Sanction  

(Search results - 33)
  • NEWS29, May 2019, 7:42 AM IST

    ಜಿಂದಾಲ್‌ಗೆ ಭೂಮಿ ನೀಡಿಕೆ : ತೀವ್ರ ವಿರೋಧ

    ಜಿಂದಾಲ್‌ ಕಂಪನಿಗೆ ಅತ್ಯಂತ ಕಡಿಮೆ ಬೆಲೆಗೆ ದೊಡ್ಡ ಪ್ರಮಾಣದ ಭೂಮಿ ಪರಭಾರೆ ಮಾಡುವ ಸಚಿವ ಸಂಪುಟದ ನಿರ್ಧಾರದ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತುದೆ.

  • iran oil

    BUSINESS22, Apr 2019, 8:31 PM IST

    ಇರಾನ್ ತೈಲ ನಿರ್ಬಂಧ ವಿನಾಯ್ತಿ ಮುಂದುವರಿಕೆಗೆ ಯುಎಸ್ ನಕಾರ: ಏನ್ಮಾಡಲಿದೆ ಭಾರತ?

    ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಈ ಹಿಂದೆ ನೀಡಲಾಗಿದ್ದ ನಿರ್ಬಂಧ ವಿನಾಯ್ತಿಯನ್ನು ಮುಂದುವರೆಸಲು ಅಮೆರಿಕ ಸ್ಪಷ್ಟವಾಗಿ ನಿರಾಕರಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ, ಅಮೆರಿಕದ ಈ ನಿರ್ಧಾರದಿಂದಾಗಿ ಬೀರಬಹುದಾದ ಪರಿಣಾಮದ ಕುರಿತು ವಿಶ್ಲೇಷಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

  • Kumaraswamy

    state29, Jan 2019, 4:58 PM IST

    ಕರ್ನಾಟಕಕ್ಕೆ ಭರ್ಜರಿ ಕೊಡುಗೆ ನೀಡಿದ ಕೇಂದ್ರ ಸರ್ಕಾರ..!

    ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಕರ್ನಾಟಕಕ್ಕೆ 949.49 ಕೋಟಿ ರೂ. ಬರ ಪರಿಹಾರ ನೀಡಲು ಅನುಮೋದನೆ ಸಿಕ್ಕಿದೆ. 

  • Crude Oil

    BUSINESS28, Dec 2018, 4:40 PM IST

    ಗುಡ್ ಬೈ 2018: ಇರಾನ್ ತೈಲ ಬರತ್ತೆ, ಬರಲ್ಲಗಳ ಮಧ್ಯೆ ಮುಗಿದ ವರ್ಷ!

    ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನ ಮತ್ತು ಭಾರತಕ್ಕೆಇರಾನ್ ಕಚ್ಚಾತೈಲ ಆಮದು ಕುರಿತಾದ ಅನಿಶ್ಚಿತತೆ ಆತಂಕಕ್ಕೆ ತಳ್ಳಿತ್ತು. ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಜನತೆಗೆ, ಇರಾನ್ ಮೇಲಿನ ಆರ್ಥಿಕ ದಿಗ್ಬಂಧನ ಮತ್ತಷ್ಟು ಆತಂಕ ತಂದೊಡ್ಡಿತ್ತು.

  • Modi

    BUSINESS8, Dec 2018, 7:05 PM IST

    ಇಂದು ನಾವು, ನಾಳೆ ನೀವು: ಹಸನ್ ಮಾತು ಕೇಳ್ತಿವಾ ನಾವು?

    ಇತರ ದೇಶಗಳ ಮೇಲೆ ಅಮೆರಿಕ ಹೇರುತ್ತಿರುವ ಆರ್ಥಿಕ ದಿಗ್ಬಂಧನಗಳನ್ನು 'ಆರ್ಥಿಕ ಭಯೋತ್ಪಾದನೆ' ಎಂದು ಇರಾನ್ ಅಧ್ಯಕ್ಷ ಹಸನ್ ರೋಹಾನಿ ಬಣ್ಣಿಸಿದ್ದಾರೆ. ಅಮೆರಿಕದ ಈ ಆರ್ಥಿಕ ಭಯೋತ್ಪಾದನೆಯ ವಿರುದ್ಧ ಪ್ರಾದೇಶಿಕ ಶಕ್ತಿಗಳು ಒಗ್ಗೂಡಿ ಹೋರಾಡಬೇಕು ಎಂದು ಇದೇ ವೇಳೆ ರೋಹಾನಿ ಕರೆ ನೀಡಿದ್ದಾರೆ. 

  • HassanRouhani

    BUSINESS4, Dec 2018, 4:55 PM IST

    ಸಮುದ್ರದಲ್ಲೇ ತೈಲ ಹಡಗಿಗೆ ತಡೆ: ಇರಾನ್ ಗುಡುಗಿಗೆ ಜಗತ್ತು ಗಡಗಡ!

    ಇರಾನ್ ಮೇಲಿನ ಅಮೆರಿಕದ ನಿರ್ಭಂಧವನ್ನು ತೀವ್ರವಾಗಿ ಖಂಡಿಸಿರುವ ಅಧ್ಯಕ್ಷ ಹಸನ್ ರೋಹಾನಿ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. ಒಂದು ವೇಳೆ ಅಮೆರಿಕ ಇರಾನ್‌ನ ತೈಲ ರಫ್ತಿನ ಮೇಲೆ ನಿರ್ಬಂಧ ವಿಧಿಸಿದರೆ ಮಧ್ಯಪ್ರಾಚ್ಯದ ಯಾವೊಂದು ದೇಶವೂ ತೈಲ ರಫ್ತು ಮಾಡದಂತೆ ತಡೆಯಲಾಗುವುದು ಎಂದು ಎಚ್ಚರಿಸಿದ್ದಾರೆ.

  • India-Iran

    BUSINESS4, Nov 2018, 6:00 PM IST

    ಇರಾನ್‌ಗೆ ನಮ್ಮ ರೂಪಾಯಿ: ಮೋದಿಯಿಂದ ಟ್ರಂಪ್ ಬಡಪಾಯಿ!

    ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಇನ್ನು ಮುಂದೆ ಭಾರತ ಡಾಲರ್, ಯೂರೋ ಬದಲಾಗಿ ರೂಪಾಯಿಯಲ್ಲೇ ಪಾವತಿ ಮಾಡಲಿದೆ. ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಜಾರಿಯದ ಬೆನ್ನಲ್ಲೇ, ಉಭಯ ರಾಷ್ಟ್ರಗಳು ಪ್ರತ್ಯೇಕವಾಗಿ ರೂಪಾಯಿ ಮೂಲಕವೇ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಂಡಿವೆ.

  • Trump

    BUSINESS3, Nov 2018, 5:20 PM IST

    ಟ್ರಂಪ್ ಗೇಮ್ ಆಫ್ ಥ್ರೋನ್ ಫೋಟೋ: ಈ ಅಹಂಕಾರ ಬೇಕಿತ್ತಾ?

    ಆರ್ಥಿಕ ದಿಗ್ಬಂಧನ ಎನ್ನುವುದು ವಿಶ್ವದ ರಾಜಕೀಯ ಭೂಪಟದಲ್ಲಿ ಅತಿರೇಕದಿಂದ ವರ್ತಿಸುವ ರಾಷ್ಟ್ರವೊಂದಕ್ಕೆ ಪಾಠ ಕಲಿಸಲು ಬಳಸುವ ಪ್ರಬಲ ಅಸ್ತ್ರ. ಆದರೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಿರ್ಬಂಧದ ಕುರಿತು ಮಾಡಿರುವ ಟ್ವೀಟ್‌ವೊಂದು ಮಾತ್ರ ಎಲ್ಲರೂ ಟೀಕಿಸುವಂತೆ ಮಾಡಿದೆ.

  • Modi

    BUSINESS3, Nov 2018, 1:51 PM IST

    ಸೌದಿಗೆ ಮೋದಿ ಕಾಲ್: ಬರಲಿದೆ ಎಮೆರ್ಜೆನ್ಸಿ ಆಯಿಲ್!

    ನವೆಂಬರ್‌ನಲ್ಲಿ ಸೌದಿ ಅರೇಬಿಯಾದಿಂದ ಭಾರತಕ್ಕೆ ಹೆಚ್ಚುವರಿ 4 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ರಫ್ತಾಗಲಿದ್ದು, ಒಂದು ವೇಳೆ ಅಂತರಾಷ್ಟ್ರೀಯ ವಿದ್ಯಮಾನಗಳಿಂದ ತೈಲ ವ್ಯತ್ಯಯ ಉಂಟಾದರೆ ಇಂಧನ ಸ್ಥಿರತೆ ಕಾಯ್ದುಕೊಳ್ಳಲು ಇದು ಸಹಾಯಕಾರಿಯಾಗಲಿದೆ. 

  • Modi-Trump

    BUSINESS2, Nov 2018, 3:57 PM IST

    ಹೊಡಿ ಒಂಬತ್: ಇಂಡಿಯಾಗೆ ಇರಾನ್ ಆಯಿಲ್ ಎಂದ ಟ್ರಂಪ್!

    ಇದು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಕೇಂದ್ರ ಸರ್ಕಾರದ ವಿದೇಶಾಂಗ ನೀತಿಗೆ ಸಂದ ಜಯ. ಕಾರಣ ಇರಾನ್ ಮೇಲಿನ ನವೆಂಬರ್ 4 ರ ತನ್ನ ನಿರ್ಬಂಧದ ಹೊರತಾಗಿಯೂ ಭಾರತ ತೈಲ ಆಮದು ಮಾಡಿಕೊಳ್ಳಬಹುದು ಎಂದು ಅಮೆರಿಕ ಘೋಷಿಸಿದೆ.

  • oil industry

    BUSINESS31, Oct 2018, 5:55 PM IST

    ನವೆಂಬರ್ 4ರ ನಿರ್ಬಂಧ ಭೀತಿ: ನಮಗೆ ಇರಾನ್ ತೈಲದ ಗತಿ?

    ಇರಾನ್ ಮೇಲಿನ ಅಮೆರಿಕದ ನಿರ್ಬಂಧಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ನವೆಂಬರ್ 4ರಂದು ಇರಾನ್ ಮೇಲಿನ ಅಮೆರಿಕದ ಪೂರ್ಣ ಪ್ರಮಾಣದ ನಿರ್ಬಂಧ ಜಾರಿಗೆ ಬರಲಿದೆ. ಅಮೆರಿಕದ ನಿರ್ಬಂಧದ ಬಳಿಕ ಇರಾನ್ ಜೊತೆಗಿನ ಭಾರತದ ತೈಲ ಸಂಬಂಧದ ಮೇಲೆ ಕಾರ್ಮೋಡ ಕವಿಯಲಿದೆ ಎಂಬ ಆತಂಕ ಎದುರಾಗಿದೆ. ಆದರೂ ಭಾರತ ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಲು  ಸಾಧ್ಯವಿಲ್ಲ ಎಂಬುದಂತೂ ಸ್ಪಷ್ಟ.

  • Reliance Oil

    BUSINESS18, Oct 2018, 7:51 PM IST

    ಇರಾನ್ ತೈಲ ನಿಲ್ಲಿಸಿದ ರಿಲಯನ್ಸ್: ಶುರುವಾಯ್ತು ಯುಎಸ್ ಸ್ಯಾಂಕ್ಷನ್ಸ್!

    ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಇರಾನ್‌ನಿಂದ ತೈಲ ಆಮದನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಅಮೆರಿಕದ ನಿರ್ಬಂಧ ಜಾರಿಯಾದ ಬಳಿಕ ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಸೂಚನೆಯನ್ನೂ ಸಂಸ್ಥೆ ನೀಡಿದೆ.

  • Modi-Trump

    BUSINESS12, Oct 2018, 10:58 AM IST

    ಇರಾನ್ ಕೈ ಬಿಡದಿದ್ದರೆ ‘ನೋಡ್ಕೊತೀವಿ’: ಭಾರತಕ್ಕೆ ಟ್ರಂಪ್ ಬೆದರಿಕೆ!

    ಅಮೆರಿಕಕ್ಕೆ ತಾನು ವಿಶ್ವದ ದೊಡ್ಡಣ್ಣ ಎಂಬ ಸೊಕ್ಕು ಇದೆ. ಅದು ಡೋನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೇಲೆ ಮತ್ತಷ್ಟು ಹೆಚ್ಚಾಗಿದೆ. ಇಡೀ ವಿಶ್ವದ ‘ಕೇರ್ ಟೇಕರ್’ ಎಂಬಂತೆ ಪೋಸು ಕೊಡುತ್ತಿರುವ ಟ್ರಂಪ್, ಇತರ ರಾಷ್ಟ್ರಗಳ ವಿದೇಶಾಂಗ ನೀತಿಯಲ್ಲೂ ಮೂಗು ತೂರಿಸುವ ಪ್ರಯತ್ನ ನಡೆಸಿದ್ದಾರೆ. ಅದರಂತೆ ನವೆಂಬರ್ 4 ರ ಬಳಿಕ ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಸಂಪೂರ್ಣ ಜಾರಿಗೆ ಬರಲಿದ್ದು, ಅದಾದ ಬಳಿಕ ಇರಾನ್ ಜೊತೆ ತೈಲ ಒಪ್ಪಂದ ನಡೆಸುವ ರಾಷ್ಟ್ರಗಳನ್ನು ‘ನೋಡಿಕೊಳ್ಳಲಾಗುವುದು’ ಎಂದು ಟ್ರಂಪ್ ನೇರ ಬೆದರಿಕೆಯೊಡ್ಡಿದ್ದಾರೆ.

  • Oil Import

    BUSINESS10, Oct 2018, 6:57 PM IST

    ಇರಾನ್ ಕೊಡಲಾರದ್ದು ಸೌದಿ ಕೊಡತ್ತೆ: ನೀವು ಬಿಟ್ಬಿಡಿ ಚಿಂತೆ!

    ಇನ್ನೇನು ನವೆಂಬರ್‌ನಲ್ಲಿ ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಜಾರಿಗೆ ಬರಲಿದೆ. ಇದರಿಂದ ಇರಾನ್‌ನಿಂದ ಭಾರತಕ್ಕಾಗುವ ತೈಲ ಆಮದು ಕಡಿಮೆಯಾಗಲಿದೆ. ಈ ಮಧ್ಯೆ ಪರ್ಯಾಯ ಮಾರ್ಗಕ್ಕೆ ಸಿದ್ಧರೆ ಮಾಡಿಕೊಂಡಿರುವ ಭಾರತ, ತೈಲ ಕೊರತೆ ನೀಗಿಸಲು ಸೌದಿ ಅರೆಬಿಯಾದತ್ತ ಮುಖ ಮಾಡಿದೆ.

  • Dharmendra Pradhan

    BUSINESS8, Oct 2018, 8:11 PM IST

    ‘ಟ್ರಂಪ್ ಏನ್ಮಾಡ್ತಾರೋ ನೋಡೇ ಬಿಡ್ತಿವಿ: ಇರಾನ್‌ನಿಂದ ಪೆಟ್ರೋಲ್ ತರ್ತಿವಿ’!

    ಅಮೆರಿಕದ ನಿರ್ಬಂಧಗಳ ಹೊರತಾಗಿಯೂ ಭಾರತ ನವೆಂಬರ್‌ನಲ್ಲಿ ಇರಾನ್ ನಿಂದ ತೈಲ ಖರೀದಿಸಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ. ಇರಾನ್ ಮೇಲೆ ಅಮೆರಿಕ ವಿಧಿಸಿರುವ ಕಠಿಣ ನಿರ್ಬಂಧಗಳು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ಇದರ ನಡುವೆಯೂ ನವೆಂಬರ್ ನಲ್ಲಿ ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.