Srinidhi Shetty

(Search results - 23)
• undefined

SandalwoodJul 6, 2021, 11:35 PM IST

ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್, KGF 2 ರಿಲೀಸ್ ಸುಳಿವು ಕೊಟ್ಟ ನಿರ್ದೇಶಕ

ಕೊರೋನಾ ಕಾರಣದಿಂದ ಚಿತ್ರರಂಗ ನಿಂತ ನೀರಾಗಿತ್ತು. ಈಗ ಕೊರೋನಾ ಕಡಿಮೆಯಾಗಿದ್ದು ಕೆಜಿಎಫ್ ಭಾಗ ಎರಡರ ಬಿಡಗುಗಡೆ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸುತ್ತೇವೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಡೈಲಾಗ್ ಮೂಲಕವೇ ತಿಳಿಸಿದ್ದಾರೆ.

Srinidhi Shetty

Video Icon

SandalwoodJun 12, 2021, 3:09 PM IST

ಕೊನೆಗೂ ಪೋಟೋ ಹಂಚಿಕೊಂಡ ಶ್ರೀನಿಧಿ ಶೆಟ್ಟಿ; ಎಲ್ಲಿದ್ರಿ ಇಷ್ಟು ದಿನ?

ಕೆಜಿಎಫ್ ಸಿನಿಮಾ ಬಿಡುಗಡೆ ನಂತರ ನಟಿ ಶ್ರೀನಿಧಿ ಶೆಟ್ಟಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕೆಜಿಎಫ್ 2 ಸಿನಿಮಾ ವೇಳೆ ಚಿತ್ರೀಕರಣ ಆರಂಭಿಸಿರುವುದಾಗಿ ತಿಳಿಸಿದ್ದರಷ್ಟೇ. ಆಮೇಲೆ ಮತ್ತೆ ಎಲ್ಲಿಯೂ ಕಾಣಿಸಲಿಲ್ಲ. ಈ ಲಾಕ್‌ಡೌನ್‌ನ ಫ್ಯಾಮಿಲಿ ಜೊತೆ ಫಾರ್ಮ್‌ಹೌಸ್‌ನಲ್ಲಿ ಕಳೆಯುತ್ತಿರುವ ಶ್ರೀನಿಧಿ ಕರುವಿನ ಜೊತೆ ಫೋಟೋ ಹಂಚಿಕೊಂಡಿದ್ದಾರೆ.

KGF1

SandalwoodJan 8, 2021, 4:47 PM IST

ಹ್ಯಾಪಿ ಬರ್ತಡೇ ಯಶ್‌; ನಿರ್ದೇಶಕರ ಶುಭಾಶಯಗಳು!

ತಮ್ಮ ತಮ್ಮ ಕೋಟೆಯೊಳಗೆ ಭದ್ರವಾಗಿ ಕುಳಿತಿರುವ ಪಟ್ಟಭದ್ರರು, ನುಗ್ಗುವುದು ಬಿಡಿ ಅಂಥ ಯೋಚನೆಯನ್ನೂ ಮಾಡಲಿಕ್ಕೆ ಅಸಾಧ್ಯವೆನ್ನಿಸುವ ಭದ್ರಕೋಟೆ, ನಮ್ಮ ಮಾರುಕಟ್ಟೆದಿನೇ ದಿನೇ ಕುಗ್ಗುತ್ತಿದೆ ಅಂತ ಭಾಷಣ ಬಿಗಿಯುತ್ತಿದ್ದ ಹಸಿವಿಲ್ಲದವರು, ಹೀರೋ ಒಂದು ಪ್ರಾಡಕ್ಟುಅಂತ ಅಂದುಕೊಂಡಿದ್ದವರು, ಯಾರು ಹೀರೋ ಮೆಟೀರಿಯಲ್‌ ಅಂತ ತಾವೇ ನಿರ್ಧಾರ ಮಾಡುತ್ತಿದ್ದವರು; ಇಂಥವರ ನಡುವೆ ಎದ್ದು ನಿಂತ ಹುಡುಗನ ಹೆಸರು ಯಶ್‌.

ಮಾಡಿದ ಸಿನಿಮಾಗಳ ಸಂಖ್ಯೆ ಇಪ್ಪತ್ತು ದಾಟಿಲ್ಲ. ಅಷ್ಟರಲ್ಲೇ ಛಪ್ಪನ್ನೈವತ್ತಾರು ದೇಶಗಳಲ್ಲೂ ಹೆಸರುವಾಸಿ. ಪ್ರತಿ ಚಿತ್ರದಲ್ಲೂ ಸೀಮೋಲ್ಲಂಘನೆಗೆ ತುಡಿಯುತ್ತಿದ್ದ ಯಶ್‌, ಯಾರ ಹಂಗಿಗೂ ಬೀಳಲಿಲ್ಲ. ಯಾರ ಮರ್ಜಿಗೂ ಬಾಗಲಿಲ್ಲ. ಸೆಲ್‌್ಫ ಮೇಡ್‌ ಅಂತ ಕರೆಸಿಕೊಂಡರು. ಆ ಮಾತನ್ನು ಉಳಿಸಿಕೊಂಡರು.

ಕನ್ನಡ ಚಿತ್ರರಂಗದ ಗಡಿಗಳನ್ನು ವಿಸ್ತರಿಸಿದ ನಿರ್ದೇಶಕರಿದ್ದಾರೆ. ಗಿರೀಶ್‌ ಕಾರ್ನಾಡ್‌, ಗಿರೀಶ್‌ ಕಾಸರವಳ್ಳಿ, ಪುಟ್ಟಣ್ಣ ಕಣಗಾಲ್‌, ರಾಜೇಂದ್ರ ಸಿಂಗ್‌ ಬಾಬು, ಕೆವಿ ರಾಜು, ನಾಗಾಭರಣ, ಶಂಕರ್‌ನಾಗ್‌ ಮುಂತಾದ ನಿರ್ದೇಶಕರು ಕನ್ನಡ ಸಿನಿಮಾಗಳ ಖ್ಯಾತಿ ದೇಶಾದ್ಯಂತ ಹಬ್ಬುವಂತೆ ಮಾಡಿದರು. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಕನ್ನಡ ಚಿತ್ರಗಳನ್ನು ಕೊಂಡೊಯ್ದರು. ಆದರೆ ಯಶ್‌ ಕನ್ನಡ ಸಿನಿಮಾದ ಬಾಕ್ಸಾಫೀಸನ್ನು ದೇಶಾದ್ಯಂತ, ವಿಶ್ವಾದ್ಯಂತ ತೆರೆದ ಏಕೈಕ ಸ್ಟಾರ್‌ ನಟ. ತಮ್ಮದೇ ಭಾಷೆಯ ಸಿನಿಮಾ ಎಂಬಂತೆ ಕೆಜಿಎಫ್‌ ಎಲ್ಲರ ಸ್ವೀಕಾರಕ್ಕೆ ಪಾತ್ರವಾಗಿದ್ದರೆ ಅದಕ್ಕೆ ಯಶ್‌ ಕೊಟ್ಟಬೆಂಬಲ ಕಾರಣ.

ಮದುವೆಯೇ ಇರಲಿ, ನಾಮಕರಣವೇ ಇರಲಿ, ಹುಟ್ಟುಹಬ್ಬವೇ ಇರಲಿ, ಖಾಸಗಿಯೋ ಸಾರ್ವಜನಿಕವೋ ಏನೇ ಆಗಿರಲಿ, ಅದಕ್ಕೊಂದು ಸ್ಟಾಂಡರ್ಡ್‌ ಸೆಟ್‌ ಮಾಡುತ್ತೇನೆಂದು ಹೊರಟ ಯಶ್‌ ಅದನ್ನು ಸಾಧಿಸಿದ್ದಾರೆ. ಕೆಜಿಎಫ್‌ ಕತೆ ಅವರ ಆತ್ಮಚರಿತ್ರೆಯ ತುಣುಕು ಕೂಡ.

ಯಶ್‌ ಎಂಬ ಗಡಿದಾಟಿದ ಕಲಾವಿದನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾ, ಅವರ ಕುರಿತು ಅವರ ಆತ್ಮೀಯರು ಆಡಿದ ನಾಲ್ಕಾರು ಮಾತುಗಳನ್ನಿಲ್ಲಿ ಕೊಡುತ್ತಿದ್ದೇವೆ.

ಯಶ್‌, ಕೆಜಿಎಫ್‌ಗೆ ನನ್ನ ಬದುಕಿನಲ್ಲಿ ವಿಶೇಷ ಸ್ಥಾನ

2016ರಲ್ಲಿ ಕೆಜಿಎಫ್‌ ತಂಡ ಸೇರಿಕೊಂಡವಳು ನಾನು. ಈಗ 2021. ಸುಮಾರು ನಾಲ್ಕೂವರೆ ವರ್ಷ ಈ ತಂಡದ ಜೊತೆ ಕಳೆದಿದ್ದೇನೆ. ಈ ಎಲ್ಲಾ ದಿನಗಳಲ್ಲಿ ಯಶ್‌ ಅವರ ಶ್ರದ್ಧೆಗೆ ನಾನು ಬೆರಗಾಗಿದ್ದೇನೆ. ಕೆಲಸ ಮೇಲೆ ಅವರು ತೋರಿಸುವ ಶ್ರದ್ಧೆ ಬೇರೆಲ್ಲೋ ನೋಡಿದ್ದು ಅಪರೂಪ. ಕೆಜಿಎಫ್‌ 2 ಚಿತ್ರೀಕರಣದಲ್ಲಿ ಬೇರೆ ಬೇರೆ ರೀತಿಯ ಜಾಗಗಳಲ್ಲಿ ಅವರು ಕೆಲಸ ಮಾಡುವುದನ್ನು ನೋಡಿದ್ದೇನೆ. ಮಣ್ಣಿನ ಜಾಗವೇ ಇರಲಿ, ಕಪ್ಪು ಹೊಗೆ ತುಂಬಿರುವ ತಾಣವೇ ಇರಲಿ ಎಲ್ಲೇ ಇದ್ದರು ಅವರು ಅವರ ಕೆಲಸಕ್ಕೆ ಕೊಡುವ ಗೌರವ ಅಪಾರ. ಕೆಲಸ ಬಿಟ್ಟರೆ ಬೇರೆ ಇಲ್ಲ ಎನ್ನುವಂತೆ ಬದುಕುತ್ತಾರೆ. ಅವರ ಆ ಶ್ರದ್ಧೆಯೇ ನನಗೆ ಸ್ಫೂರ್ತಿ. ಕೆಜಿಎಫ್‌ ನನ್ನ ಮೊದಲ ಸಿನಿಮಾ. ಯಶ್‌ ನನ್ನ ಮೊದಲ ಕೋಸ್ಟಾರ್‌. ನಾನು ಆರಂಭದಲ್ಲೆಲ್ಲಾ ನಾಲ್ಕೈದು ಟೇಕ್‌ ತೆಗೆದುಕೊಳ್ಳುತ್ತಿದ್ದೆ. ಆಗೆಲ್ಲಾ ಅವರು ಬೆಂಬಲವಾಗಿ ನಿಂತು ತಾಳ್ಮೆಯಿಂದ ಪ್ರೋತ್ಸಾಹಿಸುತ್ತಿದ್ದರು. ಅದನ್ನು ನಾನು ಮರೆಯಲಾರೆ. ಈ ಸಿನಿಮಾ, ಯಶ್‌ ಅವರಿಗೂ ನನ್ನ ಜೀವನದಲ್ಲಿ ವಿಶೇಷ ಸ್ಥಾನವಿದೆ. ಅವರು ಮುಂದಿನ ದಿನಗಳಲ್ಲಿ ಮತ್ತಷ್ಟುಎತ್ತರಕ್ಕೆ ಹೋಗುತ್ತಾರೆ ಅನ್ನುವುದು ನಿಶ್ಚಿತ. ಅವರ ಮುಂದಿನ ಹಾದಿಯಲ್ಲಿ ಹೂವುಗಳೇ ಚೆಲ್ಲಿರಲಿ ಎಂದು ನಾನು ಆಶಿಸುತ್ತೇನೆ.

- ಶ್ರೀನಿಧಿ ಶೆಟ್ಟಿ

ನಾನು ನಿರ್ದೇಶಕನಾಗಲು ಕಾರಣವೇ ಯಶ್‌

ನಾನು ನಿರ್ದೇಶಕನಾಗಿದ್ದೇನೆ ಎಂದರೆ ಅದಕ್ಕೆ ಮೊದಲ ಕಾರಣ ಯಶ್‌. ಅವರ ಜೊತೆಗೆ ಕೆಲಸ ಮಾಡುವುದು ಅದ್ಭುತ ಅನುಭವ. ಪ್ಯಾಷನ್‌ ಇಟ್ಟುಕೊಂಡ, ಬೇರೆಯವರ ಪ್ರತಿಭೆ ಗುರುತಿಸುವ, ತಾನೂ ಬೆಳೆದು, ಚಿತ್ರರಂಗವನ್ನೂ ಬೆಳೆಸುವ ಕನಸು ಕಾಣುವ ಹೀರೋ. ಅವರು ಮಾಡಿದ್ದು ಎರಡೇ ರಿಮೇಕ್‌. ಇಲ್ಲಿಯ ಬರಹಗಾರರ ಮೇಲೆ ಅಷ್ಟೊಂದು ನಂಬಿಕೆ. ನೇಟಿವಿಟಿ ಅರ್ಥಮಾಡಿಕೊಂಡ ಪ್ರಬುದ್ಧ. ತಂಡ ಕಟ್ಟುವ ಸಿನಿಮಾ ಮಾಡಿಸುವ ಶಕ್ತಿವಂತ. ನಾನಿರೋ ತನಕ ಮರೆಯಲಾರದ ವ್ಯಕ್ತಿ. ನಮ್ಮಿಬ್ಬರಿಗೂ ಯಶಸ್ಸು ಬಂದಿದೆ. ಆದರೆ ಸ್ನೇಹ ಉಳಿದಿದೆ. ಯುವರತ್ನ ಚಿತ್ರದ ಕತೆ, ಹಾಡು ಕೇಳಿ ಮೆಚ್ಚಿದ್ದರು. ನಾವಿಬ್ಬರೂ ಜತೆಯಾಗಿ ಆದಷ್ಟುಬೇಗ ಮತ್ತೊಂದು ಸಿನಿಮಾ ಮಾಡ್ತೀವಿ.

- ಸಂತೋಷ್‌ ಆನಂದ ರಾಮ…

ಯಾವುದನ್ನೂ ಅಸಾಧ್ಯ ಎಂದು ಯಾರು ಹೇಳುತ್ತಾರೋ ಅವರು ಯಶ್‌

ನನ್ನಿಂದ ಈ ಕೆಲಸ ಆಗಲ್ಲ. ಸಾಧ್ಯವಿಲ್ಲ ಎಂದು ಯಾರು ಹೇಳಲ್ಲವೋ ಅವರು ಯಶ್‌ ಆಗ್ತಾರೆ. ಮೊದಲಿನಿಂದಲೂ ಯಶ್‌ ಹಠವಾದಿ. ಯಶ್‌ಗೆ ನೀವು ಏನೇ ಹೇಳಿ ‘ಆಗಲ್ಲ’ ಎನ್ನುವ ಮಾತು ಅವರಿಂದ ಬಂದಿಲ್ಲ. ನಾನು ‘ಡ್ರಾಮಾ’ಗೂಮೊದಲಿನಿಂದಲೂ ನೋಡಿಕೊಂಡು ಬಂದ ಹುಡುಗ. ಆಗಿನಿಂದಲೂ ಏನಾದರೂ ಮಾಡಬೇಕು ಎನ್ನುವ ಗುರಿ, ಕನಸನ್ನು ದೊಡ್ಡ ಮಟ್ಟದಲ್ಲಿ ಕಟ್ಟಿಕೊಂಡಿದ್ದ ನಟ. ಒಬ್ಬ ಗೆಳೆಯನಾಗಿ ಹೇಳುವುದೇನೆಂದರೆ ಅವನ ಈ ಹಠ, ಚಲ, ಖ್ಯಾತಿ ಹಾಗೂ ಯೌವ್ವನ ನೂರು ಪಟ್ಟು ಹೆಚ್ಚಾಗಲಿ.

-ಯೋಗರಾಜ್‌ ಭಟ್‌

ಸ್ವಂತ ಶ್ರಮ ನಂಬಿಕೊಂಡು ಬಂದ ವ್ಯಕ್ತಿ

ಸ್ವಂತ ಶ್ರಮವನ್ನು ನಂಬಿಕೊಂಡು ಚಿತ್ರರಂಗಕ್ಕೆ ಬಂದ ವ್ಯಕ್ತಿ ಯಶ್‌. ಅವರ ಶ್ರಮವೇ ಯಶಸ್ಸಿಗೆ ದೊಡ್ಡ ಪಿಲ್ಲರ್‌ ಎನ್ನಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಂಬಿ ಬಂದವರನ್ನು ಯಾವತ್ತಿಗೂ ಕೈ ಬಿಡದ ನಟ. ನಾನು ಯಶ್‌ ಜತೆ ಐದು ಚಿತ್ರಗಳನ್ನು ನಿರ್ಮಿಸಿದ್ದೇನೆ. ಯಶ್‌ ಅವರಿಂದ ನಿರ್ಮಾಪಕರಿಗೆ ಹೆಸರು, ಹಣ ಬಂದಿದೆ. ತಂತ್ರಜ್ಞರಿಗೂ ಹೆಸರು ಬಂದಿದೆ. ಚಿತ್ರರಂಗದ ಅಭಿವೃದ್ಧಿ ಎಂದರೆ ಹೀರೋ ಜತೆಗೆ ಎಲ್ಲರೂ ಬೆಳೆಯುವುದು. ಇದನ್ನು ನಾನು ಯಶ್‌ ಅವರಲ್ಲಿ ನೋಡುತ್ತಿದ್ದೇನೆ. ಸಿನಿಮಾ ಬಿಟ್ಟು ಬೇರೆ ಯಾವುದೇ ರೀತಿಯ ಶೋಕಿಗಳನ್ನು ಮೈಗೂಡಿಸಿಕೊಂಡಿಲ್ಲ. ಇಪ್ಪತ್ತು ನಾಲ್ಕು ಗಂಟೆಯೂ ಸಿನಿಮಾಗಾಗಿಯೇ ದುಡಿದ, ನಟನೆಯನ್ನೇ ಧ್ಯಾನಿಸುತ್ತಿರುವ ವ್ಯಕ್ತಿ. ನಾನು ಮುಂದೆಯೂ ಯಶ್‌ ಜತೆ ಸಿನಿಮಾ ಮಾಡುತ್ತೇನೆ.

-ಜಯಣ್ಣ, ನಿರ್ಮಾಪಕ

Zee kannada sarigamapa winners

SandalwoodDec 21, 2020, 2:06 PM IST

'ಸರಿಗಮಪ ಸೀಸನ್ 17 ' ವಿಜಯದ ಕಿರೀಟ ಮುಡಿಗೇರಿಸಿಕೊಂಡ ಶ್ರೀನಿಧಿ ಶಾಸ್ತ್ರಿ!

ಜೀ ಕನ್ನಡ ಸರಿಗಮಪ ಸೀಸನ್‌ 17ರ ವಿನ್ನರ್ ಹಾಗೂ ರನ್ನರ್ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಬಿದ್ದಿದೆ ತೆರೆ. ಕಿರೀಟ ಮುಡಿಗೇರಿಸಿಕೊಂಡವರು ಯಾರು?

Srinidhi Shetty

Video Icon

SandalwoodDec 18, 2020, 5:22 PM IST

ಎಲ್ಲೋಗ್ ಬಿಟ್ರು ಕೆಜಿಎಫ್‌ ನಟಿ ಶ್ರೀನಿಧಿ ಶೆಟ್ಟಿ?

ಕೆಜಿಎಫ್‌ ಚಾಪ್ಟರ್ 1 ಚಿತ್ರದ ನಂತರ ಸೌತ್ ಇಂಡಿಯಾ ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಶ್ರೀನಿಧಿ ಶೆಟ್ಟಿ ಕೆಜಿಎಫ್‌ 2 ಚಿತ್ರೀಕರಣ ಮುಗಿಸಿ ಅದೆಲ್ಲೋ ಕಾಣೆಯಾಗಿದ್ದಾರೆ. ಲಾಕ್‌ಡೌನ್‌ ಆಗದಿದ್ದರೆ ಶ್ರೀನಿಧಿ ಎರಡು ಸಿನಿಮಾಗಳಲ್ಲಿ ಅಭಿನಯಿಸಬೇಕಿತ್ತು. ಸೋಷಿಯಲ್ ಮೀಡಿಯಾದಲ್ಲೂ ಕಾಣಿಸುತ್ತಿಲ್ಲ...ಎಲ್ಲಿಗೆ ಹೋಗಿ ಬಿಟ್ಟರು?

Irfan pathan cobra

Cine WorldOct 28, 2020, 2:10 PM IST

ಬಣ್ಣದ ಲೋಕಕ್ಕೆ ಕ್ರಿಕೆಟರ್‌ ಇರ್ಫಾನ್‌; 'ಕೋಬ್ರಾ'ದಲ್ಲಿ ಇಂಟರ್‌ಪೋಲ್ ಆಫೀಸರ್!

ಕಾಲಿವುಡ್‌ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕ್ರಿಕೆಟರ್ ಇರ್ಫಾನ್ ಪಠಾಣ್. ಕ್ರಿಕೆಟಿಗನಿಗೆ ವಿಕ್ರಮ್ ಹಾಗೂ ಶ್ರೀನಿಧಿ ಶೆಟ್ಟಿ ಸಾಥ್....

Srindhi Shetty

Video Icon

SandalwoodAug 15, 2020, 4:55 PM IST

ಕೆಜಿಎಫ್ ಸುಂದರಿ ಬಳಿ ಇವೆ ಕೈ ತುಂಬಾ ಆಫರ್ಸ್...

ಕೆಜಿಎಫ್ ಚಿತ್ರದ ಸುಂದರಿ ಶ್ರೀನಿಧಿ ಶೆಟ್ಟಿ ಎಲ್ಲೋದ್ರಪ್ಪಾ, ಈಗೇನು ಮಾಡುತ್ತಿದ್ದಾರೆ ಸುದ್ದಿನೇ ಇಲ್ಲ ಎನ್ನುತ್ತಿದ್ದ ಅಭಿಮಾನಿಗಳಿಗೆ ಇಲ್ಲೊಂದು ವಿಚಾರ ಇದೆ ನೋಡಿ. ಕೆಜಿಎಫ್‌ ಚಾಪ್ಟರ್ 2ರಲ್ಲೂ ಮಿಂಚುತ್ತಿರುವ ಶ್ರೀನಿಧಿ ರಾಕಿಂಗ್‌ ಸ್ಟಾರ್ ಯಶ್‌ ಜೊತೆ ಅಭಿನಯಿಸಲು 7 ಸಿನಿಮಾ ಆಫರ್‌ ರಿಜೆಕ್ಟ್ ಮಾಡಿದ್ದಾರಂತೆ. ಯಾವ ಭಾಷೆ ಸಿನಿಮಾ ಎಂದು ಇಲ್ಲಿದೆ ನೋಡಿ

srinidhi shetty

SandalwoodAug 15, 2020, 4:15 PM IST

ಯಶ್‌ ಜೊತೆ ಅಭಿನಯಿಸಲು 7 ಸಿನಿಮಾ ಆಫರ್ಸ್ ರಿಜೆಕ್ಟ್‌ ಮಾಡಿದ ಕೆಜಿಎಫ್ ಕ್ವೀನ್!

ಕೆಜಿಎಫ್‌ ಚಿತ್ರದ ಮೂಲಕ ಲೈಮ್‌ಟೈಗ್‌ಗೆ ಬಂದಂತ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಸಿನಿಮಾ ಆಫರ್‌ಗಳ ಬಗ್ಗೆ ಯಾರಿಗೂ ತಿಳಿಯದ ಸತ್ಯವೊಂದನ್ನು ರಿವೀಲ್‌ ಮಾಡಿದ್ದಾರೆ.

• Srinidhi Shetty
Video Icon

SandalwoodJun 28, 2020, 5:58 PM IST

ಕೆಜಿಎಫ್‌ ನಟಿ ಶ್ರೀನಿಧಿ ಶೆಟ್ಟಿ ಮದುವೆ; ಪರ ಭಾಷಾ ನಟನಿಗೆ ಜೋಡಿ!

ಕೆಜಿಎಫ್‌ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ನಟಿಯಾಗಿ ಮಿಂಚಿದ ಶ್ರೀನಿಧಿ ಶೆಟ್ಟಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಚೊಚ್ಚಲ ಸಿನಿಮಾದ ಮೂಲಕ ಎಲ್ಲರ ಗಮನ ಸೆಳೆದ ನಟಿ ಈಗ ಪರ ಭಾಷಾ ನಟನ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರಂತೆ. ಅರೇ ಇದು ನಿಜವೇ? ಇಲ್ಲಿದೆ ನೋಡಿ ಫುಲ್‌ ಸ್ಟೋರಿ...

• undefined
Video Icon

SandalwoodMay 26, 2020, 4:49 PM IST

ಮಾವಿನ ಮರದಡಿ ಕೆಜಿಎಫ್ ಕ್ವೀನ್, ತರಕಾರಿ ಮಾರ್ತಿದ್ದಾರೆ ಬಿಗ್‍‌ಬಾಸ್ ಸ್ಪರ್ಧಿ..

ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಲಾಕ್‌ಡೌನ್‌ನಲ್ಲಿ ಮಾವಿನ ಮರದಡಿ ಬ್ಯುಸಿಯಾಗಿದ್ದರೆ,  ಕನ್ನಡದ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಈಗ ತರಕಾರಿ ಮಾರುತ್ತಿದ್ದಾರೆ. ಯಲಹಂಕದ ಮಾರುಕಟ್ಟೆಗೆ ಹೋದ್ರೆ ಸಾಕು, ನಿಮ್ಗೆ ಗುಲಾಲ್ ಡಾಟ್ ಕಾಂ ಚಿತ್ರದ ಈ ದಿವಾಕರ್ ತರಕಾರಿ ಮಾರೋದು ಘೋಚರಿಸುತ್ತಿದೆ. ಪಕ್ಕದಲ್ಲಿಯೇ ಮಾರಾಟಕ್ಕೆ ಇಟ್ಟ  ಮಾಸ್ಕ್ ಸಹ ಇವೆ. ಆದರೆ,ಯಾಕೆ ಅನ್ನೋರಿಗೆ ಇಲ್ಲಿದೆ ಉತ್ತರ.

• Srinidhi Shetty

NewsOct 16, 2019, 11:19 PM IST

ತಮಿಳಿಗೆ ಹಾರಿದ ಕೆಜಿಎಫ್ ಸುಂದರಿ, ಯಾರ ಜತೆ ಡ್ಯುಯೆಟ್ ಹಾಡಲಿದ್ದಾರೆ?

ಕೆಜಿಎಫ್ ನಲ್ಲಿ ಖಡಕ್ ಡೈಲಾಗಳಿಂದ ಮಿಂಚಿದ್ದ ನಟಿ ಶ್ರೀನಿಧಿ ಶೆಟ್ಟಿ ಇದೀಗ ಪಕ್ಕದ ರಾಜ್ಯಕ್ಕೆ ಹೊರಟು ನಿಂತಿದ್ದಾರೆ. ಚಿಯಾನ್ ವಿಕ್ರಮ ಅಭಿನಯದ ವಿಕ್ರಮ್-58 ಚಿತ್ರವನ್ನು ಶೆಟ್ಟಿ ಒಪ್ಪಿಕೊಂಡಿದ್ದಾರೆ.

• srinidhi shetty

EntertainmentOct 3, 2019, 9:56 AM IST

ಕೆಜಿಎಫ್‌ 2 ನಂತರವೇ ಬೇರೆ ಸಿನಿಮಾಗೆ ಒಪ್ಪಿಗೆ: ಶ್ರೀನಿಧಿ ಶೆಟ್ಟಿ

ಸಾಕಷ್ಟುಕತೆ ಕೇಳಿದ್ದೇನೆ, ಆದರೆ ಅದ್ಯಾವುದು ಒಪ್ಪಿಕೊಂಡಿಲ್ಲ. ಅದಕ್ಕೆ ಕಾರಣವೇ ಕೆಜಿಎಫ್‌ 2!

- ಇದು ನಟಿ ಶ್ರೀನಿಧಿ ಶೆಟ್ಟಿಅವರ ನೇರ ಮಾತು. ‘ಕೆಜಿಎಫ್‌’ ಚಿತ್ರದ ನಂತರದ ಸಿನಿ ಜರ್ನಿ ಹೇಗಿದೆ ಎಂದಾಗ ಶ್ರೀನಿಧಿ ಕೊಟ್ಟಒನ್‌ಲೈನ್‌ ಉತ್ತರ ಅದು.

• Srinidhi Shetty
Video Icon

VIDEOJun 14, 2019, 12:21 PM IST

ರೋರಿಂಗ್ ಸ್ಟಾರ್ ಜೊತೆ ಕೆಜಿಎಫ್ ಕ್ವೀನ್?

ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಇನ್ನೊಂದು ಸಿನಿಮಾ ಮೂಲಕ ತೆರೆ ಮೇಲೆ ಬರಲಿದ್ದಾರೆ. ಶ್ರೀ ಮುರಳಿ ಜೊತೆ ಮದಗಜ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಚಿತ್ರತಂಡ ಹೇಳುವುದೇನು? ಇಲ್ಲಿದೆ ನೋಡಿ.

• Srinidhi Shetty
Video Icon

ENTERTAINMENTMay 2, 2019, 3:26 PM IST

ಶ್ರೀನಿಧಿ ಶೆಟ್ಟಿ ಇಂಥ ಡ್ರೆಸ್ ಇಷ್ಟವಾಗುತ್ತವೆಯಂತೆ!

ಸ್ಟೋರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಇಷ್ಟವಾದ ಉಡಪು, ಕೆಜಿಎಫ್ ಶೂಟಿಂಗ್ ತಯಾರಿ, ಕೆಜಿಎಫ್ ಚಿತ್ರದ ಆಡಿಷನ್ ಹಾಗೂ ಶೂಟಿಂಗ್ ಸಮಯದಲ್ಲಿ ಕೈಗೆ ಪೆಟ್ಟು ಮಾಡಿಕೊಂಡ ವಿಚಾರ...ಎಲ್ಲದರ ಬಗ್ಗೆ ಫಸ್ಟ್ ಟೈಂ ಸುವರ್ಣ ನ್ಯೂಸ್ ಸಿನಿಮಾ ಹಂಗಾಮ ತಂಡದೊಂದಿಗೆ ಹಂಚಿ ಕೊಂಡಿದೆ. ನೀವೇ ನೋಡಿ...

• Srinidhi Shetty

SandalwoodApr 22, 2019, 11:41 AM IST

ಶ್ರೀನಿಧಿ ಶೆಟ್ಟಿ ಕೈಗೆ ಪೆಟ್ಟು; ಕೆಜಿಎಫ್ 2 ನಲ್ಲಿ ನಟಿಸ್ತಾರಾ?

ಶ್ರೀನಿಧಿ ಶೆಟ್ಟಿ ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಾಕಿದ್ದರು. ಅದರಲ್ಲಿ ಅವರ ಕೈಗೆ ಪೆಟ್ಟಾಗಿದ್ದು ಬ್ಯಾಂಡೇಜ್ ಕಟ್ಟಿಕೊಂಡಿದ್ದನ್ನು ಗಮನಿಸಬಹುದಾಗಿದೆ. ಈಗಾಗಲೇ ಕೆಜಿಎಫ್2 ಶೂಟಿಂಗ್ ಶುರುವಾಗಿದ್ದು ಶ್ರೀನಿಧಿ ಭಾಗವಹಿಸ್ತಾರಾ ಎಂಬ ಕುತೂಹಲ ಮೂಡಿದೆ.