Vegetable Market  

(Search results - 12)
 • Hassana
  Video Icon

  Coronavirus Karnataka31, Mar 2020, 4:29 PM

  ಹಾಸನದಲ್ಲಿ ಪ್ರತ್ಯೇಕ ಸ್ಥಳದಲ್ಲಿ ತರಕಾರಿ ಮಾರುಕಟ್ಟೆ; ಸಾಮಾಜಿಕ ಅಂತರ ಗೊತ್ತೇ ಇಲ್ಲ!

  ಜನ ಒಂದೇ ಕಡೆ ಸೇರುವುದನ್ನು ತಡೆಯಲು ಹಾಸನದಲ್ಲಿ ಪ್ರತ್ಯೇಕ ತರಕಾರಿ ಮಾರುಕಟ್ಟೆಯನ್ನು ಜಿಲ್ಲಾ ಕ್ರೀಡಾಂಗಣಕ್ಕೆ ಶಿಫ್ಟ್ ಮಾಡಲಾಗಿದ್ದು ಅಲ್ಲಿ ತರಕಾರಿ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾ ತರಕಾರಿ ಖರೀದಿಸಿ ಅಂದರೆ ಇದನ್ನು ಗಾಳಿಗೆ ತೂರಿ ಎಲ್ಲರೂ ಒಟ್ಟಾಗಿ ಖರೀದಿಗೆ ಮುಗಿ ಬಿದ್ದಿದ್ದಾರೆ. ಈ ಬಗ್ಗೆ ಅಲ್ಲಿಂದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ! 

 • BGK

  Coronavirus Karnataka26, Mar 2020, 11:20 AM

  ಕೊರೋನಾ ಮಧ್ಯೆಯೂ ಜನಕ್ಕೆ ಸಂತೆಯದ್ದೇ ಚಿಂತೆ: ಪೊಲೀಸರ ಲಾಠಿ ಏಟಿಗೆ ಕಾಲ್ಕಿತ್ತ ಮಂದಿ!

  ಬಾಗಲಕೋಟೆ(ಮಾ.26): ಮಹಾಮಾರಿ ಕೊರೋನಾ ವೈರಸ್‌ ದೇಶದಿಂದ ಕಿತ್ತೊಗೆಯಲು ಏಪ್ರಿಲ್ 14 ರವೆರೆ ಭಾರತ್ ಲಾಕ್‌ಡೌನ್ ಕರೆ ಕೊಟ್ಟಿದ್ದಾರೆ. ಆದರೆ, ಬಾಗಲಕೋಟೆ ಜನ ಮಾತ್ರ ಲಾಕ್‌ಡೌನ್‌ ಮಧ್ಯೆಯೂ ಸಂತೆ ಮಾಡಲು ಮುಂದಾಗಿದ್ದರು. ಹೀಗಾಗಿ ಪೊಲೀಸರು ಸಂತೆಗೆ ಬಂದಿದ್ದ ಮಂದಿಗೆ ಲಾಠ ಏಟಿನ ರುಚಿ ತೋರಿಸಿದ್ದಾರೆ. 

 • Bangalore vegetables road side

  Coronavirus Karnataka25, Mar 2020, 1:38 PM

  'ಮನೆ ಮನೆಗೆ ಬರುತ್ತೆ ತರಕಾರಿ: ನೀವು ಮಾತ್ರ ಹೊರಗೆ ಬರಬೇಡಿ'

  ನಗರದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಬಂದ್‌ ಮಾಡುವಂತೆ ನಗರಸಭೆ ಹಾಗೂ ಪೊಲೀಸ್‌ ಸಿಬ್ಬಂದಿ ವತ್ತಾಯಿಸಿ ಮಾರುಕಟ್ಟೆಯನ್ನು ಮುಚ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಈ ಮುಂಚೆ ನಮಗೆ ಸರಿಯಾದ ಮಾಹಿತಿ ನೀಡಿದ್ದರೆ ನಾವು ಸಾವಿರಾರು ರೂಪಾಯಿ ಖರ್ಚು ಮಾಡಿ ತರಕಾರಿಗಳನ್ನು ಕೊಳ್ಳುತ್ತಿರಲಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
   

 • Bandh

  Karnataka Districts14, Mar 2020, 3:26 PM

  ಕೊರೋನಾ ಎಮರ್ಜೆನ್ಸಿ: ಬಾಗಲಕೋಟೆಗೆ ತಟ್ಟದ ವೈರಸ್‌ ಕಾಟ!

  ಬಾಗಲಕೋಟೆ(ಮಾ.14): ರಾಜ್ಯಾದ್ಯಂತ ಕರ್ನಾಟಕ ಬಂದ್‌ನ ಬಿಸಿ ತಟ್ಟಿದೆ. ಆದರೆ, ಮುಳುಗಡೆ ನಗರಿ ಬಾಗಲಕೋಟೆಗೆ ಮಾತ್ರ ಇದರ ಪರಿಣಾಮ ಬೀರಿಲ್ಲ. ಹೌದು, ನಗರದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆದಿದೆ. ತರಕಾರಿ ಮಾರುಕಟ್ಟೆಯ ರಸ್ತೆ ಬದಿಯಲ್ಲಿ ಶನಿವಾರ ಸಂತೆ ಎಂದಿನಂತೆ ನಡೆದಿದೆ. ಸಂತೆಯಲ್ಲಿ ನೂರಾರು ಜನರು ಜಮಾಯಿಸಿದ್ದಾರೆ. 

 • undefined

  Bagalkot3, Nov 2019, 12:32 PM

  ಗಬ್ಬೆದ್ದು ನಾರುತ್ತಿರುವ ಜಮಖಂಡಿ ತರಕಾರಿ ಮಾರ್ಕೆಟ್!

  ಜಮಖಂಡಿ ರಾಜ ಮಹಾರಾಜರು ನಗರೀಕರಣಕ್ಕೆ ಹೆಚ್ಚಿನ ಅನುಕೂಲವಾಗಲೆಂದು ತರಕಾರಿ ಮಾರುಕಟ್ಟೆಗೆ ಪ್ರತ್ಯೇಕ ಕಟ್ಟಡ ನಿರ್ಮಿಸಿ ವ್ಯಾಪಾಸ್ಥರಿಗೆ ಸುವ್ಯವಸ್ಥೆ ಮಾಡಿಕೊಟ್ಟಿದ್ದರು. ಮುಂದೆ ಸಂಸ್ಥಾನಗಳು ಹೋಗಿ ರಾಜ್ಯ ಸರ್ಕಾರದ ಅಧೀನದಲ್ಲಿ ತರಕಾರಿ ಮಾರುಕಟ್ಟೆಗೆ ಯಾವುದೇ ಮೂಲಭೂತ ಸೌಲಭ್ಯ ನೀಡದ್ದಕ್ಕೆ ತರಕಾರಿ ವ್ಯಾಪಾರಸ್ಥರು ರಸ್ತೆ ಬದಿಗೆ ಬಂದು ತಮ್ಮ ವ್ಯಾಪಾರ ವಹಿವಾಟು ನಡೆಸಿದ್ದರಿಂದ ವಾಹನ, ಪಾದಚಾರಿಗಳ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗುತ್ತಿದೆ.
   

 • undefined

  Belagavi30, Oct 2019, 12:05 PM

  ಲೋಕಾಪುರದ ರೋಗಗ್ರಸ್ತ ಮಾರ್ಕೆಟ್‌ಗೆ ಬೇಕಿದೆ ಚಿಕಿತ್ಸೆ!

  ಅಭಿವೃದ್ಧಿ ಕಾಣದೆ ಪಟ್ಟಣದಲ್ಲಿರುವ ದಿನದ ಸಂತೆ ಅಕ್ಷರಶಃ ಕೆಸರಿನ ಗದ್ದೆ ಆಗಿದೆ. ಮಾರುಕಟ್ಟೆ ಅಸ್ವಚ್ಛತೆಯಿಂದ ಕೂಡಿರುವುದರಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರು ನಿತ್ಯ ರೋಗದ ಭಯದಲ್ಲೇ ವ್ಯಾಪಾರ ಮಾಡುವಂತಾಗಿದೆ.

 • market

  Bagalkot27, Oct 2019, 10:55 AM

  ಕುಡುಕರ ತಾಣವಾದ ಹುನಗುಂದದ ತರಕಾರಿ ಮಾರುಕಟ್ಟೆ!

  ಲಕ್ಷಾಂತರ ರುಪಾಯಿ ಖರ್ಚು ಮಾಡಿ ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ, ಇದಕ್ಕೆ ಸೂಕ್ತ ನಿರ್ವಹಣೆ ಮತ್ತು ರಕ್ಷಣೆ ಇಲ್ಲದ ಕಾರಣ ಈ ಮಾರುಕಟ್ಟೆ ಹಂದಿ ಹಾಗೂ ಮದ್ಯವ್ಯಸನಿಗಳಿಗೆ ತಾಣವಾಗಿ ರೂಪಗೊಂಡಿದೆ.
   

 • Policeman

  Gadag27, Oct 2019, 9:13 AM

  ಗಜೇಂದ್ರಗಡ: ಜೋಡು ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸರ ಹರಸಾಹಸ

  ಪಟ್ಟಣದ ಜೋಡು ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಪೊಲೀಸ್‌ ಅಧಿಕಾರಿಗಳು ರಸ್ತೆಯ ಇನ್ನೊಂದು ಬದಿ ಸ್ಥಳಾಂತರಿಸಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು. ಆದರೆ ಪಿಎಸ್‌ಐ ಗುರುಶಾಂತ ದಾಶ್ಯಾಳ ಹಾಗೂ ಸಿಬ್ಬಂದಿ ಮುಂದೆ ಹೋಗುತ್ತಿದ್ದಂತೆ ಮತ್ತೆ ಬೀದಿ ಬದಿ ವ್ಯಾಪಾರಸ್ಥರು ರಸ್ತೆಯಲ್ಲಿ ವ್ಯಾಪಾರ ಮುಂದುವರೆಸಿದ್ದು, ವಾಹನ ಸಂಚಾರ ಮತ್ತಷ್ಟು ದುಸ್ತರವಾಗಿದೆ.
   

 • undefined

  Bagalkot23, Oct 2019, 11:47 AM

  ಅಮೀನಗಡ: ಕೊಚ್ಚೆಯಲ್ಲೇ ತರಕಾರಿ ಖರೀದಿ: ಮರೀಚಿಕೆಯಾದ ಸ್ವಚ್ಛತೆ

  ಗ್ರಾಮ ಪಂಚಾಯತಿ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯತಿಯಾದರೂ ಸಂತೆ ಮಾರುಕಟ್ಟೆಗಿಲ್ಲ ನಿಗದಿತ ಸ್ಥಳ. ಇದರಿಂದಾಗಿ ಅತಂತ್ರ ಸ್ಥಿತಿಯಲ್ಲಿ ವ್ಯಾಪಾರಿಗಳು, ಗ್ರಾಹಕರಿಗಿಲ್ಲ ಶುದ್ಧ ಸ್ವಚ್ಛತೆಯ ತರಕಾರಿ, ವಾರಕ್ಕೊಮ್ಮೆ ನಡೆಯುವ ಸಂತೆಯಿಂದ ಹೆದ್ದಾರಿಯಲ್ಲಿ ನಡೆಯುವ ವಾಹನ ಸಂಚಾರ ದಟ್ಟಣೆಯಿಂದ ಪ್ರಯಾಣಿಕರು ಕೂಡ ಪರದಾಡುವಂತಾಗಿದೆ. ಇದು ಅಮೀನಗಡ ಪಟ್ಟಣ ಮಾರುಕಟ್ಟೆ ದುಸ್ಥಿತಿ.
   

 • undefined

  Bagalkot21, Oct 2019, 2:27 PM

  ಕೆಸರಿನ ಗದ್ದೆಯಾದ ಮುಧೋಳದ ತರಕಾರಿ ಮಾರುಕಟ್ಟೆ

  ಪಟ್ಟಣದ ಏಕೈಕ ರನ್ನ ತರಕಾರಿ ಮಾರುಕಟ್ಟೆಈಗ ಕೆಸರಿನ ಗದ್ದೆಯಾಗಿದೆ. ಔದ್ಯೋಗಿಕ ನಗರ ಎಂದೇ ಕರೆಯಿಸಿಕೊಳ್ಳುವ ಇಲ್ಲಿನ ರನ್ನ ತರಕಾರಿ ಮಾರುಕಟ್ಟೆಯ ಅವ್ಯವಸ್ಥೆ ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ.

 • market

  Bagalkot16, Oct 2019, 11:48 AM

  ತಿಪ್ಪೆಯಾಗಿ ಮಾರ್ಪಟ್ಟ ಇಳಕಲ್ಲ ತರಕಾರಿ ಮಾರುಕಟ್ಟೆ!

  ನಗರದ ಹೃದಯ ಭಾಗದಲ್ಲಿರುವ ಮಾರುಕಟ್ಟೆಗೆ ತೆರಳಿದರೆ ಕಸದ ರಾಶಿಯೇ ಮುಖ್ಯವಾಗಿ ಸ್ವಾಗತಿಸುತ್ತದೆ. ಇಲ್ಲಿ ಯಾರೇ ಹೊಸದಾಗಿ ಬಂದರೂ ಅಸಹ್ಯ ಹುಟ್ಟಿಸುವುದು ಗ್ಯಾರಂಟಿ. ಮೂಗು ಮುಚ್ಚಿಕೊಂಡೇ ಸಾಗಬೇಕು. ನಗರಸಭೆಯವರು ಜಾಗೃತಿ ಮೂಡಿಸಿ ಕಸ ಸಂಗ್ರಹ ಮಾಡುತ್ತಿದ್ದರೂ ಕಸದ ರಾಶಿ ಬೆಳೆಯುತ್ತಿರುವುದು ನಿಂತಿಲ್ಲ. ಹೀಗಾಗಿ ಗ್ರಾಹಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
   

 • undefined

  NEWS8, Jun 2019, 6:21 PM

  ಸಂಸ್ಕೃತ ಬಂದರಷ್ಟೇ ಸಂತೆಗೆ ಬನ್ನಿ: ತರಕಾರಿ ಹೆಸರು ತಿಳಿದು ತಿನ್ನಿ!

  ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ ನಿಶತ್'ಗಂಜ್ ತರಕಾರಿ ಮಾರುಕಟ್ಟೆಯಲ್ಲಿ ಎಲ್ಲಾ ತರಕಾರಿ ಹೆಸರುಗಳನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ. ಸಂಸ್ಕೃತ ಭಾಷೆಯ ಅಭಿವೃದ್ಧಿಗಾಗಿ ತರಕಾರಿ ಮಾರಾಟಗಾರರು ಎಲ್ಲಾ ತರಕಾರಿಗಳಿಗೆ ಸಂಸ್ಕೃತದ ಹೆಸರನ್ನಷ್ಟೇ ಇಟ್ಟಿದ್ದಾರೆ.