Sri Lanka Cricket

(Search results - 96)

Ind vs SL

CricketJul 29, 2021, 6:25 PM IST

ಲಂಕಾ ಎದುರಿನ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ..?

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ನಿರ್ಣಾಯಕ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಾಕಷ್ಟು ಪೈಪೋಟಿಯಿಂದ ಕೂಡಿರುವ ಸಾಧ್ಯತೆಯಿದೆ. ಮೊದಲ ಪಂದ್ಯವನ್ನು ಟೀಂ ಇಂಡಿಯಾ 38 ರನ್‌ಗಳ ಜಯ ಸಾಧಿಸಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಲಂಕಾ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಇದೀಗ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಶಾಕ್ ಎದುರಾಗಿದ್ದು, ನವದೀಪ್‌ ಮೂರನೇ ಟಿ20 ಪಂದ್ಯದಲ್ಲಿ ಆಡುವುದು ಅನುಮಾನ ಎನಿಸಿದೆ. ಮೊದಲೇ ಕೋವಿಡ್‌ ಶಾಕ್‌ನಿಂದ ಕಂಗೆಟ್ಟಿರುವ ಭಾರತ ತಂಡಕ್ಕೆ ಇದು ಮತ್ತಷ್ಟು ಹಿನ್ನೆಡೆಯಾಗುವ ಸಾಧ್ಯತೆಯಿದೆ.
ಲಂಕಾ ಎದುರಿನ ನಿರ್ಣಾಯಕ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಸಂಭಾವ್ಯ ತಂಡ ಹೀಗಿದೆ ನೋಡಿ

• Ind vs SL

CricketJul 29, 2021, 5:57 PM IST

ಲಂಕಾ ಎದುರು ಟಿ20 ಸರಣಿ ಜಯಿಸುತ್ತಾ ಶಿಖರ್ ಧವನ್ ಪಡೆ..?

ಮೊದಲ ಟಿ20 ಪಂದ್ಯವನ್ನು ಗೆದ್ದು ಬೀಗಿದ್ದು ಟೀಂ ಇಂಡಿಯಾ, ಎರಡನೇ ಪಂದ್ಯಕ್ಕೆ ಸಜ್ಜಾಗುವ ಮುನ್ನ ಕೋವಿಡ್ ಶಾಕ್ ನೀಡಿದ್ದರಿಂದ 8 ಆಟಗಾರರು ಐಸೋಲೇಷನ್‌ಗೆ ಒಳಗಾಗಿದ್ದರು. ಹೀಗಿದ್ದೂ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಯುವ ಕ್ರಿಕೆಟಿಗರು ಕೆಚ್ಚೆದೆಯ ಪ್ರದರ್ಶನ ತೋರಿದರಾದರೂ ರೋಚಕ ಸೋಲು ಅನುಭವಿಸಿದ್ದರು.

• Yuzvendra Chahal

CricketJul 27, 2021, 12:17 PM IST

ಭಾರತ-ಲಂಕಾ 2ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭ

ಸತತ ಸೋಲಿನಿಂದ ಕಂಗೆಟ್ಟಿರುವ ಅತಿಥೇಯ ಶ್ರೀಲಂಕಾಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದ್ದು, ಸರಣಿ ಸಮಬಲಗೊಳಿಸಲು ಪಣ ತೊಟ್ಟಿದೆ. 2019ರ ಅಕ್ಟೋಬರ್‌ನಿಂದ ಲಂಕಾ 14 ಟಿ20 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ.

Ind vs SL

CricketJul 25, 2021, 12:14 PM IST

ಇಂದಿನಿಂದ ಭಾರತ-ಶ್ರೀಲಂಕಾ ಟಿ20 ಸರಣಿ ಆರಂಭ

ಕರ್ನಾಟಕದ ದೇವದತ್‌ ಪಡಿಕ್ಕಲ್‌ ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಸ್ಪಿನ್ನರ್‌ ವರುಣ್‌ ಚಕ್ರವರ್ತಿ, ಬ್ಯಾಟ್ಸ್‌ಮನ್‌ ಋುತುರಾಜ್‌ ಗಾಯಕ್ವಾಡ್‌ ಸಹ ಅವಕಾಶ ಪಡೆಯಲು ಕಾಯುತ್ತಿದ್ದಾರೆ.

• Yuzvendra Chahal

CricketJul 23, 2021, 12:03 PM IST

ಲಂಕಾ ಎದುರು ಸರಣಿ ಕ್ಲೀನ್‌ ಸ್ವೀಪ್‌ ಮೇಲೆ ಟೀಂ ಇಂಡಿಯಾ ಕಣ್ಣು

ಲಂಕಾ ವಿರುದ್ಧ ಸತತ 9ನೇ ಸರಣಿ ಜಯಿಸಿರುವ ಭಾರತ, ಪ್ರವಾಸವನ್ನು ಅಜೇಯವಾಗಿ ಮುಕ್ತಾಯಗೊಳಿಸುವ ಗುರಿ ಹೊಂದಿದೆ. ಏಕದಿನ ಸರಣಿ ಬಳಿಕ 3 ಪಂದ್ಯಗಳ ಟಿ20 ಸರಣಿಯೂ ನಡೆಯಲಿದ್ದು, ಆ ಸರಣಿಯಲ್ಲೂ ಜಯಭೇರಿ ಬಾರಿಸಲು ಶಿಖರ್‌ ಧವನ್‌ ಪಡೆ ಕಾತರಿಸುತ್ತಿದೆ.

Ind vs SL

CricketJul 20, 2021, 2:38 PM IST

2ನೇ ಒನ್‌ ಡೇ: ಭಾರತ ಎದುರು ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ 7 ವಿಕೆಟ್‌ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿತ್ತು.

Team India

CricketJul 20, 2021, 11:57 AM IST

ಲಂಕಾ ಎದುರಿನ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ?

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಮೊದಲ ಪಂದ್ಯವನ್ನು ಅನಾಯಾಸವಾಗಿ ಗೆದ್ದು, ಎರಡನೇ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಹೀಗಿದ್ದೂ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಒಂದು ವೇಳೆ ಸಂಜು ಸ್ಯಾಮ್ಸನ್‌ ಸಂಪೂರ್ಣ ಫಿಟ್‌ ಆಗಿದ್ದೇ ಆದಲ್ಲಿ ಕರ್ನಾಟಕದ ಈ ಆಟಗಾರನಿಗೆ ವಿಶ್ರಾಂತಿ ಸಿಗುವ ಸಾಧ್ಯತೆಯಿದೆ. ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸಂಭಾವ್ಯ ತಂಡ ಹೀಗಿದೆ ನೋಡಿ

Shikhar Dhawan

CricketJul 20, 2021, 9:54 AM IST

ಲಂಕಾ ಎದುರು ಸರಣಿ ಗೆಲ್ಲುವ ತವಕದಲ್ಲಿ ಯಂಗ್‌ ಇಂಡಿಯಾ

ಭವಿಷ್ಯದಲ್ಲಿ ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲೂ ಹೆಚ್ಚು ಆಕ್ರಮಣಕಾರಿ ಆಟವಾಡುವ ಗುರಿ ಹೊಂದಿದ್ದು, ಮೊದಲ ಏಕದಿನದಲ್ಲಿ ಈ ಮೂವರ ಆಟ ಅದಕ್ಕೆ ಸರಿಯಾದ ಉದಾಹರಣೆ ಎನ್ನುವಂತಿತ್ತು. 263 ರನ್‌ ಗುರಿಯನ್ನು 37ನೇ ಓವರ್‌ನಲ್ಲೇ ತಲುಪಿದ್ದ ಭಾರತ, ಲಂಕಾ ಮೇಲೆ ಸವಾರಿ ಮಾಡಿತ್ತು.

Sri Lankan Cricket

CricketJul 17, 2021, 9:31 AM IST

ಭಾರತ ವಿರುದ್ದದ ಸರಣಿಗೆ ಕೊನೆಗೂ ಲಂಕಾ ಕ್ರಿಕೆಟ್ ತಂಡ ಪ್ರಕಟ

ಭಾನುವಾರ(ಜು.18) ಮೊದಲ ಏಕದಿನ ಪಂದ್ಯ ನಡೆಯಲಿದೆ. ಇಂಗ್ಲೆಂಡ್‌ ಪ್ರವಾಸದಿಂದ ವಾಪಸಾದ ಬಳಿಕ ಲಂಕಾ ತಂಡದಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದವು. ಲಂಕಾ ಕ್ರಿಕೆಟ್‌ ಮಂಡಳಿ ಒಟ್ಟು 3 ತಂಡಗಳನ್ನು ಸಿದ್ಧಪಡಿಸಿತ್ತು. ಅಂತಿಮವಾಗಿ ಸರಣಿ ಆರಂಭಕ್ಕೆ ಕೇವಲ 2 ದಿನ ಬಾಕಿ ಇರುವಾಗ ತಂಡವನ್ನು ಪ್ರಕಟಿಸಿದೆ.

Ind vs SL

CricketJul 12, 2021, 6:34 PM IST

#BreakingNews ಇಂಡೋ-ಲಂಕಾ ವೇಳಾಪಟ್ಟಿಯಲ್ಲಿ ಮತ್ತೆ ಕೊಂಚ ಬದಲಾವಣೆ..!

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಗೆ ಯಾಕೋ ಏನೋ ಸರಿಯಾಗಿ ಕಾಲಕೂಡಿ ಬಂದಿಲ್ಲ ಅಂತ ಕಾಣುತ್ತೆ. ಇಂಡೋ-ಲಂಕಾ ಸರಣಿ ಆರಂಭಕ್ಕೂ ಮುನ್ನ ಬಿಸಿಸಿಐ ಭಾರತ ಬಿ ತಂಡಕ್ಕೆ ಲಂಕಾಗೆ ಕಳಿಸಿ ಅವಮಾನ ಮಾಡಿದೆ ಎಂದು ಲಂಕಾ ಮಾಜಿ ನಾಯಕ ಅರ್ಜುನ ರಣತುಂಗ ಕೊಂಕು ನುಡಿದಿದ್ದರು. ಇದಾದ ಬಳಿಕ ಕೋವಿಡ್‌ ಕಾರಣದಿಂದಾಗಿ ಟೂರ್ನಿ 5 ದಿನಗಳ ಮುಂದೂಡಲ್ಪಟ್ಟಿತ್ತು. ಜುಲೈ 13ರಿಂದ ಆರಂಭವಾಗಬೇಕಿದ್ದ ಏಕದಿನ ಸರಣಿಯು ಜುಲೈ 18ಕ್ಕೆ ಮುಂದೂಡಲ್ಪಟ್ಟಿದೆ. ಇದೆಲ್ಲದರ ನಡುವೆ ವೇಳಾಪಟ್ಟಿಯಲ್ಲಿ ಮತ್ತೆ ಕೊಂಚ ಬದಲಾವಣೆಗಳಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

Sri Lankan Cricket

CricketJul 12, 2021, 11:43 AM IST

ಲಂಕಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಕ್ರಿಕೆಟಿಗರಿಗೆ ಕೊರೋನಾ ರಿಪೋರ್ಟ್ ನೆಗೆಟಿವ್‌

ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಯು ಜುಲೈ 13ರಿಂದಲೇ ಆರಂಭವಾಗಬೇಕಿತ್ತು. ಆದರೆ ಲಂಕಾ ಬ್ಯಾಟಿಂಗ್‌ ಕೋಚ್‌ ಗ್ರ್ಯಾಂಟ್‌ ಫ್ಲವರ್ ಹಾಗೂ ವಿಡಿಯೋ ವಿಶ್ಲೇಷಕನಿಗೆ ಸೋಂಕು ತಗುಲಿದ ಕಾರಣ, ಇಡೀ ತಂಡವನ್ನೇ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಮಾತ್ರವಲ್ಲದೇ ಸೀಮಿತ ಓವರ್‌ಗಳ ಸರಣಿಯನ್ನು ಜುಲೈ 18ಕ್ಕೆ ಮುಂದೂಡಲಾಗಿತ್ತು.

Sri Lankan Cricket

CricketJul 10, 2021, 5:31 PM IST

ಲಂಕಾ ತಂಡಕ್ಕೆ ಮತ್ತೊಂದು ಶಾಕ್‌; ಆಟಗಾರನೊಬ್ಬನಿಗೆ ಕೋವಿಡ್ ಪಾಸಿಟಿವ್..!

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಗೆ ಕೊರೋನಾ ವೈರಸ್ ಇನ್ನಿಲ್ಲದಂತೆ ಕಾಟ ಕೊಡಲಾರಂಭಿಸಿದೆ. ಈಗಾಗಲೇ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್‌ ಫ್ಲವರ್‌ ಹಾಗೂ  ಟೀಂ ಅನಾಲಿಸ್ಟ್‌ ಜಿ.ಟಿ. ನಿರ್ಶೋನ್ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪಿಸಿಆರ್ ಟೆಸ್ಟ್ ಮೂಲಕ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿಯನ್ನು ಪರಿಷ್ಕೃತಗೊಳಿಸಿ ಪ್ರಕಟಿಸಿತ್ತು.
ಇದೆಲ್ಲದರ ನಡುವೆ ಶ್ರೀಲಂಕಾ ಕ್ರಿಕೆಟ್‌ ತಂಡದಲ್ಲಿ ಮತ್ತೊಂದು ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Rahul Dravid Shikhar Dhawan

CricketJul 10, 2021, 4:34 PM IST

#BreakingNews ಇಂಡೋ-ಲಂಕಾ ಕ್ರಿಕೆಟ್ ಸರಣಿಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ..!

ಇಂಗ್ಲೆಂಡ್ ಪ್ರವಾಸ ಮುಗಿಸಿ ತವರಿಗೆ ವಾಪಾಸಾದ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್‌ ಕೋಚ್ ಗ್ರ್ಯಾಂಟ್ ಫ್ಲವರ್, ಟೀಂ ಅನಾಲಿಸ್ಟ್‌ ಜಿ.ಟಿ. ನಿರ್ಶೋನ್ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪಿಸಿಆರ್ ಟೆಸ್ಟ್ ಮೂಲಕ ದೃಢಪಟ್ಟಿತ್ತು. ಹೀಗಾಗಿ ಈ ಮೊದಲೇ ನಿಗದಿಯಾಗಿದ್ದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಯ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.

Kusal Perera

CricketJul 9, 2021, 4:41 PM IST

ಕುಸಾಲ್‌ ಪೆರೆರಾ ತಲೆದಂಡ, ದಸುನ್‌ ಶನಕಗೆ ಒಲಿದ ಲಂಕಾ ನಾಯಕ ಪಟ್ಟ

ಕಳೆದ ನಾಲ್ಕು ವರ್ಷದೊಳಗೆ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕತ್ವ ಪಟ್ಟ ಅಲಂಕರಿಸುತ್ತಿರುವ ಆರನೇ ಕ್ಯಾಪ್ಟನ್‌ ಎನಿಸಿದ್ದಾರೆ ಶನಕ. 2018ರ ಬಳಿಕ ದಿನೇಶ್ ಚಾಂಡಿಮಲ್‌, ಏಂಜಲೋ ಮ್ಯಾಥ್ಯೂಸ್‌, ಲಸಿತ್ ಮಾಲಿಂಗ, ದೀಮುತ್ ಕರುಣರತ್ನೆ ಹಾಗೂ ಕುಸಾಲ್‌ ಪೆರೆರಾ ಲಂಕಾ ಕ್ರಿಕೆಟ್ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದಾರೆ.

Grant Flower

CricketJul 9, 2021, 12:21 PM IST

ಭಾರತ ಎದುರಿನ ಸರಣಿಗೂ ಮುನ್ನ ಲಂಕಾಗೆ ಶಾಕ್‌; ಕೋಚ್‌ ಗ್ರ್ಯಾಂಟ್‌ ಫ್ಲವರ್‌ಗೆ ಕೋವಿಡ್ ದೃಢ

ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್‌ ಫ್ಲವರ್‌ಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿದೆ. ಗ್ರ್ಯಾಂಟ್‌ ಫ್ಲವರ್‌ ಅವರು ಮಂದ ಸೋಂಕಿನ ಲಕ್ಷಣವನ್ನು ಹೊಂದಿದ್ದರು. ಪಿಸಿಆರ್ ಟೆಸ್ಟ್‌ ಮಾಡಿದ ಬಳಿಕ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.