Shabarimala
(Search results - 32)Karnataka DistrictsJan 12, 2020, 12:35 PM IST
ಪೊಲೀಸರಿಗೆ ಆತಂಕ ತಂದ ‘ಪೊಲೀಸ್’ ನಾಮಫಲಕ!
ತಮಗೇ ತಿಳಿಯದ ಪೊಲೀಸ್ ನಾಮಫಲಕ ಹಾಕಿ ಓಡಾಡುತ್ತಿದ್ದ ಕಾರನ್ನು ನೋಡಿ ಪೊಲೀಸರೇ ಆತಂಕಕ್ಕೊಳಗಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
NEWSJan 14, 2019, 8:16 AM IST
ಶಬರಿಮಲೆಯಲ್ಲಿ ಸಂಪ್ರದಾಯ ಪಾಲಿಸಬೇಕು: ರಾಹುಲ್ ಗಾಂಧಿ
ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನವ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ್ದ ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇದೀಗ ಉಲ್ಟಾ ಹೊಡೆದಿದ್ದಾರೆ.
NEWSJan 5, 2019, 9:17 AM IST
ಶಬರಿಮಲೆಗೆ ಮಹಿಳೆಯರ ಪ್ರವೇಶ ಖಂಡಿಸಿ ಭಕ್ತ ಆತ್ಮಹತ್ಯೆಗೆ ಶರಣು?
ಬಿಂದು ಮತ್ತು ಕನಕದುರ್ಗ ಎಂಬ ಇಬ್ಬರು ಮಹಿಳೆಯರು ಇದೇ ಮೊದಲ ಬಾರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಿದ್ದು ದೇಶಾದ್ಯಂತ ಸುದ್ದಿಯಾಗುತ್ತಿದೆ. ಕೇರಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಮಧ್ಯೆ ಈ ಕುರಿತ ಸುಳ್ಳುಸುದ್ದಿಗಳೂ ಹರಿದಾಡುತ್ತಿವೆ. ಸದ್ಯ ಇದೇ ವಿಯಕ್ಕೆ ಸಂಬಂಧಿಸಿದಂತೆ ಮಹಿಳೆಯರಿಬ್ಬರು ದೇವಸ್ಥಾನ ಪ್ರವೇಶಿಸಿದ್ದನ್ನು ಖಂಡಿಸಿ ಅಯ್ಯಪ್ಪ ಭಕ್ತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
NEWSJan 3, 2019, 11:53 AM IST
ಶಬರಿ ಸಂಘರ್ಷಕ್ಕೆ ಬಿಜೆಪಿ ಕಾರ್ಯಕರ್ತ ಬಲಿ
ಶಬರಿಮಲೆಗೆ ಮಹಿಳೆಯರ ಪ್ರವೇಶದ ಬೆನ್ನಲ್ಲೇ ಕೇರಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಸಿಪಿಎಂ-ಬಿಜೆಪಿ ಕಾರ್ಯಕರ್ತರ ಘರ್ಷಣೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಬಲಿಯಾಗಿದ್ದಾನೆ. ನಿನ್ನೆ ರಾತ್ರಿ ಪದನಮ್ ತಿಟ್ಟ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಎರಡೂ ಗುಂಪುಗಳ ನಡುವೆ ನಡೆದ ಕಲ್ಲು ತೂರಾಟದಲ್ಲಿ ಬಿಜೆಪಿ ಕಾರ್ಯಕರ್ತ ಚಂದ್ರನ್ ಉನ್ನಿತ್ತಾನ್ ಸಾವನ್ನಪ್ಪಿದ್ದಾರೆ.
NEWSDec 27, 2018, 8:52 AM IST
ಶಬರಿಮಲೆಯಲ್ಲಿ ಸಂಪ್ರದಾಯ ಉಳಿಸಲು ಭಕ್ತರಿಂದ ದೀಪ ಹೋರಾಟ
ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಉಳಿಸಿಕೊಂಡು ಹೋಗಬೇಕೆಂಬ ಆಶಯದೊಂದಿಗೆ ಕೇರಳದಲ್ಲಿ ಭುಧವಾರ ಬೃಹತ್ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
NEWSDec 4, 2018, 8:12 AM IST
ಶಬರಿಮಲೆ ಮಹಿಳಾ ಪ್ರವೇಶ ನಿಷೇಧಿಸಿಸುವಂತೆ ಬಿಜೆಪಿ ಉಪವಾಸ
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕೆಂಬ ಸುಪ್ರೀಂಕೋರ್ಟ್ ತೀರ್ಪು ಜಾರಿಗೆ ತುದಿಗಾಲಿನಲ್ಲಿ ನಿಂತಿರುವ ಕೇರಳ ಸರ್ಕಾರದ ವಿರುದ್ಧ ವಿಧಾನಸೌಧದ ಎದುರು ಬಿಜೆಪಿ ಸೋಮವಾರದಿಂದ ಅನಿರ್ದಿಷ್ಟಾವಧಿ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದೆ.
NEWSDec 2, 2018, 11:06 AM IST
ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರ ಯತ್ನ
ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ಶಬರಿಮಲೆ ದೇಗುಲಕ್ಕೆ ಮತ್ತೆ ಮಹಿಳೆಯರ ಪ್ರವೇಶ ಯತ್ನ ನಡೆದಿದೆ. ಆದರೆ ಭಕ್ತಾದಿಗಳು ಇಬ್ಬರು ಮಹಿಳಾ ಭಕ್ತರನ್ನು ಪಂಪಾ ಪ್ರದೇಶದಲ್ಲೇ ತಡೆದು ವಾಪಸ್ ಕಳುಹಿಸಿದ್ದಾರೆ.
NEWSNov 5, 2018, 10:13 AM IST
ಶಬರಿಮಲೆ ದೇಗುಲ ಓಪನ್ ; ಮಹಿಳೆಯರ ಪ್ರವೇಶಕ್ಕೆ ಕ್ಷಣಗಣನೆ
ಶಬರಿಮಲೆಯಲ್ಲಿ ವಿಶೇಷ ದರ್ಶನಕ್ಕೆ ಇಂದು ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆಯಲಿದೆ. ಶಬರಿಮಲೆ ಸುತ್ತಮುತ್ತ ಭಾರೀ ಬಂದೋಬಸ್ತ್ ಮಾಡಲಾಗಿದೆ. ಇಂದಾದರೂ ಮಹಿಳೆಯರಿಗೆ ದರ್ಶನ ಭಾಗ್ಯ ಸಿಗುತ್ತಾ? ಕ್ಷಣಗಣನೆ ಶುರುವಾಗಿದೆ.
NEWSNov 5, 2018, 9:53 AM IST
ಅಯ್ಯಪ್ಪ ಸ್ವಾಮಿ ದೇವರೇ ಅಲ್ಲ : ಪ್ರಕಾಶ್ ರೈ ವಿವಾದದ ಕಿಡಿ
ಸದಾ ಏನಾದರೊಂದು ವಿವಾದ ಹುಟ್ಟು ಹಾಕುವ ಪ್ರಕಾಶ್ ರೈ ಈಗ ಮತ್ತೊಮ್ಮೆ ವಿವಾದದ ಹೇಳಿಕೆ ಕೊಟ್ಟಿದ್ದಾರೆ. ಶಬರಿಮಲೆ ಅಯ್ಯಪ್ಪ ದೇವರೇ ಅಲ್ಲ. ಮಹಿಳೆಯರನ್ನು ನೋಡದ ದೇವರು ದೇವರೇ ಅಲ್ಲ ಎಂದಿದ್ದಾರೆ.
SandalwoodOct 31, 2018, 4:16 PM IST
ದರ್ಶನ್ ಕಾರು ಅಪಘಾತಕ್ಕೆ ಕಾರಣ ಶಬರಿಮಲೆನಾ?
ಅಯ್ಯಪ್ಪ ಮಾಲೆ ಧರಿಸಿದ್ರೂ ನಟ ದರ್ಶನ್ ಶಬರಿಮಲೆಗೆ ಹೋಗದೇ ಇರುವುದೇ ಕಂಟಕವಾಯ್ತಾ? ಅಪಘಾತಕ್ಕೆ ಇದೇ ಕಾರಣವಾಯ್ತಾ? ಕಳೆದ 6 ವರ್ಷಗಳಿಂದ ದರ್ಶನ್ ಶಬರಿಮಲೆಗೆ ಹೋಗುತ್ತಿದ್ದರು. ಆದರೆ ಈ ಬಾರಿ ಹೋಗಲೇ ಇಲ್ಲ. ಇದೇ ಅವರ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
NEWSOct 30, 2018, 7:54 AM IST
ನವೆಂಬರ್ನಲ್ಲಿ ಅಮಿತ್ ಶಾ ಶಬರಿಮಲೆ ಯಾತ್ರೆ?
ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಅಯ್ಯಪ್ಪ ಭಕ್ತರ ಹೋರಾಟಕ್ಕೆ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ನವೆಂಬರ್ 17 ರಿಂದ ಆರಂಭವಾಗುವ ಶಬರಿಮಲೆ ಅಯ್ಯಪ್ಪನ ವಾರ್ಷಿಕ ಯಾತ್ರೆಯ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡುವ ಇರಾದೆ ವ್ಯಕ್ತಪಡಿಸಿದ್ದಾರೆ.
NEWSOct 22, 2018, 6:57 PM IST
ಶಬರಿಮಲೆ ಅಯ್ಯಪ್ಪನ ಮುಂದೆ ಕಣ್ಣೀರಿಟ್ಟ ಐಜಿಪಿ
ಶಬರಿಮಲೆ ಅಯ್ಯಪ್ಪ ಸ್ವಾಮಿ ಎದುರು ಐಜಿಪಿ ಶ್ರೀಜಿತ್ ಕಣ್ಣೀರಿಟ್ಟಿದ್ದಾರೆ. ಸನ್ನಿಧಾನಂಗಳದಲ್ಲಿ ಗಳಗಳನೆ ಅತ್ತಿದ್ದಾರೆ. ಅನ್ಯ ಕೋಮಿನ ಮಹಿಳೆಯರಿಗೆ ಐಜಿಪಿ ಶ್ರೀಜಿತ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು. ಇದನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಯ್ಯಪ್ಪನ ಭಕ್ತರು ಅಭಿಯಾನ ಶುರು ಮಾಡಿದ್ದರು.
NEWSOct 17, 2018, 9:18 AM IST
ಮಹಿಳೆಯರು ಶಬರಿಮಲೆ ಪ್ರವೇಶಕ್ಕೆ ಕೌಂಟ್ಡೌನ್ ಶುರು
ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಅಯ್ಯಪ್ಪನ ದೆಗುವ ಪ್ರವೇಶಕ್ಕೆ ಮಹಿಳಾಮಣಿಯರು ಸಜ್ಜಾಗಿದ್ದಾರೆ. ಪ್ರವೇಶಕ್ಕೆ ಅವಕಾಶ ನೀಡಲ್ಲ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ. ಸದ್ಯ ದೇಶದ ಚಿತ್ತ ಅಯ್ಯಪ್ಪ ದೇವಸ್ಥಾನದತ್ತ ನೆಟ್ಟಿದೆ.
NEWSOct 14, 2018, 9:03 AM IST
ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ಶಿವಸೇನೆ
ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಿದರೆ ತನ್ನ ‘ಆತ್ಮಹತ್ಯಾ ದಳ’ದ 7 ಮಹಿಳಾ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ಘಟಕ ಎಚ್ಚರಿಕೆ ನೀಡಿದೆ.
NEWSOct 14, 2018, 8:45 AM IST
ಶಬರಿಮಲೆ ದೇಗುಲಕ್ಕೆ ಶೀಘ್ರ ಹೋಗುವೆ: ತೃಪ್ತಿ ದೇಸಾಯಿ
ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ಶೀಘ್ರದಲ್ಲೇ ದೇವಾಲಯ ಪ್ರವೇಶಿಸುವೆ ಎಂದು ಮಹಾರಾಷ್ಟ್ರದ ಮಹಿಳಾಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ಹೇಳಿದ್ದಾರೆ. ಈ ನಡುವೆ, ಮಹಿಳೆಯರ ಪ್ರವೇಶ ವಿರೋಧಿಸಿ ಕೇರಳದ ಅನೇಕ ಕಡೆ ಪ್ರತಿಭಟನೆಗಳು ಮುಂದುವರೆದಿವೆ.