Sand Mining  

(Search results - 16)
 • <p>Illegal sand</p>

  Karnataka Districts30, May 2020, 11:48 AM

  ವಿಜಯಪುರ: 'ಅಕ್ರಮ ಮರಳು ದಂಧೆಯ ಮೇಲೆ ತೀವ್ರ ನಿಗಾ ವಹಿಸಿ'

  ಜಿಲ್ಲೆಯ ಭೀಮಾ ಮತ್ತು ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸುವ ಜೊತೆಗೆ ಅಕ್ರಮವಾಗಿ ಸಾಗಾಣಿಕೆ ಬಗ್ಗೆಯೂ ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
   

 • Karnataka Districts28, May 2020, 9:22 AM

  ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ: ಲೋಕಾಯುಕ್ತಕ್ಕೆ ಕಾಂಗ್ರೆಸ್‌ ದೂರು

  ಉಡುಪಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಸ್ವರ್ಣಾ ನದಿಯ ಬಜೆ ಅಣೆಕಟ್ಟೆಯಲ್ಲಿ ಹೂಳೆತ್ತುವ ನೆಪದಲ್ಲಿ ಮಂಗಳೂರಿನ ಗುತ್ತಿಗೆ ಸಂಸ್ಥೆ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡಿದ್ದಾರೆ. ಈ ಬಗ್ಗೆ ಎಸಿಬಿ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 • ladies beach karwar

  Uttara Kannada12, Nov 2019, 3:43 PM

  ಕಣ್ಮರೆಯಾಗುತ್ತಿದೆ ಕಾರವಾರದ ಲೇಡೀಸ್ ಬೀಚ್ : ಇಲ್ಲೇನಾಗುತ್ತಿದೆ ?

  ಕಾರವಾರದ ಲೇಡಿಸ್ ಬೀಚ್ ಕಣ್ಮರೆಯಾಗುತ್ತಿದೆ. ಅಕ್ರಮವಾಗಿ ನಡೆಯುತ್ತಿರುವ ಚಟುವಟಿಕೆಗಳು ಬೀಚ್ ಕಣ್ಮರೆಗೆ ಕಾರಣವಾಗುತ್ತಿದೆ. 

 • Madhuswamy

  Tumakuru25, Oct 2019, 10:45 AM

  ತುಮಕೂರು: ಮರಳು ದಂಧೆಗೆ ಬ್ರೇಕ್ ಹಾಕ್ತಾರಾ ಸಚಿವ ಮಾಧುಸ್ವಾಮಿ ..?

  ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ದಂಧೆಗೆ ಕಡಿವಾಣ ಹಾಕಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಕ್ರಮ ಮರಳು ದಂಧೆಯಿಂದ ಸರ್ಕಾರಕ್ಕೂ ನಷ್ಟವಾಗುತ್ತಿದ್ದು ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದದಾರೆ.

 • Tumakuru25, Oct 2019, 7:41 AM

  ತುಮಕೂರು: 4 ಟ್ರ್ಯಾಕ್ಟರ್‌ ಅಕ್ರಮ ಮರಳು ವಶ

  ತುಮಕೂರಿನ ಕರಗೆರೆ ತಾಲೂಕಿನಲ್ಲಿ ಅಕ್ರಮ ಮರಳು ಸಾಗಣೆ ಮಿತಿ ಮೀರಿದ್ದು, ನಾಲ್ಕು ಟ್ರ್ಯಾಕ್ಟರ್ ಅಕ್ರಮ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸರು 4 ಟ್ರ್ಯಾಕ್ಟರ್‌ ಲೋಡು ಮರಳನ್ನು ಜಪ್ತಿ ಮಾಡಿದ್ದಾರೆ.

 • Kolar23, Oct 2019, 12:49 PM

  ಕೋಲಾರ: ಮತ್ತೆ ತಲೆ ಎತ್ತಿದ ಫಿಲ್ಟರ್‌ ಮರಳು ದಂಧೆ

  ಮುಳಬಾಗಿಲಿನಲ್ಲಿ ಮತ್ತೆ ಫಿಲ್ಟರ್ ಮರಳು ದಂಧೆ ಆರಂಭವಾಗಿದೆ. ಆಕ್ರಮ ಮರಳುದಂದೆ ಅಧಿಕಾರಿಗಳ ಕೃಪೆಯಲ್ಲಿ ಮತ್ತೆ ತಲೆ ಎತ್ತಿ ನಿಂತಿರುವುದಕ್ಕೆ  ನಗರಕ್ಕೆ ಹೊಂದಿಕೊಂಡಿರುವ ನುಗುಲಬಂಡೆ ವ್ಯಾಪ್ತಿಯಲ್ಲಿನ ಬೊಮ್ಮರಾಸು ಕುಂಟೆ ಸಾಕ್ಷಿಯಾಗಿದೆ.

 • Gadag9, Oct 2019, 8:47 AM

  ರೋಣದಲ್ಲಿ ನಡೆಯುತ್ತಿದೆ ಭಾರೀ ಅಕ್ರಮ ಮರಳು ದಂಧೆ!

  ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್‌ ಅವರ ತವರು ಜಿಲ್ಲೆ ಗದಗಿನಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ರೋಣ ತಾಲೂಕಿನ 10 ಕ್ಕೂ ಹೆಚ್ಚು ಹಳ್ಳದಲ್ಲಿ ಹಗಲು-ರಾತ್ರಿ ಎನ್ನದೇ ಟ್ರ್ಯಾಕ್ಟರ್‌, ಟಿಪ್ಪರ್‌ ಮೂಲಕ ಅಕ್ರಮ ಮರಳು ಸಾಗಾಟ ಎಗ್ಗಿಲ್ಲದೇ ನಡೆಯುತ್ತಿದೆ. ಯಾರೂ ಕೇಳುವವರಿಲ್ಲ.
   

 • Tunga River

  Karnataka Districts9, Aug 2019, 1:49 PM

  ಮಂಗಳೂರು: ಮರಳುಗಾರಿಕೆಗೆ ನದಿಗೆ ಇಳಿದ ಯುವಕ ಸಾವು

  ನದಿಗೆ ಮರಳು ತೆಗೆಯಲು ಇಳಿದ ಯುವಕ ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ನದಿಯಲ್ಲಿ ಪ್ರವಾಹ ಹೆಚ್ಚಿದ್ದು, ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿದ್ದಾನೆ. ನದಿಪಾತ್ರದಲ್ಲಿ ವಾಹನ ನಿಲ್ಲಿಸಿ ಯುವಕರು ನದಿಗಿಳಿದು ಮರಳು ತೆಗೆಯುತ್ತಿದ್ದರು.

 • Karnataka Districts1, Aug 2019, 10:42 AM

  ಅಕ್ರಮ ಸಾಗಾಟದ 57 ಟನ್‌ ಮರಳು ವಶ

  ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳ ಸಹಿತ ಲಕ್ಷಾಂತರ ಮೌಲ್ಯದ 57 ಟನ್‌ ಮರಳನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 • Rohini
  Video Icon

  NEWS24, Jan 2019, 9:02 PM

  ಸಚಿವ ರೇವಣ್ಣ ಬೆಂಬಲಿಗನಿಗೆ ಡಿಸಿ ರೋಹಿಣಿ ಕೊಟ್ಟ ‘ಮರಳೇಟು’

  ಅಕ್ರಮ ಮರಳು ದಾಸ್ತಾನಿಗೆ ಶಿಫಾರಸ್ಸು ಆರೋಪದಲ್ಲಿ ಕಾರಣ ಕೇಳಿ ಹಾಸನ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಿಗೆ ಡಿಸಿ ರೋಹಿಣಿ ಸಿಂಧೂರಿ ನೋಟಿಸ್ ನೀಡಿದ್ದಾರೆ. ಜಿಪಂ ಉಪಾಧ್ಯಕ್ಷ  ಸುಪ್ರದೀಪ್ ಯಜಮಾನ್ ಅವರಿಗೆ ನೋಟಿಸ್ ನೀಡಲಾಗಿದೆ. ಹಾನುಬಾಳು ಜಿಪಂ ಕ್ಷೇತ್ರದ ಜೆಡಿಎಸ್ ಸದಸ್ಯರಾಗಿರುವ ಯಜಮಾನ್ ಉತ್ತರ ನೀಡಬೇಕಾಗಿದೆ.  ಅರೆಕೆರೆಯಲ್ಲಿ 9000 ಟನ್ ಅಕ್ರಮ ದಾಸ್ತಾನು ಮರಳು ಜಪ್ತಿ ಮಾಡಲಾಗಿತ್ತು. ಚುನಾಯಿತ ಪ್ರತಿನಿಧಿಯಾಗಿ ಅಪಕೀರ್ತಿಕರ ನಡತೆ ಹೊಂದಿದ್ದೀರಿ, ಹುದ್ದೆಗೆ ತರವಲ್ಲದ ರೀತಿ ನಡೆದುಕೊಂಡಿದ್ದೀರೆಂದು ಚಾಟಿ ಬೀಸಿರುವ ಡಿಸಿ ನಿಮ್ಮ ವಿರುದ್ದ ಏಕೆ ಕ್ರಮವಹಿಸಬಾರದು  ಎಂದು ಪ್ರಶ್ನೆ ಮಾಡಿದ್ದಾರೆ. 

 • NEWS25, Dec 2018, 4:58 PM

  ಎಂಥಾ ಹೇಳಿಕೆ ಕೊಟ್ರಿ ಶಾಸಕರೆ... ಗ್ರಾಮ ಲೆಕ್ಕಾಧಿಕಾರಿ ಕೊಲೆ ನಿಮಗೆ ಏನೂ ಅಲ್ವೆ?

  ಮರಳು ಮಾಫಿಯಾ ರಾಯಚೂರು ಜಿಲ್ಲೆಯಲ್ಲಿ ಅಧಿಕಾರಿಯ ಜೀವವನ್ನು ಬಲಿಪಡೆದಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಲಾರಿ ಹರಿಸಿ ಸಾಹೇಬ್ ಪಟೇಲ್‌ ಎಂಬ ಗ್ರಾಮ ಲೆಕ್ಕಾಧಿಕಾರಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದರು. ಆದರೆ ಈ ದುಷ್ಕೃತ್ಯದ ಹಿಂದೆ ಅಸಲಿಗೆ ಯಾರಿದ್ದಾರೆ ಎಂಬ ಸತ್ಯವೂ ಈಗ ಬಯಲಾಗಿದೆ.

 • Sand Mining

  Koppal24, Dec 2018, 4:57 PM

  ಅಕ್ರಮ ಮರಳು ದಂಧೆ ಹಿಂದೆ ಇವರೆಲ್ಲ ಇದ್ದಾರೆ: ಸಿಎಂ ಬಿಚ್ಚಿಟ್ಟ ಸತ್ಯ

  ರಾಯಚೂರು ಜಿಲ್ಲೆಯಲ್ಲಿ ನಡೆದ ಗ್ರಾಮ‌ಲೆಕ್ಕಿಗನ ಕೊಲೆ ವಿಚಾರವಾಗಿ ಸರಕಾರ ಕೈ ಕಟ್ಟಿ ಕೂಡಲ್ಲ. ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

 • Raichur

  NEWS23, Dec 2018, 7:17 AM

  ಘೋರ ದುರಂತ : ಲಾರಿ ಹರಿಸಿ ಗ್ರಾಮ ಲೆಕ್ಕಿಗ ದುರ್ಮರಣ

  ಅಕ್ರಮ ಮರಳುಗಾರಿಕೆ ಪರಿಶೀಲನೆ ವೇಳೆ ಮರಳು ತುಂಬಿದ್ದ ಲಾರಿ ಹರಿದು ಗ್ರಾಮ ಲೆಕ್ಕಿಗನೊಬ್ಬ ಮೃತಪಟ್ಟಘಟನೆ ಶನಿವಾರ ಸಂಜೆ ರಾಯಚೂರು ಜಿಲ್ಲೆಯ ಸಿರವಾರದಲ್ಲಿ ನಡೆದಿದೆ. 

 • Raichur

  Raichur22, Dec 2018, 10:19 PM

  ರಾಯಚೂರು: ಅಕ್ರಮ ತಡೆಯಲು ಹೋದ ಅಧಿಕಾರಿಗೆ ಸಿಕ್ಕಿದ್ದು ಸಾವು

  ಅಕ್ರಮ ಮರಳುಗಾರಿಕೆಯನ್ನ ತಡೆಯಲು ಮುಂದಾದ ಗ್ರಾಮ ಲೆಕ್ಕಾಧಿಕಾರಿ ಮೇಲೆ ಲಾರಿ ಹರಿಸಿ ಹತ್ಯೆ ಮಾಡಿರುವ ದಾರುಣ ಘಟನೆ ಇಂದು [ಶನಿವಾರ] ಮಾನ್ವಿ ತಾಲೂಕಿನ ಬುದ್ದಿನ್ನಿ ಗ್ರಾಮದಲ್ಲಿ ನಡೆದಿದೆ. 

 • Koppal10, Oct 2018, 3:34 PM

  ತಮ್ಮ ಸಂಪಾದನೆಗೆ ಇಬ್ಬರು ಬಾಲಕರನ್ನ ಬಲಿಪಡೆದ ಪಾಪಿಗಳು

  ಕೊಪ್ಪಳ ತಾಳೂಕಿ ನರೇಗಲ್‌ನಲ್ಲಿ ಮಿತಿ ಮೀರಿ ನಡೆದಿರುವ ಮರಳು ದಂಧೆಗೆ ಇಬ್ಬರು ಬಾಲಕರು ಬಲಿಯಾಗಿದ್ದಾರೆ.