Shabarimale  

(Search results - 12)
  • Shabarimale
    Video Icon

    Special16, Jan 2019, 2:20 PM IST

    ಮಹಿಳೆಯರ ಪ್ರವೇಶದಿಂದ ಅಯ್ಯಪ್ಪನ ಬ್ರಹ್ಮಚರ್ಯ ಕೆಟ್ಟಿತಾ?

    ಶಬರಿಮಲೆ ಅಯ್ಯಪ್ಪನ ಬ್ರಹ್ಮಚರ್ಯ ಮುಗಿಯಿತಾ ಎನ್ನುವ ಮಾತು ಕೇಳಿ ಬರುತ್ತಿದೆ. ರಾಕ್ಷಸಿ ಮಹಿಷಿಯನ್ನು ಮಣಿಕಂಠ ಸಂಹರಿಸುತ್ತಾನೆ. ಪಾಪ ವಿಮೋಚನೆಯಾದ ಮಹಿಷಿ ಗಂಧರ್ವ ಕನ್ಯೆಯಾಗಿ ಮತ್ತೆ ಹುಟ್ಟತ್ತಾಳೆ. ಮಣಿಕಂಠನ ಮೇಲೆ ಮೋಹಿತಳಾಗಿ ತನ್ನನ್ನು ವರಿಸಬೇಕೆಂದು ಕೇಳುತ್ತಾಳೆ. ಅದಕ್ಕೆ ಒಪ್ಪದ ಮಣಿಕಂಠ, ನೀನು ನನ್ನ ಸನ್ನಿಧಾನದಲ್ಲೇ ಇರು. ನನ್ನ ಬ್ರಹ್ಮಚರ್ಯ ಮುಗಿದಾಗ ಮದುವೆಯಾಗುತ್ತೇನೆ ಎನ್ನುತ್ತಾನೆ. ಮಹಿಳೆಯರ ಪ್ರವೇಶದಿಂದ ಅಯ್ಯಪ್ಪನ ಬ್ರಹ್ಮಚರ್ಯಕ್ಕೆ ಚ್ಯುತಿ ಬಂದಿತಾ? ಎನ್ನುವ ಮಾತು ಕೇಳಿ ಬರುತ್ತಿದೆ. 

  • Pinarayi

    NEWS13, Jan 2019, 11:30 AM IST

    ಶಬರಿಮಲೆ ವಿವಾದ: ಪಿಣರಾಯಿಗೆ ಕಾಮನ್‌ಸೆನ್ಸ್ ಇಲ್ಲ!

    ಶಬರಿಮಲೆಯ ಮಹಿಳೆಯರ ಪ್ರವೇಶವಿಲ್ಲದ ಸಂಪ್ರದಾಯವು ಇತರ ಕೆಲವು ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ ಎಂಬ ಸಂಪ್ರದಾಯಕ್ಕೆ ಸಮಾನಾಂತರವಾಗಿ ನಡೆದು ಬರುತ್ತಿದೆ. ಪೊಂಗಲ್‌ ಸಮಯದಲ್ಲಿ ಅಟ್ಟುಕಲ್‌ ದೇವಾಲಯದಲ್ಲಿಯ ದೇವಿಗೆ ಮಣ್ಣಿನ ಮಡಿಕೆಯಲ್ಲಿ ಅನ್ನವನ್ನು ಮಾಡಿ ನೈವೇದ್ಯ ಮಾಡುವುದಕ್ಕೆ ಮಹಿಳೆಯರು ಸೇರುತ್ತಾರೆ. ಜಗತ್ತಿನಲ್ಲೇ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಸೇರುವ ತಾಣ ಇದು ಎಂದು ಪ್ರಸಿದ್ಧವಾಗಿದೆ.

  • Shabarimale

    NEWS5, Jan 2019, 9:17 AM IST

    ಶಬರಿಮಲೆಗೆ ಮಹಿಳೆಯರ ಪ್ರವೇಶ ಖಂಡಿಸಿ ಭಕ್ತ ಆತ್ಮಹತ್ಯೆಗೆ ಶರಣು?

    ಬಿಂದು ಮತ್ತು ಕನಕದುರ್ಗ ಎಂಬ ಇಬ್ಬರು ಮಹಿಳೆಯರು ಇದೇ ಮೊದಲ ಬಾರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಿದ್ದು ದೇಶಾದ್ಯಂತ ಸುದ್ದಿಯಾಗುತ್ತಿದೆ. ಕೇರಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಮಧ್ಯೆ ಈ ಕುರಿತ ಸುಳ್ಳುಸುದ್ದಿಗಳೂ ಹರಿದಾಡುತ್ತಿವೆ. ಸದ್ಯ ಇದೇ ವಿಯಕ್ಕೆ ಸಂಬಂಧಿಸಿದಂತೆ ಮಹಿಳೆಯರಿಬ್ಬರು ದೇವಸ್ಥಾನ ಪ್ರವೇಶಿಸಿದ್ದನ್ನು ಖಂಡಿಸಿ ಅಯ್ಯಪ್ಪ ಭಕ್ತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸಂದೇಶವೊಂದು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

  • Shabarimale
    Video Icon

    NEWS3, Jan 2019, 11:53 AM IST

    ಶಬರಿ ಸಂಘರ್ಷಕ್ಕೆ ಬಿಜೆಪಿ ಕಾರ್ಯಕರ್ತ ಬಲಿ

    ಶಬರಿಮಲೆಗೆ ಮಹಿಳೆಯರ ಪ್ರವೇಶದ ಬೆನ್ನಲ್ಲೇ ಕೇರಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಸಿಪಿಎಂ-ಬಿಜೆಪಿ ಕಾರ್ಯಕರ್ತರ ಘರ್ಷಣೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಬಲಿಯಾಗಿದ್ದಾನೆ. ನಿನ್ನೆ ರಾತ್ರಿ ಪದನಮ್ ತಿಟ್ಟ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಎರಡೂ ಗುಂಪುಗಳ ನಡುವೆ ನಡೆದ ಕಲ್ಲು ತೂರಾಟದಲ್ಲಿ ಬಿಜೆಪಿ ಕಾರ್ಯಕರ್ತ ಚಂದ್ರನ್ ಉನ್ನಿತ್ತಾನ್ ಸಾವನ್ನಪ್ಪಿದ್ದಾರೆ. 

  • NEWS4, Dec 2018, 8:12 AM IST

    ಶಬರಿಮಲೆ ಮಹಿಳಾ ಪ್ರವೇಶ ನಿಷೇಧಿಸಿಸುವಂತೆ ಬಿಜೆಪಿ ಉಪವಾಸ

    ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕೆಂಬ ಸುಪ್ರೀಂಕೋರ್ಟ್‌ ತೀರ್ಪು ಜಾರಿಗೆ ತುದಿಗಾಲಿನಲ್ಲಿ ನಿಂತಿರುವ ಕೇರಳ ಸರ್ಕಾರದ ವಿರುದ್ಧ ವಿಧಾನಸೌಧದ ಎದುರು ಬಿಜೆಪಿ ಸೋಮವಾರದಿಂದ ಅನಿರ್ದಿಷ್ಟಾವಧಿ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದೆ.

  • NEWS3, Dec 2018, 7:59 AM IST

    ಅಯ್ಯಪ್ಪನಿಗೆ ಭಕ್ತರ ಕೊರತೆ!

    ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದ ಬಳಿಕ, ಕೇರಳದಲ್ಲಿ ನಡೆದ ಹಿಂಸಾಚಾರ ಪ್ರಕರಣಗಳು, ಶಬರಿಮಲೆ ದೇಗುಲಕ್ಕೆ ಆಗಮಿಸುವ ಭಕ್ತರಲ್ಲಿ ಭಾರೀ ಭಯ ಮೂಡಿಸಿದೆ. ಅದರಲ್ಲೂ ನೆರೆಯ ರಾಜ್ಯಗಳಿಂದ ಆಗಮಿಸುತ್ತಿದ್ದ ಭಕ್ತರಿಗೆ ದೇಗುಲದ ಸುತ್ತಮುತ್ತಲ ಪ್ರದೇಶದಲ್ಲಿನ ಹಿಂಸಾಚಾರದ ಪ್ರಕರಣಗಳು ಆತಂಕ ಮೂಡಿಸಿವೆ.

  • Shabarimale

    NEWS27, Oct 2018, 11:12 AM IST

    ಶಬರಿಮಲೆ: ಮುಗ್ಧರ ಬಂಧಿಸಿದರೆ ಹುಷಾರ್ !

    ಕೇರಳದ ಶಬರಿಮಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು 2000 ಜನರನ್ನು ಬೆಂಬಲಿಸಿದ ಬೆನ್ನಲ್ಲೇ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಎಚ್ಚರಿಕೆ ನೀಡಿದೆ. 

  • Shabarimale
    Video Icon

    NEWS17, Oct 2018, 9:18 AM IST

    ಮಹಿಳೆಯರು ಶಬರಿಮಲೆ ಪ್ರವೇಶಕ್ಕೆ ಕೌಂಟ್‌ಡೌನ್ ಶುರು

    ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಅಯ್ಯಪ್ಪನ ದೆಗುವ ಪ್ರವೇಶಕ್ಕೆ ಮಹಿಳಾಮಣಿಯರು ಸಜ್ಜಾಗಿದ್ದಾರೆ. ಪ್ರವೇಶಕ್ಕೆ ಅವಕಾಶ ನೀಡಲ್ಲ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ.  ಸದ್ಯ ದೇಶದ ಚಿತ್ತ ಅಯ್ಯಪ್ಪ ದೇವಸ್ಥಾನದತ್ತ ನೆಟ್ಟಿದೆ.  

  • NEWS10, Oct 2018, 12:29 PM IST

    ಶಬರಿಮಲೆ ರತ್ನ ರಹಸ್ಯವೇನು? ಆಭರಣಗಳ ವಿಶೇಷತೆಗಳೇನು?

    ಶಬರಿಮಲೆ ಅಯ್ಯಪ್ಪ ದೇವಾಲಯದೊಂದಿಗೆ ನಿಕಟ ಸಂಬಂಧ ಹೊಂದಿರುವ ಪಂದಳ ರಾಜಮನೆತನ ಕೂಡ ತೀರ್ಪನ್ನು ವಿರೋಧಿಸಿದೆ. ಶಬರಿಮಲೆಗೆ ಮಹಿಳೆ ಪ್ರವೇಶಿಸಿದರೆ ತಮ್ಮಲ್ಲಿರುವ ಅಯ್ಯಪ್ಪನ ಆಭರಣಗಳನ್ನು ಕೊಡುವುದಿಲ್ಲ ಎಂದು ರಾಜಮನೆತನದವರು ಹೇಳಿದ್ದಾಗಿಯೂ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಶಬರಿಮಲೆಯ ಆಭಣಗಳ ವಿಶೇಷತೆ ಏನು? ಅವು ಪಂದಳ ರಾಜಮನೆತನದ ಬಳಿ ಏಕಿವೆ? ಆಭರಣಗಳನ್ನು ಪ್ರತಿ ವರ್ಷ ಶಬರಿಮಲೆಗೆ ತರುವಾಗ ಪಾಲಿಸುವ ಸಂಪ್ರದಾಯಗಳೇನು ಎಂಬಿತ್ಯಾದಿ ಕುತೂಹಲಕರ ಮಾಹಿತಿ ಇಲ್ಲಿದೆ.

  • NEWS4, Oct 2018, 10:50 AM IST

    ತೀರ್ಪಿನ ಬಳಿಕ ಸ್ತ್ರೀಯರು ಶಬರಿಮಲೆಗೆ ಹೋಗುತ್ತಾರಾ?

    ಎಲ್ಲಾ ವಯಸ್ಸಿನ ಮಹಿಳೆಯರೂ ದೇವಸ್ಥಾನ ಪ್ರವೇಶಿಸಿ ಅಯ್ಯಪ್ಪನನ್ನು ಪೂಜಿಸಬಹುದು ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಹಾಗೆಯೇ, ಪೂಜಾ ಸ್ಥಳಗಳಲ್ಲಿ ಲಿಂಗಾಧಾರಿತವಾಗಿ ಪ್ರವೇಶ ನಿರ್ಬಂಧಿಸುವಂತಿಲ್ಲ ಎಂದೂ ಹೇಳಿದೆ. ಆದರೆ ಈ ತೀರ್ಪಿನಿಂದಾಗಿ ಈ ಹಿಂದಿನ ಸಂಪ್ರದಾಯಗಳೆಲ್ಲ ಬದಲಾಗುತ್ತವೆಯೇ? ಪುರುಷಪ್ರಧಾನ ಧಾರ್ಮಿಕ ವ್ಯವಸ್ಥೆ ಬದಲಾಗುತ್ತದೆಯೇ?

  • kerala floods

    NEWS19, Aug 2018, 7:54 AM IST

    ಕೇರಳ ಪ್ರವಾಹಕ್ಕೆ ಶಬರಿಮಲೆಗೆ ಮಹಿಳೆಯರ ಪ್ರವೇಶ ಕಾರಣ?

    ಕೇರಳದಲ್ಲಿ ಪ್ರವಾಹ ಉಂಟಾಗಿರುವುದಕ್ಕೂ, ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೂ ಏನಾದರೂ ಸಂಬಂಧ ಇದೆಯೇ? ಆದರೆ, ಕೆಲವು ಟ್ವೀಟರ್‌ ಬಳಕೆದಾರರು ಮಾತ್ರ ‘ಮಹಿಳೆಯರು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯವನ್ನು ಪ್ರವೇಶಿಸಲು ಬಯಸಿದ್ದರಿಂದಲೇ ಕೇರಳದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಅಯ್ಯಪ್ಪಸ್ವಾಮಿ ಮುನಿಸಿಕೊಂಡಿದ್ದರಿಂದ ಅನಾಹುತ ಸೃಷ್ಟಿಯಾಗಿದೆ’ ಎಂದು ವಾದಿಸಿದ್ದಾರೆ.