲ್ಲಿ ಮಳೆ; ಬಯಲಲ್ಲಿ ಮಾಯ

  ಮಲೆನಾಡಿನ ಘಟ್ಟಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಬಯಲು ನಾಡಿನಲ್ಲಿ ಮಳೆ ಮಾಯವಾಗಿದೆ. ಹೊಸನಗರ ತಾಲೂಕಿನಲ್ಲಿ ಸ್ವಲ್ಪ ಮಳೆಯಾಗಿದ್ದರೆ, ತೀರ್ಥಹಳ್ಳಿ ಮತ್ತು ಸಾಗರದಲ್ಲಿ ಕಡಿಮೆ ಮಳೆಯಾಗಿದೆ

 • Farmers pension sceme central govt announce

  Karnataka Districts13, Jul 2019, 1:51 PM IST

  ತರೀಕೆರೆ ತಾಲೂಕಲ್ಲಿ ಬೇಸಿಗೆಯಂಥ ಬಿಸಿಲು: ರೈತರು ಕಂಗಾಲು

  ತರೀಕೆರೆ ಪಟ್ಟಣದಲ್ಲಿ ಈ ಬಾರಿ ಮಳೆ ಸುರಿದಿಲ್ಲ. ತಾಲೂಕಿನ ಯಾವ ಪ್ರದೇಶದಲ್ಲೂ ಈ ಸಾರಿ ಕೆರೆ -ಕಟ್ಟೆಗಳಲ್ಲಿ, ಹಳ್ಳಕೊಳ್ಳಗಳಲ್ಲಿ, ಬಾವಿಗಳಲ್ಲಿ ಹೊಸ ನೀರು ಕಂಡುಬಂದಿಲ್ಲ. ಮಳೆಗಾಲವಾದರೂ ಇಡೀ ತರೀಕೆರೆ ತಾಲೂಕಿನಲ್ಲಿ ಇನ್ನೂ ಬೇಸಿಗೆಯ ವಾತಾವರಣವೇ ಇದೆ. ಬಿಸಿಲಿನ ಪ್ರಖರತೆ ಕಡಿಮೆಯಾಗಿಲ್ಲ.

 • NEWS4, Jul 2019, 10:51 AM IST

  ಪಶ್ಚಿಮ ಘಟ್ಟಪ್ರಾಧಿಕಾರ ರಚಿಸಲು ಕಾರ‍್ಯಪಡೆ ಸಲಹೆ

  ‘ಪಶ್ಚಿಮ ಘಟ್ಟಪ್ರದೇಶಾಭಿವೃದ್ಧಿ ಪ್ರಾಧಿಕಾರ’ ರಚಿಸಿ ಈ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

 • WESTERN GHATS

  NEWS21, Jun 2019, 8:15 AM IST

  ಪಶ್ಚಿಮ ಘಟ್ಟ ಅಭಿವೃದ್ಧಿ ಕಾರ‍್ಯಕ್ರಮಕ್ಕೆ ಇತಿಶ್ರೀ

  ರಾಜ್ಯದ 11 ಜಿಲ್ಲೆಗಳ 40 ತಾಲೂಕುಗಳಲ್ಲಿ ಹರಡಿರುವ ಪಶ್ಚಿಮ ಘಟ್ಟಪ್ರದೇಶದ ಅಭಿವೃದ್ಧಿ, ಅರಣ್ಯ ಸಂರಕ್ಷಣೆ ಹಾಗೂ ಅಲ್ಲಿ ವಾಸಿಸುವ ಜನರಿಗೆ ಸೌಲಭ್ಯ ನೀಡುವ ಉದ್ದೇಶದಿಂದ ಕಳೆದ ನಾಲ್ಕು ದಶಕಗಳಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅನುಷ್ಠಾನ ಮಾಡುತ್ತಿದ್ದ ‘ಪಶ್ಚಿಮ ಘಟ್ಟಅಭಿವೃದ್ಧಿ ಕಾರ್ಯಕ್ರಮ’ಕ್ಕೆ ಇತಿಶ್ರೀ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ.