Tokyo 2020  

(Search results - 111)
 • Tokyo 2020 PR Sreejesh to Savita Punia Many Indian Hockey Stars Nominated for FIH awards kvn

  HockeyAug 24, 2021, 12:42 PM IST

  ಟೋಕಿಯೋ 2020: ಹರ್ಮನ್‌ಪ್ರೀತ್, ಶ್ರೀಜೇಶ್‌ಗೆ ವಿಶ್ವ ಹಾಕಿ ವಾರ್ಷಿಕ ಪ್ರಶಸ್ತಿ?

  ಪಿ.ಆರ್‌.ಶ್ರಿಜೇಶ್‌ ಹಾಗೂ ಸವಿತಾ ಪೂನಿಯಾರನ್ನು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ತಂಡದ ವರ್ಷದ ಗೋಲ್‌ಕೀಪರ್‌ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಪುರುಷರ ತಂಡದ ಕೋಚ್‌ ಗ್ರಹಂ ರೀಡ್‌, ಮಹಿಳಾ ತಂಡದ ಮಾಜಿ ಕೋಚ್‌ ಸೋರ್ಡ್‌ ಮರಿನೆ ಹೆಸರು ವರ್ಷದ ಕೋಚ್‌ ಪ್ರಶಸ್ತಿಗೆ, ಮಹಿಳಾ ತಂಡದ ಆಟಗಾರ್ತಿ ಶರ್ಮಿಲಾ ದೇವಿ ಹೆಸರು ಉದಯೋನ್ಮುಖ ತಾರೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
   

 • Tokyo 2020 Punjab renames 10 government schools after Olympics India hockey Players kvn

  HockeyAug 23, 2021, 3:58 PM IST

  ಟೋಕಿಯೋ 2020: ಪಂಜಾಬಿನ 10 ಸರ್ಕಾರಿ ಶಾಲೆಗಳಿಗೆ ಹಾಕಿ ಆಟಗಾರರ ಹೆಸರು..!

  1980ರ ಬಳಿಕ ಅಂದರೆ ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಸಾಧನೆ ಮಾಡಿತ್ತು. ಒಲಿಂಪಿಕ್ಸ್‌ನಲ್ಲಿ 8 ಚಿನ್ನದ ಪದಕಗಳನ್ನು ಜಯಿಸಿದ ಸಾಧನೆ ಮಾಡಿದ್ದ ಭಾರತೀಯ ಹಾಕಿ ತಂಡವು ಕಳೆದ 4 ದಶಕಗಳಿಂದ ಪದಕ ಗೆಲ್ಲಲು ವಿಫಲವಾಗಿತ್ತು.

 • Odisha CM Naveen Patnaik Announces to another 10 years sponsor Indian hockey teams kvn

  HockeyAug 19, 2021, 10:51 AM IST

  ಭಾರತ ಹಾಕಿಗೆ ಇನ್ನೂ 10 ವರ್ಷ ಒಡಿಶಾ ಸರ್ಕಾರ ಪ್ರಾಯೋಜಕತ್ವ

  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಹಾಕಿ ಆಟಗಾರರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ತಲಾ 10 ಲಕ್ಷ ರು. ಬಹುಮಾನ ನೀಡಿದ ಅವರು, ಸಹಾಯಕ ಸಿಬ್ಬಂದಿಗೂ ತಲಾ 5 ಲಕ್ಷ ರುಪಾಯಿ ನೀಡುವುದಾಗಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಘೋಷಿಸಿದರು.

 • Tokyo 2020 PR Sreejesh Happy After Dhyan Chand Khel Ratna Award by PM Modi kvn
  Video Icon

  OTHER SPORTSAug 17, 2021, 6:00 PM IST

  ಖೇಲ್ ರತ್ನ ಪ್ರಶಸ್ತಿಗೆ ಧ್ಯಾನ್‌ ಚಂದ್ ಹೆಸರಿಟ್ಟಿರುವುದು ಖುಷಿಕೊಟ್ಟಿದೆ: ಶ್ರೀಜೇಶ್

  ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಜತೆ ಮುಕ್ತವಾಗಿ, ಆಪ್ತವಾಗಿ ಮಾತನಾಡಿದರು. ಇಡೀ ದೇಶವೇ ನಿಮ್ಮ ಸಾಧನೆಯನ್ನು ಹೆಮ್ಮೆಪಡುತ್ತಿದೆ ಎಂದಾಗ ನಮಗೆಲ್ಲರಿಗೂ ಖುಷಿಯಾಯಿತು ಎಂದು ಶ್ರೀಜೇಶ್ ಹೇಳಿದ್ದಾರೆ. ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಸಾಧನೆ ಮಾಡಿದೆ.
   

 • Tokyo 2020 Injury to Olympic Gold Medal Neeraj Chopra Shares message about his Epic Journey kvn

  OTHER SPORTSAug 16, 2021, 5:08 PM IST

  ಗಾಯದಿಂದ ಹಿಡಿದು ಚಿನ್ನ ಗೆಲ್ಲುವವರೆಗೂ ನೆರವಾದವರನ್ನು ಸ್ಮರಿಸಿದ ನೀರಜ್ ಚೋಪ್ರಾ

  ಶತಮಾನಗಳ ಬಳಿಕ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್‌ ಪದಕ ಗೆದ್ದ ನೀರಜ್ ಚೋಪ್ರಾ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ಸಂದರ್ಭದಲ್ಲಿ ನೀರಜ್ ಕೇವಲ ಕಷ್ಟದ ದಿನಗಳನ್ನು ಮಾತ್ರ ಮೆಲುಕು ಹಾಕಿಲ್ಲ, ಬದಲಾಗಿ ಅಂತಹ ಸಂದರ್ಭದಲ್ಲಿ ನೆರವಾದ ಜತೆಗಾರರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
   

 • Tokyo 2020 PM Narendra Modi Meets Indian Olympics Contingent and Fulfil PV Sindhu Ice Creme Promise kvn

  OlympicsAug 16, 2021, 2:05 PM IST

  Tokyo 2020: ಒಲಿಂಪಿಕ್ಸ್‌ ಸಾಧಕರನ್ನು ಮನೆಗೆ ಕರೆಸಿ ಐಸ್‌ ಕ್ರೀಂ ಪೇ ಚರ್ಚಾ ಮಾಡಿದ ಪ್ರಧಾನಿ ಮೋದಿ..!

  ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ 7 ಪದಕಗಳನ್ನು ಗೆಲ್ಲುವ ಮೂಲಕ ಸ್ಮರಣೀಯವಾಗಿ ತನ್ನ ಅಭಿಯಾನವನ್ನು ಮುಗಿಸಿದೆ. ಇದೀಗ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧಕರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸಕ್ಕೆ ಆಹ್ವಾನಿಸಿ ಚಹ ಕುಡಿಸಿ ಕುಶಲೋಪರಿ ವಿಚಾರಿಸಿದ್ದಾರೆ. ಈ ಹಿಂದೆ ಪಿ.ವಿ. ಸಿಂಧು ಅವರಿಗೆ ನೀಡಿದ್ದ ಮಾತಿನಂತೆ ಬ್ಯಾಡ್ಮಿಂಟನ್ ತಾರೆ ಜತೆ ಐಸ್ ಕ್ರೀಂ ಕೂಡಾ ಸವಿದಿದ್ದಾರೆ. ಈ ಮೊದಲು 75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗಲು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಸವಿನಯವಾಗಿ ಆಮಂತ್ರಿಸಿದ್ದರು. ಇದಷ್ಟೇ ಅಲ್ಲದೇ ಕೆಂಪು ಕೋಟೆಯಿಂದ ಭಾಷಣ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಕ್ರೀಡಾಪಟು ಒಲಿಂಪಿಕ್ಸ್‌ನಲ್ಲಿ ತೋರಿದ ಪ್ರದರ್ಶನವನ್ನು ಶ್ಲಾಘಿಸಿದ್ದಷ್ಟೇ ಅಲ್ಲದೇ ಮುಂಬರುವ ಯುವ ಪ್ರತಿಭೆಗಳಿಗೆ ನೀವೆಲ್ಲಾ ಸ್ಪೂರ್ತಿಯಾಗಿದ್ದೀರಿ ಎಂದು ಗುಣಗಾನ ಮಾಡಿದ್ದರು.
   

 • Tokyo 2020 Indian Women Wrestler Vinesh Phogat apologises to WFI kvn

  OTHER SPORTSAug 16, 2021, 8:25 AM IST

  ಕುಸ್ತಿ ಫೆಡರೇಷನ್‌ ಕ್ಷಮೆ ಕೋರಿದ ತಾರಾ ಕುಸ್ತಿಪಟು ವಿನೇಶ್‌ ಫೋಗಾಟ್‌

  ಟೋಕಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಅಚ್ಚರಿಯ ಸೋಲು ಅನುಭವಿಸಿದ ವಿನೇಶ್‌, ಭಾರತದ ಇತರ ಕ್ರೀಡಾಪಟುಗಳೊಂದಿಗೆ ಕ್ರೀಡಾಗ್ರಾಮದಲ್ಲಿ ಉಳಿಯಲಿಲ್ಲ. ತಂಡದ ಅಧಿಕೃತ ಪ್ರಾಯೋಜಕರ ಸಂಸ್ಥೆಯ ಲೋಗೋ ಇರುವ ಉಡುಪು ಧರಿಸಲಿಲ್ಲ ಎನ್ನುವ ಕಾರಣಕ್ಕೆ ಕುಸ್ತಿ ಫೆಡರೇಷನ್‌ ವಿನೇಶ್‌ರನ್ನು ಅಮಾನತುಗೊಳಿಸಿತ್ತು. 

 • Tokyo 2020 Olympic Gold Medallist Neeraj Chopra Becomes World Number 2 In Mens Javelin Throw kvn

  OTHER SPORTSAug 13, 2021, 8:50 AM IST

  ಜಾವೆಲಿನ್‌ ಥ್ರೋ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾ ಈಗ ವಿಶ್ವ ನಂ.2

  23 ವರ್ಷದ ನೀರಜ್‌ ರ‍್ಯಾಂಕಿಂಗ್‌ನಲ್ಲಿ 14 ಸ್ಥಾನಗಳ ಏರಿಕೆ ಕಂಡಿದ್ದು, ಮೊದಲ ಸ್ಥಾನದಲ್ಲಿರುವ ಜರ್ಮನಿಯ ಜೊಹಾನಸ್‌ ವೆಟ್ಟರ್‌ಗಿಂತ ಕೇವಲ 81 ಅಂಕಗಳಿಂದ ಹಿಂದಿದ್ದಾರೆ. ವೆಟ್ಟರ್‌ 1396 ಅಂಕಗಳನ್ನು ಹೊಂದಿದ್ದರೆ, ನೀರಜ್‌ 1315 ಅಂಕಗಳನ್ನು ಪಡೆದಿದ್ದಾರೆ.

 • Tokyo 2020 Indian Athletes Create big Medal Hope for Upcoming Paris Olympics kvn

  OlympicsAug 9, 2021, 1:25 PM IST

  ಭಾರತಕ್ಕೆ ಭರವಸೆಯ ಕಾಮನಬಿಲ್ಲು ಮೂಡಿಸಿದ ಟೋಕಿಯೋ ಒಲಿಂಪಿಕ್ಸ್‌..!

  ಇತಿಹಾಸದಲ್ಲೇ ಅತಿದೊಡ್ಡ ತಂಡ (120 ಜನ) ದೊಂದಿಗೆ ತೆರಳಿದ್ದ ಭಾರತೀಯ ಕ್ರೀಡಾಪಟುಗಳ ಪೈಕಿ ವೈಯಕ್ತಿಕ ವಿಭಾಗದಲ್ಲಿ 6 ಜನರು ಮತ್ತು ಪುರುಷರ ಹಾಕಿ ತಂಡ ಜಯಶಾಲಿಯಾಗಿದೆ. ಇನ್ನು ಭರವಸೆ ಮೂಡಿಸಿದವರ ಪೈಕಿ ಒಂದಿಷ್ಟು ಜನ ನಿರಾಸೆ ಮೂಡಿಸಿದರೆ, ಗಾಲ್ಫ್, ವೇಟ್‌ಲಿಫ್ಟಿಂಗ್‌ ಸೇರಿದಂತೆ ಕೆಲ ವಿಭಾಗಗಳಲ್ಲಿ ಭರವಸೆದಾಯಕ ಫಲಿತಾಂಶ ಕಂಡುಬಂತು.
   

 • Tokyo 2020 passes Olympic baton to Paris Olympics 2024 kvn
  Video Icon

  OlympicsAug 9, 2021, 12:11 PM IST

  2024ರ ಪ್ಯಾರಿಸ್ ಒಲಿಂಪಿಕ್ಸ್‌ನತ್ತ ಕ್ರೀಡಾಭಿಮಾನಿಗಳ ಚಿತ್ತ

  ಟೋಕಿಯೋ ಒಲಿಂಪಿಕ್ಸ್‌ನ ಮೊದಲ ದಿನವೇ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದರೆ, ಕೊನೆಯ ದಿನ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಅತ್ಯಂತ ಯಶಸ್ವಿಯಾಗಿ ಕ್ರೀಡಾಕೂಟವನ್ನು ಮುಗಿಸಿದೆ. ಸಿಂಧು, ರವಿಕುಮಾರ್, ಭಜರಂಗ್ ಪೂನಿಯಾ, ಭಾರತ ಹಾಕಿ ತಂಡ ಪದಕದ ಬೇಟೆಯಾಡಿದೆ.

 • Tokyo 2020 America China Leading Medal achievers in this Olympics kvn

  OlympicsAug 9, 2021, 10:26 AM IST

  ಟೋಕಿಯೋ 2020: ಪದಕ ಕೊಳ್ಳೆ ಹೊಡೆದ ಅಮೆರಿಕ, ಚೀನಾ

  ಕಳೆದ ರಿಯೋ ಒಲಿಂಪಿಕ್ಸ್‌ಗೆ ಹೋಲಿಸಿದರೆ ಚಿನ್ನ ಮತ್ತು ಒಟ್ಟಾರೆ ಪದಕ ಪದಕದಲ್ಲಿ ಅಮೆರಿಕ ಹಿನ್ನಡೆ ಅನುಭವಿಸಿದೆ. 2016ರಲ್ಲಿ ಅಮೆರಿಕದ 46 ಚಿನ್ನ, 37 ಬೆಳ್ಳಿ, 38 ಕಂಚಿನೊಂದಿಗೆ 121 ಪದಕ ಗೆದ್ದಿತ್ತು. ಆದರೆ ಚೀನಾ ರಿಯೋದಲ್ಲಿ 27 ಚಿನ್ನ, 23 ಬೆಳ್ಳಿ, 17 ಕಂಚು ಮಾತ್ರ ಗೆದ್ದಿತ್ತು. ಇನ್ನು ಜಪಾನ್‌ 12 ಚಿನ್ನ, 8 ಬೆಳ್ಳಿ, 21 ಕಂಚಿನ ಪದಕ ಗೆದ್ದುಕೊಂಡಿತ್ತು.
   

 • Tokyo 2020 Neeraj Chopra Inspires hundreds of youth win Olympics Medal Say KOA President K Govindaraj kvn

  OlympicsAug 8, 2021, 3:17 PM IST

  ಭವಿಷ್ಯದಲ್ಲಿ 100 ಚಿನ್ನದ ಪದಕ ಗೆಲ್ಲಲು ಚೋಪ್ರಾ ಪ್ರೇರಣೆ: ಎಂಎಲ್‌ಸಿ ಕೆ ಗೋವಿಂದರಾಜು

  ನೀರಜ್‌ ಅವರ ಈ ಸಾಧನೆ ದೇಶದ ಯುವ ಜನಾಂಗಕ್ಕೆ ಮಾದರಿಯಾಗಬೇಕು. ಭವಿಷ್ಯದಲ್ಲಿ ಇಂತಹ ನೂರು ಚಿನ್ನದ ಪದಕಗಳು ಭಾರತದ ಪಾಲಾಗುವಂತೆ ಮುಂದಿನ ಪೀಳಿಗೆಗೆ ಪ್ರೇರಣೆ ನೀಡಬೇಕು ಎಂದು ಹೇಳಿದ್ದಾರೆ.
   

 • Tokyo 2020 Inspirational Story about Olympic Gold Medallist Javelin Thrower Neeraj Chopra kvn

  OlympicsAug 8, 2021, 11:58 AM IST

  ಟೋಕಿಯೋ 2020: ತೂಕ ಇಳಿಸಲು ಅಥ್ಲೆಟಿಕ್ಸ್‌ಗೆ ಬಂದು ಚಿನ್ನ ಗೆದ್ದ ನೀರಜ್‌

  ಹರ್ಯಾಣದ ಪಾಣಿಪತ್‌ ಬಳಿಯ ಸಣ್ಣ ಗ್ರಾಮದ ನೀರಜ್‌ ಅವರದ್ದು 17 ಸದಸ್ಯರಿರುವ ತುಂಬಿದ ಕುಟುಂಬ. ನೀರಜ್‌ ಬಹಳ ತುಂಟನಾಗಿದ್ದರು. ಅವರನ್ನು ಯಾವುದಾದರೂ ಒಂದು ಕ್ರೀಡೆಗೆ ಸೇರಿಸಬೇಕು ಎಂದು ಮನೆಯವರೆಲ್ಲಾ ನಿರ್ಧರಿಸಿದಾಗ, ನೀರಜ್‌ರ ಚಿಕ್ಕಪ್ಪ ಅವರನ್ನು ಪಾಣಿಪತ್‌ನ ಶಿವಾಜಿ ಕ್ರೀಡಾಂಗಣಕ್ಕೆ ಕರೆದೊಯ್ದರು. ದಪ್ಪ ದೇಹದ ನೀರಜ್‌ಗೆ ಓಟದ ಕ್ರೀಡೆಗಳಲ್ಲಿ ಆಸಕ್ತಿ ಇರಲಿಲ್ಲ. ಕ್ರೀಡಾಂಗಣದಲ್ಲಿ ಕೆಲ ಹಿರಿಯರು ಜಾವೆಲಿನ್‌ ಥ್ರೋ ಎಸೆಯುತ್ತಿದ್ದನ್ನು ಕಂಡು ಮನಸಾಯಿತು. ಅಲ್ಲಿಂದ ಮುಂದಿನದ್ದು ಇತಿಹಾಸ.

 • Tokyo 2020 Mirabai to Neeraj Chopra BCCI Announces Cash Rewards For Olympic Medallists kvn

  OlympicsAug 8, 2021, 8:55 AM IST

  ಒಲಿಂಪಿಕ್ಸ್‌ ಪದಕ ಗೆದ್ದವರಿಗೆ ಬಿಸಿಸಿಐ ಬಂಪರ್ ಬಹುಮಾನ..!

  ‘ಚಿನ್ನ ಗೆದ್ದ ನೀರಜ್‌ ಚೋಪ್ರಾಗೆ 1 ಕೋಟಿ, ಬೆಳ್ಳಿ ಗೆದ್ದ ರವಿ ದಹಿಯಾ, ಮೀರಾಭಾಯಿ ಚಾನುಗೆ ತಲಾ 50 ಲಕ್ಷ, ಕಂಚು ಗೆದ್ದ ಪಿ.ವಿ.ಸಿಂಧು, ಭಜರಂಗ್‌ ಪೂನಿಯಾ, ಲವ್ಲೀನಾ ಬೊರ್ಗೊಹೈನ್‌ಗೆ ತಲಾ 25 ಲಕ್ಷ ಹಾಗೂ ಪುರುಷರ ಹಾಕಿ ತಂಡಕ್ಕೆ 1.25 ಕೋಟಿ ನೀಡಲಾಗುವುದು’

 • Tokyo 2020 Indian Javelin Thrower Neeraj Chopra Bags Gold Medal kvn

  OlympicsAug 7, 2021, 5:44 PM IST

  ಟೋಕಿಯೋ 2020 ನೀರಜ್ ಚೋಪ್ರಾ ದೇಶಕ್ಕೆ ಬಂಗಾರ ತೊಡಿಸಿದ ಯೋಧ

  ಮೊದಲ ಪ್ರಯತ್ನದಲ್ಲಿ ನೀರಜ್‌ ಚೋಪ್ರಾ ಬರೋಬ್ಬರಿ 87.03 ಮೀಟರ್‌ ದೂರ ಎಸೆಯುವ ಮೂಲಕ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡರು. ಜರ್ಮನಿಯ ಜೂಲಿಯನ್ ವೇಬರ್ 85.30 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರು. ಉಳಿದಂತೆ ಮೊದಲ ಸುತ್ತಿನಲ್ಲಿ ಮತ್ತೆ ಯಾವ ಜಾವಲಿನ್‌ ಪಟುವು 85 ಮೀಟರ್‌ಗಿಂತ ದೂರ ಜಾವಲಿನ್ ಎಸೆಯಲಿಲ್ಲ.