Sahitya Sammelana  

(Search results - 59)
 • ಸಮ್ಮೇಳನಕ್ಕೆ ಸಿಂಗಾರಗೊಂಡ ನಗರಿ

  NEWS7, Jan 2019, 3:58 PM IST

  ಧಾರವಾಡಕ್ಕೆ ಹೋದಿ ಏನೇನ್ ತಂದಿ?

  84 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ವಿದ್ಯಾಕಾಶಿ ಧಾರವಾಡದಲ್ಲಿ ಕನ್ನಡ ಡಿಂಡಿಮ ಮೊಳಗಿದೆ. ಅನೇಕ ಚರ್ಚೆ, ಸಂವಾದ, ಸುದ್ದಿಗೋಷ್ಟಿಗಳು ನಡೆದವು. ಕಲಾಭಿಮಾನಿಗಳಿಗೆ. ಸಾಹಿತ್ಯಾಸಕ್ತರಿಗೆ ಮೂರು ದಿನ ಅರ್ಥಪೂರ್ಣವಾಗಿತ್ತು. ಮೂರನೇ ದಿನದ ಕಾರ್ಯಕ್ರಮದಲ್ಲಿ ಕೆಲವೊಂದು ಸ್ವಾರಸ್ಯಕರ ಘಟನೆಗಳು ನಡೆದವು. ಅದರ ವಿವರ ಇಲ್ಲಿದೆ ನೋಡಿ.  

 • Kambar- Dharwad

  NEWS7, Jan 2019, 12:48 PM IST

  ನಾನು ಎಡವೋ, ಬಲವೋ ನನಗೇ ಗೊತ್ತಿಲ್ಲ: ಕಂಬಾರರು

  ‘ನಾನು ಎಡವೋ ಅಥವಾ ಬಲವೋ ಎಂದು ಈಗಲೂ ನನಗೆ ಗೊತ್ತಾಗಿಲ್ಲ. ನನಗೆ ಎರಡು ಕೈಗಳು ಇವೆಯಾದ್ದರಿಂದ ಎಡವೂ ಹೌದು. ಬಲನೂ ಹೌದು!’ ಸಾಹಿತ್ಯ ವಲಯದ ಎಡ-ಬಲಗಳ ಬಹು ಚರ್ಚೆಗಳ ಪ್ರಸ್ತುತ ದಿನಗಳಲ್ಲಿ ತಮ್ಮ ನಿಲುವಿನ ಪ್ರಶ್ನೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕಂಬಾರರು ಉತ್ತರಿಸಿದ್ದು ಹೀಗೆ.

 • Dharwad- CM

  NEWS7, Jan 2019, 11:25 AM IST

  ಸಮ್ಮೇಳನದಿಂದ ರಾಜಕಾರಣಿಗಳನ್ನು ದೂರವಿಡಿ!

  ಎಲ್ಲ ರೀತಿಯ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಇನ್ನುಂದೆ ರಾಜಕಾರಣಿಗಳಿಗೆ ಆಹ್ವಾನ ಬೇಡ. ಅವರಿದ್ದರೆ ಸಮ್ಮೇಳನಕ್ಕೆ ಅಪಮಾನ..! ಅದೇ ರೀತಿ ಧಾರವಾಡದಲ್ಲಿ ನಡೆದ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನಾಲ್ಕು ಗಂಟೆ ವಿಳಂಬ ಮಾಡಿದ್ದರಿಂದ ಲಕ್ಷಾಂತರ ಜನರಿಗೆ ತೊಂದರೆಯಾಯಿತು.- ಡಾ. ರಾಘವೇಂದ್ರ ಪಾಟೀಲ್ 

 • Book sale

  NEWS7, Jan 2019, 10:01 AM IST

  ಮೈಸೂರಿಗಿಂತ ಧಾರವಾಡದಲ್ಲಿ ಪುಸ್ತಕ ವ್ಯಾಪಾರ ಜೋರು

  ಅಂದಾಜು ಐದು ಲಕ್ಷ ಮಂದಿ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿದ್ದಾರೆ. ಆದರೆ ಆ ಸಂಖ್ಯೆಗೆ ತಕ್ಕ ಪುಸ್ತಕ ಮಾರಾಟ ಆಗಲಿಲ್ಲ. ಪುಸ್ತಕ ಮಾರಾಟ ಕುರಿತಾಗಿ ಪುಸ್ತಕ ಪ್ರಕಾಶಕರಿಂದ ಮಿಶ್ರ ಪ್ರತಿಕ್ರಿಯೆ. ಪ್ರತಿಷ್ಠಿತ ಮಳಿಗೆಗಳು ವ್ಯಾಪಾರ ಚೆನ್ನಾಗಿದೆ ಎಂದರೆ, ಕೆಲವು ಪ್ರಕಾಶಕರು ಪರವಾಗಿಲ್ಲ ಎನ್ನುತ್ತಾರೆ. ಮಾರಾಟ ಇಲ್ಲವೇ ಇಲ್ಲ ಎಂದವರು ಕಡಿಮೆ. ದೊಡ್ಡ ಮಳಿಗೆಗಳಿಗೆ ಸುಮಾರು ಆರು ಲಕ್ಷ ಬೆಲೆಯ ಪುಸ್ತಕ ಮಾರಾಟ ನಡೆದಿದೆ. ಪುಸ್ತಕ ಸಂಗ್ರಹ ಚೆನ್ನಾಗಿದ್ದ ಸಣ್ಣ ಮಳಿಗೆಗಳ ಪುಸ್ತಕ ವ್ಯಾಪಾರವೂ ಒಂದೂವರೆ ಲಕ್ಷ ರು. ದಾಟಿದೆ. ಮೈಸೂರು ಸಮ್ಮೇಳನಕ್ಕೆ ಹೋಲಿಸಿದರೆ ಧಾರವಾಡದ ಪುಸ್ತಕ ಸಮ್ಮೇಳನ ಯಶಸ್ವಿಯಾಗಿದೆ.

   

 • Dharwad

  NEWS7, Jan 2019, 9:40 AM IST

  ಧಾರವಾಡ ಸಮ್ಮೇಳನ ಕಲಿಸಿದ 10 ಪಾಠಗಳು

  ಅಖಿಲ ಭಾರತ 84ನೇ ಸಾಹಿತ್ಯ ಸಮ್ಮೇಳನ ತೆರೆ ಕಂಡಿದೆ. ಎಂದಿನಂತೆ ಈ ಸಮ್ಮೇಳನದಲ್ಲೂ ಕೆಲವೊಂದು ಲೋಪದೋಷಗಳಿದ್ದವು. ಅಂಥ ಹತ್ತು ಅಂಶಗಳನ್ನಿಲ್ಲಿ ಪಟ್ಟಿಮಾಡಲಾಗಿದೆ. ಮುಂದಿನ ಸಮ್ಮೇಳನದಲ್ಲಿ ಇವು ಮರುಕಳಿಸದಂತೆ ನೋಡಿಕೊಂಡರೆ ಸಾಹಿತ್ಯ ಸಮ್ಮೇಳನಗಳು ಹೆಚ್ಚು ಯಶಸ್ವಿಯಾಗಬಹುದು.

 • 84 Akhila Bharata Kannada Sahitya Sammelana

  NEWS7, Jan 2019, 9:21 AM IST

  ಆಂಗ್ಲ ವಿರೋಧಿ ಕೂಗಿನೊಂದಿಗೆ ಸಮ್ಮೇಳನ ಸಂಪನ್ನ

  ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರರು ಕೇವಲ 22 ನಿಮಿಷಗಳ ಭಾಷಣದ ಮೂಲಕ ಕೇಳುಗರನ್ನು ರೋಮಾಂಚನಗೊಳಿಸಿದರು. ಕಳೆದ ಎರಡು ದಶಕದಲ್ಲಿ ಅತ್ಯಂತ ಪುಟ್ಟಅಧ್ಯಕ್ಷ ಭಾಷಣ ಮಾಡಿದ ದಾಖಲೆಗೂ ಪಾತ್ರರಾದರು. ಅವರ ಭಾಷಣ ಕನ್ನಡ ಶಾಲೆಗಳ, ಕನ್ನಡ ಮಾಧ್ಯಮದ ಕುರಿತಷ್ಟೇ ಆಗಿದ್ದರಿಂದ ಸಾಕಷ್ಟುಚರ್ಚೆಗೂ ಒಳಗಾಯಿತು. ಸಮ್ಮೇಳನದ ಉದ್ದಕ್ಕೂ ಅದು ವಿವಿಧ ವೇದಿಕೆಗಳಲ್ಲಿ ಅನುರಣಿಸಿತು.

 • Darwad

  NEWS7, Jan 2019, 9:06 AM IST

  1000 ಆಂಗ್ಲ ಶಾಲೆಗಳಿಗೆ ಸಾಹಿತ್ಯ ಸಮ್ಮೇಳನದಲ್ಲಿ ವಿರೋಧ

  ಆಂಗ್ಲ ಮಾಧ್ಯಮದಲ್ಲಿ 1000 ಸರ್ಕಾರಿ ಶಾಲೆಗಳನ್ನು ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 • Kannada Sahitya Sammelana

  Dharwad6, Jan 2019, 7:43 PM IST

  ಪಂಚ ನಿರ್ಣಯದ ಮೂಲಕ ಸರ್ಕಾರಕ್ಕೆ ಪಂಚ್ ಕೊಟ್ಟ ಸಾಹಿತ್ಯ ಸಮ್ಮೇಳನ

  ವಿದ್ಯಾ ಕಾಶಿ ಧಾರವಾಡದಲ್ಲಿ ಸಾಹಿತ್ಯ ಸಂಸ್ಕೃತಿಗಳ ಸಂಗಮವಾದ 84ನೇಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ತೆರೆ ಬಿದ್ದಿದೆ. 

 • 84th Kannada Sahitya Sammelana Dharwad

  NEWS6, Jan 2019, 1:28 PM IST

  ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾರಸ್ಯ ಪ್ರಸಂಗಗಳಿವು

  ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯುತ್ತಿದೆ. ಸಡಗರ, ಸಂಭ್ರಮಕ್ಕೆ ಸಾಕ್ಷಿಯಾಗಿದೆ ವಿದ್ಯಾಕಾಶಿ. ಎರಡನೇ ದಿನದ ಸಾಹಿತ್ಯ ಸಂಭ್ರಮದಲ್ಲಿ ವೇದಿಕೆಯಲ್ಲಿ ನಡೆದ ಸ್ವಾರಸ್ಯ ಸಂಗತಿಗಳು ಇಲ್ಲಿವೆ ನೋಡಿ. 

 • Dharwad - Sammelana

  NEWS6, Jan 2019, 12:35 PM IST

  ಸಮ್ಮೇಳನದಲ್ಲಿ ಡಬ್ಬಿಂಗ್‌ಗೆ ವ್ಯಕ್ತವಾಯ್ತು ವಿರೋಧ

  ಡಬ್ಬಿಂಗ್ ಕನ್ನಡಕ್ಕೆ ಹೊಸತಲ್ಲ. ಹಿಂದೆಯೂ ಇತ್ತು. ಆದರೆ ರಾಜಕುಮಾರ್ ಮುಂಚೂಣಿಯಲ್ಲಿ ನಿಂತು ನಡೆಸಿದ ಹೋರಾಟದಲ್ಲಿ ಡಬ್ಬಿಂಗ್ ಕೊನೆಗೊಂಡಿತು. ಹೀಗಾಗಿ ಕನ್ನಡದಲ್ಲಿ ಹೆಚ್ಚು ಸಿನಿಮಾಗಳು ಬಂದವು. ಆದರೆ ಈಗ ರಾಜಕುಮಾರ್ ಇಲ್ಲ. ನಾಯಕತ್ವದ ಕೊರತೆಯಿದೆ. ಡಬ್ಬಿಂಗ್ ವಿರೋಧಕ್ಕೆ ಕಾನೂನಿನ ಬೆಂಬಲವೂ ಇಲ್ಲದೆ ಇರುವುದರಿಂದ ಡಬ್ಬಿಂಗ್ ಮಾಡಲು ಹೊಂಚು ಹಾಕುತ್ತಿದ್ದ ಕಳ್ಳರು ಧೈರ್ಯ ಮಾಡಿದ್ದಾರೆ ಎಂದು ಸಿನಿಮಾ ನಿರ್ದೇಶಕ ನಂಜುಂಡೇಗೌಡ ಎಚ್ಚರಿಕೆ ನೀಡಿದ್ದಾರೆ.

 • malavika avinash

  NEWS6, Jan 2019, 11:10 AM IST

  ರಣಾಂಗಣವಾಗಿ ಮಾರ್ಪಟ್ಟಿತು ಸಾಹಿತ್ಯ ಸಮ್ಮೇಳನ ವೇದಿಕೆ

  84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಸಮಾನಾಂತರ ವೇದಿಕೆಯ ಚರ್ಚಾಗೋಷ್ಠಿಯೊಂದು ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತ್ತು. ಅಸಹಿಷ್ಣುತೆ ಕುರಿತು ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಮಾತನಾಡಿದ್ದಕ್ಕೆ ಕೆಲ ಪ್ರೇಕ್ಷಕರು ವಿರೋಧಿಸಿದ್ದರಿಂದ ಪೊಲೀಸ್ ಭದ್ರತೆಯಲ್ಲಿ ಗೋಷ್ಠಿಯನ್ನು ನಡೆಸಲಾಯಿತು.

 • NEWS6, Jan 2019, 9:54 AM IST

  ಚಂಪಾ ಮೊಮ್ಮಕ್ಕಳು ಓದೋದು ಎಲ್ಲಿ? ಸಿಎಂ ಸವಾಲು

  ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ಸಮ್ಮಿಶ್ರ ಸರ್ಕಾರದ ನಿಲುವನ್ನು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲೇ ತರಾಟೆಗೆ ತೆಗೆದುಕೊಂಡಿದ್ದ ಸಾಹಿತಿ ಚಂದ್ರಶೇಖರ ಪಾಟೀಲರ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • ಸಮ್ಮೇಳನಕ್ಕೆ ಸಿಂಗಾರಗೊಂಡ ನಗರಿ

  NEWS6, Jan 2019, 9:18 AM IST

  ’ನಮ್ಮಿಂದ ಕನ್ನಡವಲ್ಲ, ಕನ್ನಡದಿಂದ ನಾವು ಉಳೀಬೇಕು’

  ‘ಕನ್ನಡವನ್ನು ನಾವು ಉಳಿಸಬೇಕು ಎಂಬ ಮನಸ್ಥಿತಿಯಿಂದ ಕನ್ನಡದಿಂದ ನಾವು ಉಳಿಯಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಲಿ.’ ಇದು 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ಕನ್ನಡ ಶಾಲೆಗಳ ಅಳಿವು-ಉಳಿವು ವಿಚಾರಗೋಷ್ಠಿಯ ತಿರುಳು.

 • Kambar- Dharwad
  Video Icon

  NEWS5, Jan 2019, 3:45 PM IST

  ಸುವರ್ಣ ನ್ಯೂಸ್ ಜೊತೆ ಕಂಬಾರರ ಸಾಹಿತ್ಯ ಸಂಭ್ರಮ

  84 ನೇ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಿದೆ ವಿದ್ಯಾಕಾಶಿ ಧಾರವಾಡ. ಕಂಬಾರರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. ಜ.04 ರಿಂದ ಶುರುವಾದ ಈ ಸಮ್ಮೇಳನ ಜ. 6 ಕ್ಕೆ ಮುಕ್ತಾಯವಾಗಲಿದೆ. ಸಮ್ಮೇಳನಕ್ಕೆ ಧಾರವಾಡ ಮದುವಣಗಿತ್ತಿಯಂತೆ ಸಜ್ಜಾಗಿದೆ. ಸಾಹಿತ್ಯ ಸಮ್ಮೇಳನದ ಸಂಭ್ರಮದ ಬಗ್ಗೆ ಸ್ವತಃ ಕಂಬಾರರೇ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

 • NEWS5, Jan 2019, 12:53 PM IST

  ’ಕನ್ನಡ ಮಕ್ಕಳಿಗೆ ಶುರುವಿನಿಂದಲೇ ಇಂಗ್ಲೀಷ್ ಕಲಿಸಿದರೆ ಕುರಿಗಳು ಸೃಷ್ಟಿಯಾಗುತ್ತವೆ’

  ನಮ್ಮ ದೇಶದಲ್ಲಿ ನಡೆದ ದೊಡ್ಡ ಕ್ರಾಂತಿಗಳು ಎರಡು. ಮೊದಲನೆಯದು ಭಕ್ತಿ ಚಳವಳಿ. ಅದರಿಂದಾಗಿ ಸಂಸ್ಕೃತದಲ್ಲಿ ಮಾತ್ರ ಪೂಜಿಸುತ್ತಿದ್ದ ದೇವರನ್ನು ಎಲ್ಲ ಜನರು ತಮ್ಮ ಮನದ ಭಾಷೆಯಿಂದ ಪೂಜಿಸುವಂತಾಯಿತು. ನಂತರ ನಡೆದಿದ್ದು ಅಕ್ಷರ ಕ್ರಾಂತಿ. ಅದು ಆಗಿದ್ದು ಲಾರ್ಡ್ ಮೆಕಾಲೆಯಿಂದ. ಅದರಿಂದ ಎಲ್ಲರೂ ಶಿಕ್ಷಣ ಪಡೆಯುವಂತಾಯಿತು. ಆದರೆ, ಆ ಪದ್ಧತಿ ಇಂಗ್ಲಿಷ್ ಪದ್ಧತಿ. ಅದನ್ನು ನಾವೀಗ ಬದಲಿಸಬೇಕು - ಚಂದ್ರಶೇಖರ ಕಂಬಾರರು