Tourists  

(Search results - 61)
 • Golden

  Karnataka Districts15, Mar 2020, 12:06 PM IST

  ಗೋಲ್ಡನ್‌ ಟೆಂಪಲ್‌ಗೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ

  ಬೈಲುಕುಪ್ಪೆಯಲ್ಲಿರುವ ಗೋಲ್ಡನ್‌ ಟೆಂಪಲ್ ಪ್ರವಾಸಿ ಸ್ಥಳಕ್ಕೆ ಆಗಮಿಸುವ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರುವಂತೆ ಟಿಬೆಟಿಯನ್‌ ಸೆಟಲ್ಮೆಂಟ್‌ ಅಧಿಕಾರಿಗಳಿಗೆ ತಹಸೀಲಾರ್‌ ಶ್ವೇತಾ ಎನ್‌. ರವೀಂದ್ರ ಆದೇಶಿಸಿದ್ದಾರೆ.

 • undefined

  Karnataka Districts14, Mar 2020, 4:09 PM IST

  ಪ್ರವೇಶ ನಿರ್ಬಂಧ: ಖಾಲಿ ಹೊಡೆಯುತ್ತಿದೆ ನಂದಿ ಹಿಲ್ಸ್..!

  ನಂದಿ ಹಿಲ್ಸ್‌ನ ಸೌಂದರ್ಯದ ಬಗ್ಗೆ ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಅದ್ಭುತ ಸೌಂದರ್ಯ ರಾಶಿ ಇರುವ ನಂದಿ ಹಿಲ್ಸ್‌ಗೆ ಜನ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಕೊರೋನಾ ವೈರಸ್ ಭೀತಿಯಿಂದ ನಂದಿ ಹಿಲ್ಸ್‌ ಭಣಗುಟ್ಟುತ್ತಿದೆ. ಇಲ್ಲಿವೆ ಫೋಟೋಸ್

 • Coorg

  Karnataka Districts12, Mar 2020, 11:38 AM IST

  ಪ್ರವಾಸಿಗಳಿಗೆ ಸೂಚನೆ: ಕೊರೋನಾ ಹಿನ್ನೆಲೆ ಈ ಪ್ರದೇಶಕ್ಕೆ ಭೇಟಿ ಬೇಡ

  ಕೊರೋನಾ ಆತಂಕ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾದ್ಯಂತ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಪ್ರವಾಸಿಗರ ಮೇಲೆ ನಿಗಾ ಇಟ್ಟಿದೆ. ಸದ್ಯಕ್ಕೆ ಪ್ರವಾಸ ಮುಂದೂಡುವುದು ಒಳಿತು. ಸಾರ್ವಜನಿಕ ಹಿತದೃಷ್ಟಿಯಿಂದ ಪ್ರವಾಸ ಮುಂದೂಡಿ ಎಂದು ಪ್ರವಾಸಿಗರಿಗೆ ಮಾಧ್ಯಮಗಳ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ​ಕಾರಿ ಡಾ. ಮೋಹನ್‌ ಮನವಿ ಮಾಡಿದ್ದಾರೆ.

 • Hampi

  Karnataka Districts11, Mar 2020, 1:32 PM IST

  ಐತಿಹಾಸಿಕ ಹಂಪಿಯಲ್ಲಿ ವಿದೇಶಿ ಪ್ರವಾಸಿಗರ ರಂಗಿನಾಟದ ಫೋಟೋಸ್

  ಹೊಸಪೇಟೆ(ಮಾ.11): ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ವಿದೇಶಿ ಪ್ರವಾಸಿಗರು ಸ್ಥಳೀಯರ ಜತೆ ಹೋಳಿ ಆಚರಿಸಿದ್ದಾರೆ. ಆತ್ಮೀಯತೆಯಿಂದ ಬೆರೆತು ಹಲಗೆ ವಾದನಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ. ಸೋಮವಾರ ರಾತ್ರಿ ರತಿ-ಕಾಮಣ್ಣರನ್ನು ಕೂರಿಸಿದ ಸ್ಥಳದಲ್ಲಿ ನಡೆಯುವ ಕಾಮದಹನ ಕಾರ್ಯಕ್ರಮದಲ್ಲಿ ಸ್ಥಳೀಯರ ಜತೆ ವಿದೇಶಿಗರೂ ಪಾಲ್ಗೊಂಡಿದ್ದರು. 

 • undefined

  Karnataka Districts11, Mar 2020, 8:59 AM IST

  ಹಂಪಿಯಲ್ಲಿ ರಂಗಿನಾಟ: ಹಲಗೆ ನಾದಕ್ಕೆ ಹುಚ್ಚೆದ್ದು ಕುಣಿದ ವಿದೇಶಿಗರು!

  ವಿದೇಶಿ ಪ್ರವಾಸಿಗರು ಹಂಪಿಯಲ್ಲಿ ಸ್ಥಳೀಯರ ಜತೆ ಮಂಗಳವಾರ ಹೋಳಿ ಆಚರಿಸಿದರು. ಆತ್ಮೀಯತೆಯಿಂದ ಬೆರೆತು ಹಲಗೆ ವಾದನಕ್ಕೆ ಹೆಜ್ಜೆ ಹಾಕಿದರು.
   

 • Hampi

  Karnataka Districts5, Mar 2020, 7:34 AM IST

  ಕೊರೋನಾ ಭೀತಿ: ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಮುಖ!

  ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಹಂಪಿ, ಬಾದಾಮಿ, ಪಟ್ಟದಕಲ್ಲು ಸೇರಿದಂತೆ ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದರಲ್ಲೂ ವಿದೇಶಿ ಪ್ರವಾಸಿಗರು ಕಡಿಮೆಯಾಗಿದ್ದಾರೆ.
   

 • bamboo bottle

  Travel4, Mar 2020, 1:47 PM IST

  ಪ್ಲ್ಯಾಸ್ಟಿಕ್‌ಗೆ ಬದಲಿ ಪರಿಸರ ಸ್ನೇಹಿ ಬಿದಿರಿನ ಬಾಟಲ್ ತಂದ ಸಿಕ್ಕಿಂ

  ಸಿಕ್ಕಿಂ ಎಂಬ ಸೌಂದರ್ಯ ಕಿರೀಟದ ಮುಕುಟ ಮಣಿಯಂತಿರುವ ಇಲ್ಲಿನ ಲ್ಯಾಚೆನ್ ಪಟ್ಟಣ- ಪ್ರವಾಸಿಗರಿಗಾಗಿ ಬಿದಿರಿನ ಬಾಟಲ್‌ಗಳನ್ನು ನೀಡಲು ಸಜ್ಜಾಗಿದೆ. ಪ್ಲ್ಯಾಸ್ಟಿಕ್ ಬಾಟಲ್‌ಗಳಿಗೆ ಫುಲ್‌ಸ್ಟಾಪ್ ನೀಡುವ ನಿಟ್ಟಿನಲ್ಲಿ ಬಿದಿರಿನ ಮೊರೆ ಹೊಕ್ಕಿದೆ ಲ್ಯಾಚೆನ್

 • coronavirus mask

  Karnataka Districts3, Mar 2020, 2:58 PM IST

  ಮೈಸೂರು ಅರಮನೆಯಲ್ಲೂ ಕೊರೋನಾ ವೈರಸ್ ಭೀತಿ..!

  ಬೆಂಗಳೂರಲ್ಲಿ ಕೊರೋನಾ ವೈರಸ್ ಬಗ್ಗೆ ಆತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ ಇದೀಗ ಮೈಸೂರಿನಲ್ಲೂ ಭೀತಿ ಶುರುವಾಗಿದೆ. ಪ್ರಮುಖ ಪ್ರವಾಸಿ ಸ್ಥಳವಾದ ಮೈಸೂರಿನಲ್ಲಿ ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಕೊರೋನಾ ಆತಂಕ ಎದುರಾಗಿದೆ.

 • Indian Wedding Marriage

  relationship23, Feb 2020, 2:43 PM IST

  ಆನ್‍ಲೈನ್‍ನಲ್ಲಿ ಮದುವೆ ಟಿಕೆಟ್ ಸೇಲ್ ಮಾಡಿ, ವಿದೇಶಿ ಅತಿಥಿಗಳನ್ನು ವಿವಾಹಕ್ಕೆ ಆಹ್ವಾನಿಸಿ

  ಭಾರತದಲ್ಲಿ ನಡೆಯುವಷ್ಟು ವಿಭಿನ್ನ ಸಾಂಪ್ರದಾಯಿಕ ವಿವಾಹಗಳು ಜಗತ್ತಿನ ಬೇರೆ ಯಾವುದೇ ರಾಷ್ಟ್ರದಲ್ಲೂ ಕಾಣಸಿಗುವುದಿಲ್ಲ. ಭಾರತದ ಸಂಸ್ಕತಿಯನ್ನು ಬಿಂಬಿಸುವ ಇಂಥ ವಿವಾಹಗಳಲ್ಲಿ ಪಾಲ್ಗೊಳ್ಳಲು ವಿದೇಶಿಗರು ತುದಿಗಾಲಿನಲ್ಲಿರುತ್ತಾರೆ. ಅಂಥವರಿಗೆ ನಿಮ್ಮ ಮದುವೆ ಟಿಕೆಟ್‍ಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಬಹುದು.

 • Nisargadhama

  Karnataka Districts16, Feb 2020, 11:35 AM IST

  ಕಾವೇರಿ ನಿಸರ್ಗಧಾಮದಲ್ಲಿ 2 ಹೊಸ ಕಾಟೇಜ್..!

  ಜಿಲ್ಲೆಯ ಹಲವು ಪ್ರವಾಸಿ ತಾಣಗಳು ಅಭಿವೃದ್ಧಿ ಕಾಣುತ್ತಿದ್ದು, ಕುಶಾಲನಗರ ಸಮೀಪದ ಪ್ರವಾಸಿ ತಾಣ ಕಾವೇರಿ ನಿಸರ್ಗಧಾಮದಲ್ಲಿ ಅರಣ್ಯ ಇಲಾಖೆಯಿಂದ ಎರಡು ಹೊಸ ಕಾಟೇಜ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಸದ್ಯದಲ್ಲೇ ಪ್ರವಾಸಿಗರಿಗೆ ಮುಕ್ತವಾಗಲಿದೆ.

 • undefined

  Karnataka Districts8, Feb 2020, 1:06 PM IST

  ‘ಕೊರೋನಾಗಿಂತ ಕೇರಳ ಪ್ರವಾಸಿಗರ ಮೇಲೆ ಹೆಚ್ಚಿದೆ ಅನುಮಾನ’

  ಕೇರಳದಿಂದ ಸಾಕಷ್ಟು ಸಂಖ್ಯೆಯಲ್ಲಿ ಚಿಕ್ಕಮಗಳೂರಿಗೆ ಪ್ರವಾಸಿಗರು ಆಗಮಿಸುತ್ತಿದ್ದು, ಕೊರೋನಾಗಿಂತ ಇವರ ಮೇಲೆ ಅನುಮಾನ  ವ್ಯಕ್ತವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

 • Cruise

  Karnataka Districts5, Feb 2020, 10:12 AM IST

  ಮಂಗಳೂರು ಬಂದರಿನಲ್ಲಿ ಕಟ್ಟೆಚ್ಚರ: ಮೂವರು ಚೀನೀಯರ ಆಗಮನ

  ನವ ಮಂಗಳೂರು ಬಂದರಿನಲ್ಲೂ ಇದೀಗ ಕೊರೋನಾ ಕಟ್ಟೆಚ್ಚರ ವಹಿಸಲಾಗಿದೆ. ಪ್ರವಾಸಿ ಹಡಗು ಮಂಗಳವಾರ ಎನ್‌ಎಂಪಿಟಿಗೆ ಬಂದಿಳಿದಿದ್ದು, 1800 ಪ್ರವಾಸಿಗರು ಹಾಗೂ 786 ಸಿಬ್ಬಂದಿ ಇದ್ದರು. ಅವರನ್ನು ತಪಾಸಣೆಗೆ ಒಳಪಡಿಸಿದ ಬಳಿಕವೇ ನಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ವಿದೇಶಿ ಪ್ರವಾಸಿಗರಲ್ಲಿ ಮೂವರು ಚೀನೀಯರು ಇದ್ದರು. ಅವರನ್ನು ಹಡಗಿನಿಂದ ಇಳಿಯಲು ಅವಕಾಶ ನೀಡಿಲ್ಲ. ಹಡಗಿನ ಆಸ್ಪತ್ರೆಯಲ್ಲಿ ಅವರನ್ನು ಇರಿಸಲಾಗಿದೆ.

   

 • Chikkamagaluru

  Karnataka Districts30, Jan 2020, 2:04 PM IST

  ಕಾಫಿನಾಡಿಗೆ ಭಾರಿ ಡಿಮ್ಯಾಂಡ್ : ಹೆಚ್ಚುತ್ತಿರುವ ಪ್ರವಾಸಿಗರು

  ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಗರಿಗೆದರಿದೆ. ಹೆಚ್ಚಿನ ಸಂಖ್ಯೆ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. 

 • India

  India26, Jan 2020, 10:15 AM IST

  ಪ್ರವಾಸ ಮಾಡುವವರಿಗೆ ಕೇಂದ್ರದಿಂದ ಬೋನಸ್‌!

  ಪ್ರವಾಸ ಮಾಡುವವರಿಗೆ ಕೇಂದ್ರದಿಂದ ಬೋನಸ್‌!| ವರ್ಷಕ್ಕೆ 15 ಪ್ರವಾಸಿ ತಾಣಗಳಿಗೆ ಭೇಟಿ ನೀಡಿ| ವಿಶೇಷ ಭತ್ಯೆ ಪಡೆಯಿರಿ: ಸರ್ಕಾರದ ಆಫರ್‌

 • Mutt

  Karnataka Districts24, Jan 2020, 10:33 AM IST

  ಸಿದ್ಧಗಂಗಾ ಮಠಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ

  ಸಿದ್ಧಗಂಗಾ ಮಠಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಬಳಿಕ 10 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದರು. ಬಳಿಕ ಶಿವೈಕ್ಯ ಶ್ರೀಗಳ ಗದ್ದುಗೆ ನಿರ್ಮಾಣವಾದ ಮೇಲೆ ಅದರ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.