Travel  

(Search results - 289)
 • Kichcha sudeep

  SPORTS23, Sep 2019, 6:03 PM IST

  ಸೌತ್ ಆಫ್ರಿಕಾ ತಂಡದ ಜೊತೆ ಕಿಚ್ಚನ ಪ್ರಯಾಣ; ಸರ್ಪ್ರೈಸ್ ನೀಡಿದ ಪೈಲ್ವಾನ!

  3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮಣಿಸಿದ ಸೌತ್ ಆಫ್ರಿಕಾ ಗೆಲುವಿನೊಂದಿಗೆ ತವರಿಗೆ ಮರಳಿದೆ. ಈ ವೇಳೆ ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ ಕೂಡ ಸೌತ್ ಆಫ್ರಿಕಾ ತಂಡದ ಜೊತೆ ಪ್ರಯಾಣ ಮಾಡಿ ಅಚ್ಚರಿ ನೀಡಿದ್ದಾರೆ. 

 • Hotels

  LIFESTYLE23, Sep 2019, 4:59 PM IST

  ಏರ್‌ಪೋರ್ಟ್‌ ಹೋಟೆಲಿಗೆ ಹೋಗೋ ಮುನ್ನ ಪರ್ಸ್‌ ನೋಡಿಕೊಳ್ಳಿ!

  ಏರ್‌ಪೋರ್ಟ್‌ಗಳು ನಗರದಲ್ಲಿನ ಮಾಲ್‌ಗಿಂತ ಏನು ಕಡಿಮೆ ಇಲ್ಲ. ಅಟ್‌ಲೀಸ್ಟ್‌ ಮಾಲ್‌ಗಳಾದರೂ ಬೇಕು ಏರ್‌ಪೋರ್ಟ್‌ ಬೇಡ. ಹೊಟ್ಟೆಗೆ ಬಿಟ್ಟುಕೊಳ್ಳಲು ಹೋಟೆಲ್‌ಗೇನಾದರೂ ಹೋದರೆ ಒಂದು ನಿಮ್ಮ ಪರ್ಸ್‌ನಲ್ಲಿ ದುಡ್ಡು ಇರಬೇಕು, ಇಲ್ಲ ಫ್ಲೈಟ್‌ನಲ್ಲಿ ಸಿಗುವ ಇನ್‌ಸ್ಟೆಂಟ್‌ ಫುಡ್‌ ತಿನ್ನಬೇಕು. ಅದೂ ಬೇಡ ಎಂದರೆ ಹಸಿದುಕೊಂಡು ಹಾಗೇ ಇರಬೇಕು. ವನ್‌ ಟು ತ್ರಿಬಲ್‌ ಬೆಲೆ ನಿಗದಿಸುವ ಈ ಏರ್‌ಪೋರ್ಟ್‌ಗಳಲ್ಲಿ ಅಂತಹ ವೈಶಿಷ್ಟ್ಯವೇನೂ ಇರೋದಿಲ್ಲ.

 • Khardung La

  LIFESTYLE22, Sep 2019, 3:21 PM IST

  ಖರ್ದುಂಗ್‌ ಲಾ ಪಾಸ್‌ಗೆ ಏಕಾಂಗಿ ಪ್ರಯಾಣ

  ಪ್ರವಾಸಿಗರ ಕಂಡು ಚಂಗನೆ ನೆಗೆದು ಮಾಯವಾಗುವ ಕಾಡು ಕುದುರೆಗಳು, ಮೈ ಕೊರೆಯುವ ಚಳಿ, ಸುತ್ತಲೂ ಹಿಮದ ಸೀರೆ ಹೊದ್ದು ಮಲಗಿರುವ ಶ್ವೇತವರ್ಣದ ಪರ್ವತ ಶ್ರೇಣಿಗಳು, ಕೆಳಗೆ ವಿಸ್ತಾರವಾಗಿ ಚಾಚಿಕೊಂಡಿರುವ ಕಣಿವೆಗಳು. ಇಲ್ಲಿ ಪ್ರಕೃತಿ ಸೃಜಿಸಿರುವ ಮಾಯಾಲೋಕ ಎಂತವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ನೀವೂ ಒಮ್ಮೆ ಖರ್ದುಂಗ್ ಲಾಗೆ ಹೋಗಿ ಬನ್ನಿ. 

 • Okinava

  LIFESTYLE22, Sep 2019, 11:48 AM IST

  ಬಂದೇ ಬಿಡ್ತು ದಸರಾ; ರಜೆ ಮಜಾ ಮಾಡಲು ಓಕಿನಾವಾಗೆ ಪ್ರವಾಸ ಹೋಗಲು ರೆಡಿಯಾಗಿ!

  ಒನ್ ಫೈನ್ ಮಾರ್ನಿಂಗ್ ಎದ್ದು ನೋಡಿದಾಗ ಒಂದು ವಾವ್ ಅನ್ನಿಸುವ ಜಾಗದಲ್ಲಿ ಇರಬೇಕು ಅನ್ನಿಸುವುದು ಸಹಜ ಆಸೆ. ಅದಕ್ಕೆ ತಕ್ಕಂತೆ ಅಕ್ಟೋಬರ್ ಸಮೀಪಿಸಿದೆ. ದಸರಾ ರಜೆ ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರವಾಸ ಹೋಗಬೇಕು ಎಂಬ ಆಲೋಚನೆ ಇರುವವರಿಗಾಗಿಯೇ ಈ ಸಂಚಿಕೆ ರೂಪಿಸಲಾಗಿದೆ.

 • govind karjol
  Video Icon

  NEWS21, Sep 2019, 11:54 AM IST

  ಕಾರ್ ಬಿಟ್ಟು ಸರ್ಕಾರಿ ಬಸ್ ಏರಿದ ಉಪಮುಖ್ಯಮಂತ್ರಿ!

  ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ನಿನ್ನೆ  ರಾತ್ರಿ ಇಳಕಲ್ ಪಟ್ಟಣದಲ್ಲಿ ಸರ್ಕಾರಿ ಬಸ್ ಏರಿ ರಾತ್ರಿಯೆಲ್ಲಾ ಪ್ರಯಾಣ ಮಾಡಿ ಇಂದು ಬೆಳಗ್ಗೆ ಮೆಜೆಸ್ಟಿಕ್ ಗೆ ಬಂದಿಳಿದರು.  ಅವರೊಂದಿಗೆ ಇಬ್ಬರು ಗನ್ ಮ್ಯಾನ್, ಓರ್ವ ಆಪ್ತಸಹಾಯಕ ಇದ್ದರು.  ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ವಿಮಾನ ಮೂಲಕ ಹುಬ್ಬಳ್ಳಿಗೆ ಹೋಗಿ ಗದಗ, ಕೊಪ್ಪಳ ಜಿಲ್ಲೆಯಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾತ್ರಿ ಅರ್ಜೆಂಟ್ ಬೆಂಗಳೂರಿಗೆ ತೆರಳಬೇಕಿದ್ದರಿಂದ ಸರ್ಕಾರಿ ಕಾರು ಬಿಟ್ಟು ಸರ್ಕಾರಿ ಬಸ್ ಏರಿ ಸರಳತೆ ಮೆರೆದರು.
   

 • Blowing Hotel Pools

  LIFESTYLE20, Sep 2019, 12:54 PM IST

  ಜಗತ್ತಿನ ಮೈ ನವಿರೇಳಿಸುವ ಹೋಟೆಲ್ ಪೂಲ್‌ಗಳಿವು!

  ಈ ಹೋಟೆಲ್ ಪೂಲ್‌ಗಳನ್ನು ನೋಡಿದರೆ ದೇವಲೋಕದಲ್ಲಿ ಅಪ್ಸರೆಯರು ಜಲಕ್ರೀಡೆಯಾಡುತ್ತಿದ್ದ ಜಲರಾಶಿ ಕೂಡಾ ಇದರ ಸಮಕ್ಕಿರಲಿಕ್ಕಿಲ್ಲ ಎನಿಸೀತು. ಇದರಲ್ಲಿರುವಷ್ಟು ಹೊತ್ತು ನೀವು ಖಂಡಿತಾ ಈ ಲೋಕದಲ್ಲಿರುವುದಿಲ್ಲ.

 • Karnataka Districts20, Sep 2019, 7:28 AM IST

  ಇನ್ಮುಂದೆ ಬಸ್ ನಲ್ಲಿ ಲೌಡ್‌ ಸ್ಪೀಕರ್‌ನಲ್ಲಿ ಹಾಡು ಕೇಳೋ ಹಾಗಿಲ್ಲ..!?

  ಬೆಂಗಳೂರಿನ ಬಿಎಂಟಿಸಿ ಬಸ್‌ಗಳಲ್ಲಿ ಬಸ್‌ಗಳಲ್ಲಿ ಮೊಬೈಲ್‌ನಲ್ಲಿ ಲೌಡ್‌ ಸ್ಪೀಕರ್‌ನಲ್ಲಿ ಹಾಡು ಕೇಳುವುದನ್ನು ಬಿಎಂಟಿಸಿ ನಿಷೇಧಿಸಿದೆ. ಹೀಗೆ ಬಸ್ ಗಳಲ್ಲಿ ಲೌಡ್‌ ಸ್ಪೀಕರ್‌ನಲ್ಲಿ ಹಾಡು ಕೇಳುವುದರಿಂದ ಶಬ್ದ ಮಾಲಿನ್ಯದ ಜೊತೆಗೆ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. 

 • safe city
  Video Icon

  lifestyle18, Sep 2019, 1:08 PM IST

  60 ದೇಶಗಳ ಟಾಪ್ 8 ಸೇಫ್ ಸಿಟಿಗಳಿವು!

  ವಿಶ್ವದ ನಗರಗಳ ವ್ಯಾಪ್ತಿ ಹಾಗೂ ಜನರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಭದ್ರತೆ, ಖಾಸಗೀತನ ಹಾಗೂ ಸಂಪರ್ಕ ಕಲ್ಪಿಸಿಕೊಡುವುದು ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.60 ನಗರಗಳಲ್ಲಿ ವೈಯಕ್ತಿಕ ಸುರಕ್ಷತೆಯ ಮಾನದಂಡವನ್ನು ಆಧರಿಸಿ ಎಕನಾಮಿಕ್‌ ಇಂಟೆಲಿಜೆನ್ಸ್‌ ಯುನಿಟ್‌ ವಿಶ್ವದ ಸುರಕ್ಷಿತ ನಗರಗಳ ಸಮೀಕ್ಷೆ ನಡೆಸಿದೆ. 5 ಖಂಡಗಳ ಸುಮಾರು 60 ದೇಶಗಳ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿ ಹೀಗಿದೆ...

 • Mumbai

  BUSINESS15, Sep 2019, 11:09 AM IST

  ಇಲ್ಲಿ ಮನೆ ತಗೋಬೇಕಂದ್ರೆ ಚದರ ಅಡಿಗೆ 56,000 ರೂ ಕೊಡ್ಬೇಕು!

  ಬೆಂಗಳೂರಿನಲ್ಲಿ ಚದರ ಅಡಿಗೆ 4, 5 ಸಾವಿರ ಎಂದರೇ ಊರಿನ ಮಂದಿ ಬಾಯಿ ಬಾಯಿ ಬಿಡುತ್ತಾರೆ. ಇಲ್ಲಿ ಮನೆ ಮಾಡೋಕೆ ಜೀವನಪೂರ್ತಿ ದುಡೀಬೇಕು ಅಂತ ಹಲವರು ಗೋಳಾಡುತ್ತಾರೆ. ಅಂಥದರಲ್ಲಿ ಮುಂಬಯಿಯ ಈ ಪ್ರದೇಶದಲ್ಲಿ ಚದರ ಅಡಿಗೆ 56,200 ರೂ. ಕೊಟ್ಟು ಮನೆ ಖರೀದಿಸೋ ಪುಣ್ಯಾತ್ಮರು ಯಾರೋ?  

 • belgaum amboli falls

  LIFESTYLE15, Sep 2019, 9:46 AM IST

  ಮಳೆ, ಮಂಜು, ಹಸಿರು ಮತ್ತು ಜಲಲ ಜಲಧಾರೆ!

  ನಿರಂತರ ಧಾರಾಕಾರ ಮಳೆ, ಮೈಮೇಲೊಂದು ಬೆಚ್ಚಗಿನ ರೈನ್‌ಕೋಟು ಮತ್ತು ಮಳೆಯಲ್ಲಿ ನೆನೆಯುವ ಹುಮ್ಮಸ್ಸು, ಒಂದು ಕ್ಯಾಮೆರಾ ಇದ್ದರೆ ಸಾಕು. ಬೆಳಗಾವಿ ಸಮೀಪದ ಅಂಬೋಲಿ ಘಾಟ್‌ ರಸ್ತೆಯ ಜಲಧಾರೆಗಳಲ್ಲಿ ನೆನೆದು ಬರಲು. ಹಸಿರ ಬೆಟ್ಟವನ್ನು ಸೀಳಿದ ರಸ್ತೆ, ಮಳೆಯ ನಿನಾದ ಮತ್ತು ಆಗಾಗ ಕವಿದು ಹುಚ್ಚು ಹಿಡಿಸುವ ತುಂಟ ಮಂಜಿನ ಸವಿಯಲ್ಲಿ ಮರೆಯಾಗಲು ನೀವಷ್ಟುದೂರ ಹೋಗಲೇಬೇಕು.

 • India that can give you nightmares

  LIFESTYLE14, Sep 2019, 12:38 PM IST

  ಡಾರ್ಕ್ ಟೂರಿಸಂ; ಕ್ರೂರವಾದ ಕಣ್ಣೀರ ಕಥೆ ಹೇಳುವ ತಾಣಗಳಿವು

  ಕ್ರೂರತೆಯ, ದುರಂತಗಳ, ಸಾವುನೋವಿನ ಕತೆ ಹೇಳುವ ತಾಣಗಳು ಭಾರತದಲ್ಲಿ ಹಲವಿವೆ. ಇವುಗಳನ್ನೇ ಗುರಿಯಾಗಿಸಿಕೊಂಡು ಪ್ರವಾಸ ಮಾಡುವುದೇ ಡಾರ್ಕ್ ಟೂರಿಸಂ. 

 • Travel tips that will ensure you have a relaxing holiday

  LIFESTYLE13, Sep 2019, 2:20 PM IST

  ಸುಖ ಪ್ರಯಾಣಕ್ಕೆ ಸಪ್ತ ಸೂತ್ರಗಳು!

  ಫಾರಿನ್ ಟೂರ್ ಎಂದರೆ ಬುಕ್ ಆದಾಗಿನಿಂದಲೇ ನಾವು ಉತ್ಸಾಹದಲ್ಲಿ ಮಿಂದೇಳುತ್ತೇವೆ. ಆದರೆ, ನಮ್ಮ ಈ ಉತ್ಸಾಹ ಟ್ರಾವೆಲ್ ಹೋದ ಮೇಲೆ ಪುಸ್ ಎನ್ನಬಾರದಲ್ಲ... ಇದಕ್ಕಾಗಿ ಕೆಲವೊಂದು ತಯಾರಿಗಳು, ಮುನ್ನೆಚ್ಚರಿಕೆ ಅಗತ್ಯ. 

 • city squares

  LIFESTYLE11, Sep 2019, 5:20 PM IST

  ಮೋದಿ ಭಾಷಣ ಮಾಡಿದ ಮ್ಯಾಡಿಸನ್ ಸ್ಕ್ವೇರ್ ಗೊತ್ತು, ಉಳಿದವು?

  ಕೆಲವು ಚೌಕಗಳು ಆ ನಗರದ ಹೃದಯ ಭಾಗ. ಅಲ್ಲಿ ಸದಾ ಒಂದಿಲ್ಲೊಂದು ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಅಲ್ಲಿನ ಕಟ್ಟಡಗಳು, ರಸ್ತೆಗಳು, ಮರಗಳು ಎಲ್ಲಕ್ಕೂ ಹೇಳಲು ಸಾಕಷ್ಟು ಕತೆಗಳಿರುತ್ತವೆ. ಹಲವಾರು ಕೋಲಾಹಲಗಳು, ಮನರಂಜನೆಗಳು, ನಗರದ ತಲ್ಲಣತವಕಗಳಿಗೆ ಅವು ಸಾಕ್ಷಿಯಾಗಿರುತ್ತವೆ. ಇಂಥ ಕೆಲವೊಂದು ಕಾರಣಗಳಿಂದ ಅವು ವಿಶ್ವಪ್ರಸಿದ್ಧವಾಗಿರುವುದೂ ಇದೆ. 

 • Karnataka

  NEWS11, Sep 2019, 7:48 AM IST

  ರಾಜ್ಯದ 20 ಪ್ರವಾಸಿ ಸ್ಥಳಗಳು ಶೀಘ್ರ ವಿಶ್ವದರ್ಜೆಗೆ!

  ಹಂಪಿ, ಬಾದಾಮಿ, ಮೈಸೂರು, ವಿಜಯಪುರ ವಿಶ್ವದರ್ಜೆಗೆ| ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ ಅಭಿವೃದ್ಧಿಗೆ 25 ಕೋಟಿ ರು. ಅನುದಾನ| ಹಂಪಿ, ಮೈಸೂರು ವೀಕ್ಷಣೆಗೆ ಲಂಡನ್‌ ಮಾದರಿ 6 ಡಬಲ್‌ ಡೆಕ್ಕರ್‌ ತೆರೆದ ಬಸ್‌| 600 ಸ್ಮಾರಕ ರಕ್ಷಣೆಗೆ ಕ್ರಮ

 • Places to visit in Bangalore

  LIFESTYLE10, Sep 2019, 3:48 PM IST

  ವೀಕೆಂಡ್ ಬಂದ್ರೆ ಎಲ್ ಹೋಗ್ಬೇಕು ಅಂತ ಯೋಚಿಸೋರಿಗಿದು!

  ಬೆಂಗಳೂರು ಕೇವಲ ಐಟಿಬಿಟಿ, ಬಿಸಿನೆಸ್‌ಗೆ ಸೀಮಿತವಲ್ಲ. ಇಲ್ಲಿ ನೋಡುವಂಥ ಹಲವಾರು ತಾಣಗಳಿವೆ. ಫ್ಯಾಂಟಸಿ ಪಾರ್ಕ್‌ಗಳಿವೆ, ರಾಯಲ್ ಕಟ್ಟಡಗಳಿವೆ, ದೊಡ್ಡ ದೊಡ್ಡ ಉದ್ಯಾನವನಗಳಿವೆ, ಮ್ಯೂಸಿಯಂಗಳಿವೆ... ಇಂಥ 50ಕ್ಕೂ ಹೆಚ್ಚು ತಾಣಗಳಿವೆ. ಆದ್ರೂ ವೀಕೆಂಡ್ ಬಂದ್ರೆ ಎಲ್ಲಿ ಹೋಗೋದು ಅಂಥ ಯೋಚಿಸ್ತೀರಲ್ಲಾ ಸ್ವಾಮಿ..