Tunga Bhadra Dam  

(Search results - 8)
  • <p>TB Dam in Ballari</p>
    Video Icon

    state19, Aug 2020, 10:44 AM

    ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ಹಂಪಿಯ ಕೆಲವು ಸ್ಮಾರಕಗಳು ಮುಳುಗಡೆ

    ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ.  ಹಂಪಿ ಸ್ಮಾರಕಗಳು ಮುಳುಗಡೆಯಾಗಿದೆ. ಕಂಪ್ಲಿ, ಗಂಗಾವತಿ ನಡುವಿನ ಸೇತುವೆ ಕೂಡಾ ಮುಳುಗಡೆಯಾಗಿದೆ. ವಿರೂಪಾಪುರಗಡ್ಡೆಗೆ ತೆರಳುವ ಬೋಟ್‌ಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಸುತ್ತಮುತ್ತಲ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ನದಿ ಪಾತ್ರಗಳಿಗೆ ಯಾರೂ ತೆರಳದಂತೆ ಪೊಲೀಸರನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. 

  • <p>TB Dam</p>

    Karnataka Districts10, Aug 2020, 1:15 PM

    ಹೊಸಪೇಟೆ: ತುಂಗಭದ್ರಾ ಡ್ಯಾಂಗೆ ಒಂದೇ ದಿನ 9 ಟಿಎಂಸಿ ನೀರು..!

    ಭಾನುವಾರ ಸಹ ಮತ್ತೆ ತುಂಗಭದ್ರಾ ಜಲಾಶಯಕ್ಕೆ 1,08915 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ ಇದುವರೆಗೂ 63.102 ಟಿಎಂಸಿ ನೀರು ಸಂಗ್ರಹವಾಗಿದೆ. ಶನಿವಾರ ಒಂದೇ ದಿನ ಸುಮಾರು 9 ಟಿಎಂಸಿ ಜಲಾಶಯಕ್ಕೆ ಹರಿದು ಬಂದಿದೆ.
     

  • <p>TB Dam</p>

    Karnataka Districts8, Aug 2020, 1:06 PM

    ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನ ಲಕ್ಷ ಕ್ಯುಸೆಕ್‌ ನೀರು..!

    ಮಲೆನಾಡಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನದಲ್ಲಿ ಒಂದು ಲಕ್ಷ ಕ್ಯುಸೆಕ್‌ಗಿಂತ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದಿರುತ್ತದೆ. ಇದು ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಹರಿದು ಬಂದಿರುವ ಅತ್ಯಧಿಕ ಪ್ರಮಾಣದ ನೀರು.
     

  • undefined

    Karnataka Districts28, Dec 2019, 8:02 AM

    ಕೊಪ್ಪಳ: ಎರಡನೇ ಬೆಳೆಗೆ ನೀರು ಬಿಡೋದು ಡೌಟ್‌, ರೈತರಲ್ಲಿ ಆತಂಕ

    ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಎರಡನೇ ಬೆಳೆಗೆ ನೀರು ದೊರೆಯಲಿದೆ ಎಂದು ಕನಸು ಕಂಡಿದ್ದ ರೈತರಿಗೆ ಜಲಾಶಯದಲ್ಲಿ ನೀರಿನ ಪ್ರಮಾಣ ನಿರೀಕ್ಷೆಯಷ್ಟು ಉಳಿಯದೆ ಇರುವುದು ಆತಂಕ ಮೂಡಿಸಿದೆ.
     

  • undefined

    Karnataka Districts30, Nov 2019, 10:04 AM

    ಕೊಪ್ಪಳ: ಆಂಧ್ರ, ತೆಲಂಗಾಣಕ್ಕಿಲ್ಲದ ನೀರಿನ ಗೋಳು, ರಾಜ್ಯಕ್ಕೆ ಏಕೆ?

    ಕಳೆದೈದು ವರ್ಷಗಳಿಂದ ತುಂಗಭದ್ರಾ ಜಲಾಶಯದ ರಾಜ್ಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ನೀರಿನ ಅಭಾವದಿಂದ ಎರಡನೇ ಬೆಳೆ ಬಂದಿಲ್ಲ. ಆದರೆ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ವ್ಯಾಪ್ತಿಯಲ್ಲಿ ಮಾತ್ರ ನೀರಿನ ಸಮಸ್ಯೆಯಾಗುತ್ತಲೇ ಇಲ್ಲ. ಪ್ರಸಕ್ತ ವರ್ಷ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರೂ ರಾಜ್ಯದ ರೈತರಿಗೆ ನೀರಿನ ಬವಣೆ ತಪ್ಪಿಲ್ಲ. ರಾಜ್ಯದಲ್ಲಿಯೇ ಜಲಾಶಯವಿದ್ದರೂ ಇಲ್ಲಿನ ರೈತರು ಎರಡನೇ ಬೆಳೆಗೆ ನೀರು ಪಡೆಯಲು ಪರದಾಡುವಂತೆ ಆಗಿದೆ.
     

  • laxman savadi

    Karnataka Districts22, Nov 2019, 9:02 AM

    ಹಿಂಗಾರು ಬೆಳೆಗೂ ನೀರು ನೀಡಲಾಗುವುದು: ಡಿಸಿಎಂ ಸವದಿ

    ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಹಾಗೂ ಜಲಾಶಯದಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹವಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಿಂಗಾರು ಬೆಳೆಗೆ ನೀರನ್ನು ಒದಗಿಸಲಾಗುತ್ತದೆ, ಈ ಕುರಿತು ಜನವರಿಯಲ್ಲಿ ಮತ್ತೊಂದು ಸಭೆ ನಡೆಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. 

  • ತುಂಗೆ ಮೈ ದುಂಬಿ ಹರಿಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯೊಂದಿಗಿನ ಸಂಪರ್ಕವೇ ಕಡಿತಗೊಂಡಿದೆ.

    Karnataka Districts21, Nov 2019, 9:01 AM

    ತುಂಗಭದ್ರಾ ಡ್ಯಾಂ ತುಂಬಿದ್ರೂ 2ನೇ ಬೆಳೆಗೆ ನೀರು ಅನಿಶ್ಚಿತ!

    ತುಂಗಭದ್ರಾ ಜಲಾಶಯ ಭರ್ತಿಯಾಗಿ ಈ ವರ್ಷ ಬರೋಬ್ಬರಿ 224 ಟಿಎಂಸಿ ನೀರು ನದಿ ಮೂಲಕ ಹರಿದು ಆಂಧ್ರ, ತೆಲಂಗಾಣ ಸೇರಿದೆ ! ಈಗಲೂ ಜಲಾಶಯ ತುಂಬಿ ತುಳುಕುತ್ತಿದ್ದರೂ ರಾಜ್ಯದ ಅಚ್ಚುಕಟ್ಟು ಪ್ರದೇಶಕ್ಕೆ 2ನೇ ಬೆಳೆಗೆ ನೀರು ಅನುಮಾನ ಎನ್ನಲಾಗುತ್ತಿದೆ. 
     

  • ತುಂಗೆ ಮೈ ದುಂಬಿ ಹರಿಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯೊಂದಿಗಿನ ಸಂಪರ್ಕವೇ ಕಡಿತಗೊಂಡಿದೆ.

    NEWS9, May 2019, 7:59 AM

    ತುಂಗಭದ್ರಾ ಡ್ಯಾಂಗೆ 2 ವರ್ಷದಿಂದ ಭದ್ರತೆಯೇ ಇಲ್ಲ

    ತುಂಗಭದ್ರಾ ಜಲಾಶಯವು ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ. ಬಳ್ಳಾರಿ ಜಿಲ್ಲೆಯ ಕಡೆ ಜಲಾಶಯದ ಭದ್ರತೆಯ ಹೊಣೆಯನ್ನು ತುಂಗಭದ್ರಾ ಮಂಡಳಿ ನಿರ್ವಹಿಸುತ್ತಿದ್ದು, ಇಲ್ಲಿ ಸೂಕ್ತವಾದ ಭದ್ರತೆಯನ್ನು ಒದಗಿಸಲಾಗಿದೆ. ಆದರೆ ಕೊಪ್ಪಳ ಕಡೆ ಇರುವ ಜಲಾಶಯದ ಭಾಗ ಮುನಿರಾಬಾದ್‌ನಲ್ಲಿ ಭದ್ರತೆಯಲ್ಲಿ ಭಾರಿ ಲೋಪ ಕಂಡು ಬಂದಿದೆ