Search results - 30 Results
 • Sensex

  BUSINESS21, Dec 2018, 6:10 PM IST

  ಏನಾಯ್ತೋ ಏನೋ: SENSEX ನಲ್ಲಿ ದಿಢೀರ್ ಬ್ಲಡ್ ಬಾತ್!

  ರಿಯಾಲಿಟಿ, ಬ್ಯಾಂಕಿಂಗ್, ಐಟಿ ಮತ್ತು ಆಟೋ ಬ್ಲೂಚಿಪ್ ಕ್ಷೇತ್ರದಲ್ಲಿ ಜಾಗತಿಕ ಮಾರುಕಟ್ಟೆಗಳಿಂದ ನಿರುತ್ಸಾಹ ಕಂಡುಬಂದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳಲ್ಲಿ ಭಾರೀ ಇಳಿಕೆಯಾಗಿದೆ.

 • Sensex

  BUSINESS20, Dec 2018, 3:23 PM IST

  ತೈಲ ಬೆಲೆ ಭಾರೀ ಕುಸಿತ: ದಂಗಾದರು ಕಂಡು ಸೆನ್ಸೆಕ್ಸ್ ಜಿಗಿತ!

  ಡಾಲರ್ ಎದುರು ರೂಪಾಯಿ ಮೌಲ್ಯ ವರ್ಧನೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಕುಸಿತದ ಹಿನ್ನೆಲೆಯಲ್ಲಿ, ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಏರಿಕೆ ದಾಖಲಾಗಿದೆ. ಬುಧವಾರದ ವಹಿವಟಿನಲ್ಲಿ ಸೆನ್ಸೆಕ್ಸ್ 137.25 ಅಂಕಗಳ ಏರಿಕೆ ದಾಖಲಿಸಿದೆ.

 • Sensex

  NEWS12, Dec 2018, 1:00 PM IST

  ಬಿಜೆಪಿ ಸೋತರೂ ಇಳಿದಿಲ್ಲ ಸೆನ್ಸೆಕ್ಸ್

  ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ, ಮಂಗಳವಾರ ಅಚ್ಚರಿಯ ರೀತಿಯಲ್ಲಿ ಏರಿಕೆ ಕಂಡಿದೆ. ಭಾನುವಾರ ಪ್ರಕಟಗೊಂಡ ಪಂಚರಾಜ್ಯಗಳ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು, ಈ ಬಾರಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವಿನ ಸುಳಿವು ನೀಡಿದ್ದವು. ಚುನಾವಣಾ ಫಲಿತಾಂಶ ಯಾವುದೇ ಪರಿಣಾಮ ಬೀರಿಲ್ಲ. 

 • Sensex

  BUSINESS11, Dec 2018, 11:26 AM IST

  ಊರ್ಜಿತ್ ಹೋದ್ರು, ಮಕಾಡೆ ಮಲಗಿತು ಸೆನ್ಸೆಕ್ಸ್!

  ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಮತ್ತು ಆರ್ ಬಿಐ ಗರ್ವನರ್ ಊರ್ಜಿತ್ ಪಟೇಲ್ ರಾಜೀನಾಮೆ ಪರಿಣಾಮ ಭಾರತೀಯ ಷೇರುಮಾರುಕಟ್ಟೆಯ ಮೇಲೂ ಆಗಿದೆ. ಇಂದು ವಹಿವಾಟು ಆರಂಭಿಸುತ್ತಿದ್ದಂತೇ ಮುಂಬೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಕುಸಿತ ಕಂಡಿದೆ. 

 • Meng Wanzhou

  BUSINESS6, Dec 2018, 4:46 PM IST

  ಮಹಿಳೆ ಬಂಧನ: ಶೇರು ಮಾರುಕಟ್ಟೆಯೇ ತಲ್ಲಣ!

  ಮಹಿಳೆಯೊಬ್ಬರ ಬಂಧನದ ಬೆನ್ನಲ್ಲೇ ಯೂರೋಪ್ ಹಾಗೂ ಏಷ್ಯಾದ ಶೇರು ಮಾರುಕಟ್ಟೆ ಭಾರೀ ಕುಸಿತ ಕಾಣಲಾರಂಭಿಸಿದೆ. ಅಷ್ಟಕ್ಕೂ ಈ ಮಹಿಳೆ ಯಾರು? ಶೇರು ಮಾರುಕಟ್ಟೆ ಮೇಲೆ ಅವರ ಬಂಧನ ಯಾಕಿಷ್ಟು ಪರಿಣಾಮ ಬೀರುತ್ತಿದೆ? ಇಲ್ಲಿದೆ ವಿವರ

 • BUSINESS2, Nov 2018, 1:18 PM IST

  ಕಚ್ಚಾ ತೈಲ ದರ ಇಳಿಕೆ: ಇನ್ಮೇಲೆ ಸೆನ್ಸೆಕ್ಸ್ ಲಾಭ ಫಿಕ್ಸ್!

  ವಿದೇಶಿ ಬಂಡವಾಳದ ಒಳಹರಿವು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯ ಪರಿಣಾಮ, ಇಂದು ಮುಂಬೈ ಷೇರು ಸೂಚ್ಯಂಕದ (ಬಿಎಸ್​ಇ) ಆರಂಭಿಕ ವಹಿವಾಟಿನಲ್ಲಿ ಭರ್ಜರಿ 413 ಅಂಶ ಏರಿಕೆ ಕಂಡು 34,845 ಅಂಕಗಳನ್ನು ತಲುಪಿದೆ.

 • BUSINESS13, Oct 2018, 12:54 PM IST

  ಷೇರು ಮಾರುಕಟ್ಟೆ ಅಯೋಮಯ: ಮ್ಯೂಚುವಲ್ ಫಂಡ್ಸ್ ಗತಿ ಏನಯ್ಯಾ?

  ಸೆನ್ಸೆಕ್ಸ್ ನ ಅತಂತ್ರ ಸ್ಥಿತಿಯಲಲ್ಲಿ ಮ್ಯೂಚುವಲ್ ಫಂಡ್ಸ್ ಗಳಲ್ಲಿ ಹಣ ಹೂಡಿಕೆ ಮಾಡಿರುವವರ ಗತಿಯೇನು ಎಂಬುದು ಚರ್ಚೆಯಾಗುತ್ತಿರುವ ಪ್ರಮುಖ ವಿಷಯವಾಗಿದೆ. ಸದ್ಯ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಆಶಾಭಾವ ಪರಿಸ್ಥಿತಿ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 • Sensex

  BUSINESS11, Oct 2018, 8:26 PM IST

  5 ನಿಮಿಷದಲ್ಲಿ 4 ಲಕ್ಷ ಕೋಟಿ ರೂ ಲಾಸ್: ಷೇರು ಮಾರುಕಟ್ಟೆ ಬಾಗಿಲು ಬಂದ್!

  ನಿನ್ನೆಯಷ್ಟೇ 3 ಲಕ್ಷ ಕೋಟಿ ಲಾಭ ಗಿಟ್ಟಿಸಿಕೊಂಡಿದ್ದ ಭಾರತದ ಷೇರು ಪೇಟೆ ಇಂದು ಸಾವಿರ ಅಂಕ ಸೆನ್ಸೆಕ್ಸ್‌ ಕುಸಿದು ಅಷ್ಟೇ ಮೊತ್ತದ ಬಂಡವಾಳ ಕಳೆದುಕೊಂಡಿದೆ. ಇಂದಿನ ಷೇರು ಮಾರುಕಟ್ಟೆ ಆರಂಭವಾದ ಬೆನ್ನಲ್ಲೇ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತವನ್ನು ಅನುಭವಿಸಿದೆ. 

 • BUSINESS10, Oct 2018, 2:23 PM IST

  ಇನ್ವೆಸ್ಟ್ ಮಾಡಿರೋರು, ಮಾಡೋರು ಇಬ್ಬರಿಗೂ ಸಿಹಿ ಸುದ್ದಿ: ವಸಿ ಓದಿ ಬುದ್ದಿ!

  ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 200 ಅಂಕಗಳ ಏರಿಕೆ ಕಂಡುಬಂದಿದೆ. ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 220.38 ಅಂಕ ಅಥವಾ ಶೇ.0.64 ಏರಿಕೆಯಾಗಿದ್ದು, 34,520ರಲ್ಲಿ ವಹಿವಾಟು ನಡೆಸಿತು.

 • Sensex

  BUSINESS9, Oct 2018, 3:06 PM IST

  ಇಂದೆನೋ ವಿಶೇಷ: ಸಿಹಿ ಸುದ್ದಿಗಳ 'ಮಹಾಮಳೆ'!

  ಭಾರತದ ಆರ್ಥಿಕ ಕ್ಷೇತ್ರದಲ್ಲಿ ಇಂದು ಕೆಲವು ಸಿಹಿ ಸುದ್ದಿಗಳಿಗೆ ಪ್ರಾಶಸ್ತ್ಯ ದೊರೆತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ತೈಲದರ ಏರಿಕೆ, ಷೇರು ಮಾರುಕಟ್ಟೆ ಕುಸಿತ ಇವೇ ಮುಂತಾದ ಕಹಿ ಸುದ್ದಿಗಳನ್ನು ಕೇಳುತ್ತಿದ್ದ ಗ್ರಾಹಕ, ಇಂದು ಈ ಕ್ಷೇತ್ರಗಳಲ್ಲಿ ಸಿಹಿ ಸುದ್ದಿಗಳನ್ನು ಕೇಳುವಂತಾಗಿದೆ. ಬ್ಯಾಂಕ್ ಮತ್ತು ರಫ್ತುದಾರರು ಅಮೆರಿಕದ ಕರೆನ್ಸಿಯ ಮಾರಾಟದಿಂದಾಗಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 18 ಪೈಸೆ ಏರಿಕೆಯಾಗಿ ಡಾಲರ್ ವೊಂದಕ್ಕೆ ರೂಪಾಯಿ ಬೆಲೆ 73.88 ರೂ. ಆಗಿದೆ.

   

   

 • Sensex

  BUSINESS5, Oct 2018, 12:10 PM IST

  ಎಲ್ಲಾ ಹೋಯ್ತು: ಷೇರು ಮಾರುಕಟ್ಟೆ ಬಿದ್ದೋಯ್ತು!

  ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 806 ಅಂಕ ಕುಸಿತಕ್ಕೀಡಾಗಿದ್ದು, ಕಳೆದ ಮೂರು ತಿಂಗಳಿನಲ್ಲಿ ಗರಿಷ್ಠ ಇಳಿಕೆ ದಾಖಲಿಸಿದೆ. ಕಚ್ಚಾ ತೈಲ ದರ ಏರಿಕೆ, ರೂಪಾಯಿ ಮೌಲ್ಯ ಕುಸಿತ ವ್ಯತಿರಿಕ್ತ ಪರಿಣಾಮ ಬೀರಿದ್ದು, ಸೆನ್ಸೆಕ್ಸ್‌ 35,200 ಅಂಕಗಳ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಇದೇ ರೀತಿ ನಿಫ್ಟಿ 10,600 ಅಂಕಗಳ ಮಟ್ಟಕ್ಕಿಂತ ಕೆಳಕ್ಕೆ ತಗ್ಗಿತು. ಏಷ್ಯಾ ಮತ್ತು ಯುರೋಪ್‌ನಲ್ಲೂ ಷೇರು ಮಾರುಕಟ್ಟೆಗಳು ಮುಗ್ಗರಿಸಿವೆ.

 • Sensex

  BUSINESS25, Sep 2018, 11:41 AM IST

  ಬರೋಬ್ಬರಿ 8.47 ಲಕ್ಷ ಕೋಟಿ ರೂ ನಷ್ಟ: ಹೂಡಿಕೆ ಬಲು ಕಷ್ಟ!

  ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದೋ ಬಿಡುವುದೋ ಎಂಬ ಗೊಂದಲದಲ್ಲಿ ಹೂಡಿಕೆದಾರ ಇದ್ದಾನೆ. ಕಾರಣ ಮುಂಬೈ ಷೇರು ಮಾರುಕಟ್ಟೆಯ ಕರಡಿ ಕುಣಿತದಲ್ಲಿ ನಿರಂತರ ಪಲ್ಲಟಗಳಾಗುತ್ತಿದ್ದು, ಹೂಡಿಕೆದಾರ ಆತಂಕದಲ್ಲಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

 • Sensex

  BUSINESS21, Sep 2018, 6:10 PM IST

  ಮಕಾಡೆ ಮಲಗಿದ ಸೆನ್ಸೆಕ್ಸ್: ನಿಮಗೂ ಕಾದಿದೆ ಶಾಕ್!

  ಷೇರು ಮಾರುಕಟ್ಟೆ ವ್ಯವಹಾರ ಮತ್ತೆ ದಾಖಲೆಯ ಕುಸಿತ ಕಂಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ಮೂಡಿಸಿದೆ. ಒಂದು ಹಂತದಲ್ಲಿ 1100 ಅಂಕಗಳ ಕುಸಿತ ಕಂಡು, ಸೆನ್ಸೆಕ್ಸ್​ 35,993 ಅಂಶಗಳಿಗೆ ಇಳಿಕೆ ಕಂಡಿತ್ತು. ಬಳಿಕ 600 ಅಂಕ ಚೇತರಿಸಿಕೊಂಡು 36600 ಕ್ಕೆ ಬಂದು ತಲುಪಿತು.  

 • Sensex

  BUSINESS19, Sep 2018, 2:33 PM IST

  ಷೇರು ಮಾರುಕಟ್ಟೆಗೆ ಕಷ್ಟ: ಒಂದೇ ದಿನ ಎಷ್ಟೊಂದು ನಷ್ಟ?

  ಯಾವ ಕಾರಣಗಳಿಗೆ ಷೇರು ಮಾರುಕಟ್ಟೆ ಏರಿಕೆಯ ಹಾದಿ ಹಿಡಿಯಬೇಕಿತ್ತೋ, ಅದೇ ವಿಚಾರಗಳಿಗೆ ಕುಸಿತದ ಪ್ರಪಾತಕ್ಕೆ ಬೀಳುತ್ತಿರುವುದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ. ಕಚ್ಚಾ ತೈಲದರ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಇವೇ ಮುಂತಾದ ಕಾರಣಗಳಿಂದ ಮುಂಬೈ ಷೇರುವ ಮಾರುಕಟ್ಟೆ ಸತತ ಎರಡನೇಯ ದಿನವೂ ಭಾರೀ ಕುಸಿತ ಕಂಡಿದೆ.

 • Rupee

  BUSINESS14, Sep 2018, 1:15 PM IST

  ಎರಡೆರಡು ಸಂತಸದ ಸುದ್ದಿ: ರೂಪಾಯಿ, ಸೆನ್ಸೆಕ್ಸ್ ಒಟ್ಟಿಗೆ ವೃದ್ಧಿ!

  ಕಳೆದ ಕೆಲವು ದಿನಗಳಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಸೆನ್ಸೆಕ್ಸ್ ಅಂಕ ಇಳಿಕೆ, ತೈಲದರ ಏರಿಕೆ ಇಂತದ್ದೇ ಸುದ್ದಿ ಕೇಳುತ್ತಿದ್ದ ಜನತೆಗೆ ಇಂದು ಎರಡೆರಡು ಸಂತಸದ ಸುದ್ದಿಗಳು ಎದುರಾಗಿವೆ. ಡಾಲರ್ ಎದುರು ರೂಪಾಯಿ ಮೌಲ್ಯ ತುಸು ಚೇತರಿಕೆ ಕಂಡಿದ್ದು, ಸತತ ಕುಸಿತದ ಬಳಿಕ ಭಾರತೀಯ ಷೇರುಮಾರುಕಟ್ಟೆ ಕೂಡ ಚೇತರಿಕೆಯ ಹಾದಿ ಹಿಡಿದಿದೆ.