Slippers

(Search results - 24)
• undefined

BUSINESSJan 12, 2021, 3:10 PM IST

12 ಗಂಟೆ ಚಪ್ಪಲಿ ಧರಿಸಿದ್ರೆ 4 ಲಕ್ಷ ಕೊಡುತ್ತೆ ಕಂಪನಿ, ಕುಳಿತಲ್ಲೇ ಲಕ್ಷ ಲಕ್ಷ ಸಂಪಾದನೆ!

ಕೊರೋನಾತಂಕದ ನಡುವೆ ಯಾವುದಾದರೂ ಸಮಸ್ಯೆ ವೃದ್ಧಿಸಿದೆ ಎಂದರೆ ಆ ಪಟ್ಟಿಯಲ್ಲಿ ನಿರುದ್ಯೋಗ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಅನೇಕ ಮಂದಿ ಮಹಾಮಾರಿಯಿಂದಾಗಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ವಿಶ್ವಾದ್ಯಂತ ಅತ್ಯಂತ ವೇಗವಾಗಿ ಈ ಸಮಸ್ಯೆ ಹಬ್ಬಿಕೊಂಡಿತು. ಆದರೀಗ ನೀವು ಮನೆಯಲ್ಲಿದ್ದುಕೊಂಡೇ ಲಕ್ಷ ಲಕ್ಷ ಸಂಪಾದಿಸಬಹುದಾದ ಅವಕಾಶವಿದೆ. ಇದರಲ್ಲಿ ಶ್ರಮ ಪಡಬೇಕಾದ ಅಗತ್ಯವೂ ಇಲ್ಲ. ಕೇವಲ ಕಾಲಿಗೆ ಚಪ್ಪಲಿ ಧರಿಸಿ ನಿಮಗೆ ಯಾವ ರೀತಿ ಅನುಭವವಾಯಿತು ಎಂದು ಅಭಿಪ್ರಾಯ ಹಂಚಿಕೊಂಡರೆ ಆಯ್ತು. ಜೊತೆಗೆ ಈ ಚಪ್ಪಲಿ ಎಷ್ಟು ಪರ್ಫೆಕ್ಟ್ ಇದೆ ಎಂದು ಹೇಳಿದರಾಯ್ತು. ಕೇವಲ ಇಷ್ಟು ಕೆಲಸ ಮಾಡಿದರೆ ನಿಮ್ಮ ಖಾತೆಗೆ ಬರೋಬ್ಬರಿ ನಾಲ್ಕು ಲಕ್ಷ ಕ್ರೆಡಿಟ್ ಮಾಡಲಾಗುತ್ತದೆ.

Kasturi Bhavi Wears Slippers

Video Icon

stateDec 28, 2020, 4:40 PM IST

ಬೆಳಗಾವಿ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಲು ಶಪಥ; 15 ವರ್ಷಗಳಿಂದ ಚಪ್ಪಲಿ ಹಾಕದ ಕನ್ನಡತಿ!

ಬೆಳಗಾವಿ ಪಾಲಿಕೆ ಎದುರು ಕನ್ನಡ ಧ್ವಜ ಹಾರುವವರೆಗೆ ಕಾಲಿಗೆ ಚಪ್ಪಲಿ ಹಾಕುವುದಿಲ್ಲ ಎಂದು ಕಳೆದ 15 ವರ್ಷಗಳಿಂದ ಕಸ್ತೂರಿ ಭಾವೆಯವರು ಚಪ್ಪಲಿ ಹಾಕುತ್ತಿರಲಿಲ್ಲ. ಇಂದು ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಧ್ವಜ ಹಾರಿಸಿ ಕಸ್ತೂರಿ ಭಾವೆಯವರಿಗೆ ಚಪ್ಪಲಿ ನೀಡಿದ್ದಾರೆ.

Malaika Arora

Cine WorldNov 27, 2020, 12:19 PM IST

ಜಿಮ್‌ಗೆ 3 ಸಾವಿರ ರೂ. ಚಪ್ಪಲಿ ಧರಿಸಿದ ಮಲೈಕಾ ಅರೋರಾ!

ಫಿಟ್ನೆಸ್ ಫ್ರೀಕ್ ಮಲೈಕಾ ಅರೋರಾ ಜಿಮ್‌ಗೆ ತರಳುವ ವೇಳೆ ಧರಿಸಿದ ಚಪ್ಪಲಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ.

Malaika

FashionNov 24, 2020, 1:57 PM IST

ಸ್ಪೋಟ್ರ್ಸ್ ಬ್ರಾ, ಕಾಸ್ಟ್ಲಿಸ್ಲಿಪರ್ಸ್..! ಯೋಗ ಕ್ಲಾಸ್‌ಗೆ ಇಷ್ಟೊಂದ್ ಸ್ಟೈಲಾಗಿ ಹೋಗ್ತಾರೆ ಮಲೈಕಾ

ಫಿಟ್‌ನೆಸ್‌ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ವಹಿಸೋ ನಟಿ ಮಲೈಕಾ ರೋರಾ ಯೋಗ ಕ್ಲಾಸ್‌ಗೂ ಎಷ್ಟು ಸ್ಟೈಲಾಗಿ ಹೋಗ್ತಾರೆ ಗೊತ್ತಾ..? ಇಲ್ನೋಡಿ ಫೋಟೋಸ್

what is inside porn stars vanity bag

NewsNov 3, 2020, 4:48 PM IST

ಆ ಪೋರ್ನ್ ತಾರೆಯ ಬ್ಯಾಗಿನೊಳಗೇನಿತ್ತು!

ಸಾಕಷ್ಟು ನೀಲಿಚಿತ್ರಗಳಲ್ಲಿ ನಟಿಸಿದ್ದ ಪೋರ್ನ್ ಸ್ಟಾರ್ ಒಬ್ಬಳು ಇತ್ತೀಚೆಗೆ ತನ್ನ ವ್ಯಾನಿಟಿ ಬ್ಯಾಗ್ ಓಪನ್ ಮಾಡಿದ್ದಾಳೆ. ಆ ಬ್ಯಾಗ್ ನೊಳಗೇನಿತ್ತು ಗೊತ್ತಾ?

manchui reddy

Video Icon

IndiaOct 17, 2020, 4:34 PM IST

ಮಳೆಯಿಂದ ಕಂಗಾಲಾದ ಜನ, ನೋಡಲು ಬಂದ ಶಾಸಕನಿಗೆ ಚಪ್ಪಲಿ ಪೂಜೆ!

ಜನಮತ ಗಳಿಸಿ ಚುನಾವಣೆಯಲ್ಲಿ ಗೆದ್ದು ಜನ ನಾಯಕರೆನಿಸಿಕೊಂಡ ಪ್ರತಿಯೊಬ್ಬ ಶಾಸಕ, ಸಚಿವರು ಈ ಸುದ್ದಿ ನೊಡಲೇಬೇಕು. ಹೌದು ತಮ್ಮನ್ನು ಮರೆತ ಶಾಸಕನನ್ನು ಮಳೆಯಿಂದ ಸಂತ್ರಸ್ತರಾದ ಮಂದಿ ಬೆಂಡೆತ್ತಿದ್ದಾರೆ.ಮಳೆಯಿಂದಾದ ಹಾನಿ ವೀಕ್ಷಿಸಲು ಬಂದ ಶಾಸಕನಿಗೆ ಜನರು ಚಪ್ಪಲಿ ಏಟು ಬಿಗಿದಿದ್ದಾರೆ.

• undefined

Cine WorldJun 26, 2020, 2:17 PM IST

ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌‌ಗೆ ಫ್ಲಾಟ್‌ ಚಪ್ಪಲಿ ಧರಿಸಿ ಗೇಲಿಗೆ ಗುರಿಯಾಗಿದ್ರು ಐಶ್ವರ್ಯಾ

ಫ್ರಾನ್ಸ್‌ನ ಕ್ಯಾನೆಸ್ ಇಂಟರ್‌ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್‌ ಪ್ರತಿವರ್ಷವೂ ನೆಡೆಯುತ್ತದೆ. ಇದರಲ್ಲಿ ಭಾಗವಹಿಸುವುದು ಪ್ರತಿಷ್ಠೆಯ ಸಂಕೇತ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಾರೆ ನಟಿಯರು. ವಿಶೇಷವಾಗಿ ನಟಿಯರು ಧರಿಸಿಸುವ ಡಿಸೈನರ್‌ ಡ್ರೆಸ್‌ಗಳು ಇಲ್ಲಿಯ ಮುಖ್ಯ ಆಕರ್ಷಣೆ. ಭಾರತದ ಹಲವು ನಟಿಯರು ಇದರಲ್ಲಿ ಭಾಗವಹಿಸುತ್ತಾರೆ  ಬಾಲಿವುಡ್‌ ನಟಿ ಕಮ್‌ ಮಾಜಿ ಭುವನ ಸುಂದರಿ ಐಶ್ವರ್ಯಾ ರೈ ಕಳೆದ 18 ವರ್ಷಗಳಿಂದಲೂ ಈ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುತ್ತಿದ್ದಾರೆ. ಒಮ್ಮೆ, ಬಚ್ಚನ್ ಫ್ಯಾಮಿಲಿಯ ಸೊಸೆ ಫ್ಲಾಟ್‌ ಚಪ್ಪಲಿಗಳನ್ನು ಧರಿಸಿ ಕ್ಯಾನೆಸ್  ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ನೆಡೆಯಬೇಕಾಯಿತು. ಅದಕ್ಕೆ ಸಿಕ್ಕಾಪಟ್ಟೆ ಟೀಕೆಗಳೂ ಕೇಳಿ ಬಂದಿದ್ದವು.

• undefined

Cine WorldMay 10, 2020, 10:00 PM IST

ಕಂಗನಾಳ ಮೇಲೆ ಚಪ್ಪಲಿ ಎಸೆದಿದ್ದರಂತೆ ಮಹೇಶ್ ಭಟ್!

ಸಿನಿಮಾರಂಗದಲ್ಲಿ ಪರಸ್ಪರ ಜಗಳ ಕಾಮನ್‌. ಅದರಲ್ಲೂ ಕೆಲವು ಸ್ಟಾರ್‌ಗಳಂತೂ ಹಾವು ಮುಂಗಸಿಯ ತರ ಕಿತ್ತಾಡುವುದನ್ನು ನೋಡಿದ್ದೇವೆ. ಸಿಕ್ಕ ಅವಕಾಶಗಳನ್ನು ಬಿಡದೆ ಒಬ್ಬರ ಮೇಲೆ ಒಬ್ಬರು ದೂರುತ್ತಿರುತ್ತಾರೆ. ಬಾಲಿವುಡ್‌ನ ಕಂಗನಾ ಹಾಗೂ ಅಲಿಯಾರ ನಡುವಿನ ಜಟಾಪಟಿ ಹೊಸದೇನೂ ಅಲ್ಲ. ಕಂಗನಾ ಅಲಿಯಾರನ್ನು ಕೆಣಕುತ್ತಲೇ ಇರುವುದು ಸುದ್ದಿಯಾಗುತ್ತಿರುತ್ತದೆ. ಕಂಗನಾಳ ತಂಗಿ ರಂಗೋಲಿ ಸಹ ಅಕ್ಕನಂತೆ ತನ್ನ ಮಾತುಗಳಿಂದ ವಿವಾದಕ್ಕೆ ಒಳಾಗುತ್ತಿರುತ್ತಾರೆ ಆಗಾಗ. ಕಂಗನಾಳ ಮೇಲೆ ಚಪ್ಪಲಿ ಮಹೇಶ್ ಭಟ್ ಎಸೆದಿದ್ದರು ಎಂದು ರಂಗೋಲಿ ಹಿಂದೊಮ್ಮೆ ಕಿಡಿಕಾರಿದ್ದು ಈಗ ಮತ್ತೆ ಆ ವಿಷಯಕ್ಕೆ ಜೀವ ಬಂದು ವೈರಲ್‌ ಆಗಿದೆ.

• undefined

Karnataka DistrictsDec 9, 2019, 10:09 AM IST

ಗೆಲುವಿಗಾಗಿ ಪ್ರಾರ್ಥನೆ: ಕಾಂಗ್ರೆಸ್ ಅಭ್ಯರ್ಥಿಯಿಂದ ಸಾಯಿಬಾಬಾಗೆ ಬೆಳ್ಳಿ ಪಾದುಕೆ

ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಪತ್ನಿ ಸುಪ್ರಿಯಾ, ತಾಯಿ ರತ್ನಮ್ಮ ಹಾಗೂ ಕಾರ್ಯಕರ್ತರ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಕುಟುಂಬ ಸಮೇತ ಸಾಯಿಬಾಬಾನಿಗೆ ಪೂಜೆ ಸಲ್ಲಿಸಿ ಬೆಳ್ಳಿ ಪಾದುಕೆ ಅರ್ಪಿಸಿದ್ದಾರೆ.

• Priyanka Reddy

IndiaNov 30, 2019, 5:44 PM IST

ಬಿಡಿ ಒಳಗೆ: ಅತ್ಯಾಚಾರ ಆರೋಪಿಗಳಿರುವ ಜೈಲಿನ ಮುಂಭಾಗದಲ್ಲಿ ಜನಾಕ್ರೋಶ!

ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸೆರೆ ಸಿಕ್ಕಿರುವ ನಾಲ್ವರು ಆರೋಪಿಗಳನ್ನು ಶಾದ್‌ನಗರ್ ಪೊಲೀಸ್ ಠಾಣೆಯಲ್ಲಿ ಬಂಧಿಸಿಡಲಾಗಿದೆ. ಈ ವೇಳೆ ಆರೋಪಿಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಒತ್ತಾಯಿಸಿ ಭಾರೀ ಜನಸ್ತೋಮ ಶಾದ್‌ನಗರ್ ಪೊಲೀಸ್ ಠಾಣೆ ಮುಂದೆ ಜಮಾಯಿಸಿದೆ.

• motorcycle rider

AUTOMOBILESep 10, 2019, 1:11 PM IST

ಹವಾಯಿ ಚಪ್ಪಲ್, ಸ್ಲಿಪ್ಪರ್ ಹಾಕಿ ದ್ವಿಚಕ್ರ ವಾಹನ ಓಡಿಸಿದರೆ ಫೈನ್!

ಹೊಸ ನಿಯಮ ಜಾರಿಯಾದ ಬಳಿಕ ವಾಹನ ಹತ್ತೊ ಮೊದಲು ಸವಾರರು ಎರಡೆರಡು ಬಾರಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕಾರಣ ದುಬಾರಿ ದಂಡಕ್ಕಿಂತ ನಿಯಮ ಪಾಲನೆ ಲೇಸು ಅನ್ನೋ ಅಭಿಪ್ರಾಯ ಮೂಡುತ್ತಿದೆ. ಇದೀಗ ದಾಖಲೆ, ಸಿಗ್ನಲ್ ಜಂಪ್ ಮಾತ್ರವಲ್ಲ ನೀವು ಧರಿಸೋ ಚಪ್ಪಲ್‌ನಿಂದಲೂ ನಿಮಗೆ ದಂಡದ ಹೊರೆ ಬೀಳಲಿದೆ

• accupressure slippers

LIFESTYLESep 1, 2019, 3:36 PM IST

ಅಕ್ಯುಪ್ರೆಶರ್ ಚಪ್ಪಲಿ ಧರಿಸಿ; ನೋವುಗಳನ್ನು ಕಡಿಮೆ ಮಾಡಿಕೊಳ್ಳಿ!

ಆಕ್ಯುಪ್ರೆಶರ್ ಎಂಬುದು ಚೀನೀಯರ ಪುರಾತನ ಚಿಕಿತ್ಸಾ ಪದ್ಧತಿಯಾಗಿದ್ದು, ಇದು ನಮ್ಮೆಲ್ಲರಲ್ಲೂ ಇರುವ ಲೈಫ್ ಫೋರ್ಸ್‌ನ್ನು ಮತ್ತೆ ನಮ್ಮೊಳಗೆ ತುಂಬುವ ಕೆಲಸ ಮಾಡುತ್ತದೆ. ಈ ಲೈಫ್‌ಫೋರ್ಸ್‌ನ ಪಾಸಿಟಿವ್ ಎನರ್ಜಿ ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ನಂಬಲಾಗುತ್ತದೆ.

• senior couple

NEWSAug 14, 2019, 8:43 PM IST

ಆಯುಧಗಳೊಂದಿಗೆ ಬಂದ ದರೋಡೆಕೋರರನ್ನು ಹಿಮ್ಮೆಟ್ಟಿಸಿದ ಅಜ್ಜ, ಅಜ್ಜಿ!

ದರೋಡೆಕಾರರು ಯಾವತ್ತೂ ಕಳ್ಳತನ ಮಾಡಲು ಒಂಟಿ ಮಹಿಳೆಯರು ಅಥವಾ ವೃದ್ಧರಿರುವ ಮನೆಯನ್ನೇ ಗುರಿಯಾಗಿಸಿಕೊಳ್ಳುತ್ತಾರೆ. ನಮ್ಮನ್ನು ಎದುರಿಸಲಾರರು ಎಂಬ ಭಂಡತನವೋ ಅಥವಾ ಭಯಪಡುತ್ತಾರೆಂಬ ಭಾವನೆಯೋ. ಆದರೀಗ ದರೋಡೆಕೋರರ ಇಂತಹ ನಂಬಿಕೆಯನ್ನು ಹುಸಿಯಾಗಿಸುವ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.

• Nandi

Karnataka DistrictsJun 9, 2019, 8:30 AM IST

ನಂದಿ ಮೂರ್ತಿಗೆ ಚಪ್ಪಲಿ ಹಾರ: ಗೊಳಸಂಗಿ ಗ್ರಾಮ ಉದ್ವಿಗ್ನ

ನಂದಿ ಮೂರ್ತಿಗೆ ಚಪ್ಪಲಿ ಹಾರ: ಗೊಳಸಂಗಿ ಗ್ರಾಮ ಉದ್ವಿಗ್ನ| ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನದಲ್ಲಿರುವ ನಂದಿ ಮೂರ್ತಿ

• Hukkeri
Video Icon

Karnataka DistrictsMay 17, 2019, 10:48 PM IST

ಹುಕ್ಕೇರಿ ಗೆಲುವಿಗಾಗಿ ಚಪ್ಪಲಿ ಬಿಟ್ಟ ಅಭಿಮಾನಿ..

ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಒಂದು ಕಡೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರು ಜಯ ನಮ್ಮದೇ ಆಗಲಿ ಎಂದು ಗುಡಿ ಗುಂಡಾರಗಳನ್ನ ಸುತ್ತಿ ಹರಕೆ ಹೊರುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಗೆಲುವಿಗಾಗಿ ವ್ಯಕ್ತಿಯೋರ್ವ ಚಪ್ಪಲಿ ಹಾಕುವದನ್ನ ಬಿಟ್ಟು ಪ್ರಕಾಶ ಹುಕ್ಕೇರಿ ಗೆದ್ದ ಮೇಲೆಯೇ ಚಪ್ಪಲಿ ಹಾಕುತ್ತೇನೆ ಎಂದು ಹರಕೆ ಹೊತ್ತಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಭೀಮಗೌಡ ಬಸಗೌಡ ಅಮ್ಮಣಗಿ ಎಂಬ ವ್ಯಕ್ತಿ ಪ್ರಕಾಶ ಹುಕ್ಕೇರಿ ಗೆಲುವಿಗಾಗಿ ಅಕ್ಕಿವಾಟ ಮಲ್ಲಯ್ಯ( ಈಶ್ವರ ) ಹರಕೆ ಹೊತ್ತಿದ್ದಾನೆ. ಚುನಾವಣಾ ಮುಗಿದ ದಿನದಿಂದಲೇ ಭೀಮಗೌಡ ಪಾಟೀಲ ಹರಕೆ ಹೊತ್ತಿದ್ದು ಬಿರು ಬಿಸಲಲ್ಲೂ ಚಪ್ಪಲಿ ಇಲ್ಲದೇ ಅಲೆದಾಡುತ್ತಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲೂ ಇವರು ಪ್ರಕಾಶ ಹುಕ್ಕೇರಿ ಅವರ ಗೆಲುವಿಗಾಗಿ ಹೀಗೆ ಹರಕೆ ಹೊತ್ತಿದ್ದರು. ಪ್ರಕಾಶ ಹುಕ್ಕೇರಿ ಅವರ ಗೆಲವು ಕೂಡ ಆಗಿತ್ತು. ಈಗ ಮತ್ತೆ ಹರಕೆ ಹೊತ್ತಿದ್ದು ಅಕ್ಕಿವಾಟ ಮಲ್ಲಯ್ಯ ಮತ್ತೆ ಪ್ರಕಾಶ ಹುಕ್ಕೇರಿ ಅವರನ್ನ ಗೆಲ್ಲಿಸುತ್ತಾನೆ ಎನ್ನುವ ವಿಶ್ವಾಸ ಭೀಮಗೌಡ ಅವರದ್ದಾಗಿದೆ.